AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು ಉದ್ಯಮಿಗೆ ಭೂಗತ ಪಾತಕಿಯಿಂದ ಬೆದರಿಕೆ ಕರೆ: 3 ಕೋಟಿ ರೂ ಡಿಮ್ಯಾಂಡ್

ಮಂಗಳೂರಿನ ಬಜ್ಪೆಯ ಉದ್ಯಮಿಗೆ ಕಲಿ ಯೋಗೇಶ್ ಹೆಸರಿನಲ್ಲಿ ಭೂಗತ ಪಾತಕಿ ಜನವರಿ 17 ರಂದು ಬೆದರಿಕೆ ಕರೆ ಬಂದಿದೆ. 3 ಕೋಟಿ ರೂ. ನೀಡುವಂತೆ ಬೆದರಿಕೆ ಹಾಕಲಾಗಿದೆ. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಪ್ರಕರಣ ಬಜ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ತನಿಖೆ ಆರಂಭಿಸಿದ್ದಾರೆ.

ಮಂಗಳೂರು ಉದ್ಯಮಿಗೆ ಭೂಗತ ಪಾತಕಿಯಿಂದ ಬೆದರಿಕೆ ಕರೆ: 3 ಕೋಟಿ ರೂ ಡಿಮ್ಯಾಂಡ್
ಮಂಗಳೂರು ಉದ್ಯಮಿಗೆ ಭೂಗತ ಪಾತಕಿಯಿಂದ ಬೆದರಿಕೆ ಕರೆ: 3 ಕೋಟಿ ರೂ ಡಿಮ್ಯಾಂಡ್
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಗಂಗಾಧರ​ ಬ. ಸಾಬೋಜಿ|

Updated on: Jan 26, 2025 | 3:54 PM

Share

ಮಂಗಳೂರು, ಜನವರಿ 26: ನಗರದ ಬಜ್ಪೆಯ ಉದ್ಯಮಿಗೆ ಭೂಗತ ಪಾತಕಿಯಿಂದ ಬೆದರಿಕೆ ಕರೆ (threat call) ಬಂದಿರುವಂತಹ ಘಟನೆ ನಡೆದಿದೆ. ಉದ್ಯಮಿ ರೊನಾಲ್ಡ್​​ಗೆ ಭೂಗತ ಪಾತಕಿ ಕಲಿ ಯೋಗೇಶ್ ಹೆಸರಲ್ಲಿ ಜನವರಿ 17ರಂದು ದೂರವಾಣಿ ಕರೆಮಾಡಿದ್ದು, 3 ಕೋಟಿ ರೂ. ನೀಡು, ಇಲ್ಲಾಂದರೆ ಮನೆಯವರನ್ನೆಲ್ಲಾ ಕೊಲೆ‌ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ನಿನ್ನೆ ಬಜ್ಪೆ ಪೊಲೀಸ್ ಠಾಣೆಯಲ್ಲಿ‌ ಕೇಸ್​ ದಾಖಲಾಗಿದೆ.

ರೊನಾಲ್ಡ್ ಕೆಂಪು ಕಲ್ಲಿನ‌ ಕೋರೆ ಹಾಗೂ ಇತರೆ ಉದ್ಯಮ ನಡೆಸಿತ್ತಿದ್ದಾರೆ. ಕಲಿ ಯೋಗಿಶ್ ಹೆಸರಲ್ಲಿ ಭೂಗತ ಪಾತಕಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ‌ ಆರಂಭಿಸಿದ್ದಾರೆ.

ರಾಯಚೂರಿನ ದೇವದುರ್ಗ ಜೆಡಿಎಸ್​ ಶಾಸಕಿಗೆ ಜೀವ ಭಯ

ಮತ್ತೊಂದು ಪ್ರಕರಣದಲ್ಲಿ ರಾಯಚೂರು ಜಿಲ್ಲೆಯ ಜೆಡಿಎಸ್ ಶಾಸಕಿ ಮನೆಗೆ ಆಗಂತುಕರು ನುಗ್ಗಿದ ಘಟನೆ ಇತ್ತೀಚೆಗೆ ನಡೆದಿತ್ತು. ಇದೆ ಜನವರಿ 22ರ ತಡರಾತ್ರಿ ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಅದೊಂದು ಘಟನೆ ನಡೆದಿತ್ತು.

ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿಯಾಗಿರುವ ಕರೆಮ್ಮಾ ಜಿ ನಾಯಕ್​ ಅವರ ನಿವಾಸಕ್ಕೆ ಮೂರು ಜನ ಅಪರಿಚಿತರ ತಂಡ ಎಂಟ್ರಿ ಕೊಟ್ಟಿತ್ತು. ಹಿಂಬಾಗಿಲಿನಿಂದ ನುಗ್ಗಿ ಮನೆಯೊಳಕ್ಕೆ ಪ್ರವೇಶಸಿಲು ಯತ್ನಿಸಿದ್ದರು.  ಮೊದಲ ಮಹಡಿಯಲ್ಲಿದ್ದ ಶಾಸಕಿ ಕರೆಮ್ಮಾಗೆ ಇದೆಲ್ಲಾ ಗೊತ್ತೆ ಇರ್ಲಿಲ್ಲ. ಆದರೆ ಅದೇ ದಿನ ಮನೆಯಲ್ಲಿದ್ದ ಸಿಬ್ಬಂದಿಯ ಸಮಯ ಪ್ರಜ್ಞೆ ಆಗಬಹುದಾಗಿದ್ದ ದೊಡ್ಡ ದುರಂತವನ್ನ ತಪ್ಪಿಸಿತ್ತು.

ಇದನ್ನೂ ಓದಿ: ಮೈಸೂರು: ಸರ್ಕಾರಿ ಕೆಲಸ ಬಿಟ್ಟು ಥೈಲ್ಯಾಂಡ್​​ ಸುಂದ್ರಿ ಕರೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದವ ಅಂದರ್

ಹೌದು, ಮುಖಕ್ಕೆ ಮಾಸ್ಕ್​ ಹಾಕಿದ್ದ ಆಗಂತುಕರನ್ನ ನೋಡಿ ಶಾಸಕಿ ಮನೆಯಲ್ಲಿದ್ದೋರು ಅಲರ್ಟ್ ಆಗಿ ಕಿರುಚಾಡಿದ್ದರು. ಆಗ ಆ ದುಷ್ಕರ್ಮಿಗಳು ಕಂಪೌಂಡ್ ಹಾರಿ ಎಸ್ಪೇಪ್ ಆಗಿದ್ದರು. ನಂತರ ಶಾಸಕಿ ಮನೆಯ ಸಿಬ್ಬಂದಿ 112 ಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದರು. ಮಲಗಿದ್ದ ತಮಗೆ ಕಿಟಕಿ ಮೂಲಕ ಯಾವುದೊ ಪುಡಿ ಎರಚಿದ್ದಾರೆ. ಅದರಿಂದ ನನಗೆ ಎಚ್ಚರವೇ ಆಗಿಲ್ಲ. ನನ್ನ ಮನೆಯಲ್ಲಿ ಹಣವಿಲ್ಲ, ನನ್ನ ಕೊಲೆ ಮಾಡೋದೇ ಉದ್ದೇಶವಿರಬಹುದು ಅಂತ ಬೆಚ್ಚಿ ಬೀಳಿಸೊ ವಿಷಯವನ್ನು ಶಾಸಕಿ ಕರೆಮ್ಮಾ ಜಿ ನಾಯಕ್ ಬಾಯ್ಬಿಟಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.