ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ತಮ್ಮ ಹೆಸರನ್ನು ತಾವೇ ಸಿಲುಕಿಸಿಕೊಂಡಿದ್ದೇಕೆ? ಸಿಟಿ ರವಿಗೂ ಅದೇ ಯಕ್ಷಪ್ರಶ್ನೆ!
ಹಿಂದೆ ಮೌಲ್ಯಾಧಾರಿತ ರಾಜಕೀಯ ಚರ್ಚೆ ನಡೆಯುತ್ತಿತ್ತು. ಆದರೆ ಈಗ ಸಿಡಿ ಆಧಾರಿತ ರಾಜಕೀಯ ಚರ್ಚೆ ನಡೆಯುತ್ತಿದೆ. ಮೌಲ್ಯಧಾರಿತ ರಾಜಕಾರಣ ಬೇಕೋ? ಸಿಡಿ ಆಧಾರಿತ ರಾಜಕಾರಣ ಬೇಕೋ? ಎಲ್ಲರೂ ಯೋಚಿಸಬೇಕು. ಸಾರ್ವಜನಿಕ ಜೀವನದಲ್ಲಿರುವ ನಾವು ಪರಿಶುದ್ಧ ರಾಜಕಾರಣದ ಬಗ್ಗೆ ಆಲೋಚಿಸಬೇಕು. ರಾಜಕಾರಣಿಗಳಿಗೆ ಜನ ಲಜ್ಜೆ, ಮನಲಜ್ಜೆ ಎರಡೂ ಇರಬೇಕು ಎಂದು ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಇದು ರಾಜ್ಯ ರಾಜಕಾರಣಕ್ಕೆ ಗೌರವ ತರುವ ವಿಷಯವಲ್ಲ, ರಾಜಕಾರಣಿಗಳಿಗೆ ಜನ ಲಜ್ಜೆ, ಮನ ಲಜ್ಜೆ ಎರಡೂ ಇರಬೇಕು. ತನಿಖೆಯಿಂದ ಸಿಡಿ ಹಿಂದಿನ ನಿರ್ಮಾಪಕ, ನಿರ್ದೇಶಕ, ಪಾತ್ರಧಾರಿಗಳು ಯಾರು ಎಂದು ಗೊತ್ತಾಗುತ್ತದೆ. ಈ ಪ್ರಕರಣದಲ್ಲಿ ಡಿಕೆಶಿ ತನ್ನ ಹೆಸರನ್ನು ತಳುಕು ಹಾಕುತ್ತಿದ್ದಾರೆ. ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ಗೊತ್ತಾಗ್ತಿಲ್ಲ ಎಂದು ಹೇಳಿದ್ದಾರೆ.
ಹಿಂದೆ ಮೌಲ್ಯಾಧಾರಿತ ರಾಜಕೀಯ ಚರ್ಚೆ ನಡೆಯುತ್ತಿತ್ತು. ಆದರೆ ಈಗ ಸಿಡಿ ಆಧಾರಿತ ರಾಜಕೀಯ ಚರ್ಚೆ ನಡೆಯುತ್ತಿದೆ. ಮೌಲ್ಯಧಾರಿತ ರಾಜಕಾರಣ ಬೇಕೋ? ಸಿಡಿ ಆಧಾರಿತ ರಾಜಕಾರಣ ಬೇಕೋ? ಎಲ್ಲರೂ ಯೋಚಿಸಬೇಕು. ಸಾರ್ವಜನಿಕ ಜೀವನದಲ್ಲಿರುವ ನಾವು ಪರಿಶುದ್ಧ ರಾಜಕಾರಣದ ಬಗ್ಗೆ ಆಲೋಚಿಸಬೇಕು. ರಾಜಕಾರಣಿಗಳಿಗೆ ಜನ ಲಜ್ಜೆ, ಮನ ಲಜ್ಜೆ ಎರಡೂ ಇರಬೇಕು. ನಮಗೆ ನಾವೇ ಪರಿಮಿತಿ ಹಾಕಿಕೊಳ್ಳೋದು ಮನ ಲಜ್ಜೆ. ಜನರಿಗೆ ಹೆದರೋದು ಜನ ಲಜ್ಜೆ. ಈ ಎರಡೂ ಇದ್ದರೆ ಒಳ್ಳೆಯದು ಎಂದು ಸಿ.ಟಿ.ರವಿ ಮಾರ್ಮಿಕವಾಗಿ ಹೇಳಿದ್ದಾರೆ.
ಮಹಾನಾಯಕನನ್ನು ನೋಡಲು ಕುತೂಹಲವಿದೆ ಸಿಡಿ ವಿಚಾರವಾಗಿ ರಾಮನಗರದಲ್ಲಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಇದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಹೆಸರನ್ನು ತಾವೇ ಸಿಲುಕಿಸಿಕೊಂಡಿದ್ದೇಕೆ ಎಂದು ಗೊತ್ತಾಗಲಿಲ್ಲ. ಈ ಪ್ರಕರಣದಲ್ಲಿ ಅವರ ಹೆಸರನ್ನು ಯಾರಾದರೂ ಹೇಳಿದ್ದಾರಾ? ಅವರೇಕೆ ಹಾಗೆ ಊಹೆ ಮಾಡಿಕೊಂಡರೋ? ರಾಜ್ಯದಲ್ಲಿ ಮಹಾನಾಯಕರು ಬಹಳ ಜನ ಇದ್ದಾರೆ ಎನ್ನುವ ಮೂಲಕ ಡಿ.ಕೆ.ಶಿವಕುಮಾರ್ಗೆ ಮಾತಿನಲ್ಲೇ ಚಾಟಿ ಬೀಸಿದ್ದಾರೆ.
