AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid-19 Karnataka Update: ಕರ್ನಾಟಕದಲ್ಲಿ 14,738 ಕೊರೊನಾ ಸೋಂಕು ಪ್ರಕರಣ, 66 ಸಾವು

ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 66 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 13,112 ಜನರು ಸಾವನ್ನಪ್ಪಿದ್ದಾರೆ. ಸೋಂಕಿತರ ಪೈಕಿ 9,99,958 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

Covid-19 Karnataka Update: ಕರ್ನಾಟಕದಲ್ಲಿ 14,738 ಕೊರೊನಾ ಸೋಂಕು ಪ್ರಕರಣ, 66 ಸಾವು
ಪ್ರಾತಿನಿಧಿಕ ಚಿತ್ರ
Ghanashyam D M | ಡಿ.ಎಂ.ಘನಶ್ಯಾಮ
|

Updated on:Apr 15, 2021 | 7:12 PM

Share

ಬೆಂಗಳೂರು: ಕರ್ನಾಟಕದಲ್ಲಿ ಇಂದು ಹೊಸದಾಗಿ 14,738 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 11,09,650ಕ್ಕೆ (11.09 ಲಕ್ಷ) ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 66 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 13,112 ಜನರು ಸಾವನ್ನಪ್ಪಿದ್ದಾರೆ. ಸೋಂಕಿತರ ಪೈಕಿ 9,99,958 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 96,561 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು ನಗರ, ಕಲಬುರ್ಗಿ ಮತ್ತು ಬೀದರ್​ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿರುವುದು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳನ್ನು ಗಮನಿಸಿದಾಗ ತಿಳಿಯುತ್ತದೆ.

ಬೆಂಗಳೂರಲ್ಲಿ ಇಂದು ಒಂದೇ ದಿನ 10,497 ಜನರಲ್ಲಿ ಸೋಂಕು ದೃಢಪಟ್ಟಿದೆ. ಬೆಂಗಳೂರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5,12,521ಕ್ಕೆ (5.12 ಲಕ್ಷ) ಏರಿಕೆಯಾಗಿದೆ. ಈ ಪೈಕಿ 4,35,730 ಜನರು ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 30 ಜನರು ಮೃತಪಟ್ಟಿದ್ದಾರೆ. ಬೆಂಗಳೂರಲ್ಲಿ ಕೊರೊನಾದಿಂದ ಈವರೆಗೆ 4,963 ಜನರ ಸಾವನ್ನಪ್ಪಿದ್ದಾರೆ. 71,827 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ ಒಟ್ಟು 66 ಜನರ ಸಾವನ್ನಪ್ಪಿದ್ದಾರೆ. ಈ ಪೈಕಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ 30 ಜನರು ಮೃತಪಟ್ಟಿದ್ದಾರೆ. ಉಳಿದಂತೆ ಬಳ್ಳಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಲಾ 6, ಮೈಸೂರು ಜಿಲ್ಲೆಯಲ್ಲಿ 5, ಹಾಸನದಲ್ಲಿ 4, ಧಾರವಾಡ ಜಿಲ್ಲೆಯಲ್ಲಿ 3, ಬೀದರ್, ತುಮಕೂರು, ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ಇಬ್ಬರು, ಬೆಳಗಾವಿ, ಕಲಬುರಗಿ, ಕೋಲಾರ, ರಾಮನಗರ, ಶಿವಮೊಗ್ಗ, ವಿಜಯಪುರ ಜಿಲ್ಲೆಗಳಲ್ಲಿ ತಲಾ ಒಬ್ವರು ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 13,112 ಜನರ ಸಾವನ್ನಪ್ಪಿದ್ದಾರೆ.

ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು? ರಾಜ್ಯದಲ್ಲಿಂದು ಹೊಸದಾಗಿ 14,738 ಜನರಿಗೆ ಕೊರೊನಾ ದೃಢಪಟ್ಟಿದೆ. ಈ ಪೈಕಿ ಬೆಂಗಳೂರು ನಗರ 10,497, ಕಲಬುರಗಿ 624, ತುಮಕೂರು 387, ಬೀದರ್ 363, ಮೈಸೂರು 327, ಮಂಡ್ಯ 211, ಬಳ್ಳಾರಿ 200, ಹಾಸನ 186, ಧಾರವಾಡ 179, ಬೆಂಗಳೂರು ಗ್ರಾಮಾಂತರ 171, ದಕ್ಷಿಣ ಕನ್ನಡ 166, ವಿಜಯಪುರ 136, ಬೆಳಗಾವಿ 135, ಚಿಕ್ಕಬಳ್ಳಾಪುರ 127, ಕೊಪ್ಪಳ 118, ಉಡುಪಿ 111, ಉತ್ತರ ಕನ್ನಡ 89, ಕೋಲಾರ 89, ಯಾದಗಿರಿ 88, ಶಿವಮೊಗ್ಗ 74, ಕೊಡಗು 66, ಚಿಕ್ಕಮಗಳೂರು 62, ರಾಮನಗರ 62, ದಾವಣಗೆರೆ 60, ರಾಯಚೂರು 48, ಚಾಮರಾಜನಗರ 39, ಗದಗ 34, ಚಿತ್ರದುರ್ಗ 33, ಬಾಗಲಕೋಟೆ 29, ಹಾವೇರಿ 27 ಜನರಲ್ಲಿ ಸೋಂಕು ದೃಢಪಟ್ಟಿದೆ.

Coronavirus infection found in 14738 people 66 people died of covid-19

ಇದನ್ನೂ ಓದಿ: Coronavirus India Update: ಕಳೆದ 24 ಗಂಟೆಗಳಲ್ಲಿ 2 ಲಕ್ಷಕ್ಕಿಂತಲೂ ಹೆಚ್ಚು ಹೊಸ ಕೊವಿಡ್ ಪ್ರಕರಣಗಳು ಪತ್ತೆ, 1,038 ಮಂದಿ ಸಾವು

ಇದನ್ನೂ ಓದಿ: Delhi Weekend Curfew: ಕೊರೊನಾ ತಡೆಗೆ ದೆಹಲಿಯಲ್ಲಿ ವೀಕೆಂಡ್​ ಕರ್ಫ್ಯೂ ಜಾರಿ

Published On - 6:52 pm, Thu, 15 April 21

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?