ಹಿಜಾಬ್ ನಿಯಮ ವಾಪಸ್ ಪಡೆಯಲು SYS ಸಮ್ಮೇಳನದಲ್ಲಿ ಸರ್ಕಾರಕ್ಕೆ ಹಕ್ಕೊತ್ತಾಯ

ಮಂಗಳೂರಿನ ಹೊರವಲಯದ ಅಡ್ಯಾರಿನಲ್ಲಿ ಸುನ್ನಿ ಯುವಜನ ಸಂಘಂ ಆಯೋಜನೆ ಮಾಡಿರುವ ಎಸ್​ವೈಎಸ್​ ಮಹಾ ಸಮ್ಮೇಳನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು. ಈ ವೇಳೆ ಮುಸ್ಲಿಂ ಮಹಿಳೆ ಮನೆಯಿಂದ ಹೊರಹೋದರೆ ಬುರ್ಖಾ ಹಾಕಲೇಬೇಕು. ಹಿಂದಿನ ಸರ್ಕಾರದ ಹಿಜಾಬ್ ನಿಯಮವನ್ನು ವಾಪಸ್ ಪಡೆಯುವಂತೆ ಶಾಪಿ ಸಹದಿ ಒತ್ತಾಯಿಸಿದ್ದಾರೆ. ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಗಿದೆ.​

ಹಿಜಾಬ್ ನಿಯಮ ವಾಪಸ್ ಪಡೆಯಲು SYS ಸಮ್ಮೇಳನದಲ್ಲಿ ಸರ್ಕಾರಕ್ಕೆ ಹಕ್ಕೊತ್ತಾಯ
SYS​​ನ ಮಹಾ ಸಮ್ಮೇಳನdಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗಿ​
Edited By:

Updated on: Jan 24, 2024 | 10:41 PM

ಮಂಗಳೂರು, ಜನವರಿ 24: ಮುಸ್ಲಿಂ ಮಹಿಳೆ ಮನೆಯಿಂದ ಹೊರಹೋದರೆ ಬುರ್ಖಾ ಹಾಕಲೇಬೇಕು. ಹಿಂದಿನ ಸರ್ಕಾರದ ಹಿಜಾಬ್ (hijab) ನಿಯಮವನ್ನು ವಾಪಸ್ ಪಡೆಯುವಂತೆ ಶಾಪಿ ಸಹದಿ ಒತ್ತಾಯಿಸಿದ್ದಾರೆ. ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಗಿದೆ. ಮಂಗಳೂರಿನ ಹೊರವಲಯದ ಅಡ್ಯಾರಿನಲ್ಲಿ ಸುನ್ನಿ ಯುವಜನ ಸಂಘಂ ಆಯೋಜನೆ ಮಾಡಿರುವ ಎಸ್​ವೈಎಸ್​ ಮಹಾ ಸಮ್ಮೇಳನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದಾಗ​ ಸರ್ಕಾರಕ್ಕೆ ಹಕ್ಕೊತ್ತಾಯಿಸಲಾಗಿದೆ. 2ಬಿ 4% ಮೀಸಲಾತಿಯಲ್ಲಿ ವಾಪಾಸ್ ಪಡೆದಿದ್ದನ್ನು ಸರ್ಕಾರ ವಾಪಾಸ್ ಪಡೆಯಲು ಮತ್ತು 2013 ರ ಜಾತಿಗಣತಿ ವರದಿ ಬಿಡುಗಡೆ ಮಾಡಲು ಒತ್ತಾಯಿಸಲಾಗಿದೆ.

ಮಂಗಳೂರು ಸಿಎಎ ಎನ್​ಆರ್​ಸಿ ಗೋಲಿಬಾರ್​ನಲ್ಲಿ ಮೃತಪಟ್ಟ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲಾಗಿದೆ. ಗೋಲಿವಾರ್ ವೇಳೆ ಯುವಕರ ಮೇಲಿರುವ ಕೇಸ್ ವಾಪಾಸ್ ತೆಗೆಯಲು ಆಗ್ರಹಿಸಲಾಗಿದೆ. ಹುಬ್ಬಳ್ಳಿ, ಡಿ‌.ಜೆ.ಹಳ್ಳಿ-ಕೆಜೆ ಹಳ್ಳಿ ಗಲಭೆಯಲ್ಲಿ ಜೈಲಿನಲ್ಲಿರುವ ಅಮಾಯಕರ ತಕ್ಷಣ ಬಿಡುಗಡೆಗೆ ಮತ್ತು ಚಿಕ್ಕಮಗಳೂರು ಬಾಬಾಬುಡನ್ ಗಿರಿ ದರ್ಗಾಕ್ಕೆ ಕಳೆದ ಸರ್ಕಾರ ತಂದ ಸಮಿತಿ ವಿಚಾರವಾಗಿ ಆದ ಅನ್ಯಾಯವನ್ನು ಸರಿಪಡಿಸಲು ಒತ್ತಾಯಿಸಲಾಗಿದೆ.

ನಿಮ್ಮ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇರುತ್ತೆ: ಡಿಸಿಎಂ ಡಿ.ಕೆ.ಶಿವಕುಮಾರ್

ಎಸ್​ವೈಎಸ್ ಮಹಾ ಸಮ್ಮೇಳನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿದ್ದು, ಮುಸ್ಲಿಮರು ನನ್ನ ಸಹೋದರರು ಎಂದಿದ್ದಕ್ಕೆ ಟೀಕೆ, ವಿವಾದ ಮಾಡಿದರು. ಆದರೆ ಇದಕ್ಕೆಲ್ಲಾ ಹೆದರುವುದಿಲ್ಲ. ನೀವು ಹಕ್ಕೊತ್ತಾಯ ಮಾಡಿದ್ದು ಡಿ.ಕೆ.ಶಿವಕುಮಾರ್​​ಗೆ ಅಲ್ಲ, ಸರ್ಕಾರಕ್ಕೆ. ನಿಮ್ಮ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇರುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಫೆ.8ರಂದು‌ ಸಿಎಂ 2ನೇ ಹಂತದ ಜನಸ್ಪಂದನಾ ಕಾರ್ಯಕ್ರಮ: ಮೆಜೆಸ್ಟಿಕ್​ನಿಂದ ವಿಧಾನಸೌಧಕ್ಕೆ ಬಸ್ ಸೌಲಭ್ಯ

ನಾವು ನಿಮ್ಮ ಜೊತೆ ಇದ್ದು, ನಿಮ್ಮ ರಕ್ಷಣೆಗೆ ನಿಲ್ಲುತ್ತೇವೆ. ನಾನು ಕನಕಪುರದ ಬಂಡೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ, ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದಿದ್ದಾರೆ.

ರಾಮಮಂದಿರ ಮಂತ್ರಾಕ್ಷತೆಗೆ ಡಿಸಿಎಂ ಡಿಕೆ ಶಿವಕುಮಾರ್​​ ಟೀಕೆ

ರಾಮಮಂದಿರ ಮಂತ್ರಾಕ್ಷತೆ ಮಂತ್ರಾಕ್ಷತೆ ಅಕ್ಕಿ ಸಿಎಂ ಸಿದ್ದರಾಮಯ್ಯ ಕೊಟ್ಟ ಅಕ್ಕಿ. ಐದು ಗ್ಯಾರಂಟಿಗಳೇ ಕಾಂಗ್ರೆಸ್ ಕೊಟ್ಟ ಮಂತ್ರಾಕ್ಷತೆ ಎಂದು ರಾಮಮಂದಿರ ಮಂತ್ರಾಕ್ಷತೆ ಬಗ್ಗೆ ಟೀಕೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:27 pm, Wed, 24 January 24

Pruthviraj

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Follow Us