ಕೆಸಿ ವೇಣುಗೋಪಾಲ್ ಮಾತು ಕೇಳಿ ಆಡಳಿತ ಮಾಡುವುದು 6 ಕೋಟಿ ಜನತೆಗೆ ಮಾಡಿದ ಅವಮಾನ; ಲಹರ್ ಸಿಂಗ್
ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೋಗಿಲು ಕದನ ಸದ್ದು ಮಾಡಿದೆ. ಒತ್ತುವರಿ ತೆರವು ಮಾಡಿರುವ ಬಗ್ಗೆ ಪಾಕಿಸ್ತಾನ ಪ್ರತಿಕ್ರಿಯೆ ಕೊಟ್ಟಿದೆ. ಇತ್ತ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಕರ್ನಾಟಕ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ. ಕೆಸಿ ವೇಣುಗೋಪಾಲ ಅಂತಹವರು ನಮ್ಮ ಸರ್ಕಾರ ನಡೆಸಬೇಕಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರು, ಡಿಸೆಂಬರ್ 30: ಕೋಗಿಲು (Kogilu Layout) ನಿರಾಶ್ರಿತರ ಬೆನ್ನಿಗೆ ಸರ್ಕಾರ ನಿಂತಿದೆ. ರಾಜೀವ್ ಗಾಂಧಿ ವಸತಿ ಯೋಜನೆ ಅಡಿ ಮನೆ ಕೊಡಲು ಮುಂದಾಗಿದೆ. ಅಕ್ರಮ ಒತ್ತುವರಿ ತೆರವು ಮಾಡಿ, ಮನೆ ಕೊಡುತ್ತಿರುವ ಸರ್ಕಾರದ ನಡೆ ವಿಪಕ್ಷಗಳ ಪಾಲಿಗೆ ಬ್ರಹ್ಮಾಸ್ತ್ರವಾಗಿವಾಗಿದೆ. ರಾಜ್ಯದ 6 ಕೋಟಿ ಜನ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ರನ್ನು ಆಯ್ಕೆ ಮಾಡಿದ್ದಾರೆ. ಕೆ.ಸಿ.ವೇಣುಗೋಪಾಲ್ರನ್ನು ಆಯ್ಕೆ ಮಾಡಿಲ್ಲ. ಜುಜುಬಿ ವೇಣುಗೋಪಾಲ್ ಮಾತು ಕೇಳಿಕೊಂಡು ಆಡಳಿತ ಮಾಡುವುದು 6 ಕೋಟಿ ಜನರಿಗೆ ಮಾಡಿರುವ ಅವಮಾನ ಎಂದು ರಾಜ್ಯಸಭಾ ಬಿಜೆಪಿ ಸದಸ್ಯ ಲಹರ್ ಸಿಂಗ್ ಸಿರೋಯಾ (Lehar Singh Siroya) ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ಲಹರ್ ಸಿಂಗ್ ಸಿರೋಯಾ ಕಿಡಿ
ಕೋಗಿಲು ಲೇಔಟ್ ನಿವಾಸಿಗಳಿಗೆ ಮನೆ ಹಂಚಿಕೆಗೆ ನಿರ್ಧಾರ ವಿಚಾರವಾಗಿ ಟಿವಿ9 ಜೊತೆಗೆ ಮಾತನಾಡಿದ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ, ಈ ಸರ್ಕಾರದಿಂದ ಏನೂ ಅಪೇಕ್ಷೆ ಪಡಲು ಸಾಧ್ಯವೇ ಇಲ್ಲ. ಸೋ ಕಾಲ್ಡ್ ಪವರ್ ಫುಲ್ ಲೀಡರ್ಗಳಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಕೆ.ಸಿ.ವೇಣುಗೋಪಾಲ್ ಮಾತು ಕೇಳಿ ನಾಚಿಕೆಗೇಡಿನ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಇದನ್ನೂ ಓದಿ: ಕೇರಳಿಗರ ‘ಚೇಟಾ ಸಿದ್ದರಾಮಯ್ಯ’ ಕೇರಳಕ್ಕಾಗಿ ಈವರೆಗೆ ಏನೇನು ಮಾಡಿದ್ರು? ಪಟ್ಟಿ ಸಮೇತ ಟಾಂಗ್ ಕೊಟ್ಟ ಜೆಡಿಎಸ್
ಕೆಸಿ ವೇಣುಗೋಪಾಲ ಅಂತಹವರು ನಮ್ಮ ಸರ್ಕಾರ ನಡೆಸಬೇಕಾ? ಅವರ ಆದೇಶ ನಾವು ಪಾಲಿಸಬೇಕಾ? ಈ ಸರ್ಕಾರ ಕೇವಲ ಕುರ್ಚಿ ಜಗಳಕ್ಕೆ ಮಾತ್ರ ಸೀಮಿತ ಅಷ್ಟೇ. ಪ್ರವಾಹ ಸಂತ್ರಸ್ತರಿಗೆ ಮನೆ ಕೊಟ್ಟಿಲ್ಲ, ಡ್ರಗ್ಸ್ ಸಮಸ್ಯೆ ಸರಿಪಡಿಸಿಲ್ಲ, ಇಂತಹ ಸರ್ಕಾರ ನಮಗೆ ಸಿಕ್ಕಿರುವುದು ದುರದೃಷ್ಟಕರ. ಪಾಕಿಸ್ತಾನ ಪ್ರತಿಕ್ರಿಯೆ ಕೊಡುತ್ತದೆ ಎಂದರೆ, ಇದು ಬಹಳ ಭಯನಕ ಟ್ರೆಂಡ್. ಪಶ್ಚಿಮ ಬಂಗಾಳ ರೀತಿ ಇಲ್ಲಿ ಆದರೆ ನಮ್ಮ ಗತಿ ಏನು ಎಂದು ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಬರ–ಪ್ರವಾಹಕ್ಕೆ ವರ್ಷಗಳ ನಿರೀಕ್ಷೆ, ಕೋಗಿಲು ಲೇಔಟ್‌ಗೆ ಎರಡು ದಿನಗಳಲ್ಲಿ ಪರಿಹಾರ: ಸರ್ಕಾರದ ವಿರುದ್ಧ ಗುಡುಗಿದ ಜೋಶಿ
ಇನ್ನು ಎಐಸಿಸಿಯ ಕೆ.ಸಿ. ವೇಣು ಗೋಪಾಲ್ ಹೇಳಿದ್ರು ಅನ್ನೋ ಒಂದೇ ಕಾರಣಕ್ಕೆ ಇಷ್ಟು ದೊಡ್ಡ ನಿರ್ಧಾರ ಮಾಡಿರೋದನ್ನ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ. ಕಾಂಪಿಟೇಷನ್ ಮೇಲೆ ಸಿಎಂ, ಡಿಸಿಎಂ ಹೈಕಮಾಂಡ್ ಓಲೈಕೆ ಮಾಡ್ತಿದ್ದಾರೆಂದು ಆರೋಪಿಸಿದ್ದಾರೆ. ಆದರೆ ಡಿಸಿಎಂ ಡಿಕೆ ಶಿವಕುಮಾರ್ ಮಾತ್ರ ಇದನ್ನ ತಳ್ಳಿಹಾಕಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



