U.T.Khader: ರಾಹುಲ್‌ ಗಾಂಧಿ ಪಿಎ ಎಂದು ಹೇಳಿಕೊಂಡು ವಂಚನೆಗೆ ಯತ್ನ: ಸೈಬರ್ ಕ್ರೈಂಗೆ ದೂರು ನೀಡಿದ U.T.ಖಾದರ್‌

ರಾಹುಲ್‌ ಗಾಂಧಿ ಪಿಎ ಎಂದು ಹೇಳಿಕೊಂಡು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ ಖಾದರ್‌ಗೆ ಕರೆ ಮಾಡಿ ವಂಚಿಸಲು ಯತ್ನಿಸಿರುವಂತಹ ಘಟನೆ ನಡೆದಿದೆ.

U.T.Khader: ರಾಹುಲ್‌ ಗಾಂಧಿ ಪಿಎ ಎಂದು ಹೇಳಿಕೊಂಡು ವಂಚನೆಗೆ ಯತ್ನ: ಸೈಬರ್ ಕ್ರೈಂಗೆ ದೂರು ನೀಡಿದ U.T.ಖಾದರ್‌
U.T.Khader
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jan 02, 2023 | 8:32 PM

ಮಂಗಳೂರು: ರಾಹುಲ್‌ ಗಾಂಧಿ ಪಿಎ ಎಂದು ಹೇಳಿಕೊಂಡು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ ಖಾದರ್‌ (Rahul Gandhi) ಗೆ ಕರೆ ಮಾಡಿ ವಂಚಿಸಲು (Fraud) ಯತ್ನಿಸಿರುವಂತಹ ಘಟನೆ ನಡೆದಿದೆ. ಅಪರಿಚಿತ ಸಂಖ್ಯೆಯಿಂದ ಯು.ಟಿ ಖಾದರ್‌ ಮೊಬೈಲ್‌ಗೆ 2 ಸಲ ಫೋನ್‌ ಮಾಡಿದ್ದಾರೆ. ಎಐಸಿಸಿ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೆಸರಲ್ಲಿ ಮೊಬೈಲ್ ಸಂಖ್ಯೆ ಸೇವ್ ಆಗಿದೆ. ಕರೆ ಸ್ವೀಕರಿಸದಿದ್ದಕ್ಕೆ ರಾಹುಲ್‌ ಪಿಎ ಕಾನಿಷ್ಕ ಸಿಂಗ್ ಎಂದು ಮೆಸೇಜ್‌ ಮಾಡಲಾಗಿದೆ. ಕರೆ ನಕಲಿಯೆಂದು ತಿಳಿದು ಮಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ಯು.ಟಿ.ಖಾದರ್‌ ದೂರು ನೀಡಿದ್ದಾರೆ.

ಮ್ಯಾಟ್ರಿಮೋನಿ ಆ್ಯಪ್ ವಂಚನೆ

ಬಳ್ಳಾರಿ: ಮ್ಯಾಟ್ರಿಮೋನಿ ಆ್ಯಪ್ ದುರ್ಬಳಕೆ ಮಾಡಿ (Matrimonial App online fraud) ಶಿಕ್ಷಕನಿಗೆ ವಂಚನೆ ಎಸಗಲಾಗಿದೆ. ಕೇರಳ ಮೂಲದ ಯುವತಿಯರ ಮಾತಿಗೆ ಮರುಳಾಗಿ ಶಿಕ್ಷಕ ಬರೋಬ್ಬರಿ 8.5 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಸಮಾಜಕ್ಕೆ ಮಾದರಿಯಾಗಬೇಕಿದ್ದ ಶಿಕ್ಷಕ (teacher) ಇದೀಗ ಕೆಲಸದ ಜೊತೆಗೆ ಲಕ್ಷ ಲಕ್ಷ ಹಣವೂ ಕಳೆದುಕೊಂಡಿದ್ದಾರೆ. ಪೋಟೋ ನೋಡಿಯೇ ಕೇರಳದ ಚೆಲುವೆಗೆ ಈ ಶಿಕ್ಷಕ ಮಹಾಶಯ ಮನಸೋತಿದ್ದಾನೆ.

ಇದನ್ನೂ ಓದಿ: ಅಬ್ಬಾ! ಆನ್​ಲೈನ್​ ವಂಚನೆ ಹೀಗೂ ಮಾಡಬಹುದಾ? ಕರಾವಳಿ ಜಿಲ್ಲೆಯಲ್ಲಿ ಹೊಸ ವಂಚಕರ ಜಾಲ ಬೀಡುಬಿಟ್ಟಿದೆ, ಹುಷಾರು!

