ಮಂಗಳೂರು ಗುಡ್ಡ ಕುಸಿತ: ಮನೆಯೊಳಗೆ ನುಗ್ಗಿದ ನೀರು ಮಣ್ಣು, ಓಡಿಹೋಗಿ ಬಚಾವಾದ ಜನ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂಗಾರು ಮಳೆ ಆರ್ಭಟ ಜೋರಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಅನೇಕ ಕಡೆಗಳಲ್ಲಿ ಭೂಕುಸಿತ ಸಂಭವಿಸಿ ಮನೆಗಳಿಗೆ ಹಾನಿಯಾಗಿದೆ. ಕಣ್ಣೂರಿನ ದಯಂಬುವಿನಲ್ಲಿ ಗುಡ್ಡ ಕುಸಿತ ಸಂಭವಿಸಿ ಮನೆ ಮೇಲೆ ಮಣ್ಣು ಬಿದ್ದಿದೆ. ಮನೆಯೊಳಕ್ಕೆ ನೀರು ನುಗ್ಗಿದೆ. ಅದೃಷ್ಟವಶಾತ್, ಮನೆಯಲ್ಲಿದ್ದವರು ಓಡಿಹೋಗಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಮಂಗಳೂರು ಗುಡ್ಡ ಕುಸಿತ: ಮನೆಯೊಳಗೆ ನುಗ್ಗಿದ ನೀರು ಮಣ್ಣು, ಓಡಿಹೋಗಿ ಬಚಾವಾದ ಜನ
ಕಣ್ಣೂರಿನ ದಯಂಬು ಎಂಬಲ್ಲಿ ಗುಡ್ಡ ಕುಸಿತ
Edited By:

Updated on: Jun 17, 2025 | 10:55 AM

ಮಂಗಳೂರು, ಜೂನ್ 17: ಮುಂಗಾರು ಮಹಾ ಮಳೆಗೆ (Mangaluru Rains) ಮಂಗಳೂರು ಅಕ್ಷರಶಃ ತತ್ತರಿಸಿಹೋಗಿದೆ. ಮಂಗಳೂರು ನಗರ ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭೂಕುಸಿತ (Landslide) ಸಂಭವಿಸಿ ಮನೆಗಳಿಗೆ ಹಾನಿಯಾಗಿದೆ. ಮಂಗಳೂರು ಸಮೀಪದ ಕಣ್ಣೂರಿನ (Kannur) ದಯಂಬು ಎಂಬಲ್ಲಿ ಗುಡ್ಡ ಕುಸಿತದಲ್ಲಿ ಕುಟುಂಬವೊಂದು ಕೂದಲೆಲೆ ಅಂತರದಲ್ಲಿ ಪಾರಾಗಿದೆ. ಗುಡ್ಡದ ಕೆಳಭಾಗದಲ್ಲೇ ಇದ್ದ ಮನೆಯಲ್ಲಿ ವಾಸವಿದ್ದ ಕುಟುಂಬದವರು, ಗುಡ್ಡ ಕುಸಿತದ ಸದ್ದು ಕೇಳುತ್ತಿದ್ದಂತೆಯೇ ಓಡಿಹೋಗಿ ಬಚಾವಾಗಿದ್ದಾರೆ.

ಭಾರಿ ಮಳೆಯ ಕಾರಣ ಜಲಪಾತದಂತೆ ನೀರು ಹರಿದು ಮಣ್ಣು ಸಡಿಲಗೊಂಡು ಗುಡ್ಡ ಕುಸಿತ ಸಂಭವಿಸಿದೆ. ಗುಡ್ಡದ ಕೆಳಭಾಗದಲ್ಲೇ ಇದ್ದ ಮನೆಯ ಹಿಂಬದಿಯ ಗೋಡೆಯನ್ನು ಸೀಳಿ ಮನೆಯೊಳಗೆ‌ ಮಣ್ಣು, ನೀರು ನುಗ್ಗಿದೆ. ನೀರು ಬರುತ್ತಲೇ ಕುಟುಂಬದ ಸದಸ್ಯರು ಮನೆಯಿಂದ ಓಡಿ ಜೀವ ಉಳಿಸಿಕೊಂಡಿದ್ದಾರೆ.

