ಕೊರೊನಾ ಸೋಂಕಿತರ ಸಂಖ್ಯೆ ದಾಟಿಯೇ ಬಿಟ್ಟಿತು 5 ಸಾವಿರದ ಗಡಿ!
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5,213ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಇಂದು ಹೊಸದಾಗಿ 378 ಜನರಿಗೆ ಕೊರೊನಾ ತಗುಲಿದೆ ಎಂದು ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. 1,968 ಮಂದಿ ಗುಣಮುಖ ಮತ್ತು ಡಿಸ್ಚಾರ್ಜ್! ರ್ನಾಟಕದಲ್ಲಿ ಕೊರೊನಾಗೆ ಒಟ್ಟು 59 ಜನರು ಸಾವಿಗೀಡಾಗಿದ್ದಾರೆ. 1,968 ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 3,184 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಈಡಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿಂದು 121 ಜನರಿಗೆ ಕೊರೊನಾ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 889ಕ್ಕೆ […]
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5,213ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಇಂದು ಹೊಸದಾಗಿ 378 ಜನರಿಗೆ ಕೊರೊನಾ ತಗುಲಿದೆ ಎಂದು ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. 1,968 ಮಂದಿ ಗುಣಮುಖ ಮತ್ತು ಡಿಸ್ಚಾರ್ಜ್! ರ್ನಾಟಕದಲ್ಲಿ ಕೊರೊನಾಗೆ ಒಟ್ಟು 59 ಜನರು ಸಾವಿಗೀಡಾಗಿದ್ದಾರೆ. 1,968 ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 3,184 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಈಡಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿಂದು 121 ಜನರಿಗೆ ಕೊರೊನಾ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 889ಕ್ಕೆ ಏರಿಕೆಯಾಗಿದೆ.
ಕಲಬುರಗಿ ಜಿಲ್ಲೆಯಲ್ಲಿಂದು 69 ಜನರಿಗೆ ಕೊರೊನಾ ಸೋಂಕು: ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 621ಕ್ಕೆ ಏರಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ವಾಪಸಾಗಿದ್ದವರಿಗೆ ಕೊರೊನಾ ತಗುಲಿದೆ. ಒಟ್ಟು 69 ಜನರ ಪೈಕಿ 23 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಕೊರೊನಾಗೆ 6ನೇ ಬಲಿ: ಕಂಟೇನಮೆಂಟ್ ಏರಿಯಾದಲ್ಲಿದ್ದ 82 ವರ್ಷದ ವೃದ್ಧೆ ಸಾವು ಕೊರೊನಾದಿಂದಾಗಿ ಎಂಬುದು ದೃಢಪಟ್ಟಿದೆ. ಕಳೆದ 27 ರಂದು ವೃದ್ದೆ ಸಾವನ್ನಪ್ಪಿದ್ದರು. ಇಂದು ಮೃತ ವೃದ್ದೆಗೆ ಕೊರೊನಾ ಪಾಸಿಟಿವ್ ಇರುವುದು ಲ್ಯಾಬ್ ವರದಿಯಲ್ಲಿ ದೃಢಪಟ್ಟಿದೆ. ಪೇಶಂಟ್ ನಂಬರ್ 5010 ಎಂದು ಮೃತ ವೃದ್ಧೆಯನ್ನು ಗುರುತಿಸಲಾಗಿದ್ದು, ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
Published On - 5:55 pm, Sat, 6 June 20