ಶಾಂತವೀರೇಶ್ವರ ಸ್ವಾಮೀಜಿ 41ನೇ ವರ್ಷದ ಪುಣ್ಯ ಸ್ಮರಣೋತ್ಸವ: 61 ಕೆಜಿಯ ಬೆಳ್ಳಿ ಗದ್ದುಗೆ ಅರ್ಪಿಸಿದ ವಿದ್ಯಾರ್ಥಿಗಳು
ಶಾಂತವೀರೇಶ್ವರ ಸ್ವಾಮೀಜಿಗಳೆಂದರೆ ಮಠದ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಗುರುಗಳಾಗಿದ್ದರು. ಲಿಂಗೈಕ್ಯ ಸ್ವಾಮೀಜಿಗಳ ಹಾಕಿಕೊಟ್ಟ ದಾರಿಯಲ್ಲಿ ಇಂದಿಗೂ ಸಾವಿರಾರು ವಿದ್ಯಾರ್ಥಿಗಳು ವೇದ, ಶಾಸ್ತ್ರ, ಪುರಾಣಗಳ ಅಧ್ಯಯನ ಮಾಡುತ್ತಿದ್ದಾರೆ. ಮಠದಲ್ಲಿ ಈಗಲೂ ಇನ್ನೂರರಿಂದ ಮುನ್ನೂರು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ಹಾವೇರಿ: ಜಿಲ್ಲೆಯ ಸಿಂಧಗಿ ಮಠ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನ, ಆಶ್ರಯ ನೀಡಿದೆ. ನೀಡುತ್ತಾ ಬಂದಿದೆ. ಅದರಲ್ಲೂ ಮಠದ ಲಿಂಗೈಕ್ಯ ಶಾಂತವೀರೇಶ್ವರ ಸ್ವಾಮೀಜಿ ವಿದ್ಯಾರ್ಥಿಗಳ ಪಾಲಿನ ಆರಾಧ್ಯ ದೈವವಾಗಿದ್ದರು. ಲಿಂಗೈಕ್ಯರಾಗಿರುವ ಪ್ರೀತಿಯ ಗುರುವಿನ ನಲವತ್ತೊಂದನೆ ಪುಣ್ಯ ಸ್ಮರಣೋತ್ಸವಕ್ಕೆ ಮಠದ ಹಳೆಯ ವಿದ್ಯಾರ್ಥಿಗಳು ಸುಂದರವಾಗಿ ಹೂವಿನ ಅಲಂಕಾರ ಮಾಡಿದ್ದಾರೆ. ಗುರುವಿನ ಗದ್ದುಗೆ ಇರುವ ಸ್ಥಳಕ್ಕೆ ಅರವತ್ತು ಕೆ.ಜಿ ತೂಕದ ಬೆಳ್ಳಿಯ ಗದ್ದುಗೆಯನ್ನು ಸಮರ್ಪಿಸಿದ್ದಾರೆ.
ಒಂದೂವರೆ ಲಕ್ಷ ರೂ. ಹೂವಿನಿಂದ ಅಲಂಕಾರ ಮಠದ ಶಾಂತವೀರೇಶ್ವರ ಸ್ವಾಮೀಜಿಗಳು ಸಾವಿರಾರು ಶಿಷ್ಯರಿಗೆ ಅನ್ನ, ಆಶ್ರಯ, ವೇದಾಧ್ಯಯನ ಹೇಳಿಕೊಟ್ಟ ಗುರುಗಳು. ಈಗ ಸ್ವಾಮೀಜಿಗಳು ಲಿಂಗೈಕ್ಯರಾಗಿ ಬರೋಬ್ಬರಿ ನಲವತ್ತೊಂದು ವರ್ಷಗಳು ಕಳೆದಿವೆ. ಹೀಗಾಗಿ ಮಠದಲ್ಲಿರುವ ಲಿಂಗೈಕ್ಯ ಶಾಂತವೀರೇಶ್ವರ ಸ್ವಾಮೀಜಿಗಳ ಗದ್ದುಗೆಯನ್ನ ಸ್ವಾಮೀಜಿಗಳ ಶಿಷ್ಯಂದಿರು ಹಾಗೂ ಮಠದ ಹಳೆಯ ವಿದ್ಯಾರ್ಥಿಗಳು ಸೇರಿಕೊಂಡು ವಿಶಿಷ್ಟವಾಗಿ ಅಲಂಕಾರ ಮಾಡಿದ್ದಾರೆ. ಒಂದೂವರೆ ಲಕ್ಷಕ್ಕೂ ಅಧಿಕ ಹಣವನ್ನ ಖರ್ಚು ಮಾಡಿ ಬೆಂಗಳೂರಿನಿಂದ ಬಣ್ಣಬಣ್ಣದ ಹೂವುಗಳನ್ನ ತರಿಸಿ ಸುಂದರವಾಗಿ ಅಲಂಕಾರ ಮಾಡಿದ್ದಾರೆ. ಗದ್ದುಗೆ ಇರುವ ಸ್ಥಳ, ಗದ್ದುಗೆ ಇರುವ ಸ್ಥಳದ ಆವರಣವನ್ನ ಗುಲಾಬಿ, ಸೇವಂತಿ ಹೀಗೆ ಬಗೆ ಬಗೆಯ ಹೂವುಗಳಿಂದ ಕಣ್ಮನ ಸೆಳೆಯುವಂತೆ ಅಲಂಕಾರ ಮಾಡಿದ್ದಾರೆ.
61 ಕೆಜಿಯ ಬೆಳ್ಳಿ ಗದ್ದುಗೆ ಅರ್ಪಣೆ ಶಾಂತವೀರೇಶ್ವರ ಸ್ವಾಮೀಜಿಗಳೆಂದರೆ ಮಠದ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಗುರುಗಳಾಗಿದ್ದರು. ಲಿಂಗೈಕ್ಯ ಸ್ವಾಮೀಜಿಗಳು ಹಾಕಿಕೊಟ್ಟ ದಾರಿಯಲ್ಲಿ ಇಂದಿಗೂ ಸಾವಿರಾರು ವಿದ್ಯಾರ್ಥಿಗಳು ವೇದ, ಶಾಸ್ತ್ರ, ಪುರಾಣಗಳ ಅಧ್ಯಯನ ಮಾಡುತ್ತಿದ್ದಾರೆ. ಮಠದಲ್ಲಿ ಈಗಲೂ ಇನ್ನೂರರಿಂದ ಮುನ್ನೂರು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಪ್ರತಿವರ್ಷ ಲಿಂಗೈಕ್ಯ ಶಾಂತವೀರೇಶ್ವರ ಸ್ವಾಮೀಜಿಗಳ ಪುಣ್ಯ ಸ್ಮರಣೆಯನ್ನ ಮಠದ ಹಳೆಯ ವಿದ್ಯಾರ್ಥಿಗಳು ವಿಶಿಷ್ಟವಾಗಿ ಆಚರಿಸುತ್ತಾರೆ. ಲಿಂಗೈಕ್ಯ ಶ್ರೀಗಳ ಗದ್ದುಗೆ ಹಾಗೂ ಗದ್ದುಗೆ ಇರುವ ಸ್ಥಳದ ಆವರಣವನ್ನ ಒಂದೊಂದು ರೀತಿಯಲ್ಲಿ ಅಲಂಕರಿಸುತ್ತಾರೆ. ಈ ವರ್ಷ ಒಂದೂವರೆ ಲಕ್ಷಕ್ಕೂ ಅಧಿಕ ಹಣದಿಂದ ಇಪ್ಪತ್ತೈದು ಬಗೆಯ ಹೂವುಗಳನ್ನ ತಂದು ಗದ್ದುಗೆ ಹಾಗೂ ಗದ್ದುಗೆ ಇರುವ ಸ್ಥಳದ ಆವರಣವನ್ನ ಕಂಗೊಳಿಸುವಂತೆ ಮಾಡಿದ್ದಾರೆ. ಹೂವುಗಳ ಅಲಂಕಾರಕ್ಕೆ ಬೆಳಕಿನ ಚಿತ್ತಾರ ಕೊಟ್ಟಿರುವುದರಿಂದ ಮಠಕ್ಕೆ ಬರುವ ಭಕ್ತರ ಕಣ್ಮನ ಸೆಳೆಯುತ್ತಿದೆ. ಇದರ ಜೊತೆಗೆ ಅರವತ್ತು ಕೆಜಿ ತೂಕದ ಬೆಳ್ಳಿಯಿಂದ ಗದ್ದುಗೆ ಹಾಗೂ ಗದ್ದುಗೆ ಇರುವ ಬಾಗಿಲಿನ ಚೌಕಟ್ಟು ಮಾಡಿಸಿದ್ದಾರೆ. ಗುರುವಿನ ಋಣವನ್ನ ಸುಲಭವಾಗಿ ತೀರಿಸಲು ಸಾಧ್ಯವಿಲ್ಲ. ಹೀಗಾಗಿ ಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಲಿಂಗೈಕ್ಯ ಶಾಂತವೀರೇಶ್ವರ ಸ್ವಾಮೀಜಿಗಳ ಶಿಷ್ಯಂದಿರು ಸೇರಿಕೊಂಡು ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವಕ್ಕೆ ಈ ರೀತಿಯಾಗಿ ಕಾಣಿಕೆ ಅರ್ಪಿಸಿದ್ದೇವೆ ಎಂದು ಮಠದ ಹಳೆಯ ವಿದ್ಯಾರ್ಥಿಗಳು ಹೇಳಿದರು.

ಒಂದೂವರೆ ಲಕ್ಷಕ್ಕೂ ಅಧಿಕ ಹಣದಿಂದ ಇಪ್ಪತ್ತೈದು ಬಗೆಯ ಕಲರ್ ಕಲರ್ ಹೂವುಗಳನ್ನ ತಂದು ಗದ್ದುಗೆ ಹಾಗೂ ಗದ್ದುಗೆ ಇರುವ ಸ್ಥಳದ ಆವರಣವನ್ನ ಕಂಗೊಳಿಸುವಂತೆ ಮಾಡಿದ್ದಾರೆ.
ಸಿಂದಗಿ ಶಾಂತವೀರೇಶ್ವರ ಮಠ ಎಂದರೆ ಇಂದಿಗೂ ವೇದ, ಶಾಸ್ತ್ರ, ಪುರಾಣಗಳು ಹಾಗೂ ಸಂಸ್ಕೃತ ಅಧ್ಯಯನಕ್ಕೆ ಹೆಸರುವಾಸಿಯಾಗಿದೆ. ಪ್ರತಿವರ್ಷ ಮಠದಿಂದ ನೂರಾರು ವಿದ್ಯಾರ್ಥಿಗಳು ಅಧ್ಯಯನ ಮುಗಿಸಿ ಹೊರಬರುತ್ತಾರೆ. ಹೀಗೆ ಹೊರಬಂದ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿಕೊಂಡು ಪ್ರತಿವರ್ಷ ಲಿಂಗೈಕ್ಯ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವವನ್ನ ವಿಶಿಷ್ಟವಾಗಿ ಆಚರಿಸುತ್ತಾರೆ.
ಅರವತ್ತು ಕೆಜಿ ತೂಕದ ಬೆಳ್ಳಿಯಿಂದ ಗದ್ದುಗೆ ಹಾಗೂ ಗದ್ದುಗೆ ಇರುವ ಬಾಗಿಲಿನ ಚೌಕಟ್ಟು ಮಾಡಿಸಿದ್ದಾರೆ.
ಇದನ್ನೂ ಓದಿ:
ಭಾರತ ರಾಜಧರ್ಮ ಅನುಸರಿಸುತ್ತಿದೆ: ಪ್ರಧಾನಿ ನರೇಂದ್ರ ಮೋದಿಯನ್ನು ಶ್ಲಾಘಿಸಿದ ಕ್ರಿಕೆಟಿಗ ಸರ್ ವಿವಿಯನ್ ರಿಚರ್ಡ್ಸ್
ಹಂಪಿಯಿಂದ ಅಯೋಧ್ಯೆಗೆ ಸಾಗಲಿದೆ ರಾಮನ ಪಾದುಕೆ ರಥಯಾತ್ರೆ: 12 ವರ್ಷದ ಬಳಿಕ ರಾಮನಿಗೆ ಪಾದುಕೆ ಅರ್ಪಣೆ