AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು; ಪತ್ನಿಯ ಕಣ್ಣನ್ನು ಕಚ್ಚಿ, ಮಾಂಸ ಹೊರಬರುವಂತೆ ಹಲ್ಲೆ ಪ್ರಕರಣ​; ಆರೋಪಿ ಬಂಧನ

ದಕ್ಷಿಣ ಕನ್ನಡ(Dakshina Kannada)ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ಕಂಠಪೂರ್ತಿ ಕುಡಿದು ಮನೆಗೆ ಬಂದ ಆರೋಪಿ ಪತಿ ಸುರೇಶ್​ ಗೌಡ(55), ತನ್ನ ಹೆಂಡತಿ ಮೋಹಿನಿ(55) ಯ ಕಣ್ಣನ್ನು ಕಚ್ಚಿ, ಮಾಂಸ ಹೊರಬರುವಂತೆ ಗಾಯಗೊಳಿಸಿದ್ದ ವಿಕೃತ ಘಟನೆ ನಡೆದಿತ್ತು. ಬಳಿಕ ಪರಾರಿಯಾಗಿ ಮನೆಯ ಹತ್ತಿರದ ತೋಟದಲ್ಲಿ ಅಡಗಿ ಕುಳಿತ್ತಿದ್ದ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು; ಪತ್ನಿಯ ಕಣ್ಣನ್ನು ಕಚ್ಚಿ, ಮಾಂಸ ಹೊರಬರುವಂತೆ ಹಲ್ಲೆ ಪ್ರಕರಣ​; ಆರೋಪಿ ಬಂಧನ
ಆರೋಪಿ ಬಂಧನ
Follow us
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 19, 2023 | 5:16 PM

ದಕ್ಷಿಣ ಕನ್ನಡ, ಡಿ.19: ಪತ್ನಿ ಕಣ್ಣು ಕಚ್ಚಿ ಮಾಂಸ ಹೊರಬರುವಂತೆ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ ಧರ್ಮಸ್ಥಳ ಪೊಲೀಸರು(Police) ಬಂಧಿಸಿದ್ದಾರೆ. ದಕ್ಷಿಣ ಕನ್ನಡ(Dakshina Kannada)ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ಕಂಠಪೂರ್ತಿ ಕುಡಿದು ಮನೆಗೆ ಬಂದ ಆರೋಪಿ ಪತಿ ಸುರೇಶ್​ ಗೌಡ(55), ತನ್ನ ಹೆಂಡತಿ ಮೋಹಿನಿ(55) ಯ ಕಣ್ಣನ್ನು ಕಚ್ಚಿ, ಮಾಂಸ ಹೊರಬರುವಂತೆ ಗಾಯಗೊಳಿಸಿದ್ದ ವಿಕೃತ ಘಟನೆ ನಡೆದಿತ್ತು. ಬಳಿಕ ಪರಾರಿಯಾಗಿ ಮನೆಯ ಹತ್ತಿರದ ತೋಟದಲ್ಲಿ ಅಡಗಿ ಕುಳಿತ್ತಿದ್ದ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ

ನಿನ್ನೆ (ಡಿ.18) ರಾತ್ರಿ 12 ಗಂಟೆ ಸುಮಾರಿಗೆ ಸುರೇಶ್ ಗೌಡ, ಕಂಠ ಪೂರ್ತಿ ಕುಡಿದು ತೇಲಾಡುತ್ತ ಮನೆಗೆ ಬಂದಿದ್ದಾನೆ. ಈ ವೇಳೆ ಪತ್ನಿ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿದ್ದ. ಮದ್ಯದ ಅಮಲಿನಲ್ಲಿದ್ದ ಆತ, ಪತ್ನಿ ಜೊತೆ ಜಗಳವಾಡಿ ಆಕೆಯ ಕಣ್ಣು ಕಚ್ಚಿ, ನಂತರ ಮುಖದ ಎಡಭಾಗದ ಮಾಂಸ ಕಚ್ಚಿ ತೆಗೆದಿದ್ದಾನೆ. ಪತ್ನಿ ಕಣ್ಣು ಮತ್ತು ಮುಖದ ಎಡಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಉಜಿರೆಯ ಆಸ್ಪತ್ರೆಗೆ ಸೇರಿಸಲಾಗಿದೆ.

ಇದನ್ನೂ ಓದಿ:ಮಂಗಳೂರು; ಪತ್ನಿಯ ಕಣ್ಣನ್ನು ಕಚ್ಚಿ, ಮಾಂಸ ಹೊರಬರುವಂತೆ ಹಲ್ಲೆ ಮಾಡಿ ಎಸ್ಕೇಪ್ ಆದ ಪತಿ

ಮಗಳ ಮೇಲೆಯೂ ಹಲ್ಲೆ

ಆರೋಪಿ ಸುರೇಶ್ ಗೌಡ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಕೋಟೆಬಾಗಿಲಿನ ಮೋಹಿನಿ ಎಂಬುವವರನ್ನು ಕಳೆದ 22 ವರ್ಷದ ಹಿಂದೆ ಮದುವೆಯಾಗಿದ್ದ. ಜೊತೆಗೆ ಶಿಶಿಲದಲ್ಲಿಯೇ ಮೋಹಿನಿ ತಂದೆಯವರು ಕೊಟ್ಟ ಜಾಗದಲ್ಲಿ ದಂಪತಿ ವಾಸವಾಗಿದ್ದು, ಸುರೇಶ್ ಕೂಲಿ ಕೆಲಸ ಮಾಡುತ್ತಿದ್ದ. ಇನ್ನು ಕೇವಲ ಪತ್ನಿಯ ಮೇಲೆ ಅಷ್ಟೇ ಅಲ್ಲ, ಮಗಳ ಮೇಲೆಯೋ ಹಲ್ಲೆ ನಡೆಸಿದ್ದು, ಆಕೆಗೂ ಗಾಯಗಳಾಗಿವೆ. ಸದ್ಯ ತಾಯಿ-ಮಗಳನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದ ಹಿನ್ನಲೆ ಇದೀಗ ಆರೋಪಿ ಸುರೇಶ್​ನನ್ನು ಬಂಧಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಇರಾನ್‌ನಿಂದ 110 ಭಾರತದ ವಿದ್ಯಾರ್ಥಿಗಳಿರುವ ವಿಮಾನ ಇಂದು ರಾತ್ರಿ ದೆಹಲಿಗೆ
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ರಿಹ್ಯಾಬ್ ಸೆಂಟರ್​ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ
ರಿಹ್ಯಾಬ್ ಸೆಂಟರ್​ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