ಮಂಗಳೂರಿನಲ್ಲಿ ಯುವತಿ ನಾಪತ್ತೆ ಪ್ರಕರಣದ ಹಿಂದೆ ಲವ್ ಜಿಹಾದ್ ಶಂಕೆ

ಪಿಜಿಯಲ್ಲಿದ್ದ ಪಿಹೆಚ್​ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ವಾರದ ಹಿಂದೆ ನಾಪತ್ತೆಯಾಗಿದ್ದು, ಇದವರೆಗೆ ಪತ್ತೆಯಾಗಿಲ್ಲ. ಈ ನಡುವೆ, ಚೈತ್ರಾ ನಾಪತ್ತೆ ಪ್ರಕರಣದ ಹಿಂದೆ ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಚೈತ್ರಾ ತಂಗಿದ್ದ ಪಿಜಿಗೆ ಬರುತ್ತಿದ್ದ ಬಂಟ್ವಾಳ ಮೂಲದ ಪುತ್ತೂರು ನಿವಾಸಿಯಾಗಿರುವ ಅನ್ಯಕೋಮಿನ ಯುವಕ ಗಾಂಜಾ ರುಚಿ ತೋರಿಸಿ ಕರೆದೊಯ್ದ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ಎರಡು ದಿನಗಳಲ್ಲಿ ಪತ್ತೆ ಹಚ್ಚದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಬಜರಂಗ ದಳ ನೀಡಿದೆ.

ಮಂಗಳೂರಿನಲ್ಲಿ ಯುವತಿ ನಾಪತ್ತೆ ಪ್ರಕರಣದ ಹಿಂದೆ ಲವ್ ಜಿಹಾದ್ ಶಂಕೆ
ಮಂಗಳೂರಿನಲ್ಲಿ ಯುವತಿ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣದ ಹಿಂದೆ ಲವ್ ಜಿಹಾದ್ ಶಂಕೆ
Edited By: Rakesh Nayak Manchi

Updated on: Feb 24, 2024 | 5:22 PM

ಮಂಗಳೂರು, ಫೆ.24: ಇಲ್ಲಿನ ಕೋಟೆಕಾರು ಬಳಿಯ ಪಿಜಿಯಲ್ಲಿದ್ದ ಪಿಹೆಚ್​ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ವಾರದ ಹಿಂದೆ ನಾಪತ್ತೆಯಾಗಿದ್ದು, ಇದವರೆಗೆ ಪತ್ತೆಯಾಗಿಲ್ಲ. ಈ ನಡುವೆ, ಚೈತ್ರಾ ನಾಪತ್ತೆ ಪ್ರಕರಣದ ಹಿಂದೆ ಲವ್ ಜಿಹಾದ್ (Love Jihad) ಆರೋಪ ಕೇಳಿಬಂದಿದೆ. ಚೈತ್ರಾ ತಂಗಿದ್ದ ಪಿಜಿಗೆ ಬರುತ್ತಿದ್ದ ಬಂಟ್ವಾಳ ಮೂಲದ ಪುತ್ತೂರು ನಿವಾಸಿಯಾಗಿರುವ ಅನ್ಯಕೋಮಿನ ಯುವಕ ಗಾಂಜಾ ರುಚಿ ತೋರಿಸಿ ಯುವತಿಯನ್ನು ಕರೆದೊಯ್ದ ಅನುಮಾನ ವ್ಯಕ್ತವಾಗಿದೆ.

ಚೈತ್ರಾ ನಾಪತ್ತೆ ಹಿಂದೆ ಹಿಂದೆ ಬಂಟ್ವಾಳದ ಅನ್ಯಕೋಮಿನ ಯುವಕನ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಮೂಲತಃ ಬಂಟ್ವಾಳದ ನೇರಳಕಟ್ಟೆಯ ನಿವಾಸಿ ಹಾಗೂ ಪುತ್ತೂರಿನ ಕೂರ್ನಡ್ಕದಲ್ಲಿ ವಾಸವಿದ್ದ ಯುವಕ ಚೈತ್ರಾಳಿಗೆ ಗಾಂಜಾ ರುಚಿ ತೋರಿಸಿ ಕರೆದೊಯ್ದ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಗದಗ ಲವ್ ಜಿಹಾದ್ ಪ್ರಕರಣಕ್ಕೆ ಮೇಜರ್​​ ಟ್ವಿಸ್ಟ್: ಅವನೂ ಬೇಡ- ಅಪ್ಪ ಅಮ್ಮನೂ ಬೇಡ ಎಂದ ಬಾಧಿತ ಹಿಂದೂ ಯುವತಿ

ಚೈತ್ರಾ ತಂಗಿದ್ದ ಪಿಜಿಗೆ ಶಂಕಿತ ಯುವಕ ಬರುತ್ತಿದ್ದ ಬಗ್ಗೆ ಚೈತ್ರಾಳ ಮನೆಯವರಿಗೆ ಮಾಡೂರು ಬಜರಂಗದಳದ ಕಾರ್ಯಕರ್ತರು ಮಾಹಿತಿ ನೀಡಿದ್ದರು. ಮಾಹಿತಿ ನೀಡಿದ ಬಳಿಕ ಚೈತ್ರಾ ಹೆಬ್ಬಾರ್‌ ನಾಪತ್ತೆಯಾಗಿದ್ದಳು. ತಂದೆ ನಿಧನದ ನಂತರ ತನ್ನ ಆರೈಕೆಯಲ್ಲಿ ಚೈತ್ರಾ ಇದ್ದ ಹಿನ್ನೆಲೆ ಆಕೆಯ ದೊಡ್ಡಪ್ಪ ಪೊಲೀಸ್ ಠಾಣೆಗೆ ದೂರು ನಿಡಿದ್ದರು.

ಪೊಲೀಸರಿಗೆ ದೂರು ನೀಡಿ ಒಂದು ವಾರವಾದರೂ ಚೈತ್ರಾ ಪತ್ತೆಯಾಗಿಲ್ಲ. ಇನ್ನೆರಡು ದಿನಗಳಲ್ಲಿ ಪತ್ತೆಯಾಗದೇ ಇದ್ದಲ್ಲಿ ಉಳ್ಳಾಲ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಬಜರಂಗದಳ ಕರ್ನಾಟಕ ಪ್ರಾಂತ ಸಂಚಾಲಕ ಮುರಳಿ ಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದ್ದಾರೆ.

ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣ

ಮಂಗಳೂರು ಹೊರವಲಯದ ದೇರಳಕಟ್ಟೆಯ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಎಂಎಸ್​ಸಿ ಮುಗಿಸಿದ ನಂತರ ಚೈತ್ರಾ ಕೋಟೆಕಾರು ಬಳಿಯ ಖಾಸಗಿ ಪಿಜಿಯಲ್ಲಿ ಇದ್ದುಕೊಂಡು ಫುಡ್ ಸೆಕ್ಯುರಿಟಿ ವಿಷಯದ ಮೇಲೆ ಪಿಹೆಚ್​ಡಿ ಅಧ್ಯಯನ ಮಾಡುತ್ತಿದ್ದಳು. ಫೆ.17 ರಂದು ಬೆಳಗ್ಗೆ 9 ಗಂಟೆಗೆ ಪಿಜಿಯಿಂದ ತನ್ನ ಸ್ಕೂಟರಲ್ಲಿ ತೆರಳಿದ್ದಾಕೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ದೊಡ್ಡಪ್ಪ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More
Loading...
Unable to load recommendations.
Follow Us