Sign In

By signing in or creating an account, you agree with Associated Broadcasting Company's Terms & Conditions and Privacy Policy.

Ekavyakti Yakshagana: OTTಗೆ ಕಾಲಿಡಲಿದೆ ಏಕವ್ಯಕ್ತಿ ಯಕ್ಷಗಾನ ಪ್ರಸಂಗದ ಹರಿದರುಶನ ಸಂಚಿಕೆ

ಇಷ್ಟು ದಿನಗಳಕಾಲ OTT ಪ್ಲಾಟ್‌ಫಾರ್ಮ್​​​ನಲ್ಲಿ ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು. ಇದೀಗ ಯಕ್ಷಗಾನ ಕೂಡ OTTಗೆ ಕಾಲಿಡಲಿದೆ. ಹೌದು ಬಹ್ರೇನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ ಕಲಾವಿದ ಹಾಗೂ ಉಪನ್ಯಾಸಕ ದೀಪಕ್ ರಾವ್ ಪೇಜಾವರ ಅವರ 'ಏಕವ್ಯಕ್ತಿ ಯಕ್ಷಗಾನ' ಪ್ರಸಂಗ OTTಯಲ್ಲಿ ಪ್ರದರ್ಶನಗೊಳ್ಳಲಿದೆ.

Ekavyakti Yakshagana: OTTಗೆ ಕಾಲಿಡಲಿದೆ ಏಕವ್ಯಕ್ತಿ ಯಕ್ಷಗಾನ ಪ್ರಸಂಗದ ಹರಿದರುಶನ ಸಂಚಿಕೆ
ಯಕ್ಷಗಾನ ಕಲಾವಿದ
Follow us
ವಿವೇಕ ಬಿರಾದಾರ
|

Updated on:Jul 25, 2023 | 7:26 PM

ಮಂಗಳೂರು: ಇಷ್ಟು ದಿನಗಳಕಾಲ OTT ಪ್ಲಾಟ್‌ಫಾರ್ಮ್​​​ನಲ್ಲಿ ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು. ಇದೀಗ ಯಕ್ಷಗಾನ (Yakshagana) ಕೂಡ OTTಗೆ ಕಾಲಿಡಲಿದೆ. ಹೌದು ಬಹ್ರೇನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಯಕ್ಷಗಾನ ಕಲಾವಿದ ಹಾಗೂ ಉಪನ್ಯಾಸಕ ದೀಪಕ್ ರಾವ್ ಪೇಜಾವರ (Deepak Rao) ಅವರ ‘ಏಕವ್ಯಕ್ತಿ ಯಕ್ಷಗಾನ’ ಪ್ರಸಂಗ OTTಯಲ್ಲಿ ಪ್ರದರ್ಶನಗೊಳ್ಳಲಿದೆ. ಇವರ ಸುಧನ್ವಾರ್ಜುನ ಕಾಳಗ ಆಧಾರಿತ ಹರಿದರುಶನ ಎಂಬ ಸಂಚಿಕೆಯು OTT ಪ್ಲಾಟ್‌ಫಾರ್ಮ್ Shaale.com ನಲ್ಲಿ ಜುಲೈ 29 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ದೀಪಕ್ ಅವರು ಹಂಸದ್ವಜ, ಧೂತ, ಸುಧನ್ವ , ಸಗರ್ಭೆ, ಕುವಲೆ, ಪ್ರಭಾವತಿ, ಅನುಸಾಲ್ವ, ಅರ್ಜುನ ಮತ್ತು ಕೃಷ್ಣ ಎಲ್ಲ ಒಂಬತ್ತು ಪಾತ್ರಗಳನ್ನು ಪ್ರಸ್ತುತಪಡಿಸಲಿದ್ದಾರೆ.

ಜುಲೈ 16 ರಂದು ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ ಟ್ರೈಲರ್ ಮತ್ತು ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿತ್ತು. ರೆಕಾರ್ಡಿಂಗ್ 2021 ರಲ್ಲಿ ಪೂರ್ಣಗೊಂಡಿದ್ದರೂ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು, ವಿಶೇಷವಾಗಿ ಸಂಕಲನವು ಪೂರ್ಣಗೊಳ್ಳಲು ಸುಮಾರು ಎರಡು ವರ್ಷಗಳನ್ನು ತೆಗೆದುಕೊಂಡಿತು ಎಂದು ದೀಪಕ್ ರಾವ್ ಪೇಜಾವರ ಅವರು ಹೇಳಿದ್ದಾರೆ.

ಇದನ್ನೂ ಓದಿ: Yakshagana: ಉದಯೋನ್ಮುಖ ಪ್ರತಿಭೆ ರಾಮಪ್ರಕಾಶ ಕಲ್ಲೂರಾಯ ಯಕ್ಷಗಾನ ಭಾಗವತಿಕೆಗೂ ಸೈ , ಸಂಗೀತಕ್ಕೂ ಜೈ 

ಅದೇನೇ ಇದ್ದರೂ, ಒಬ್ಬ ವ್ಯಕ್ತಿಯು ಒಂಬತ್ತು ಪಾತ್ರಗಳನ್ನು ನಿರ್ವಹಿಸುವುದು ಸಾಕಷ್ಟು ಸವಾಲಿನ ಸಂಗತಿಯಾಗಿದೆ. ರೆಕಾರ್ಡಿಂಗ್ ಸಮಯದಲ್ಲಿ, ನಾನು ನಾಲ್ಕು ಗೋಡೆಗಳ ನಡುವೆ ಏಕಾಂಗಿಯಾಗಿ ಪ್ರದರ್ಶನ ನೀಡಿದ್ದೇನೆ. ಯಕ್ಷಗಾನದಲ್ಲಿ ಹಿನ್ನೆಲೆಯಲ್ಲಿ ಸಹ ಕಲಾವಿದರು ಇದ್ದರು. ನಾನು ಹೊಸ ಪಾತ್ರದ ರೆಕಾರ್ಡ್ ಆರಂಭಿಸಿದಾಗ  ಹಿಂದಿನ ಪಾತ್ರದ ಡೈಲಾಗ್‌ಗಳು ಮತ್ತು ಕ್ರಿಯೆಗಳು ಏನೆಂದು ನೆನಪಿಟ್ಟುಕೊಳ್ಳುವುದು ನನಗೆ ತುಂಬಾ ಕಷ್ಟಕರವಾಗಿತ್ತು. ಹೀಗಾಗಿ ನಾನು ಸಂಚಿಕೆಯನ್ನು ಸ್ಕ್ರಿಪ್ಟ್ ಮಾಡಲು ಆರಂಭಿಸಿದೆ. ಇದರಿಂದ ನಾನು ಹಿಂದಿನ ಪಾತ್ರಗಳ ಡೈಲಾಗ್​ಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಯಿತು. ಇದರಿಂದ ರೆಕಾರ್ಡಿಂಗ್ ಪ್ರಕ್ರಿಯೆ ಕೂಡ ಸುಲಭವಾಯಿತು ಎಂದು ತಿಳಿಸಿದರು.

ಬೆಂಗಳೂರಿನ ಆಲ್‌ಫ್ಲಿಕ್ಸ್ ಸ್ಟುಡಿಯೋದಲ್ಲಿ 2.5 ಗಂಟೆಗಳ ಪ್ರದರ್ಶನವನ್ನು ರೆಕಾರ್ಡ್ ಮಾಡಲು ದೀಪಕ್ ಏಳು ದಿನಗಳನ್ನು ತೆಗೆದುಕೊಂಡರು. ಅವರು ಪ್ರತಿದಿನ ಬೆಳಗ್ಗೆ 5 ಗಂಟೆಗೆ ಬೆಂಗಳೂರಿನ ಸ್ಟುಡಿಯೋಗೆ ಹೋಗುತ್ತಿದ್ದರು. ಮತ್ತು ಬೆಳಿಗ್ಗೆ 7 ರಿಂದ ಸಂಜೆ 6.30 ರವರೆಗೆ ಚಿತ್ರೀಕರಣ ಮಾಡುತ್ತಿದ್ದರು. ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಮದ್ದಳೆಯಲ್ಲಿ ಪದ್ಮನಾಭ ಉಪಾಧ್ಯಾಯ ಮತ್ತು ಚೆಂಡೆಯಲ್ಲಿ ಮುರಾರಿ ಕಡಂಬಲಿತ್ತಾಯ ಮತ್ತು ಇತರ  ಕಲಾವಿದರು ಜೊತೆಗಿದ್ದರು.

ಯಕ್ಷಗಾನದಲ್ಲಿ ಕೆಲವು ಪ್ರಯೋಗಗಳು ನಡೆಯುತ್ತಿವೆ ಎಂಬ ಸುದ್ದಿ ಹರಡುತ್ತಿದ್ದಂತೆ ಸ್ಯಾಂಡಲ್​ವುಡ್​ ಮತ್ತು ಟಿವಿ ಉದ್ಯಮದ ಸುಮಾರು 300 ಕ್ಕೂ ಹೆಚ್ಚು ಜನರು ಈ ದೃಶ್ಯವನ್ನು ನೋಡಲು ಬರುತ್ತಿದ್ದರು ಎಂದು ಅವರು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:45 am, Tue, 25 July 23

IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