ಮಂಗಳೂರು: ಮಂಗಳಾದೇವಿ ದೇವಸ್ಥಾನದ ಗೂಗಲ್ ಮ್ಯಾಪ್ ಲೊಕೇಷನ್ ತಿರುಚಿದ ಕಿಡಿಗೇಡಿಗಳು
ದೇಗುಲದ ಆಡಳಿತ ಮಂಡಳಿ ದೂರು ನೀಡಿದ ಬೆನ್ನಲ್ಲೇ ಗೂಗಲ್ ಮ್ಯಾಪ್ ಲೊಕೇಷನ್ ಮತ್ತೆ ಸರಿಯಾಗಿದೆ. ಸಾಮರಸ್ಯ ಹಾಳು ಮಾಡಿದವರ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ, ಧಾರ್ಮಿಕ ಭಾವನೆಗೆ ಘಾಸಿ ಉಂಟುವಾಡಿದವರ ಬಂಧನಕ್ಕೆ ಆಗ್ರಹಿಸಿದ್ದಾರೆ.
ಮಂಗಳೂರು, ಡಿಸೆಂಬರ್ 13: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ (Mangaluru) ಮಂಗಳಾದೇವಿ ದೇವಸ್ಥಾನದ (Mangaladevi Temple) ಗೂಗಲ್ ಮ್ಯಾಪ್ ಲೊಕೇಷನ್ (Google Map) ಅನ್ನು ಕಿಡಿಗೇಡಿಗಲು ತಿರುಚಿರುವುದು ಕಂಡುಬಂದಿದೆ. ದೇಗುಲ ಇರುವ ಜಾಗದ ಹೆಸರನ್ನು ಬೋಳಾರ ಶೇಖ್ ಉಮ್ಮರ್ ಸಾಹೇಬ್ ಕಾಂಪೌಂಡ್ ಅಂತ ಮರುನಾಮಕರಣ ಮಾಡಲಾಗಿದೆ.
ಮಂಗಳಾದೇವಿ ದೇವಸ್ಥಾನದಿಂದ 200 ಮೀಟರ್ ದೂರದಲ್ಲಿ ಬೋಳಾರ ಶೇಖ್ ಉಮ್ಮರ್ ಸಾಹೇಬ್ ಕಾಂಪೌಂಡ್ ಇದೆ. ಅದನ್ನೇ ದೇಗುಲದ ಹೆಸರಿರುವ ಜಾಗಕ್ಕೆ ಮರುನಾಮಕರಣ ಮಾಡಲಾಗಿದೆ. ಇದೀಗ ಕಿಡಿಗೇಡಿಗಳ ವಿರುದ್ಧ ದೇಗುಲದ ಆಡಳಿತ ಮಂಡಳಿ ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಹಾಗೂ ಸೈಬರ್ ಕ್ರೈಮ್‌ಗೆ ದೂರು ನೀಡಿದೆ.
ದೇಗುಲದ ಆಡಳಿತ ಮಂಡಳಿ ದೂರು ನೀಡಿದ ಬೆನ್ನಲ್ಲೇ ಗೂಗಲ್ ಮ್ಯಾಪ್ ಲೊಕೇಷನ್ ಮತ್ತೆ ಸರಿಯಾಗಿದೆ. ಸಾಮರಸ್ಯ ಹಾಳು ಮಾಡಿದವರ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ, ಧಾರ್ಮಿಕ ಭಾವನೆಗೆ ಘಾಸಿ ಉಂಟುವಾಡಿದವರ ಬಂಧನಕ್ಕೆ ಆಗ್ರಹಿಸಿದ್ದಾರೆ.
ಮಂಗಳಾದೇವಿ ದೇವಸ್ಥಾನವು ಮಂಗಳೂರು ನಗರದ ಬೋಳಾರದಲ್ಲಿದೆ. ಇದು ನಗರ ಕೇಂದ್ರದ ನೈಋತ್ಯಕ್ಕೆ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿದೆ. ಈ ದೇವಾಲಯವು ಹಿಂದೂ ಶಕ್ತಿ ದೇವತೆಯಾದ ಮಂಗಳಾದೇವಿಯದ್ದಾಗಿದೆ. ನಗರಕ್ಕೆ ಮಂಗಳೂರೆಂಬ ಹೆಸರು ಬರಲು ಕೂಡ ಈ ದೇಗುಲವೇ ಕಾರಣ ಎನ್ನಲಾಗಿದೆ.
ಇದನ್ನೂ ಓದಿ: ಅಕ್ರಮ ಸಾರಾಯಿ ಘಟಕಕ್ಕೆ ಅಬಕಾರಿ ಪೊಲೀಸರ ದಾಳಿ, ಮನೆಯಲ್ಲೇ ಸ್ಪಿರಿಟ್ ತಯಾರಿಸುತ್ತಿದ್ದವರು ವಶ
ಈ ದೇವಾಲಯವು ಐತಿಹಾಸಿಕ ಮಹತ್ವ ಹೊಂದಿದೆ ಮತ್ತು 9 ನೇ ಶತಮಾನದಲ್ಲಿ ಅತ್ಯಂತ ಪ್ರಸಿದ್ಧ ರಾಜ ಕುಂದವರ್ಮನಿಂದ ನಿರ್ಮಿಸಲಾಗಿದೆ ಎಂದು ಭಾವಿಸಲಾಗಿದೆ. ಮತ್ತೊಂದು ಕಥೆಯ ಪ್ರಕಾರ, ಈ ದೇವಾಲಯವನ್ನು ಹಿಂದೂ ದೇವರು ವಿಷ್ಣುವಿನ ಹತ್ತು ಅವತಾರಗಳಲ್ಲಿ ಒಂದಾದ ಪರಶುರಾಮ ನಿರ್ಮಿಸಿದ ಮತ್ತು ನಂತರ ಕುಂದವರ್ಮನಿಂದ ವಿಸ್ತರಿಸಲಾಯಿತು ಎಂದು ನಂಬಿಕೊಂಡು ಬರಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