ಮಂಗಳೂರು: ಹಿಂದೂ ದೈವಸ್ಥಾನದ ಎದುರೇ ಮುಸ್ಲಿಂ ಖಬರಿಸ್ತಾನ ನಿರ್ಮಾಣ ವಿವಾದ; ಗ್ರಾಮಸ್ಥರಿಂದ ತೀವ್ರ ವಿರೋಧ

ಮಂಗಳೂರು ತಾಲೂಕಿನ ಮೂಡುಶೆಡ್ಡೆ ಗ್ರಾಮದಲ್ಲಿ ಜಾರಂದಾಯ ದೈವಸ್ಥಾನ ಮತ್ತು ನಾಗಬನದ ಸನಿಹದಲ್ಲಿ ಮುಸ್ಲಿಂ ದಫನ ಭೂಮಿಗೆ ಜಾಗ ಮಂಜೂರು ಮಾಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇದು ಧಾರ್ಮಿಕ ನಂಬಿಕೆಗೆ ಅಪಚಾರವೆಂದು ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಹಾಗೂ ಹಿಂದೂ ಸಂಘಟನೆಗಳು ಆದೇಶ ವಾಪಸ್ ಪಡೆಯುವಂತೆ ಆಗ್ರಹಿಸಿ ಉಗ್ರ ಹೋರಾಟದ ಎಚ್ಚರಿಕೆ ನೀಡಿವೆ.

ಮಂಗಳೂರು: ಹಿಂದೂ ದೈವಸ್ಥಾನದ ಎದುರೇ ಮುಸ್ಲಿಂ ಖಬರಿಸ್ತಾನ ನಿರ್ಮಾಣ ವಿವಾದ; ಗ್ರಾಮಸ್ಥರಿಂದ ತೀವ್ರ ವಿರೋಧ
ಮಂಜೂರು ಮಾಡಲಾಗಿರುವ ಹಯತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸಕ್ಕೆ ಎರಡು ಎಕರೆ ಜಾಗ
Edited By:

Updated on: Oct 10, 2026 | 11:25 AM

ಮುಖ್ಯಾಂಶಗಳು

  • ಮಂಗಳೂರಿನ ಮೂಡುಶೆಡ್ಡೆಯಲ್ಲಿ ದೈವಸ್ಥಾನದ ಎದುರು ಮುಸ್ಲಿಂ ದಫನ ಭೂಮಿ ಮಂಜೂರು.
  • ಧಾರ್ಮಿಕ ನಂಬಿಕೆಗೆ ಅಪಚಾರವೆಂದು ಆರೋಪಿಸಿ ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ.
  • ಆದೇಶ ವಾಪಸ್ ಪಡೆಯದಿದ್ದರೆ ಉಗ್ರ ಹೋರಾಟ ನಡೆಸಲು ಗ್ರಾಮಸ್ಥರ ಎಚ್ಚರಿಕೆ.

ಮಂಗಳೂರು, ಅಕ್ಟೋಬರ್ 10: ಮಂಗಳೂರಿನ ಮೂಡುಶೆಡ್ಡೆ ಗ್ರಾಮದಲ್ಲಿ ಹಿಂದೂ ದೈವಸ್ಥಾನದ ಎದುರಲ್ಲೇ ಮುಸ್ಲಿಂ ದಫನ್ ಭೂಮಿಗೆ (ಖಬರಿಸ್ತಾನ) ಜಾಗ ಮಂಜೂರು ಮಾಡಿರುವ ವಿಚಾರವು ಈಗ ಭಾರೀ ವಿವಾದದ ಕಿಡಿ ಎಬ್ಬಿಸಿದೆ. ಗ್ರಾಮದ ಸರ್ವೇ ನಂಬರ್ 74ರಲ್ಲಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರಕ್ಕೆ ಮೀಸಲಿಟ್ಟಿರುವ 300 ಎಕರೆ ಜಾಗದಲ್ಲಿ, ಹಯತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸಕ್ಕೆ ಎರಡು ಎಕರೆ ಜಾಗವನ್ನು ಮಂಗಳೂರು ತಹಶೀಲ್ದಾರ್ ಆದೇಶದಂತೆ ಮಂಜೂರು ಮಾಡಲಾಗಿದೆ. ಸದ್ಯ ಈ ಸ್ಥಳದಲ್ಲಿ ಮಣ್ಣು ಅಗೆಯುವ ಕಾರ್ಯವೂ ಆರಂಭಗೊಂಡಿದೆ.

