ಕೋಲಾರ ಕಾಂಗ್ರೆಸ್ನಲ್ಲಿ ಬಂಡಾಯದ ಬಿಸಿ: ಸಿಎಂ, ಡಿಸಿಎಂ ಬಂದರೂ ಪ್ರಚಾರಕ್ಕೆ ಬಾರದ ಸಚಿವ ಕೆಎಚ್ ಮುನಿಯಪ್ಪ
ಕೋಲಾರ ಕಾಂಗ್ರೆಸ್ನಲ್ಲಿ ಬಂಡಾಯದ ಬಿಸಿ ತಟ್ಟಿದೆ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಖುದ್ದಾಗಿ ಬಂದು ಪ್ರಚಾರಕ್ಕಿಳಿದರೂ ಸಚಿವ ಕೆಎಚ್ ಮುನಿಯಪ್ಪ ಹಾಗೂ ಅವರ ಪುತ್ರಿ ಶಾಸಕಿ ರೂಪಕಲಾ ಆ ಕಡೆಗೆ ಸುಳಿದಿಲ್ಲ. ಹೀಗಾಗಿ ಕೋಲಾರದಲ್ಲಿ ಎರಡು ಬಣಗಳು ಒಂದಾಗದೆ ಅಭ್ಯರ್ಥಿ ಕೆವಿ ಗೌತಮ್ಗೆ ಚುನಾವಣೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಲೋಕಸಭಾ ಚುನಾವಣೆ(Lok Sabha Election)ಯ ದಿನಾಂಕ ಘೋಷಣೆಯಾಗುತ್ತಿದ್ದಂತೆ ಸಾಕಷ್ಟು ನಾಯಕರಿಗೆ ತಮಗೆ ಅಥವಾ ತಮ್ಮ ಸಂಬಂಧಿಗೆ ಟಿಕೆಟ್ ಬೇಕೆಂಬ ಹಂಬಲ, ಸಿಗದಿದ್ದಾಗ ಬಂಡಾಯವೇಳುವುದು ಸಾಮಾನ್ಯ. ಹಾಗೆಯೇ ಕೋಲಾರ ಕಾಂಗ್ರೆಸ್ಗೂ ಬಂಡಾಯದ ಬಿಸಿ ತಟ್ಟಿದೆ. ಕೆಎಚ್ ಮುನಿಯಪ್ಪ(KH Muniyappa) ಅವರ ಅಳಿಯ ಚಿಕ್ಕಪೆದ್ದಣ್ಣರಿಗೆ ಟಿಕೆಟ್ ಕೈತಪ್ಪಿದ್ದಕ್ಕಾಗಿ ಬೇಸರಗೊಂಡಿದ್ದಾರೆ. ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೋಲಾರದಲ್ಲಿ ಪ್ರಚಾರ ನಡೆಸಿದರೂ ಕೂಡ ಸಚಿವ ಕೆಎಚ್ ಮುನಿಯಪ್ಪ ಹಾಗೂ ಪುತ್ರಿ ಶಾಸಕಿ ರೂಪಕಲಾ ಆ ಕಡೆ ಮುಖಹಾಕಿಲ್ಲ.
ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ರಮೇಶ್ ಕುಮಾರ್ ಬಣ ಮೇಲುಗೈ ಸಾಧಿಸಿದ್ದಕ್ಕೆ ಬೇಸರಗೊಂಡಿದ್ದಾರೆ, ಅದಕ್ಕೂ ಮುನ್ನ ಅಭ್ಯರ್ಥಿ ಕೆವಿ ಗೌತಮ್ ನಾಮಪತ್ರ ಸಲ್ಲಿಸುವ ವೇಳೆ ಸುರ್ಜೇವಾಲಾ ಅವರ ಒತ್ತಾಯಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಮುನಿಯಪ್ಪ ಹಾಗೂ ರೂಪಕಲಾ ಬಂದಿದ್ದರು.
ನಾಮಪತ್ರ ಸಲ್ಲಿಸುವ ವೇಳೆಯಲ್ಲೂ ಅಭ್ಯರ್ಥಿ ಜತೆಗೆ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಲಾಗಿತ್ತು. ಕೋಲಾರದಲ್ಲಿ ಅಭ್ಯರ್ಥಿಯ ಸೋಲು-ಗೆಲುವು ನನಗೆ ಸಂಬಂಧಪಟ್ಟಿದ್ದಲ್ಲ ಅದು ಭೈರತಿ ಸುರೇಶ್ ಹಾಗೂ ಶಾಸಕರಿಗೆ ಸಂಬಂಧಿಸಿದ್ದು ಎಂದು ಹೇಳಿದ್ದಾರೆ.
ಮುಳಬಾಗಿಲು ಕುರುಡುಮಲೈ ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ ನಡೆಸಿದ ಬಳಿಕ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಚಾರಕ್ಕೆ ಚಾಲನೆ ನೀಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು.
ಮತ್ತಷ್ಟು ಓದಿ: ಕೋಲಾರ ಕೈ ಟಿಕೆಟ್ ಕೋಲಾಹಲ: ರಮೇಶ್ ಕುಮಾರ್ ಬಣಕ್ಕೆ ಮುನಿಯಪ್ಪ ಬಣದಿಂದ ಕೌಂಟರ್
ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಸಿ.ಸುಧಾಕರ್, ಬೈರತಿ ಸುರೇಶ್ ಸೇರಿ ಕೋಲಾರ ಜಿಲ್ಲೆಯ ಶಾಸಕರುಗಳು ಮತ್ತು ಮುಖಂಡರು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಜೊತೆಗಿದ್ದರು.
ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ಮೊದಲಿಗೆ ವಿಶೇಷ ಪೂಜೆ ಸಲ್ಲಿಸಿ ರೋಡ್ ಶೋ ನಡೆಸುತ್ತಾ ಮುಳಬಾಗಿಲು ದರ್ಗಾಕ್ಕೆ ತೆರಳಿ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು. ಎರಡು ಧರ್ಮದಗಳ ಪವಿತ್ರ ಕ್ಷೇತ್ರಗಳಲ್ಲಿ ಪೂಜೆಯನ್ನು ನಡೆಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಾಯಿತು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 136 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