ಮಂಗಳೂರಿನಲ್ಲಿ ಯುವಕನಿಗೆ ಚೂರಿ ಇರಿದು ಹತ್ಯೆಗೈದ ಸ್ನೇಹಿತರು! ಹುಬ್ಬಳ್ಳಿಯಲ್ಲಿ ಗ್ರಾ.ಪಂ. ಸದಸ್ಯನ ಭೀಕರ ಕೊಲೆ

ಗಾಂಜಾ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಕೊಲೆ ನಡೆದಿದೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನಲ್ಲಿ ಯುವಕನಿಗೆ ಚೂರಿ ಇರಿದು ಹತ್ಯೆಗೈದ ಸ್ನೇಹಿತರು! ಹುಬ್ಬಳ್ಳಿಯಲ್ಲಿ ಗ್ರಾ.ಪಂ. ಸದಸ್ಯನ ಭೀಕರ ಕೊಲೆ
ಮೊಹ್ಮದ್ ಆಸಿಫ್
TV9kannada Web Team

| Edited By: sandhya thejappa

Jul 05, 2022 | 12:00 PM

ಮಂಗಳೂರು: ಸ್ನೇಹಿತರೇ (Friends) ಯುವಕನಿಗೆ ಚಾಕುವಿನಿಂದ ಇರಿದು ಕೊಲೆ (Murder) ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೈಕಂಬದ ತಲಪಾಡಿ ಬಳಿ ನಡೆದಿದೆ. ಮೊಹ್ಮದ್ ಆಸಿಫ್(29) ಹತ್ಯೆಯಾದ ಯುವಕ. ಸ್ನೇಹಿತ ನೌಫಾಲ್, ಮೊಹ್ಮದ್ ನೌಸೀರ್ ಕೊಲೆ ಮಾಡಿರುವ ಆರೋಪಿಗಳು. ಗಾಂಜಾ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಕೊಲೆ ನಡೆದಿದೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಡನನ್ನೇ ಕೊಲೆ ಮಾಡಿದ ಹೆಂಡತಿ: ಕ್ಷುಲ್ಲಕ ಕಾರಣಕ್ಕೆ ಹೆಂಡತಿ ಗಂಡನನ್ನೇ ಕೊಲೆ ಮಾಡಿದ್ದಾಳೆ. ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಅಬಂನ್ ಕರೆ ಮನೆಯಲ್ಲಿ ಈ ಘಟನೆ ನಡೆದಿದೆ. ಬೇಬಿ ಅಲಿಯಾಸ್​ ಬೇಬಿ(55) ಕೊಲೆಯಾದ ವ್ಯಕ್ತಿ. ಕತ್ತಿಯಿಂದ ಇರಿದು ಪತ್ನಿ ನಲ್ಲಮ್ಮ ಹತ್ಯೆಗೈದಿದ್ದಾಳೆ. ಕೊಲೆ‌ ಮಾಡಿದ ಬಳಿಕ ಆರೋಪಿ ಮಹಿಳೆ ಕತ್ತಿ ಹಿಡಿದು ಕುಳಿತಿದ್ದಾಳೆ.

ಇದನ್ನೂ ಓದಿ: ಕರ್ನಾಟಕದ ಹಲವೆಡೆ ಭಾರಿ ಮಳೆ, ಇಲ್ಲಿದೆ ಕೆಲವು ಅವಾಂತರಗಳ ಫೋಟೋಗಳು

ಗ್ರಾ.ಪಂ. ಸದಸ್ಯನ ಭೀಕರ ಕೊಲೆ: ಹುಬ್ಬಳ್ಳಿ: ಗಂಗಿವಾಳ ಗ್ರಾ.ಪಂ. ಸದಸ್ಯನನ್ನು ರಾಯನಾಳ ಗ್ರಾಮದಲ್ಲಿ ಭೀಕರವಾಗಿ ಕೊಲೆ ಮಾಡಲಾಗಿದೆ. ದೀಪಕ್ ಪಠದಾರಿ ಕೊಲೆಯಾದ ಗ್ರಾ.ಪಂ. ಸದಸ್ಯ. ಪ್ರೇಮ ವಿವಾಹ, ರಾಜಕೀಯ ದ್ವೇಷದಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ದೀಪಕ್ ಪಠದಾರಿ ಹಳೇ ಹುಬ್ಬಳ್ಳಿ ಠಾಣೆ ರೌಡಿಶೀಟರ್ ಆಗಿದ್ದ. ಕೊಲೆ ಆರೋಪಿಗಳ ಪತ್ತೆಗೆ ಡಿಸಿಪಿ ವಿಶೇಷ ತಂಡ ರಚಿಸಿದ್ದಾರೆ. ಸದ್ಯ ಪ್ರಕರಣ ಸಂಬಂಧ 10ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ

ಕಣ್ಣೀರು ಹಾಕುತ್ತಿರುವ ದೀಪಕ್ ಪತ್ನಿ ಪುಷ್ಮಾ, ನನ್ನ ಹೆತ್ತವರೇ ಗಂಡನನ್ನ ಕೊಂದಿದ್ದಾರೆ. ರಾಜಕೀಯವಾಗಿ ಆತ ಬೆಳೆಯುತ್ತಿದ್ದ. ಅದನ್ನ ಸಹಿಸೋಕೆ ಆಗಿಲ್ಲ. ನಾವು ಲವ್ ಮ್ಯಾರೆಜ್ ಆಗಿ ನಾಲ್ಕು ವರ್ಷ ಆಯಿತು. ಎಲ್ಲಾ ಚೆನ್ನಾಗೇ ಇದ್ದೆವು. ಅದೇ ಅವರಿಗೆ ಸಹಿಸೋಕೆ ಆಗಿಲ್ಲ. ನಮ್ಮ ಮನೆ ಆಧಾರ ಸ್ತಂಭವೇ ಹೋಯಿತು‌. ನನ್ನ ಸಹೋದರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada