ಧರ್ಮಸ್ಥಳ ಕೇಸ್​: ಆರೋಪಿ ಚಿನ್ನಯ್ಯನ ಜೊತೆ ಫೋನ್​ ಸಂಪರ್ಕದಲ್ಲಿದ್ದವರಿಗೆ ಶಾಕ್​

ಧರ್ಮಸ್ಥಳದಲ್ಲಿ ಶವ ಹೂಳಿದ್ದಾಗಿ ಹೇಳಲಾದ ಆರೋಪಿ ಚಿನ್ನಯ್ಯನನ್ನು ಬಂಧಿಸಲಾಗಿದೆ. ಬೆಳ್ತಂಗಡಿ ಎಸ್‌ಐಟಿ ತೀವ್ರ ವಿಚಾರಣೆ ನಡೆಸುತ್ತಿದ್ದು, ಕೋರ್ಟ್‌ಗೆ ತೆಗೆದುಕೊಂಡು ಹೋಗಿದ್ದ ತಲೆಬುರುಡೆಯ ಬಗ್ಗೆ ತನಿಖೆ ಮಾಡಿದೆ. ಚಿನ್ನಯ್ಯನ ಮೊಬೈಲ್‌ಗಾಗಿ ಶೋಧ ನಡೆಸಲಾಗುತ್ತಿದ್ದು, ಎರಡು ವರ್ಷಗಳ ಸಿಡಿಆರ್ ಪರಿಶೀಲಿಸಲಾಗುತ್ತಿದೆ. ಚಿನ್ನಯ್ಯನೊಂದಿಗೆ ಸಂಪರ್ಕ ಹೊಂದಿದವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

ಧರ್ಮಸ್ಥಳ ಕೇಸ್​: ಆರೋಪಿ ಚಿನ್ನಯ್ಯನ ಜೊತೆ ಫೋನ್​ ಸಂಪರ್ಕದಲ್ಲಿದ್ದವರಿಗೆ ಶಾಕ್​
ಆರೋಪಿ ಚಿನ್ನಯ್ಯ
Edited By: ವಿವೇಕ ಬಿರಾದಾರ

Updated on: Aug 24, 2025 | 4:08 PM

ಮಂಗಳೂರು, ಆಗಸ್ಟ್​ 24: ಧರ್ಮಸ್ಥಳದಲ್ಲಿ (Dharmastala) ಶವಹೂತಿದ್ದಾಗಿ ಹೇಳಿದ್ದ ಆರೋಪಿ ಚಿನ್ನಯ್ಯ ಬಂಧನವಾಗಿದ್ದು, ಕ್ಷಣ ಕ್ಷಣಕ್ಕೂ ಹೊಸ ಅಂಶ ಆಚೆ ಬರುತ್ತಿದೆ. ಸದ್ಯ ಬೆಳ್ತಂಗಡಿ (Beltangadi) ಎಸ್‌ಐಟಿ (SIT) ಕಚೇರಿಯಲ್ಲಿರುವ ಚಿನ್ನಯ್ಯನನ್ನು ಎಸ್ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದು, ಚಿನ್ನಯ್ಯ ಕೋರ್ಟ್​ ತೆಗೆದುಕೊಂಡು ಹೋಗಿದ್ದ ಮಾನವನ ತಲೆ ಬುರುಡೆ ಬಗ್ಗೆ ತನಿಖೆ ನಡೆಸಿದ್ದಾರೆ. ಬುರುಡೆ ಟೀಂ ಧರ್ಮಸ್ಥಳ ಗ್ರಾಮದ ಒಂದು ನಿಗೂಢ ಜಾಗದಲ್ಲಿ ತಲೆ ಬುರುಡೆಯನ್ನು ಹೂತು ಚಿನ್ನಯ್ಯಗೆ ಮಾಹಿತಿ ನೀಡಿತ್ತು. ಉತ್ಖನನದ ವೇಳೆ ಆ ಜಾಗವನ್ನು ತೋರಿಸುವ ಪ್ಲ್ಯಾನ್ ಕೂಡ ಮಾಡಲಾಗಿತ್ತು. ಇದರ ಬಗ್ಗೆಯೂ ಎಸ್ಐಟಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಇನ್ನು, ಎಸ್​ಐಟಿ ಅಧಿಕಾರಿಗಳು ಚಿನ್ನಯ್ಯನ ಮೊಬೈಲ್​ಗಾಗಿ ಶೋಧ ನಡೆಸಿದ್ದಾರೆ. ಚಿನ್ನಯ್ಯ ನ್ಯಾಯಾಲಯಕ್ಕೆ ತಲೆ ಬುರುಡೆ ತೆಗೆದುಕೊಂಡು ಹೋದಾಗಲೇ ಈತನ ಮೊಬೈಲ್​ ಅನ್ನು ಬುರುಡೆ ಟೀಂ ಪಡೆದುಕೊಂಡಿತ್ತು. ಅಂದಿನಿಂದ ಇಲ್ಲಿಯವರೆಗೂ ಚಿನ್ನಯ್ಯ ಬಳಿ ವಕೀಲರಿಗೆ ಮಾತ್ರ ಮಾತನಾಡಲು ಅವಕಾಶ‌ ಇತ್ತು. ಉಳಿದಂತೆ ಚಿನ್ನಯ್ಯ ಮೊಬೈಲ್ ಬಳಸಲು ಬುರುಡೆ ಟೀಂ ಬಿಡುತ್ತಿರಲಿಲ್ಲ.