ಡಿ.ಕೆ ಶಿವಕುಮಾರ್ ಹೆಸರು ಸಿಡಿ ಪ್ರಕರಣದಲ್ಲಿ ಪ್ರಸ್ತಾಪವಾದ ಕುರಿತು ಮಾತನಾಡಿ, ಯಾಕೆ ಅವರ ಹೆಸರು ತಂದುಕೊಂಡರು ಎಂಬುದು ಗೊತ್ತಿಲ್ಲ. ಅವರೇ ಮಾಡಿದ್ದಾರೆ ಎಂದು ಯಾರದರೂ ಹೇಳಿದ್ದಾರಾ? ಜಾರಕಿಹೊಳಿ ಹೇಳಿದ್ರಾ ಅಥವಾ ಮಾಧ್ಯಮದವರು ಏನಾದ್ರು ಹೇಳಿದ್ರಾ? ಎಂದಿರುವ ಹೆಚ್.ಡಿ.ಕುಮಾರಸ್ವಾಮಿ ಮಹಾನಾಯಕನ ಬಗ್ಗೆ ನಾನು ಸಹ ಕುತೂಹಲದಿಂದ ಕಾಯುತ್ತಿದ್ದೇನೆ. ಇದು ಯಾವುದೋ ಧಾರಾವಾಹಿಯಂತೆ ಇದೆ. ಅಂತಿಮವಾಗಿ ಯಾರಿಗೆ ಸುತ್ತಿಕೊಳ್ಳುತ್ತೋ ನೋಡಬೇಕು. ಇಂತಹ ವೈಯಕ್ತಿಕ ವಿಚಾರಗಳಿಗೆ ನಾವು ತಲೆ ಹಾಕಲ್ಲ. ರಾಜ್ಯದಲ್ಲಿ ಇದಕ್ಕಿಂತ ಜನರ ಸಮಸ್ಯೆಗಳೇ ಹೆಚ್ಚಾಗಿವೆ. ನಾವು ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಗಮನ ನೀಡುತ್ತೇವೆಯೇ ಹೊರತು ಅದು ಬಿಟ್ಟು ವೈಯಕ್ತಿಕ ಲಾಭಕ್ಕಾಗಿ ಸಣ್ಣತನಕ್ಕೆ ಇಳಿಯಲ್ಲ ಎಂದು ಹೇಳಿದ್ದಾರೆ.
ಈ ಪ್ರಕರಣ ಸಾರ್ವಜನಿಕರಿಗೆ ನಗೆಪಾಟಲಾಗುತ್ತಿದೆ. ಯಾವುದೋ ಲಿಂಕ್ ತೆಗೆದುಕೊಂಡು ಸಾಗುತ್ತಿರುವ ಧಾರಾವಾಹಿ ರೀತಿ ಇದೆ. ನಮ್ಮ ಕುಟುಂಬದಲ್ಲಿ ಇಂತಹ ವಿಷಯಗಳ ಬಗ್ಗೆ ದುರುಪಯೋಗ ಮಾಡಿಕೊಂಡು ರಾಜಕೀಯ ಮಾಡಿಲ್ಲ. ಇದು ಅವರ ವೈಯಕ್ತಿಕ ವಿಚಾರಗಳು, ಜನರ ಸಮಸ್ಯೆಗಳ ಬಗ್ಗೆ ದೊಡ್ಡ ಸವಾಲುಗಳಿವೆ. ಅದರ ಬಗ್ಗೆ ಗಮನ ಕೊಡಬೇಕು. ಈ ರೀತಿಯ ಘಟನೆಗಳಿಂದ ನಾವು ವೈಯಕ್ತಿಕ ಲಾಭ ಪಡೆಯಬೇಕು ಎಂಬ ಸಣ್ಣತನಕ್ಕೆ ನಾವಂತೂ ಇಳಿಯುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ‘ಸಿಡಿ’ ಧಾರಾವಾಹಿಯ ಮಹಾನಾಯಕನನ್ನು ನೋಡಲು ಕುತೂಹಲದಿಂದ ಕಾಯುತ್ತಿದ್ದೇನೆ: ಹೆಚ್.ಡಿ.ಕುಮಾರಸ್ವಾಮಿ
ನಾನೊಬ್ಬನೇ ಬಲಿಪಶು ಅಲ್ಲ, ಎಲ್ಲರಿಗೂ ಬ್ಲ್ಯಾಕ್‌ಮೇಲ್ ಮಾಡಲಾಗಿದೆ -ದೂರು ಸಲ್ಲಿಕೆ ಬಳಿಕ ರಮೇಶ್ ಪ್ರತಿಕ್ರಿಯೆ