ತಾನು ಎಂಬಿಬಿಎಸ್ ವಿದ್ಯಾರ್ಥಿನಿಯೆಂದು ನಂಬಿಸಿ ಕೇರಳದ ಆ ಯುವತಿ ಮೋಸ ಮಾಡಿದ್ದಾಳೆ. ಒಂದು ವಂಚಕ ತಂಡವೇ ಇದರಲ್ಲಿ ಭಾಗಿಯಾಗಿದೆ. ಹಲವು ದಿನಗಳಿಂದ ನಿರಂತರವಾಗಿ ವಾಟ್ಸಾಪ್ ಚಾಟ್, ಫೋನ್ ಕಾಲ್ ಮಾಡಿ ಯುವತಿಯರು ವಂಚಿಸಿದ್ದಾರೆ.

ಚೆಲುವೆಯ ಅಂದಚೆಂದ ನೋಡಿ ಲಕ್ಷ ಲಕ್ಷ ಹಣ ಕಳೆದುಕೊಂಡ ಶಿಕ್ಷಕ

ಚೆಲುವೆಯ ಅಂದಚೆಂದ ನೋಡಿ ಲಕ್ಷ ಲಕ್ಷ ಹಣ ಕಳೆದುಕೊಂಡ ಶಿಕ್ಷಕನ ಪರದಾಟ ಹೇಳತೀರದಾಗಿದೆ. ಸಂಡೂರು ತಾಲೂಕಿನ (sandur, bellary) ಖಾಸಗಿ ಶಾಲೆಯ ಶಿಕ್ಷಕ ದೇವೇಂದ್ರಪ್ಪ ಎಂಬುವವರೇ ಮೋಸಕ್ಕೀಡಾದ ವ್ಯಕ್ತಿ. ಹರ್ಷಿತಾ ಎಂಬ ಹೆಸರಿನಲ್ಲಿ ಯುವತಿ ವಂಚನೆ ಎಸಗಿದ್ದಾಳೆ. ಆದರೆ ಹರ್ಷಿತಾ ಸ್ನೇಹಿತನ ಹೆಸರಿನಲ್ಲಿ ಹಣ ಪಡೆದಿದ್ದಾಳೆ. ನಮ್ಮ ಈ ಶಿಕ್ಷಕ ಮಹಾಶಯ ಯುವತಿಯ ಬಣ್ಣ ಬಣ್ಣದ ಮಾತು ನಂಬಿ ಹೈದ್ರಾಬಾದ್ ವರೆಗೂ ಹೋಗಿಬಂದಿದ್ದಾರೆ. ಅಂದಹಾಗೆ ಶಿಕ್ಷಕ ದೇವೇಂದ್ರಪ್ಪನನ್ನು ಸಂಡೂರಿನ ಖಾಸಗಿ ಶಾಲೆ ಕೆಲಸದಿಂದ ವಜಾಗೊಳಿಸಿದೆ.

ಇದನ್ನೂ ಓದಿ: ಹು-ಧಾ ನಗರದಲ್ಲಿ ಆನ್‌ಲೈನ್​ ವಂಚನೆ ಕಡಿವಾಣಕ್ಕೆ ಸೈಬರ್ ಅಪರಾಧ ಪೊಲೀಸ್​ ಸಿಬ್ಬಂದಿಯಿಂದ ವಿನೂತನ ಜಾಗೃತಿ ಅಭಿಯಾನ

ಯುವತಿ ಆರಂಭದಲ್ಲಿಯೇ ತನಗೆ ಎಂಬಿಬಿಎಸ್ ಓದಲು ಸಹಾಯ ಮಾಡುವಂತೆ ಹಣಕ್ಕೆ ಬೇಡಿಕೆಯಿಟ್ಟಿದ್ದಾಳೆ. ಓದು ಮುಗಿದ ನಂತರ ಮದುವೆಯಾಗುವುದಾಗಿ ನಂಬಿಸಿ ಲಕ್ಷ ಲಕ್ಷ ಪೀಕಿದ್ದಾರೆ ಆ ಯುವತಿಯರ ಗ್ಯಾಂಗ್! ಹಣ ಕಳೆದುಕೊಂಡು ಕಂಗಾಲಾದ ನಂತರ ಶಿಕ್ಷಕ ದೇವೇಂದ್ರಪ್ಪ ಅನ್ಯ ಮಾರ್ಗ ಕಾಣದೆ ಠಾಣೆಯ ಮೇಟ್ಟಿಲೇರಿದ್ದಾರೆ. ಈ ಸಂಬಂಧ ಇದೀಗ ಬಳ್ಳಾರಿಯ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:12 pm, Mon, 2 January 23