ಅಜ್ಞಾತವಾಸ.. ವನವಾಸ ಇವತ್ತೇ ಎಂಡ್, ನಾಳೆಯಿಂದ ಜಾರಿಯಾಗಲಿದೆ ಲಾಕ್ ಡೌನ್ 4.O

ಬೆಂಗಳೂರು: ಅಜ್ಞಾತವಾಸ.. ಲಾಕ್​ಡೌನ್ 3.O ಮಹಾ ವನವಾಸ ಇಂದು ಅಂತ್ಯವಾಗ್ತಿದೆ. ನಾಳೆಯಿಂದಲೇ ಲಾಕ್​ಡೌನ್ 4.O ಸ್ಟಾರ್ಟ್. ಅದ್ಯಾವ ಕ್ಷಣ.. ಅದ್ಯಾವ ಟೈಮ್​​ನಲ್ಲಾದ್ರೂ ಲಾಕ್​​ಡೌನ್​ 4.Oನ ನ್ಯೂ ರೂಲ್ಸ್ ಅಂಡ್ ರೆಗ್ಯುಲೇಷನ್ ಹೊರಬೀಳಲಿದೆ. ಇನ್ನೇನಿದ್ರೂ ಹೊಸ ನಿಯಮ. ನವಜೀವನ. ನವ ಭಾರತ. ಇಷ್ಟು ದಿನ ನಾವು ನೀವು ಬದುಕುತ್ತಿದ್ದ ರೀತಿ. ನಾವು, ನೀವು ಪಾಲಿಸಲೇಕಿದ್ದ ನೀತಿ, ಮನೆಯಲ್ಲೇ ಕುಳಿತು ಕೊರೊನಾ ವಿರುದ್ಧ ಮಾಡ್ತಿದ್ದ ಜಂಗೀಕುಸ್ತಿ ಎಲ್ಲವೂ ಬದಲಾಗಲಿದೆ. ಯಾಕಂದ್ರೆ, ನಾಳೆಯಿಂದ್ಲೇ ಜಾರಿಯಾಗೋ ಲಾಕ್​ಡೌನ್ ಟೋಟಲಿ ಡಿಫರೆಂಟ್​. ಲಾಕ್​ಡೌನ್ 4.O […]

ಅಜ್ಞಾತವಾಸ.. ವನವಾಸ ಇವತ್ತೇ ಎಂಡ್, ನಾಳೆಯಿಂದ ಜಾರಿಯಾಗಲಿದೆ ಲಾಕ್ ಡೌನ್ 4.O
Follow us
ಸಾಧು ಶ್ರೀನಾಥ್​
|

Updated on:May 17, 2020 | 12:36 PM

ಬೆಂಗಳೂರು: ಅಜ್ಞಾತವಾಸ.. ಲಾಕ್​ಡೌನ್ 3.O ಮಹಾ ವನವಾಸ ಇಂದು ಅಂತ್ಯವಾಗ್ತಿದೆ. ನಾಳೆಯಿಂದಲೇ ಲಾಕ್​ಡೌನ್ 4.O ಸ್ಟಾರ್ಟ್. ಅದ್ಯಾವ ಕ್ಷಣ.. ಅದ್ಯಾವ ಟೈಮ್​​ನಲ್ಲಾದ್ರೂ ಲಾಕ್​​ಡೌನ್​ 4.Oನ ನ್ಯೂ ರೂಲ್ಸ್ ಅಂಡ್ ರೆಗ್ಯುಲೇಷನ್ ಹೊರಬೀಳಲಿದೆ. ಇನ್ನೇನಿದ್ರೂ ಹೊಸ ನಿಯಮ. ನವಜೀವನ. ನವ ಭಾರತ. ಇಷ್ಟು ದಿನ ನಾವು ನೀವು ಬದುಕುತ್ತಿದ್ದ ರೀತಿ. ನಾವು, ನೀವು ಪಾಲಿಸಲೇಕಿದ್ದ ನೀತಿ, ಮನೆಯಲ್ಲೇ ಕುಳಿತು ಕೊರೊನಾ ವಿರುದ್ಧ ಮಾಡ್ತಿದ್ದ ಜಂಗೀಕುಸ್ತಿ ಎಲ್ಲವೂ ಬದಲಾಗಲಿದೆ. ಯಾಕಂದ್ರೆ, ನಾಳೆಯಿಂದ್ಲೇ ಜಾರಿಯಾಗೋ ಲಾಕ್​ಡೌನ್ ಟೋಟಲಿ ಡಿಫರೆಂಟ್​. ಲಾಕ್​ಡೌನ್ 4.O ಪಿಕ್ಚರ್ ಕಂಪ್ಲೀಟ್ ಡಿಫರೆಂಟ್.