ಎಸ್​ಐಟಿ ವಿಚಾರಣೆ ವೇಳೆ ಆರೋಪಿ ಚಿನ್ನಯ್ಯ ತನ್ನ ಬಳಿ ಮೊಬೈಲ್​ ಇಲ್ಲ ಎಂದು ಹೇಳಿದ್ದನು. ಆದರೆ, ಚಿನ್ನಯ್ಯನ ಬಳಿ ಮೊಬೈಲ್​ ಇತ್ತು. ಸದ್ಯ ಆ ಮೊಬೈಲ್​ ಬುರುಡೆ ಗ್ಯಾಂಗ್​ನ ಬಳಿಯೇ ಇದೆ ಎಂದು ಎಸ್​ಐಟಿ ಅಧಿಕಾರಿಗಳಿಗೆ ಗೊತ್ತಾಗಿದೆ. ಇದೀಗ, ಎಸ್​ಐಟಿ ಅಧಿಕಾರಿಗಳು ಆರೋಪಿ ಚಿನ್ನಯ್ಯನ ಮೊಬೈಲ್ ಅನ್ನು ವಶಕ್ಕೆ ಪಡೆಯಲು ನಿರ್ಧರಿಸಿದ್ದಾರೆ.

ಇದನ್ನೂ ನೋಡಿ: ಚಿನ್ನಯ್ಯ ತಂದಿದ್ದ ಬುರುಡೆಗೆ ದೆಹಲಿ ಲಿಂಕ್: ದೊಡ್ಡ ವ್ಯಕ್ತಿಯನ್ನ ಭೇಟಿ ಮಾಡಿದ್ದ ಗ್ಯಾಂಗ್!

ಎಸ್​ಐಟಿ ಅಧಿಕಾರಿಗಳು ಸದ್ಯ ಚಿನ್ನಯ್ಯನ ಮೊಬೈಲ್​ ನಂಬರ್​ ಆಧಾರದ ಮೇಲೆ ಎರಡು ವರ್ಷದ ಸಿಡಿಆರ್ ಸಂಗ್ರಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಚಿನ್ನಯ್ಯ ಜತೆ ಫೋನ್ ಸಂಪರ್ಕದಲ್ಲಿದ್ದವರಿಗೆ ಸಂಕಷ್ಟ ಎದುರಾಗಿದೆ. ಆರೋಪಿ ಚಿನ್ನಯ್ಯ ಯಾಱರ ಜೊತೆ ಮೊಬೈಲ್​ನಲ್ಲಿ ಮಾತನಾಡಿದ್ದ, ಆತ ಎಲ್ಲೆಲ್ಲಿ ಕೆಲಸ ಮಾಡಿದ್ದ, ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:40 pm, Sun, 24 August 25

Pruthviraj

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Follow Us