AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಶಸ್ತ್ರ ಚಿಕಿತ್ಸೆಗಾಗಿ ಕೂಡಿಟ್ಟ ಬಡ ರೈತನ 2 ಲಕ್ಷ ರೂ. ಹಣವನ್ನು ಕಚ್ಚಿ ಹರಿದು ಹಾಕಿದ ಇಲಿಗಳು! ಏನಿದು ದುರಂತ?

ಕಿಬ್ಬೊಟ್ಟೆಯಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆ ಮಾಡಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ತಾವು ದುಡಿದ ಹಣವನ್ನೆಲ್ಲಾ ಕೂಡಿಟ್ಟು, ಕೆಲವರೊಡನೆ ಸಾಲ ಕೇಳಿ 2 ಲಕ್ಷ ರೂಪಾಯಿಯನ್ನು ಸಂಗ್ರಹಿಸಿಟ್ಟಿದ್ದರು. ಆದರೆ ರಾತ್ರಿ ಬೆಳಗಾಗುವದರೊಳಗೆ ಇಲಿಗಳು ಎಲ್ಲಾ ದುಡ್ಡನ್ನು ಹರಿದು ನಾಶ ಮಾಡಿವೆ.

Shocking News: ಶಸ್ತ್ರ ಚಿಕಿತ್ಸೆಗಾಗಿ ಕೂಡಿಟ್ಟ ಬಡ ರೈತನ 2 ಲಕ್ಷ ರೂ. ಹಣವನ್ನು ಕಚ್ಚಿ ಹರಿದು ಹಾಕಿದ ಇಲಿಗಳು! ಏನಿದು ದುರಂತ?
ಇಲಿ
TV9 Web
| Updated By: shruti hegde|

Updated on: Jul 19, 2021 | 2:03 PM

Share

ಅನಾರೋಗ್ಯದ ಪರಿಣಾಮವಾಗಿ ಶಸ್ತ್ರ ಚಿಕಿತ್ಸೆಗಾಗಿ ಕೂಡಿಟ್ಟ ಹಣವನ್ನು ಇಲಿಗಳು ಧ್ವಂಸ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಕೃಷಿಕ ಕಷ್ಟಪಟ್ಟು ಹಣ ಸಂಗ್ರಹಿಸಿ ಇಟ್ಟಿದ್ದ. ಜತೆಗೆ ಅಲ್ಲೋ ಇಲ್ಲೋ ಸಾಲ ಪಡೆದು ಚಿಕಿತ್ಸೆಗಾಗಿ ಹಣ ಕೂಡಿಟ್ಟಿದ್ದ. ಇದೀಗ ಇಂದು ರೂಪಾಯಿಯೂ ಸಹ ಆತನಿಗೆ ಇಲ್ಲವಾಗಿದೆ. ಆತ ಪರಿಸ್ಥಿತಿ ಮನಕಲಕುವಂತಿದೆ.

ತೆಲಂಗಾಣದ ಮಹಾಬುಬನಗರ್​ ಜಿಲ್ಲೆಯ ರೆಡ್ಯಾ ನಾಯಕ್​ ಕೃಷಿಕರು. ತರಕಾರಿಗಳನ್ನು ಬೆಳೆದು ಮಾರಾಟ ಮಾಡುತ್ತಾ ತಮ್ಮ ಜೀವನ ಸಾಗಿಸುತ್ತಿದ್ದರು. ಆದರೆ ಕಿಬ್ಬೊಟ್ಟೆಯಸಮಸ್ಯೆಯಿಂದಾಗಿ ಶಸ್ತ್ರಚಿಕಿತ್ಸೆ ಮಾಡಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ತಾವು ದುಡಿದ ಹಣವನ್ನೆಲ್ಲಾ ಕೂಡಿಟ್ಟು, ಕೆಲವರೊಡನೆ ಸಾಲ ಕೇಳಿ 2 ಲಕ್ಷ ರೂಪಾಯಿಯನ್ನು ಸಂಗ್ರಹಿಸಿಟ್ಟಿದ್ದರು. ಆದರೆ ರಾತ್ರಿ ಬೆಳಗಾಗುವದರೊಳಗೆ ಇಲಿಗಳು ಎಲ್ಲಾ ದುಡ್ಡನ್ನು ಹರಿದು ನಾಶ ಮಾಡಿವೆ.