ಲಾಕ್​ಡೌನ್ 4.O ನಲ್ಲಿ ಹೇಗಿರಲಿದೆ ನಯಾ ರೂಲ್ಸ್? ಯೆಸ್.. ಮೇ 18ರಿಂದ ನಮ್ಮ, ನಿಮ್ಮ ಜೀವನ ಶೈಲಿಯಲ್ಲಿ ಮಹಾ ಬದಲಾವಣೆಯಾಗೋದು ನಿಶ್ಚಿತ. ಕಳೆದ ದಿನಗಳಿಂದ ದಿಗ್ಬಂಧನದಲ್ಲಿ ಭಾರತೀಯರು ಸೋಮವಾರದಿಂದ ಬದಲಾದ ಭಾರತಕ್ಕೆ ಹೊಂದಿಕೊಳ್ಬೇಕಿದೆ. ಪ್ರಧಾನಿ ಮೋದಿ ಹೇಳಿರೋ ಹಾಗೆ, ಅಟ್ಟಹಾಸಗೈಯುತ್ತಿರೋ ಕ್ರೂರಿ ಕೊರೊನಾ ಜೊತೆಗೆ ಬದುಕೋ ಟೈಮ್ ಹತ್ತಿರ ಬಂದೇ ಬಿಟ್ಟಿದೆ. ಲಾಕ್​ಡೌನ್ 4.O ವೇಳೆ ದೇಶದ ಬಹುತೇಕ ಜನರು ಮನೆಯಿಂದ ಹೊರಗೆ ಹೆಜ್ಜೆ ಇಡೋ ಟೈಮ್​​​​ ಸನ್ನಿಹಿತವಾಗ್ತಿದೆ. ನಯಾ ಸ್ವರೂಪದೊಂದಿಗೆ ನಾವು, ನೀವೆಲ್ಲ ಮುನ್ನಡೆಯೋ ಕಾಲ ಎದುರಿಗೆ ಬಂದು ನಿಂತಿದೆ.