ಈ ಪ್ರದೇಶದಲ್ಲಿ ಭಾರೀ ಮಳೆ ಬಂದಾಗ ಗುಡ್ಡದಿಂದ ಜಲಪಾತದ ರೀತಿ ನೀರು ಹರಿಯುತ್ತದೆ. ಇಲ್ಲಿ ಮಳೆ ನೀರು ಹೋಗಲು ಯಾವುದೇ ಚರಂಡಿ ವ್ಯವಸ್ಥೆ ಇಲ್ಲ. ನೀರು ಮನೆಯ ಅಂಗಳದಲ್ಲೇ ಹರಿದು ಹೋಗುತ್ತಿದೆ. ಮರಗಳು ಅಲುಗಾಡಿದಾಗ ಮಣ್ಣು ಸಡಿಲಗೊಂಡು ಗುಡ್ಡ ಕುಸಿಯುತ್ತಿದೆ. ನೀರು ಭಾರೀ ಪ್ರಮಾಣದಲ್ಲಿ ಹರಿದು ಬಂದು ಮಣ್ಣು ಕುಸಿದಿದೆ. ಬಹಳ‌ ಕಷ್ಟಪಟ್ಟು ಕನಸಿನ ಮನೆ ಕಟ್ಟಿಸಿದ್ದೇವೆ.
ಈ‌ ರೀತಿ ಆದಾಗ ತುಂಬಾ ಬೇಜರಾಗುತ್ತದೆ ಎಂದು ಸ್ಥಳೀಯ ನಿವಾಸಿಗಳು ‘ಟಿವಿ9’ ಜತೆ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ
ಕೊಡಗು ಜಿಲ್ಲೆಯಲ್ಲಿ ಮಳೆ ಆರ್ಭಟ: ಭಾಗಮಂಡಲ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತ
ಮಂತ್ರಾಲಯ: ರಾಯರ ದರ್ಶನ ಪಡೆದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಶಿರಾಡಿ ಘಾಟ್, ಹಲವೆಡೆ ಭೂಕುಸಿತ: ಬೆಂಗಳೂರು ಮಂಗಳೂರು ಪ್ರಯಾಣಕ್ಕೆ ಸಂಚಕಾರ
ಕರ್ನಾಟಕಕ್ಕೂ ತಟ್ಟಲಿದೆಯಾ ಇರಾನ್, ಇಸ್ರೇಲ್ ಸಂಘರ್ಷದ ಪರಿಣಾಮ?

ಮನೆಗೆ ಸಂಪೂರ್ಣ ಹಾನಿ

ಗುಡ್ಡ ಕುಸಿತದಿಂದ ಮೈಮೂನಾ ಎಂಬವರ ಮನೆಗೆ‌ ಸಂಪುರ್ಣ ಹಾನಿಯಾಗಿದೆ. ಇದೇ ವೇಳೆ, ಮನೆಯವರು ಕೆಲವರು ಮದುವೆ ಸಮಾರಂಭಕ್ಕೆ ತೆರಳಿದ್ದರು ಎನ್ನಲಾಗಿದೆ. ಹೀಗಾಗಿ ದೊಡ್ಡ ಅನಾಹುತ ತಪ್ಪಿದೆ. ಮನೆಯ ಅಡುಗೆ ಕೋಣೆ ಸಂಪೂರ್ಣವಾಗಿ ಕುಸಿದು ಹೋಗಿದ್ದು, ಪೂರ್ತಿ ಕೆಸರುಮಯವಾಗಿದೆ. ಮನೆಯೊಳಗೆ ಗುಡ್ಡದ ಕೆಸರು ನೀರು ಹಳ್ಳದಂತೆ ಹರಿಯುತ್ತಿದೆ. ಎಲೆಕ್ಟ್ರಾನಿಕ್ ವಸ್ತುಗಳು, ಪೀಠೋಪಕರಣಗಳಿಗೆ ಸಂಪೂರ್ಣ ಹಾನಿಯಾಗಿದೆ.

ಇದನ್ನೂ ಓದಿ: ಶಿರಾಡಿ ಘಾಟ್ ಅಧ್ವಾನ, ಹಲವೆಡೆ ಭೂಕುಸಿತ: ಬೆಂಗಳೂರು ಮಂಗಳೂರು ಪ್ರಯಾಣಕ್ಕೆ ಸಂಚಕಾರ

ಮನೆಯ ಮೇಲ್ಚಾವಣಿ ಪೂರ್ತಿಯಾಗಿ ಕುಸಿದು ಹೋಗಿದೆ. ಈ ಪ್ರದೇಶದಲ್ಲಿ ಇನ್ನಷ್ಟು ಗುಡ್ಡ ಕುಸಿಯುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