ರಂಧ್ರದ ಮೂಲಕವಾಗಿ ಇಲಿಗಳು ಪ್ರವೇಶಿಸಿ 500 ರೂಪಾಯಿ ಕಟ್ಟನ್ನು ಕಚ್ಚಿ ಹರಿದು ಹಾಕಿವೆ ಎಂಬುದು ವರದಿಯಿಂದ ತಿಳಿದು ಬಂದಿದೆ. ನಾನು ಕಷ್ಟಪಟ್ಟು ತರಕಾರಿ ಬೆಳೆದು ಮಾರಿದ ಹಣವನ್ನು ಸಂಗ್ರಹಿಸಿದ್ದೆ. ಅವುಗಳನ್ನೆಲ್ಲಾ ಕಾಟನ್​ ಬ್ಯಾಗ್​ನಲ್ಲಿ ತುಂಬಿಟ್ಟಿದ್ದೆ. ನಾನು ಬ್ಯಾಗ್​ಅನ್ನು ತೆರೆದು ನೋಡಿದಾಕ್ಷಣ ಶಾಕ್​ ಆಯಿತು. ಎಲ್ಲಾ ನೋಟುಗಳನ್ನು ಇಲಿಗಳು ಹರಿದು ಹಾಕಿವೆ ಎಂದು ಟೈಮ್ಸ್​ ಆಫ್​​ ಇಂಡಿಯಾ ಸುದ್ದಿ ಮಾಧ್ಯಮದ ಜತೆ ನಾಯಕ್​ ಮಾಹಿತಿ ಹಂಚಿಕೊಂಡಿದ್ದಾರೆ.

ಹಣವನ್ನು ಎಕ್ಸ್​ಚೇಂಜ್​ ಮಾಡುವ ಸಲುವಾಗಿ ಸ್ಥಳೀಯ ಬ್ಯಾಂಕುಗಳಲ್ಲಿ ವಿಚಾರಿಸಿದೆ. ಆದರೆ ಬ್ಯಾಂಕ್​ ಸಿಬ್ಬಂದಿ ಈ ಹಣಗಳನ್ನು ಬದಲಾಯಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಜತೆಗೆ ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾದ ಜತೆ ಮಾತನಾಡುವಂತೆ ಸಲಹೆ ನೀಡಿದ್ದಾರೆ ಎಂದು ನಡೆದ ಘಟನೆಯನ್ನು ವಿವರಿಸಿದ್ದಾರೆ.

ಕೇವಲ ಒಂದೇ ಬ್ಯಾಂಕ್​ ಅಲ್ಲ. ಸುತ್ತ ಮುತ್ತಲು ಇರುವ ಎಲ್ಲಾ ಬ್ಯಾಂಕುಗಳಲ್ಲಿಯೂ ವಿಚಾರಿಸಿ ಆಗಿದೆ. ಆದರೆ ಹಣವನ್ನು ಬದಲಾವಣೆ ಮಾಡಿಸಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ಹೇಳಿದರು ಎಂದು ಹೇಳಿದ್ದಾರೆ.

ರೈತನ ಪರಿಸ್ಥಿತಿ ತಿಳಿದ ತೆಲಂಗಾಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸತ್ಯವತಿ ರಾಥೋಡ್​ ನಾಯಕ್​ ಸಹಾಯ ಮಾಡಲು ಮುಂದಾಗಿದ್ದಾರೆ. ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯನ್ನು ನಡೆಸಿಕೊಡುವುದಾಗಿ ಹೆಳಿದ್ದಾರೆ. ಈ ವಿಷಯ ತಿಳಿದ ನಾಯಕ್​ ಸಚಿವರಿಗೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ:

Bakrid 2021: ಬಕ್ರೀದ್ ಹಬ್ಬದ ಖರೀದಿ; ಹಣೆ ಮೇಲೆ ನಕ್ಷತ್ರ ಹಾಗೂ ಚಂದ್ರನ ಗುರುತಿನ ಮೇಕೆಗಳಿಗೆ ಭರ್ಜರಿ ಬೇಡಿಕೆ

Chanakya Niti: ಕೈಯಲ್ಲಿ ಹಣವಿಲ್ಲವೆಂದು ಚಿಂತಿಸುತ್ತಿದ್ದೀರಾ? ದೇವಿ ಲಕ್ಷ್ಮಿಯನ್ನು ಮೆಚ್ಚಿಸಲು ಈ 3 ಮಾರ್ಗಗಳನ್ನು ತಿಳಿದುಕೊಳ್ಳಿ – ಚಾಣಕ್ಯ ನೀತಿ