ಲಾಕ್​ಡೌನ್ 4.O ಮಾರ್ಗಸೂಚಿಯಲ್ಲಿ ಏನೇನಿರಲಿದೆ? ರಣಕೇಕೆ ಹಾಕ್ತಿರೋ ಹೆಮ್ಮಾರಿ ಕೊರೊನಾವನ್ನ ಕಟ್ಟಿಹಾಕೋಕೆ ಕೇಂದ್ರ ಸರ್ಕಾರ 3 ಹಂತದ ಲಾಕ್​​ಡೌನ್ ಬ್ರಹ್ಮಾಸ್ತ್ರ ಪ್ರಯೋಗಿಸಿತ್ತು. ಆದ್ರೆ, ನಾಳೆಯಿಂದಲೇ ನಾಲ್ಕನೇ ಹಂತದ ಲಾಕ್​ಡೌನ್ ಜಾರಿಗೆ ಬರ್ತಿದೆ. ಅದ್ರಲ್ಲೂ, ಹೊಸ ಸ್ವರೂಪದೊಂದಿಗೆ ಲಾಕ್​ಡೌನ್ 4.O ಇರುತ್ತೆ ಅಂತ ಪ್ರಧಾನಿ ಮೋದಿ ಸುಳಿವು ಕೊಟ್ಟಿರೋದು 130 ಕೋಟಿ ದೇಶವಾಸಿಗಳು ಕಣ್ಣರಳಿಸಿ ನೋಡ್ತಿದ್ದಾರೆ. ಆಗ್ಲೋ.. ಈಗ್ಲೋ.. ಯಾವುದೇ ಕ್ಷಣದಲ್ಲಾದ್ರೂ 4ನೇ ಹಂತದ ಲಾಕ್​​ಡೌನ್ ಮಾರ್ಗಸೂಚಿ ರಿಲೀಸ್ ಆಗಲಿದೆ. ಹಾಗಿದ್ರೆ, ಮೋದಿ 4.O ನಯಾ ಗೈಡ್​​ಲೈನ್ಸ್ ಹೇಗಿರುತ್ತೆ? ನಮೋ ಮಾಡಿರೋ ಮಾಸ್ಟರ್ ಪ್ಲ್ಯಾನ್ ಏನು? ಏನೇನ್​ ಇರುತ್ತೆ? ಏನೇನ್​ ಇರಲ್ಲ? ಯಾವುದಕ್ಕೆ ರಿಲೀಫ್ ಕೊಡ್ತಾರೆ? ಏನೇನ್ ಕಟ್ಟಿ ಹಾಕ್ತಾರೆ ಅನ್ನೋದೆ ಬಿಗ್ ಸಸ್ಪೆನ್ಸ್. ಹಾಗಿದ್ರೆ ಲಾಕ್​ಡೌನ್ 4.O ನಲ್ಲಿ ಏನೇನ್​​​​ ಇರ್ಬೋದು ಅನ್ನೋದನ್ನೇ ನೋಡೋದಾದ್ರೆ.

ನಯಾ 4.O ಹೇಗಿರುತ್ತೆ? ನೂತನ ಮಾರ್ಗಸೂಚಿ ಪ್ರಕಾರ ಸೋಮವಾರದಿಂದ ದೇಶಾದ್ಯಂತ ಲಾಕ್​ಡೌನ್ ಸಡಿಲಗೊಳ್ಳೋ ಸಾಧ್ಯತೆ ಇದೆ. ಕಂಟೇನ್ಮೆಂಟ್ ಜೋನ್​ಗಳಿಗೆ ಮಾತ್ರ ಲಾಕ್​ಡೌನ್ ಸೀಮಿತವಾಗೋ ಸಾಧ್ಯತೆ ದಟ್ಟವಾಗಿದೆ. ಬಸ್, ಟ್ಯಾಕ್ಸಿ, ಆಟೋ ಸಂಚಾರ ಆರಂಭವಾಗಬಹುದು. ಕಂಟೇನ್ಮೆಂಟ್ ಜೋನ್ ಹೊರತುಪಡಿಸಿ ಬೇರೆಲ್ಲೆಡೆ ಸಂಚಾರ ಆರಂಭಿಸೋ ಸಾಧ್ಯತೆ ದಟ್ಟವಾಗಿದೆ. ರೆಡ್​​ಜೋನ್​ಗಳಲ್ಲೂ ಅಗತ್ಯ ಮತ್ತು ಅಗತ್ಯವಲ್ಲದ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡೋ ಸಾಧ್ಯತೆಯೂ ಇದೆ.

