AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಗಿಯದ ಬೆಂಗಳೂರು-ಮಂಗಳೂರು ಹೆದ್ದಾರಿ ಕಾಮಗಾರಿ: ಗುಡ್ಡ ಕುಸಿಯುವ ಭೀತಿ

ಮುಗಿಯದ ಬೆಂಗಳೂರು-ಮಂಗಳೂರು ಹೆದ್ದಾರಿ ಕಾಮಗಾರಿ: ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75 ಚತುಷ್ಪತ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಿ 10 ವರ್ಷ ಕಳೆದರೂ ಇನ್ನೂವರೆಗೂ ಮುಗಿದಿಲ್ಲ. ಮಳೆಗಾಲ ಆರಂಭವಾದ್ರೆ ಹೆದ್ದಾರಿ ಅಕ್ಕ-ಪಕ್ಕದಲ್ಲಿ ಅಲ್ಲಲ್ಲಿ ಗುಡ್ಡ ಕುಸಿತವಾಗುತ್ತಿದೆ. ಇದಕ್ಕೆ ಕಾರಣ ಅವೈಜ್ಞಾನಿಕ ಕಾಮಗಾರಿ. ಆದರೆ, ಇಲಾಖೆಗಳ ಕೆಸರೆರಚಾಟದಲ್ಲಿ ಪ್ರಯಾಣಿಕರು ಹೈರಾಣಾಗುತ್ತಿದ್ದಾರೆ.

ಮುಗಿಯದ ಬೆಂಗಳೂರು-ಮಂಗಳೂರು ಹೆದ್ದಾರಿ ಕಾಮಗಾರಿ: ಗುಡ್ಡ ಕುಸಿಯುವ ಭೀತಿ
ಕುಸಿದಿರುವ ಗುಡ್ಡ
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ವಿವೇಕ ಬಿರಾದಾರ|

Updated on:Jul 20, 2025 | 11:49 AM

Share

ಮಂಗಳೂರು, ಜುಲೈ 20: ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರಿನಿಂದ ಮಂಗಳೂರಿಗೆ (Bengaluru-Mangaluru NH 75) ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಹೆದ್ದಾರಿ ಅಗಲೀಕರಣ ಕಾಮಗಾರಿ ಆರಂಭವಾಗಿ 10 ವರ್ಷ ಕಳೆದರೂ ಇನ್ನೂವರೆಗೂ ಮುಗಿದಿಲ್ಲ. ಈ ನಡುವೆ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಭೂಕುಸಿತ (Landslide) ಉಂಟಾಗುತ್ತಿದೆ. ಅಗಲೀಕರಣದ ವೇಳೆ ಸ್ಲೋಪ್ ಆಗಿ ಗುಡ್ಡವನ್ನು ಕಡಿಯುವ ಬದಲಿಗೆ, ಕಡಿದಾಗಿ ಗುಡ್ಡವನ್ನು ಕಡಿಯಲಾಗಿದೆ. ಇದರಿಂದ ಸ್ವಲ್ವ ಮಳೆ ಬಂದರೆ ಸಾಕು ಗುಡ್ಡ ಕುಸಿತವಾಗುತ್ತಿದೆ. ರಸ್ತೆ ಮೇಲೆ ಗುಡ್ಡ ಬಂದು ಬೀಳುತ್ತಿದೆ.

ಇದರಿಂದ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕೌಕ್ರಾಡಿ ಬಳಿಯ ಕಲ್ಲುಗುಂಡಿ ಪ್ರದೇಶದಲ್ಲಿ ಅತೀ ಹೆಚ್ಚಿನ ಕುಸಿತದ ಭೀತಿ ಇದೆ. ಅತಿ ಕಡಿದಾಗಿ ಗುಡ್ಡ ಕಡಿದು ಕಾಮಗಾರಿ ಮಾಡಿದ್ದರಿಂದ ಇಲ್ಲಿ ಅಪಾಯದ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: ಶಿರಾಡಿ ಘಾಟ್ ಅಧ್ವಾನ, ಹಲವೆಡೆ ಭೂಕುಸಿತ: ಬೆಂಗಳೂರು ಮಂಗಳೂರು ಪ್ರಯಾಣಕ್ಕೆ ಸಂಚಕಾರ

ಇದನ್ನೂ ಓದಿ
Image
ಮಂಗಳೂರು: NH 169ರಲ್ಲಿ ಗುಡ್ಡ ಕುಸಿತ, ಒಂದು ಬದಿ ರಸ್ತೆ ಸಂಚಾರ ಬಂದ್​
Image
ಗುಡ್ಡಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿ ಕಾರಣ, ಅಧಿಕಾರಿಗಳ ವಿರುದ್ಧ ದೂರು
Image
ಭೂಕುಸಿತ ಭೀತಿ: ಉತ್ತರ ಕನ್ನಡದಲ್ಲಿ ಹೆದ್ದಾರಿಯ 19 ಕಡೆ ವಾಹನ ನಿಲುಗಡೆ ಬಂದ್
Image
ಬೆಂಗಳೂರು ಮಂಗಳೂರು ವಾಹನ ಸವಾರರೇ ಗಮನಿಸಿ: ಶಿರಾಡಿ ಘಾಟ್​ನ ಹಲವೆಡೆ ಭೂಕುಸಿತ

ಇಲ್ಲಿ ಗುಡ್ಡು ಕುಸಿತ ಆಗೇ ಆಗುತ್ತದೆ ಎಂಬ ಮಾಹಿತಿಯನ್ನು ಉಪ್ಪಿನಂಗಡಿ ಠಾಣೆ ಪೊಲೀಸರು ಈ ಮೊದಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಿದ್ದರು. ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಉತ್ತರ ನೀಡಿದ್ದು, ಅಗಲೀಕರಣಕ್ಕೆ ಬೇಕಾಗುವಷ್ಟು ಜಾಗವನ್ನು ಅರಣ್ಯ ಇಲಾಖೆ ನೀಡಿರಲಿಲ್ಲ. ಜಾಗದ ಸಮಸ್ಯೆಯಿಂದಾಗಿ ಕಡಿದಾಗಿ ಗುಡ್ಡ ಕಡಿದು ಕಾಮಾಗಾರಿ ಮಾಡಲಾಗಿದೆ ಎಂದು ಉತ್ತರ ನೀಡಿತ್ತು. ಇದು ಸತ್ಯ ಕೂಡ, ಅರಣ್ಯ ಇಲಾಖೆ ಅಗಲೀಕರಣಕ್ಕೆ ಬೇಕಾದಷ್ಟು ಜಾಗ ಕೊಡದ ಕಾರಣ ಇಲ್ಲಿ ಕಡಿದಾಗಿ ಗುಡ್ಡ ಕಡಿದು ಕಾಮಗಾರಿ ಮಾಡಲಾಗಿದೆ.

ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿ ನಮಗೆ ಜಾಗ ನೀಡಲು ಅಸಾಧ್ಯ ಎಂದು ಹೇಳಿದ್ದರು. ಇಲಾಖೆಗಳ ತಮ್ಮ ಸಮಜಾಯಿಷಿಗಳನ್ನು ನೀಡತ್ತಾ ಕೈ ತೊಳೆದುಕೊಳ್ಳುತ್ತಿವೆ. ಆದರೆ, ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎಂಬಂತಾಗಿದೆ ಪ್ರಯಾಣಿಕರ ಪಾಡು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 11:46 am, Sun, 20 July 25