ಉಪ್ಪು ಉದ್ಯಮಕ್ಕೂ ಕೊರೊನಾ ಕರಿನೆರಳು!

ಕಾರವಾರ: ಉಪ್ಪು ಜೀವನಾವಶ್ಯಕ ವಸ್ತುಗಳಲ್ಲಿ ಒಂದು. ಅದರಲ್ಲಿಯೂ ಪ್ರಾಕೃತಿಕವಾಗಿ ಬೆಳೆಯುವ ಉಪ್ಪಿಗೆ ಎಲ್ಲಿಲ್ಲದ ಬೇಡಿಕೆ. ಆದರೆ, ಇಡೀ ವಿಶ್ವವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ವೈರಸ್ ಉಪ್ಪಿನ ಉದ್ಯಮಕ್ಕೂ ಪೆಟ್ಟು ನೀಡಿದೆ. ಗೋಕರ್ಣದ ಸಾಣಿಕಟ್ಟಾದ ಉಪ್ಪಿನ ಆಗರದಲ್ಲಿ ಸಮಯಕ್ಕೆ ಸರಿಯಾಗಿ ಉಪ್ಪು ರಫ್ತಾಗದೇ ರಾಶಿ ರಾಶಿ ಉಪ್ಪು ಶೇಖರಣೆಗೊಂಡಿದೆ. ರಫ್ತಾಗದೇ ಗೋಕರ್ಣದಲ್ಲೇ ಉಳಿದ ಉಪ್ಪಿನ ರಾಶಿ ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಸಾಣಿಕಟ್ಟಾದಲ್ಲಿ ಪ್ರಾಕೃತಿಕವಾಗಿ ಬೆಳೆಯುವ ಉಪ್ಪು, ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆ ಹೊರರಾಜ್ಯಗಳಲ್ಲೂ ಅತಿ ಹೆಚ್ಚು ಬೇಡಿಕೆ ಹೊಂದಿದೆ. […]

ಉಪ್ಪು ಉದ್ಯಮಕ್ಕೂ ಕೊರೊನಾ ಕರಿನೆರಳು!
Follow us
ಆಯೇಷಾ ಬಾನು
|

Updated on:Jun 07, 2020 | 3:46 PM

ಕಾರವಾರ: ಉಪ್ಪು ಜೀವನಾವಶ್ಯಕ ವಸ್ತುಗಳಲ್ಲಿ ಒಂದು. ಅದರಲ್ಲಿಯೂ ಪ್ರಾಕೃತಿಕವಾಗಿ ಬೆಳೆಯುವ ಉಪ್ಪಿಗೆ ಎಲ್ಲಿಲ್ಲದ ಬೇಡಿಕೆ. ಆದರೆ, ಇಡೀ ವಿಶ್ವವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ವೈರಸ್ ಉಪ್ಪಿನ ಉದ್ಯಮಕ್ಕೂ ಪೆಟ್ಟು ನೀಡಿದೆ. ಗೋಕರ್ಣದ ಸಾಣಿಕಟ್ಟಾದ ಉಪ್ಪಿನ ಆಗರದಲ್ಲಿ ಸಮಯಕ್ಕೆ ಸರಿಯಾಗಿ ಉಪ್ಪು ರಫ್ತಾಗದೇ ರಾಶಿ ರಾಶಿ ಉಪ್ಪು ಶೇಖರಣೆಗೊಂಡಿದೆ.

ರಫ್ತಾಗದೇ ಗೋಕರ್ಣದಲ್ಲೇ ಉಳಿದ ಉಪ್ಪಿನ ರಾಶಿ ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಸಾಣಿಕಟ್ಟಾದಲ್ಲಿ ಪ್ರಾಕೃತಿಕವಾಗಿ ಬೆಳೆಯುವ ಉಪ್ಪು, ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆ ಹೊರರಾಜ್ಯಗಳಲ್ಲೂ ಅತಿ ಹೆಚ್ಚು ಬೇಡಿಕೆ ಹೊಂದಿದೆ. 1,720 ರಿಂದಲೇ ಇಲ್ಲಿನ ಸುತ್ತಮುತ್ತಲಿನ 50 ಎಕರೆ ಪ್ರದೇಶದಲ್ಲಿ ಉಪ್ಪು ಉತ್ಪಾದಿಸಲಾಗುತ್ತಿದೆ. ಇದೀಗ 1952ರಲ್ಲಿ ಆರಂಭಗೊಂಡ ನಾಗರಬೈಲ್ ಉಪ್ಪು ತಯಾರಕರ ಸಹಕಾರಿ ಸಂಘದ ಮೂಲಕ ಸುಮಾರು 450 ಎಕರೆ ಪ್ರದೇಶದಲ್ಲಿ ಉಪ್ಪು ಬೆಳೆಯಲಾಗುತ್ತಿದೆ. ಸಾಮಾನ್ಯವಾಗಿ ಸೆಪ್ಟೆಂಬರ್-ಅಕ್ಟೊಬರ್ ತಿಂಗಳಿನಲ್ಲಿ ಆರಂಭವಾಗುತ್ತಿದ್ದ ಉಪ್ಪು ತಯಾರಿಕೆ ಕಳೆದ ಬಾರಿ ಸುರಿದ ಮಹಾಮಳೆಯಿಂದಾಗಿ ಉತ್ಪಾದನೆ ತಡವಾಗಿ ಶುರುವಾಗಿತ್ತು.