ರಾಜ್ಯಗಳು ಲ್ಯಾಂಡಿಂಗ್​ಗೆ ಒಪ್ಪಿದ್ರೆ ದೇಶೀಯ ವಿಮಾನ ಸಂಚಾರ ಆರಂಭಿಸಬಹುದು. ಇನ್ನು ಆರ್ಥಿಕತೆಗೆ ಬೂಸ್ಟ್ ನೀಡೋ ನಿಟ್ಟಿನಲ್ಲಿ ದೇಶಾದ್ಯಂತ ಸೋಮವಾರದಿಂದ ಕೈಗಾರಿಕೆ, ವಾಣಿಜ್ಯ ಚಟುವಟಿಕೆ ಆರಂಭವಾಗೋದು ಬಹುತೇಕ ಪಕ್ಕಾ ಆಗಿದೆ. ಆದ್ರೆ, ರೈಲು ಸಂಚಾರ, ಮಾಲ್, ಥಿಯೇಟರ್, ಕಾಲೇಜು ಸದ್ಯಕ್ಕೆ ಓಪನ್ ಆಗಲ್ಲ. ಜಾತ್ರೆ, ಧಾರ್ಮಿಕ ಕಾರ್ಯಕ್ರಮ, ಸಭೆ-ಸಮಾರಂಭಕ್ಕೆ ನಿರ್ಬಂಧ ವಿಧಿಸ್ಬೋದು. ಅಲ್ಲದೇ, ಮಾಲ್​, ಥಿಯೇಟರ್, ಜಿಪ್, ಸ್ವಿಮ್ಮಿಂಗ್ ಪೂಲ್​ ತೆರೆಯೋಕೆ ಸ್ವಲ್ಪ ದಿನ ಮತ್ತೆ ಬ್ರೇಕ್​ ಹಾಕ್ಬೋದು.

ನಾಲ್ಕನೇ ಹಂತದ ಲಾಕ್​​ಡೌನ್​​​ನಲ್ಲಿ ನಯಾ ಕಂಡೀಷನ್ಸ್!? ಸಾರಿಗೆ ಸಂಚಾರಕ್ಕೆ ಗ್ರೀನ್​ಸಿಗ್ನಲ್ ಕೊಟ್ಮೇಲೆ ಸಾಕಷ್ಟು ಖಡಕ್ ರೂಲ್ಸ್. ನಿರ್ಬಂಧ ಕೂಡ ಇರ್ಬೋದು. ಹಾಗಿದ್ರೆ ಮಾರ್ಗಸೂಚಿಯಲ್ಲಿ ಏನೇನ್​ ಕಂಡೀಷನ್ ಹಾಕ್ಬೋದು ಅನ್ನೋದನ್ನ ನೋಡೋದಾದ್ರೆ.

ಕಂಡೀಷನ್ ಸಂಚಾರ!? ಇನ್ನು ಸಾರಿಗೆಗೆ ಗ್ರೀನ್​ ಸಿಗ್ನಲ್ ನೀಡಿದ್ರೆ, ಬಸ್​​ನಲ್ಲಿ 35 ಪ್ರಯಾಣಿಕರು ಸಂಚರಿಸ್ಬೇಕು, ಆಟೋದಲ್ಲಿ ಚಾಲಕ ಸೇರಿ ಓರ್ವ ಪ್ರಯಾಣಿಕ ಮಾತ್ರ ಅವಕಾಶ ನೀಡ್ಬೋದು. ಕ್ಯಾಬ್​ಗಳಲ್ಲಿ ಚಾಲಕ ಸೇರಿ ಇಬ್ಬರಿಗೆ ಅವಕಾಶ ನೀಡೋ ಸಾಧ್ಯತೆ ಇದೆ. ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಕಡ್ಡಾಯ ಮಾಡೋ ಸಾಧ್ಯತೆ ಇದೆ. ಜೊತೆಗೆ ಅಂತರರಾಜ್ಯ ಸಂಚಾರಕ್ಕೆ ಮಾತ್ರ ಪಾಸ್ ಕಡ್ಡಾಯ ಮಾಡ್ಬೋದು. ಸೀಟುಗಳು ಹಂಚಿಕೆಯಲ್ಲಿ ಅಂತರ ಕಾಯ್ದುಕೊಳ್ಳಬೇಕು ಹಾಗೂ ಪ್ರಯಾಣಕ್ಕೂ ಮುನ್ನ ಎಲ್ಲರಿಗೂ ಥರ್ಮಲ್ ಟೆಸ್ಟ್, ಸ್ಕ್ರೀನಿಂಗ್ ಕಡ್ಡಾಯ ಅನ್ನೋದನ್ನ ಜಾರಿಗೆ ತರ್ಬೋದು. ಇನ್ನು, ವಿಮಾನ ಸಿಬ್ಬಂದಿ ಪಿಪಿಇ ಕಿಟ್ ಧರಿಸುವುದು ಕಡ್ಡಾಯ ರೂಲ್ಸ್ ಜಾರಿಗೆ ತರೋ ಸಾಧ್ಯತೆ ಇದೆ. ಅಲ್ಲದೇ, ಪ್ರಯಾಣಿಕರು ಕೇವಲ 20 ಕೆಜಿ ಲಗೇಜ್ ಬ್ಯಾಗ್​​ಗೆ ಮಾತ್ರ ಅವಕಾಶ ಹಾಗೂ ಯಾರೂ ಕೂಡ 7 ಕೆಜಿ ಕ್ಯಾಬಿನ್ ಲಗೇಜ್ ತರುವಂತಿಲ್ಲ ಅಂತ ಮಾರ್ಗಸೂಚಿ ಹೊರಡಿಸ್ಬೋದು.

