Viral Video: ಮಾಸ್ಕ್ ಧರಿಸದೇ ರೈಲು ಹತ್ತಿದ್ದ ಯುವಕನಿಗೆ ಶಿಕ್ಷೆ; ಯುವತಿಯರೇ ಹೊರದಬ್ಬಿದ್ರು! ವಿಡಿಯೋ ವೈರಲ್
ವ್ಯಕ್ತಿಯೋರ್ವ ಮಾಸ್ಕ ಧರಿಸದೇ ರೈಲು ಹತ್ತಿದ್ದಕ್ಕೆ ಪ್ರಯಾಣಿಕರೇ ಆತನನ್ನು ರೈಲಿನಿಂದ ಹೊರ ದಬ್ಬಿದ್ದಾರೆ. ಸ್ಪೇನ್ನಲ್ಲಿ ನಡೆದ ಘಟನೆಯ ದೃಶ್ಯವೊಂದು ವೈರಲ್ ಆಗಿದೆ.
ಕೊರೊನಾ ಸಾಂಕ್ರಾಮಿಕ ಎಲ್ಲಡೆ ವ್ಯಾಪಿಸುತ್ತಿದ್ದಂತೆಯೇ ನಿಯಂತ್ರಣಕ್ಕಾಗಿ ಕಟ್ಟು- ನಿಟ್ಟಿನ ಕ್ರಮಗಳನ್ನು ಜಾರಿಗೆ ತರಲಾಯಿತು. ಸ್ಯಾನಿಟೈಸ್ ಮಾಡಿಕೊಳ್ಳುವುದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹೀಗೆ ಹಲವು ನಿಯಮಗಳನ್ನು ಜಾರಿಗೊಳಿಸಲಾಯಿತು. ಅದರ ಹೊರತಾಗಿಯೂ ಜನರು ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ವ್ಯಕ್ತಿಯೋರ್ವ ಮಾಸ್ಕ ಧರಿಸದೇ ರೈಲು ಹತ್ತಿದ್ದಕ್ಕೆ ಪ್ರಯಾಣಿಕರೇ ಆತನನ್ನು ರೈಲಿನಿಂದ ಹೊರ ದಬ್ಬಿದ್ದಾರೆ. ಸ್ಪೇನ್ನಲ್ಲಿ ನಡೆದ ಘಟನೆಯ ದೃಶ್ಯವೊಂದು ವೈರಲ್ ಆಗಿದೆ.
ಇಲ್ಲೋರ್ವ ವ್ಯಕ್ತಿ ಮಾಸ್ಕ್ ಧರಸಿದರೆ ರೈಲು ಹತ್ತಿದ್ದಾರೆ. ಗಮನಿಸಿದ ಪ್ರಯಾಣಿಕರು ಆತನನ್ನು ಹೊರಗೆ ದಬ್ಬಲು ಪ್ರಯತ್ನಿಸಿದ್ದಾರೆ. ಮೊದಲಿಗೆ ಇಬ್ಬರು ಹುಡುಗಿಯರು ಆತನನ್ನು ಬಾಗಿಲವರೆಗೆ ತಳ್ಳುತ್ತಾರೆ. ಸಿಟ್ಟಿಗೆದ್ದ ಪ್ರಯಾಣಿಕರು ಆತನನ್ನು ರೈಲಿನಿಂದ ಹೊರ ಹಾಕಿದ್ದಾರೆ. ಪದೇ ಪದೇ ಆತನನ್ನು ತಳ್ಳಿದ್ದರಿಂದ ಕೊನೆಗೆ ರೈಲು ಇಳಿದು ಹೊರಹೋಗುತ್ತಾನೆ.
ಕೊರೊನಾ ಸಾಂಕ್ರಾಮಿಕ ರೋಗವಾದ್ದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹೀಗಿರುವಾಗ ಜನರು ಎಚ್ಚೆತ್ತುಕೊಳ್ಳಲೇ ಬೇಕಾಗಿದೆ. ಆದರೂ ಸಹ ಕೆಲವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಅದರಲ್ಲಿಯೂ ದಿನ ಸಾಗುತ್ತಿದ್ದಂತೆಯೇ ಹೊಸ ಹೊಸ ರೂಪಾಂತರ ವೈರಸ್ಗಳು ಹುಟ್ಟಿಕೊಳ್ಳುತ್ತಿವೆ. ಇಂತಹ ಪರಿಸ್ಥಿತಿಯನ್ನು ಜನರು ಎಚ್ಚೆತ್ತುಕೊಳ್ಳದಿದ್ದರೆ ಇನ್ನೂ ಹೆಚ್ಚಿನ ಅಪಾಯವನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಗಂಭೀರವಾಗಿ ಮನಗಂಡು ನಿಯಮಗಳನ್ನು ಪಾಲಿಸಲೇಬೇಕು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವಿಡಿಯೋ ನೋಡಿದ ನೆಟ್ಟಿಗರು, ಪ್ರಯಾಣಿಕರು ಮಾಡಿರುವುದು ಸರಿ ಇದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
??? | NEW: Passengers throw a guy off a train in Spain for not wearing a mask
— News For All (@NewsForAllUK) July 15, 2021
ಇದನ್ನೂ ಓದಿ:
ಮಾಸ್ಕ್ ಧರಿಸಲು ಹೇಳಿದ KSRTC ಬಸ್ ಕಂಡಕ್ಟರ್ಗೆ ಹಿಗ್ಗಾಮುಗ್ಗಾ ಥಳಿಸಿ ಹಲ್ಲು ಮುರಿದ ಯುವಕರು
ಧರ್ಮಶಾಲಾದ ಕಿಕ್ಕಿರಿದ ಬೀದಿಯಲ್ಲಿ ಮಾಸ್ಕ್ ಧರಿಸುವಂತೆ ಎಚ್ಚರಿಕೆ ನೀಡುತ್ತಿದ್ದಾನೆ ಈ ಪುಟ್ಟ ಬಾಲಕ! ವಿಡಿಯೋ ನೋಡಿ
Published On - 11:23 am, Mon, 19 July 21