AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತರಗತಿಯಲ್ಲಿ ಹೇಳಿದ ಪಾಠಗಳನ್ನು ಅಂಧ ಮಗಳ ಪರವಾಗಿ ನೋಟ್ಸ್​ ಮಾಡಿಕೊಳ್ಳುತ್ತಿದ್ದ ತಾಯಿ: ದ್ವೀತಿಯ ಪಿಯುಸಿಯಲ್ಲಿ ಶ್ರುತಿ ಪಾಸ್

ತಾಯಿಯ ನೆರವಿನಿಂದ ದ್ವಿತೀಯ ಪಿಯುಸಿಯಲ್ಲಿ ಅಂಧ ವಿದ್ಯಾರ್ಥಿನಿ ಪಸ್ಟ್​ ಕ್ಲಾಸ್​ನಲ್ಲಿ ಪಾಸಾಗಿದ್ದಾಳೆ.

ತರಗತಿಯಲ್ಲಿ ಹೇಳಿದ ಪಾಠಗಳನ್ನು ಅಂಧ ಮಗಳ ಪರವಾಗಿ ನೋಟ್ಸ್​ ಮಾಡಿಕೊಳ್ಳುತ್ತಿದ್ದ ತಾಯಿ: ದ್ವೀತಿಯ ಪಿಯುಸಿಯಲ್ಲಿ ಶ್ರುತಿ ಪಾಸ್
ತಾಯಿ ಚಂದ್ರಕಾಲಾ, ಮಗಳು ಶ್ರುತಿ, ತಂದೆ ಜಗನ್ನಾಥ ಶೆಟ್ಟಿ
Follow us
ವಿವೇಕ ಬಿರಾದಾರ
|

Updated on: Apr 24, 2023 | 3:50 PM

ಮಂಗಳೂರು: ಮಕ್ಕಳನ್ನು ತಾಯಿ ಎಂದಿಗೂ ಕೈ ಬಿಡುವುದಿಲ್ಲ. ಮಕ್ಕಳ ಪ್ರತಿಯೊಂದು ಹೆಜ್ಜೆಯಲ್ಲಿ ನೆರಳಾಗಿ, ಆಸರೆಯಾಗಿರುತ್ತಾಳೆ. ಹೀಗೆ ತಾಯಿಯ ನೆರವಿನಿಂದ ದ್ವಿತೀಯ ಪಿಯುಸಿಯಲ್ಲಿ (2nd PUC) ಅಂಧ ವಿದ್ಯಾರ್ಥಿನಿ (Student) ಪಸ್ಟ್​ ಕ್ಲಾಸ್​ನಲ್ಲಿ ಪಾಸಾಗಿದ್ದಾಳೆ. ಹೌದು ಮಂಗಳೂರಿನ (Mangalore) ಚಂದ್ರಕಲಾ ಶೆಟ್ಟಿ  ಎಂಬುವರ ಮಗಳು ಶ್ರುತಿ. ಜೆ. ಶೆಟ್ಟಿ ಅವರು ಗೋರಿಗುಡ್ಡದ ಕಿಟೆಲ್ ಮೆಮೊರಿಯಲ್​ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದಿದ್ದಾರೆ. ಇವರು ಶೇ 100ರಷ್ಟು ಅಂಧರಾಗಿದ್ದು, ಓದಲು ಮತ್ತು ತರಗತಿಯಲ್ಲಿ ಹೇಳಿದ ಪಾಠಗಳನ್ನು ನೋಟ್​ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಅರಿತ ತಾಯಿ ಚಂದ್ರಕಾಲಾ ಅವರು, ಮಗಳ ಕಷ್ಟವನ್ನು ನೋಡಲಾರದೆ ಒಂದು ಪರಿಹಾರವನ್ನು ಕಂಡುಕೊಂಡರು.

ಇನ್ನು ಚಂದ್ರಕಲಾ ಅವರು 10ನೇ ತರಗತಿವರೆಗೆ ಮಾತ್ರ ಓದಿದ್ದಾರೆ. ಚಂದ್ರಕಾಲಾ ಮಗಳಿಗೆ ಆಸರೆಯಾಗಲು ಪ್ರತಿದಿನ ಶ್ರುತಿ ಜೆ ಶೆಟ್ಟಿ ಅವರೊಂದಿಗೆ ಕಾಲೇಜಿಗೆ ತೆರಳಿ ತರಗತಿ ಸಮೀಪ ಕಾರಿಡಾರ್​ನಲ್ಲಿ ಕೂತು ಶಿಕ್ಷಕರು ಹೇಳಿದ ಪಾಠಗಳನ್ನು ನೋಟ್​ ಮಾಡಿಕೊಳ್ಳುತ್ತಿದ್ದರು. ನಂತರ ಮನೆಯಲ್ಲಿ ಮಗಳಿಗೆ ಕಾಲೇಜಿನಲ್ಲಿ ತಾವು ಕೇಳಿದ ಪಾಠಗಳನ್ನು ಅಭ್ಯಾಸ ಮಾಡಿಸುತ್ತಿದ್ದರು. ಹೀಗೆ ಸತತ ಎರಡು ವರ್ಷಗಳ ಕಾಲ ಮಾಡಿದ್ದಾರೆ.

ಇದರಿಂದ ದ್ವಿತಿಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಶ್ರುತಿ ಅವರು ಉತ್ತೀರ್ಣರಾದರು. ಇನ್ನು ಶ್ರುತಿಯವರು ಹುಟ್ಟುವಾಗಲೇ ಶೇ.100ರಷ್ಟು ಅಂಧರಾಗಿದ್ದಾರೆ. ಶ್ರುತಿ ಸಹೋದರ ಶ್ರುತಿಕ್ ಶೆಟ್ಟಿ ಸಾಮಾನ್ಯರಂತಿದ್ದು ವಾಣಿಜ್ಯ ವಿಭಾಗದಲ್ಲಿ ಪಿಯುಸಿ ಪಾಸ್​ ಆಗಿದ್ದಾರೆ.

ಈ ಬಗ್ಗೆ ಚಂದ್ರಕಲಾ ಶೆಟ್ಟಿಯವರು ಮಾತನಾಡಿ ನನ್ನ ಪತಿ ಜಗನ್ನಾಥ ಶೆಟ್ಟಿ ಆಟೊರಿಕ್ಷಾ ಚಾಲಕರಾಗಿದ್ದು, ಶ್ರುತಿ ಮತ್ತು ನನ್ನನ್ನು ಕಾಲೇಜಿಗೆ ಬಿಡುತ್ತಿದ್ದರು. ಅವಳು ತರಗತಿಯೊಳಗೆ ಕುಳಿತಾಗ, ನಾನು ಹೊರಗಡೆ ಕಾರಿಡಾರ್​ನಲ್ಲಿ ಕುಳಿತುಕೊಂಡು ನೋಟ್ಸ್​ ಮಾಡಿಕೊಳ್ಳುತ್ತಿದ್ದೆ. ಮತ್ತು ನಾನು ಹೆಚ್ಚು ಪಠ್ಯಪುಸ್ತಕಗಳನ್ನು ನನ್ನೊಂದಿಗೆ ತೆಗೆದುಕೊಂಡು ಹೋಗುತ್ತಿದ್ದೆ. ನಂತರ, ನಾನು ಮನೆಗೆ ಬಂದು ತರಗತಿಯಲ್ಲಿ ಕಲಿತದ್ದ ಪಾಠಗಳನ್ನು ಮನನ ಮಾಡಿಸುತ್ತಿದ್ದೆ ಎಂದು ಹೇಳಿದರು.

ಹೆಚ್ಚುವರಿಯಾಗಿ, ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾದ ತರಗತಿಗಳ ವೀಡಿಯೊಗಳನ್ನು ಚಂದ್ರಕಲಾ ವೀಕ್ಷಿಸಿ ಮಗಳಗೆ ಹೇಳಿಕೊಡುತ್ತಿದ್ದರು. ಇನ್ನು ಸಹೋದರ ಶ್ರುತಿಕ್​ ಶೆಟ್ಟಿ ಅರ್ಥಶಾಸ್ತ್ರದ ಪಾಠಗಳನ್ನು ಶ್ರುತಿಯವರಿಗೆ ಹೇಳಿಕೊಡುತ್ತಿದ್ದನು.

ಹೀಗೆ ತಾಯಿ-ಮಗಳು ಪರೀಕ್ಷೆಗೆ ಸಾಕಷ್ಟು ತಯಾರಿ ನಡೆಸಿದ್ದರು, ಆದರೆ ಶ್ರುತಿಯವರ ಪರವಾಗಿ ದ್ವೀತಿಯ ಪಿಯುಸಿ ಅಂತಿಮ ಪರೀಕ್ಷೆ ಬರೆಯಲು ಸ್ಕ್ರೈಬ್​ ಬೇಗನೆ ಸಿಗಲಿಲ್ಲ.  ಈ ಸಂಬಂಧ ಸಾಕಷ್ಟು ಹುಡುಕಿದ ನಂತರ ಕೊನೆ ಗಳಿಗೆಯಲ್ಲಿ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಸಿಂಚನಾ ಎಂಬುವರು ಶ್ರುತಿ ಅವರ ಪರೀಕ್ಷೆ ಬರೆದರು. ನನ್ನ ಮಗಳ ಪರೀಕ್ಷೆಗೆ ನೆರವಾದ ಸಿಂಚನಾ ಮತ್ತು ಕಾಲೇಜು ಆಡಳಿತ ಮಂಡಳಿಗೆ ಧನ್ಯವಾದ ಎಂದು ಚಂದ್ರಕಲಾ ಅವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