ಕೊರಗಜ್ಜ ಸರ್ಕಲ್​​ ವಿವಾದ: ಯು.ಟಿ. ಖಾದರ್​​ಗೆ ಘೇರಾವ್​ ಹಾಕಿದ್ದವರ ವಿರುದ್ಧ FIR

ಕೊರಗಜ್ಜ ಸರ್ಕಲ್ ವಿವಾದಕ್ಕೆ ಸಂಬಂಧಿಸಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಉಳ್ಳಾಲದಲ್ಲಿ ಘೇರಾವ್ ಹಾಕಿದ್ದ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದೆ. ಖಾದರ್ ಅವರ ಅಂಗರಕ್ಷಕರ ದೂರಿನ ಮೇರೆಗೆ ಜುನೈದ್ ಸೇರಿದಂತೆ 10 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕುತ್ತಾರು ಸರ್ಕಲ್‌ಗೆ ಕೊರಗಜ್ಜ ದೈವದ ಹೆಸರಿಡುವ ಹಾಗೂ ಕಾಮಗಾರಿಯ ಬಗ್ಗೆ ಭಿನ್ನಾಭಿಪ್ರಾಯ ಮೂಡಿದ್ದು, ಇದರ ವಿರುದ್ಧ ಕೆಲವರು ಆಕ್ಷೇಪ ವ್ಯಕ್ತಪಡಿಸಿ ಘೇರಾವ್ ನಡೆಸಿದ್ದರು.

ಕೊರಗಜ್ಜ ಸರ್ಕಲ್​​ ವಿವಾದ: ಯು.ಟಿ. ಖಾದರ್​​ಗೆ ಘೇರಾವ್​ ಹಾಕಿದ್ದವರ ವಿರುದ್ಧ FIR
ಯು.ಟಿ. ಖಾದರ್​​
Edited By:

Updated on: May 13, 2026 | 11:49 AM

ಮಂಗಳೂರು, ಮೇ 13: ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್​ಗೆ ಘೇರಾವ್ ವಿಚಾರ ಸಂಬಂಧೇ ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಖಾದರ್ ಅಂಗರಕ್ಷಕ ಮೊಹಮ್ಮದ್ ಯಾಸಿನ್ ದೂರು ಆಧರಿಸಿ ಘೇರಾವ್ ಹಾಕಿದ ಮದನಿನಗರ ನಿವಾಸಿ ಜುನೈದ್ ಸೇರಿದಂತೆ 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಕೊರಗಜ್ಜ ಸರ್ಕಲ್​​ ವಿಚಾರವಾಗಿ ಉಳ್ಳಾಲದಲ್ಲಿ ಯು.ಟಿ.ಖಾದರ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕೆಲ ಯುವಕರು ಅವರಿಗೆ ಘೇರಾವ್​​ ಹಾಕಿದ್ದರು. ಸಾಲದ್ದಕ್ಕೆ ವಾಗ್ವಾದವನ್ನೂ ನಡೆಸಿದ್ದರು.

ಏನಿದು ಕೊರಗಜ್ಜ ಸರ್ಕಲ್​​ ವಿವಾದ?

ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನಿಂದ ಕುತ್ತಾರಿನಲ್ಲಿ ಸರ್ಕಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದರ ನಿರ್ವಹಣೆಯ ಜವಾಬ್ದಾರಿಯನ್ನೂ ಸರ್ಕಾರ ಮೆಡಿಕಲ್ ಕಾಲೇಜಿಗೇ ವಹಿಸಿದೆ. ಆದರೆ ಸರ್ಕಲ್ ನಿರ್ಮಾಣದ ಬಗ್ಗೆ ಅಪಸ್ವರ ಎತ್ತಿ ಖಾದರ್ ವಿರುದ್ದ ಕೆಲ ಮುಸ್ಲಿಮರು ತಿರುಗಿ ಬಿದ್ದಿದ್ದಾರೆ. ಕುತ್ತಾರು ತುಳುನಾಡಿನ ಕಾರ್ಣಿಕ ದೈವ ಕೊರಗಜ್ಜನ ಮೂಲ ಕ್ಷೇತ್ರವಾಗಿದ್ದು, ಅಪಾರ ಸಂಖ್ಯೆಯ ಭಕ್ತರು ಕೊರಗಜ್ಜ ದೈವವನ್ನು ನಂಬಿದ್ದಾರೆ. ಹೀಗಾಗಿ ವೃತ್ತ ನಿರ್ಮಾಣಕ್ಕೆ ತಿಂಗಳ ಹಿಂದೆಯೇ ಕೊರಗಜ್ಜ ದೈವದ ಕೆಲ ವಸ್ತುಗಳ ಪ್ರತಿಕೃತಿಯನ್ನು ಈ ಜಾಗದಲ್ಲಿ ವಿಶ್ವಹಿಂದೂ ಪರಿಷತ್​​ ಇಟ್ಟಿತ್ತು. ಸದ್ಯ ಹೊಸದಾಗಿ ನಿರ್ಮಾಣವಾಗ್ತಿರೋ ವೃತ್ತದಲ್ಲೂ ದೈವದ ಪ್ರತಿಕೃತಿ ಇಡಲು ಯೋಜನೆ ರೂಪಿಸಿದ್ದು, ಸರ್ಕಲ್​​ಗೆ ಕೊರಗಜ್ಜ ವೃತ್ತ ಎಂದು ಹೆಸರಿಡಲೂ ಪ್ಲ್ಯಾನ್​​ ಮಾಡಿದೆ. ಆದರೆ ಈ ಸರ್ಕಲ್​​ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿಯೂ ಭಾರೀ ಚರ್ಚೆ ಹುಟ್ಟು ಹಾಕಿದೆ. ಆಕ್ಷೇಪ ಕುತ್ತಾರು ವೃತ್ತಕ್ಕೆ ಕೊರಗಜ್ಜ ಹೆಸರು ಇಡೋದಕ್ಕಾ? ಅಥವಾ ಅವೈಜ್ಞಾನಿಕ ಕಾಮಗಾರಿಗಾ? ಎಂಬ ಗೊಂದಲೂ ಇದೆ. ವೃತ್ತ ದೊಡ್ಡದಾಗಿ ನಿರ್ಮಿಸಿದ್ರೆ ಸಂಚಾರ ಸಮಸ್ಯೆ ಎಂಬ ನೆಪದಲ್ಲಿ ಕೆಲವರ ಅಪಸ್ವರ ತೆಗೆದಿದ್ದರೆ, ಇನ್ನು ಕೆಲವರು ಕೊರಗಜ್ಜ ಹೆಸರಿಗೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾತುಗಳೂ ಇವೆ.

ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದಾಖಲೆಯ ಆದಾಯ, ಸತತ 15 ವರ್ಷಗಳ ಕಾಲ ನಂ.1

ಯು.ಟಿ.ಖಾದರ್ ತಿರುಗೇಟು

ಇನ್ನು ಕೊರಗಜ್ಜ ಸರ್ಕಲ್​​ ವಿರೋಧಿಸುವವರಿಗೆ ಸ್ಪೀಕರ್​​, ಉಳ್ಳಾಲ ಶಾಸಕ ಯು.ಟಿ. ಖಾದರ್ ತಿರುಗೇಟು ನೀಡಿದ್ದಾರೆ. ಯಾರೋ ಕೆಲವರು ದಾರಿ ತಪ್ಪಿದವರು ಇದ್ದಾರೆ. ಅವರು ಏನೋ ಹೇಳ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಏನೋ ಮಾಡ್ತಾರೆ ಎಂದು ಅದನ್ನೆಲ್ಲ ಕೇಳ್ಕೊಂಡು ಇರಲು ಸಾಧ್ಯವಿಲ್ಲ.ಅವರೇನು ಮದನಿ ನಗರದವರು ಅಲ್ಲ, ಬೇರೆ ಸಂಘಟನೆಗೆ ಸೇರಿದವರು. ಅಲ್ಲದೇ ಹೊರಗಿನಿಂದ ಬಂದವರು. ಅಲ್ಲಿ ಏನು ಆಗುತ್ತೋ ಒಳ್ಳೆಯದಕ್ಕೇ ಆಗುತ್ತದೆ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Pruthviraj

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Follow Us