ಮೇ 31ರವರೆಗೆ ಲಾಕ್​ಡೌನ್ 4.O? ಇನ್ನು ಸೋಮವಾರದಿಂದ ಜಾರಿಯಾಗಲಿರೋ ಲಾಕ್​ಡೌನ್ 4.O ಮೇ 31ರವರೆಗೂ ಮುಂದುವರಿಯೋ ಸಾಧ್ಯತೆ ಇದೆ ಎನ್ನಲಾಗ್ತಿದೆ. ಈ ನಡುವೆ 4ನೇ ಹಂತದ ಲಾಕ್​ಡೌನ್ ಸಾಕಷ್ಟು ಸಡಿಲಿಕೆಯಾದ್ರೂ ಕೆಲವೊಂದು ಕಟ್ಟುನಿಟ್ಟಿ ರೂಲ್ಸ್ ಜಾರಿಗೆ ತರ್ಬೋದು.

ಮೂರು ವರ್ಗಗಳ ಮೇಲೆ ಮೋದಿ ನಿಗಾ! ಮೂರು ವರ್ಗಗಳ ಮೇಲೆ ಹೆಚ್ಚಿನ ನಿಗಾ ವಹಿಸಲು ಮೋದಿ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗ್ತಿದೆ. ಮೊದಲನೆಯ ವರ್ಗ, 10 ವರ್ಷಕ್ಕಿಂತ ಕೆಳಗಿನ ಮಕ್ಕಳು. ಎರಡನೇ ವರ್ಗ 50 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು. ಮತ್ತು 3ನೇ ವರ್ಗ ಅನಾರೋಗ್ಯದಿಂದ ಬಳಲುತ್ತಿರುವವರು. ಈ ಮೂರೂ ವರ್ಗದ ಮಂದಿ ಲಾಕ್​ಡೌನ್ 4.O ವೇಳೆಯೂ ಮನೆಯಿಂದ ಹೊರ ಬರೋ ಹಾಗಿಲ್ಲ ಅನ್ನೋ ಸೂಚನೆ ನೀಡೋ ಸಾಧ್ಯತೆ ಇದೆ. ಯಾಕಂದ್ರೆ ಮಕ್ಕಳು, ವೃದ್ಧರು, ಅನಾರೋಗ್ಯ ಪೀಡಿತರಲ್ಲಿ ರೋಗ ನಿರೋಧಕ ಪ್ರಮಾಣ ಕಡಿಮೆ ಇರುತ್ತೆ. ಒಂದು ವೇಳೆ ಸೋಂಕು ತಗುಲಿದ್ರೆ ಅಪಾಯ ಜಾಸ್ತಿ. ಜತೆಗೆ ಮಕ್ಕಳ ಪೋಷಕರು ಕೂಡ ಕೆಲಸಕ್ಕೆ ಹೋಗೋದಕ್ಕೆ ತಡೆ ನೀಡೋ ಸಾಧ್ಯತೆಯೂ ಇದೆ.

