ಮಂಗಳೂರು: ಬಜರಂಗದಳ ಮುಖಂಡ ಮತ್ತು ತಂಡದಿಂದ ಗೂಂಡಾಗಿರಿ

ಜಾಗದ ವಿಚಾರವಾಗಿ ಬಜರಂಗದಳ ಮುಖಂಡ ಮತ್ತು ತಂಡ ಅಂಗಡಿಗೆ ನುಗ್ಗಿ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಜಿನ ಉಪ್ಪಿನಂಗಡಿ ಪೇಟೆಯಲ್ಲಿ ನಡೆದಿದೆ. ಅಂಗಡಿಯಿಂದ ಹೊರಗೆಳೆದು ನಡುರಸ್ತೆಯಲ್ಲಿ ನಾಲ್ವರ ಮೇಲೆ ಹಲ್ಲೆಗೈದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಂಗಳೂರು: ಬಜರಂಗದಳ ಮುಖಂಡ ಮತ್ತು ತಂಡದಿಂದ ಗೂಂಡಾಗಿರಿ
ಬಜರಂಗದಳ ಮುಖಂಡ ಭರತ್ ಕುಮ್ಡೇಲು ಮತ್ತು ತಂಡದಿಂದ ಹಲ್ಲೆ
Edited By: Rakesh Nayak Manchi

Updated on: Oct 05, 2023 | 12:18 PM

ಮಂಗಳೂರು, ಅ.5: ಜಾಗದ ವಿಚಾರವಾಗಿ ಬಜರಂಗದಳ (Bajrang Dal) ಮುಖಂಡ ಮತ್ತು ತಂಡ ಅಂಗಡಿಗೆ ನುಗ್ಗಿ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು ತಾಲೂಜಿನ ಉಪ್ಪಿನಂಗಡಿ ಪೇಟೆಯಲ್ಲಿ ನಡೆದಿದೆ. ಅಂಗಡಿಯಿಂದ ಹೊರಗೆಳೆದು ನಡುರಸ್ತೆಯಲ್ಲಿ ನಾಲ್ವರ ಮೇಲೆ ಹಲ್ಲೆಗೈದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಜರಂಗದಳ ಮುಖಂಡ, ರೌಡಿಶೀಟರ್ ಭರತ್ ಕುಮ್ಡೇಲು, ಬಜರಂಗದಳದ ಜಗಜೀವನ್ ರೈ, ಭವಿಷ್, ಸಂದೀಪ್ ಎಂಬವರು ಅಂಗಡಿಗೆ ನುಗ್ಗಿ ಹರೀಶ ನಾಯ್ಕ, ಸುದರ್ಶನ್ ಕುಮಾರ್, ರಮಾನಂದ ಎಂಬವರನ್ನು ಹೊರಗೆಳೆದು ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ:  ಮಂಗಳೂರು: ವಿಟ್ಲದಲ್ಲಿ ಗ್ರಾನೈಟ್ ಸಾಗಿಸುತ್ತಿದ್ದ ಲಾರಿ ಕಟ್ಟಡಕ್ಕೆ ಡಿಕ್ಕಿ, ಓರ್ವ ಸಾವು, ಮೂವರು ಗಂಭೀರ

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಸ್​ಸಿ ಎಸ್​ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಭರತ್ ಕುಮ್ಡೇಲು ಕಲ್ಲಡ್ಕದ ಬಜರಂಗದಳ ಮುಖಂಡನಾಗಿದ್ದಾನೆ. ಅಲ್ಲದೆ, ಬಂಟ್ವಾಳದಲ್ಲಿ ರೌಡಿ ಶೀಟರ್ ಆಗಿದ್ದು, 2017ರಲ್ಲಿ ಎಸ್​ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಕೊಲೆ ಪ್ರಕರಣದ ಆರೋಪಿಯಾಗಿದ್ದ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:09 pm, Thu, 5 October 23

ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us