ಆಸ್ಕರ್ ಫೆರ್ನಾಂಡೀಸ್​ಗೆ ತಡರಾತ್ರಿ ಮೆದುಳಿನ ರಕ್ತನಾಳದ ಶಸ್ತ್ರಚಿಕಿತ್ಸೆ; ಶೀಘ್ರ ಪ್ರಜ್ಞೆ ಮರುಕಳಿಸುವ ನಿರೀಕ್ಷೆ

ವೈದ್ಯರಾದ ಡಾ.ದಿವಾಕರ್ ರಾವ್ ಹಾಗೂ ಡಾ. ಸುನೀಲ್ ಶೆಟ್ಟಿ, ತಡರಾತ್ರಿ ಮೆದುಳಿನ ರಕ್ತನಾಳದ ಶಸ್ತ್ರಚಿಕಿತ್ಸೆ ನಡೆಸಿದ್ದರು. ಸದ್ಯ ಹೆಪ್ಪುಗಟ್ಟಿದ ರಕ್ತವನ್ನು ಶಸ್ತ್ರಚಿಕಿತ್ಸೆ ‌ಮೂಲಕ ತೆರವು ಮಾಡಲಾಗಿದ್ದು, ವೈದ್ಯರುಗಳ ಪರಿಶ್ರಮದಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

ಆಸ್ಕರ್ ಫೆರ್ನಾಂಡೀಸ್​ಗೆ ತಡರಾತ್ರಿ ಮೆದುಳಿನ ರಕ್ತನಾಳದ ಶಸ್ತ್ರಚಿಕಿತ್ಸೆ; ಶೀಘ್ರ ಪ್ರಜ್ಞೆ ಮರುಕಳಿಸುವ ನಿರೀಕ್ಷೆ
ಆಸ್ಕರ್ ಫರ್ನಾಂಡಿಸ್
Edited By:

Updated on: Jul 27, 2021 | 10:42 AM

ದಕ್ಷಿಣ ಕನ್ನಡ: ಹಿರಿಯ ಕಾಂಗ್ರೇಸ್ ಮುಖಂಡ ಆಸ್ಕರ್ ಫೆರ್ನಾಂಡೀಸ್ ಅವರ ಮೆದುಳಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಸದ್ಯ ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಆಸ್ಕರ್ ಫೆರ್ನಾಂಡೀಸ್ (oscar fernandes) ಅವರಿಗೆ ಶೀಘ್ರ ಪ್ರಜ್ಞೆ ಮರುಕಳಿಸುವ ನಿರೀಕ್ಷೆ ಇದೆ.

ಯೋಗ ಮಾಡುವ ವೇಳೆ ಜಾರಿ ಬಿದ್ದು ತಲೆಯ ಒಳಭಾಗದಲ್ಲಿ ಗಾಯವಾಗಿತ್ತು. ಈ ಗಾಯದಿಂದಾಗಿ ಫೆರ್ನಾಂಡೀಸ್​ ಅವರ ಮೆದುಳಿನ ರಕ್ತನಾಳ ಹೆಪ್ಪುಗಟ್ಟಿ ಪ್ರಜ್ಞೆ ಕಳೆದುಕೊಂಡಿದ್ದರು. ಹೀಗಾಗಿ ವೈದ್ಯರಾದ ಡಾ.ದಿವಾಕರ್ ರಾವ್ ಹಾಗೂ ಡಾ. ಸುನೀಲ್ ಶೆಟ್ಟಿ, ತಡರಾತ್ರಿ ಮೆದುಳಿನ ರಕ್ತನಾಳದ ಶಸ್ತ್ರಚಿಕಿತ್ಸೆ ನಡೆಸಿದ್ದರು. ಸದ್ಯ ಹೆಪ್ಪುಗಟ್ಟಿದ ರಕ್ತವನ್ನು ಶಸ್ತ್ರಚಿಕಿತ್ಸೆ ‌ಮೂಲಕ ತೆರವು ಮಾಡಲಾಗಿದ್ದು, ವೈದ್ಯರುಗಳ ಪರಿಶ್ರಮದಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

ಭಾನುವಾರ ಬೆಳಗ್ಗೆ ಯೋಗ ಮಾಡುವ ವೇಳೆ ಆಸ್ಕರ್ ನಿಯಂತ್ರಣ ತಪ್ಪಿ ಜಾರಿ ಬಿದ್ದಿದ್ದರು. ಅದೇ ದಿನ ಸಂಜೆ ಡಯಾಲಿಸಿಸ್‌ಗೆಂದು ಮಂಗಳೂರಿನ ಯೆನೆಪೊಯ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಹೋಗಲಾಗಿತ್ತು.

ಆಸ್ಪತ್ರೆಯಲ್ಲಿ ಹಿರಿಯ ವೈದ್ಯರು ಆಸ್ಕರ್ ಫೆರ್ನಾಂಡಿಸ್ ಅವರನ್ನು  ಪರೀಕ್ಷಿಸಿದಾಗ ತಲೆಯ ಒಳಭಾಗಕ್ಕೆ ಪೆಟ್ಟು ಬಿದ್ದಿದ್ದು, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಪತ್ತೆಯಾಗಿದೆ. ತಕ್ಷಣ ಆಸ್ಕರ್ ಫೆರ್ನಾಂಡೀಸ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. ಈ ಮಧ್ಯೆ, ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಫೆರ್ನಾಂಡಿಸ್ ಕುಟುಂಬದವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಆಸ್ಕರ್ ಫೆರ್ನಾಂಡಿಸ್ ಯೋಗ ಕ್ಷೇಮ ವಿಚಾರಿಸಿದ್ದರು.

ಆಸ್ಕರ್ ಫೆರ್ನಾಂಡೀಸ್ ರಾಜಕೀಯ ಬದುಕು
ಆಸ್ಕರ್ ಫೆರ್ನಾಂಡೀಸ್ ಯುಪಿಎ ಸರ್ಕಾರದ ಆಡಳಿತದ ಅವಧಿಯಲ್ಲಿ ಕೇಂದ್ರ ಮಂತ್ರಿಯಾಗಿದ್ದರು. ರಸ್ತೆ, ಸಾರಿಗೆ, ಹೆದ್ದಾರಿ ಮತ್ತು ಕಾರ್ಮಿಕ ಸಚಿವರಾಗಿಯೂ ಕೆಲಸ ಮಾಡಿದ್ದರು. ರಾಜೀವ್ ಗಾಂಧಿ ಜೊತೆಗೆ ಸಂಸತ್ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. 1980ರಿಂದ 1996ರ ವರೆಗೆ ಕರ್ನಾಟಕದ ಉಡುಪಿ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆ ಆಗಿದ್ದರು. ಬಳಿಕ, 1998ರಲ್ಲಿ ಹಾಗೂ 2004ರಲ್ಲಿ ರಾಜ್ಯಸಭೆಗೂ ಆಯ್ಕೆ ಆಗಿದ್ದರು.

ಇದನ್ನೂ ಓದಿ:
Shocking News: ಶಸ್ತ್ರ ಚಿಕಿತ್ಸೆಗಾಗಿ ಕೂಡಿಟ್ಟ ಬಡ ರೈತನ 2 ಲಕ್ಷ ರೂ. ಹಣವನ್ನು ಕಚ್ಚಿ ಹರಿದು ಹಾಕಿದ ಇಲಿಗಳು! ಏನಿದು ದುರಂತ?

ರೋಗಿಗೆ ಎಚ್ಚರವಿದ್ದಂತೆಯೇ ಮಾತನಾಡಿಸುತ್ತಾ ಬ್ರೈನ್​ ಸರ್ಜರಿ ಮಾಡಿದ ವೈದ್ಯರು; ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ

 

Published On - 10:29 am, Tue, 27 July 21

Web contact

TV9 Kannada

Read More
Follow Us