ಕಂಟೈನ್​​ಮೆಂಟ್ ಜೋನ್​ನಲ್ಲಿ ಮಾತ್ರ ಲಾಕ್​ಡೌನ್? ಇನ್ನು ಕಂಟೈನ್​ಮೆಂಟ್ ಜೋನ್ ಹೊರತುಪಡಿಸಿ ಉಳಿದೆಲ್ಲಾ ಜೋನ್​ಗಳಿಗೆ ಬಿಗ್ ರಿಲೀಫ್ ನೀಡೋ ಸಾಧ್ಯತೆ ಇದೆ. ಇನ್ನು, ಕಂಟೈನ್​​ಮೆಂಟ್ ಜೋನ್ ಮಾತ್ರ ಮುಂದುವರಿಕೆ ಸಾಧ್ಯತೆ ಇದೆ. ಆರೆಂಜ್, ಗ್ರೀನ್​ಜೋನ್​ನಲ್ಲಿರುವ ನಿಯಮಗಳು ಬದಲಾವಣೆ ತಂದು ರಿಲೀಫ್ ನೀಡ್ಬೋದು. ರೆಡ್ ಜೋನ್​​ಗಳನ್ನು ಮೂರು ವಿಂಗಡಣೆ ಮಾಡುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳ‌ ಮಾದರಿಯಲ್ಲಿ ABC ಯಾಗಿ ವರ್ಗೀಕರಣ ಮಾಡ್ಬೋದು. ಇದ್ರಲ್ಲಿ ಕಂಟೈನ್​​ಮೆಂಟ್​ ಜೊತೆಗೆ A ಕೆಟಗರೆ ಜೋನ್​ ಆಗಿ ವರ್ಗೀಕರಣ ಮಾಡುವ ಸಾಧ್ಯತೆ ಇದೆ. B ಹಾಗೂ C ಕೆಟಗರಿ ಜೋನ್​ನಲ್ಲಿ ವಿನಾಯಿತಿ ನೀಡ್ಬೋದು.

ಮೋದಿ ಸರ್ಕಾರದ ಲಾಕ್​ಡೌನ್ 4.O ಮಾರ್ಗಸೂಚಿ ಕರ್ನಾಟಕದಲ್ಲೂ ಜಾರಿಯಾಗಲಿದೆ. ಕರ್ನಾಟಕದ ಸ್ಥಿತಿಗತಿ ಬಗ್ಗೆ, ಇಲ್ಲಿರೋ ಲಾಕ್​ಡೌನ್ ಸಡಿಲಿಕೆ ನಿಯಮದ ಬಗ್ಗೆ ಈಗಾಗ್ಲೆ ಸಿಎಂ ಪ್ರಧಾನಿಗೆ ಮಾಹಿತಿ ನೀಡಿದ್ದಾರೆ. ಅಂತಿಮವಾಗಿ ಮೋದಿ ಸರ್ಕಾರದ 4.O ಮಾರ್ಗಸೂಚಿ ಹೇಗಿರುತ್ತೆ. ಹೊಸ ಸ್ವರೂಪದಲ್ಲಿ ನಯಾ ಅವತಾರದಲ್ಲಿ ಯಾವೆಲ್ಲಾ ರೂಲ್ಸ್​ ಇರುತ್ತೆ ಅನ್ನೋದನ್ನ ಕಣ್ಣರಳಿಸಿ ನೋಡ್ತಿದ್ದಾರೆ. ಇಡೀ ದೇಶವೇ ಮೋದಿ ಸರ್ಕಾರ ಯಾವಾಗ ಮಾರ್ಗಸೂಚಿ ರಿಲೀಸ್ ಮಾಡುತ್ತೆ ಅಂತ ಎದುರು ನೋಡ್ತಿದೆ.

Published On - 7:11 am, Sun, 17 May 20

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