ದೈವಸ್ಥಾನ, ನಾಗಬನ ಸಮೀಪವೇ ಖಬರಿಸ್ತಾನ: ‘ಮೂಡುಶೆಡ್ಡೆ ಚಲೋ’ಗೆ ಕರೆ

ಆದರೆ, ಮಸೀದಿಯಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಈ ಜಾಗದ ಸುತ್ತಮುತ್ತ ಜಾರಂದಾಯ ದೈವದ ಧರ್ಮ ಚಾವಡಿ, ನಾಗಬನ ಹಾಗೂ ಜೈನ ಬಸದಿಗಳು ನೆಲೆಗೊಂಡಿವೆ. ಈ ಪವಿತ್ರ ಧಾರ್ಮಿಕ ಕೇಂದ್ರಗಳ ತೀರಾ ಸನಿಹದಲ್ಲೇ ಖಬರಿಸ್ತಾನ ನಿರ್ಮಿಸುತ್ತಿರುವುದು ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಮತ್ತು ದೈವರಾಧನೆಗೆ ಮಾಡುವ ಅಪಚಾರ ಎಂದು ಗ್ರಾಮಸ್ಥರು ಹಾಗೂ ವಿವಿಧ ಹಿಂದೂ ಸಂಘಟನೆಗಳು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿವೆ. ಅತೀ ಹೆಚ್ಚು ಹಿಂದೂಗಳೇ ವಾಸವಿರುವ ಈ ಪ್ರದೇಶದಲ್ಲಿ ಉದ್ದೇಶಪೂರ್ವಕವಾಗಿ ದಫನ ಭೂಮಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿರುವ ಸಂಘಟನೆಗಳು, ಸರ್ಕಾರದ ಈ ನಡೆ ಖಂಡಿಸಿ ‘ಮೂಡುಶೆಡ್ಡೆ ಚಲೋ’ಗೆ ಕರೆ ನೀಡಿವೆ.

YouTube video player

ಆದೇಶ ವಾಪಸ್‌ಗೆ ಸ್ಥಳೀಯರ ಪಟ್ಟು: ತೀವ್ರ ಹೋರಾಟದ ಎಚ್ಚರಿಕೆ

ಈ ಕುರಿತು ಟಿವಿ9 ಜತೆ ಮಾತನಾಡಿರುವ ಮೂಡುಶೆಡ್ಡೆ ಗ್ರಾಮಸ್ಥರು, ಸ್ಥಳೀಯರ ನಿವೇಶನ ಬೇಡಿಕೆಗೆ ಸ್ಪಂದಿಸದ ಆಡಳಿತವು, ಪಂಚಾಯತ್ ಗಮನಕ್ಕೂ ತರದೆ ಈ ಆದೇಶ ಹೊರಡಿಸಿದೆ ಎಂದು ದೂರಿದ್ದಾರೆ. ಕೂಡಲೇ ಈ ಆದೇಶವನ್ನು ವಾಪಸ್ ಪಡೆದು ಆ ಭೂಮಿಯನ್ನು ಪಿಲಿಕುಳ ಪ್ರಾಧಿಕಾರಕ್ಕೇ ಮರುನೀಡಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಕಾಮಗಾರಿ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದು, ಮಂಗಳೂರಿನಲ್ಲಿ ಈ ದೈವಸ್ಥಾನ ವರ್ಸಸ್ ಖಬರಸ್ತಾನ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:54 am, Sat, 10 October 26

ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us