ಇದರ ಬೆನ್ನಲ್ಲೆೇ ರಾಜ್ಯಕ್ಕೂ ಕೊರೊನಾ ವಕ್ಕರಿಸಿದ ಪರಿಣಾಮ ಕೆಲ ದಿನಗಳ ಕಾಲ ಉಪ್ಪು ಉತ್ಪಾದನೆಯೇ ಬಂದಾಗುವಂತಾಗಿತ್ತು. ಆದರೆ, ಜೀವನಾವಷ್ಯಕ ವಸ್ತುಗಳಲ್ಲಿ ಬರುವ ಕಾರಣ ಉಪ್ಪು ಉತ್ಪಾದನೆ ಮತ್ತೆ ಮರಳಿ ಆರಂಭಿಸಲಾಗಿತ್ತು. ಆದ್ರೆ ಅನುಮತಿ ಸಿಕ್ಕ ಬಳಿಕ ನಿರಂತರವಾಗಿ ಉಪ್ಪಿನ ಉತ್ಪಾದನೆಯಾಗುತ್ತಿದೆ. ಸುಮಾರು 7 ಮೆಟ್ರಿಕ್ ಟನ್ ಉತ್ಪಾದನೆಯಾಗಿದೆ. ಆದ್ರೆ ಉತ್ಪಾದನೆಯಾದ ಉಪ್ಪು ಕೊರೊನಾ ಕಾರಣದಿಂದ ಸಾಗಣೆಯಾಗದ ಕಾರಣ ರಫ್ತಾಗದೇ ಉಪ್ಪಿನ ರಾಶಿಯೇ ಶೇಖರಣೆಯಾಗಿದ್ದು ಕೊರೊನಾ ಕರಿನೆರಳು ಉಪ್ಪಿಗೂ ಒಕ್ಕರಿಸಿದೆ.

ತಲೆನೋವಾದ ಉಪ್ಪು ಸಂಗ್ರಹಣೆ ಇಲ್ಲಿ ಉತ್ಪಾದನೆಯಾದ ಉಪ್ಪನ್ನು ಉತ್ತರ ಕನ್ನಡ, ಗದಗ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಗೋವಾ ಭಾಗಗಳಿಗೆ ರಪ್ತು ಮಾಡಲಾಗುತ್ತಿತ್ತು ಆದರೆ ಈ ಭಾರಿ ಕೆಲ ದಿನಗಳವರೆಗೆ ರಪ್ತಿಗೆ ಲಾಕ್​ಡೌನ್ ಅಡ್ಡಿಯಾಗಿತ್ತು. ಆದರೆ, ನಿರಂತರವಾಗಿ ಉಪ್ಪು ಉತ್ಪಾದನೆಯಾದ ಪರಿಣಾಮ ಸಾಣಿಕಟ್ಟಾದ ಉಪ್ಪಿನ ಶೇಖರಣೆ ಮನೆಗಳು ತುಂಬಿ ಹೊರಗಡೆ ರಾಶಿ ಮಾಡಲಾಗುತ್ತಿದೆ. ಹೀಗೆ ತಯಾರಾದ ಉಪ್ಪು ಸಂಗ್ರಹಣೆ ದೊಡ್ಡ ತಲೆನೋವಾಗಿದೆ. ಆದರೆ, ಎಷ್ಟೇ ಉಪ್ಪು ತಯಾರಾದರೂ ಅದನ್ನು ಜೋಪಾನವಾಗಿ ಶೇಖರಣೆ ಮಾಡಿದಲ್ಲಿ ಮಳೆಗಾಲ ಹಾಗೂ ಮಳೆಗಾಲ ಮುಗಿದ ಬಳಿಕ ಇದನ್ನು ಬಳಕೆ ಮಾಡಿಕೊಳ್ಳಬಹುದು. ಅದರಲ್ಲಿಯೂ ಇತ್ತಿಚೀನ ದಿನಗಳಲ್ಲಿ ಪ್ರಾಕೃತಿಕವಾಗಿ ಬೆಳೆಯುವ ಉಪ್ಪನ್ನು ಇಷ್ಟಪಡುವ ಕಾರಣ ಹೆಚ್ಚು ಬೇಡಿಕೆ ಇದೆ ಎನ್ನುತ್ತಾರೆ ಉಪ್ಪು ಮಾರಾಟ ವಿಭಾಗದ ಮಾರಾಟ ವಿಭಾಗದ ಮುಖ್ಯಸ್ಥರಾದ ನವೀನ ನಾಡಕರ್ಣಿ.

ಹಲವು ಶತ ಶತಮಾನಗಳಿಂದ ಉತ್ಪಾದಿಸಲಾಗುತ್ತಿರುವ ಉಪ್ಪಿಗೂ ಕೊರೊನಾ ಅಡ್ಡಿಯಾಗಿದೆ. ಆದರೆ, ಉಪ್ಪು ಉತ್ಪಾದನಾ ಘಟಕಗಳಲ್ಲಿ ಕೆಲಸ ಮಾಡುವವರಿಗೆ ಲಾಕ್​ಡೌನ್ ಮಧ್ಯದಲ್ಲಿ ಸ್ವಲ್ಪ ದಿನ ಕೆಲಸ ಇಲ್ಲದಂತಾದರೂ ಬಳಿಕ ನಿರಂತರವಾಗಿ ಉತ್ಪಾದನೆ ನಡೆದಿರುವುದು ಉದ್ಯೋಗ ಸಿಕ್ಕಂತಾಗಿದೆ. ಆದ್ರೆ ಮೊನ್ನೆಯಿಂದ ಸುರಿಯುತ್ತಿದ್ದ ನಿಸರ್ಗ ಚಂಡಮಾರುತ ಕೂಡ ಕೊರೊನಾ ನಡುವೆ ಉಪ್ಪಿನ ಉದ್ಯಮಕ್ಕೆ ಮತ್ತಷ್ಟು ಹೊಡೆತ ನೀಡಿದ್ದಂತೂ ಸುಳ್ಳಲ್ಲ.

Published On - 3:10 pm, Sun, 7 June 20

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್