Hijab Controversy: ಟಿಸಿ ಹಿಂಪಡೆದ 145 ಮುಸ್ಲಿಂ ವಿದ್ಯಾರ್ಥಿನಿಯರು; ಬಿಸಿ ನಾಗೇಶ್​ ಯೋಚಿಸಬೇಕಿತ್ತು ಎಂದ ಗೌಸಿಯಾ

ವಿದ್ಯಾರ್ಥಿನಿಯರು ಟಿಸಿ ಪಡೆಯಲು ಮುಖ್ಯ ಕಾರಣ ಸಚಿವ ಬಿ.ಸಿ ನಾಗೇಶ್ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿನಿ, ಹಿಜಾಬ್ ಹೋರಾಟಗಾರ್ತಿ ಗೌಸಿಯಾ ಹೇಳಿದ್ದಾರೆ.

Hijab Controversy: ಟಿಸಿ ಹಿಂಪಡೆದ 145 ಮುಸ್ಲಿಂ ವಿದ್ಯಾರ್ಥಿನಿಯರು; ಬಿಸಿ ನಾಗೇಶ್​ ಯೋಚಿಸಬೇಕಿತ್ತು ಎಂದ ಗೌಸಿಯಾ
ಸಾಂಧರ್ಬಿಕ ಚಿತ್ರ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Aug 22, 2022 | 12:17 PM

ಮಂಗಳೂರು: ಕಾಲೇಜಿನಲ್ಲಿ ಹಿಜಾಬ್ (Hijab) ಧರಿಸಲು ಅವಕಾಶ ನೀಡದ ಹಿನ್ನೆಲೆ 145 ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನಿಂದ ಟಿಸಿ ಪಡೆದಿರುವಂತಹ ಘಟನೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ದ.ಕ‌ ಜಿಲ್ಲೆ, ಉಡುಪಿ ಜಿಲ್ಲೆಯಾದ್ಯಾಂತ 16% ಮುಸ್ಲಿಂ ವಿದ್ಯಾರ್ಥಿನಿಯರಿಂದ ಟಿಸಿ ಹಿಂಪಡೆಯಲಾಗಿದೆ. ಟಿಸಿ ಪಡೆಯಬಹುದು ಅಂತಾ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪಿ.ಎಸ್ ಯಡಪಡಿತ್ತಾಯ ಹೇಳಿದ್ದರು. ಈ ಹಿನ್ನಲೆಯಲ್ಲಿ ದ.ಕನ್ನಡ, ಉಡುಪಿ ಜಿಲ್ಲೆಯ 900 ವಿದ್ಯಾರ್ಥಿನಿಯರ ಪೈಕಿ 145 ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿ ಪಡೆದಿದ್ದಾರೆ. ಸರ್ಕಾರಿ ಕಾಲೇಜಿನಿಂದ 34%, ಅನುದಾನಿತ ಕಾಲೇಜಿನಿಂದ 13% ವಿದ್ಯಾರ್ಥಿನಿಯರಿಂದ ಟಿಸಿ ಹಿಂಪಡೆಯಲಾಗಿದೆ. ಈ ಕುರಿತಾಗಿ ಆರ್​ಟಿಐ ಪ್ರಶ್ನೆಗೆ ಶಿಕ್ಷಣ ಇಲಾಖೆ ಉತ್ತರ ನೀಡಿದೆ.

ಇದನ್ನೂ ಓದಿ: Gurulingaswamy Holimath: ಸಿಎಂ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠ ನಿಧನ

ಟಿಸಿ ಪಡೆಯಲು ಸಚಿವ ಬಿ.ಸಿ ನಾಗೇಶ್ ಕಾರಣ: ವಿದ್ಯಾರ್ಥಿನಿ ಗೌಸಿಯಾ

ವಿದ್ಯಾರ್ಥಿನಿಯರು ಟಿಸಿ ಪಡೆಯಲು ಮುಖ್ಯ ಕಾರಣ ಸಚಿವ ಬಿ.ಸಿ ನಾಗೇಶ್ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿನಿ, ಹಿಜಾಬ್ ಹೋರಾಟಗಾರ್ತಿ ಗೌಸಿಯಾ ಹೇಳಿದ್ದಾರೆ. ಹಿಜಾಬ್ ಧರಿಸಲು ಅವಕಾಶ ಇಲ್ಲದ ಕಾರಣ ಕಾಲೇಜಿನಿಂದ ಗೌಸಿಯಾ ಟಿಸಿ ಪಡೆದಿದ್ದಾಳೆ. ಈ ಎಲ್ಲಾ ಘಟನೆಗಳಿಗೆ ಸಚಿವ ಬಿ.ಸಿ ನಾಗೇಶ್ ಕಾರಣ. ಸಂವಿಧಾನ ನೀಡಿರುವ ಹಕ್ಕಿನ ಪ್ರಕಾರ ಶಿಕ್ಷಣ ಪಡೆಯಲು ನಾಗೇಶ್ ಬಿಡಲಿಲ್ಲ.

ಇದನ್ನೂ ಓದಿ: ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋ ಅಂಟಿಸಿದ್ದು ನಾನೇ: ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಬಸವರಾಜ ಹೂಗಾರ

ತುಂಡು ಬಟ್ಟೆಯನ್ನೇ ದೊಡ್ಡ ವಿವಾದವನ್ನಾಗಿ ನಾಗೇಶ್ ಮಾಡಿದ್ದಾರೆ. ಇದರಿಂದ ಸರ್ಕಾರಕ್ಕೇ ನಷ್ಟವಾಗಲಿದೆ. ಹಲವು ಸರ್ಕಾರಿ ಕಾಲೇಜುಗಳು ಮುಚ್ಚಲಿದೆ. ಇಡೀ ರಾಜ್ಯಾದ್ಯಂತ 30% ಅಧಿಕ ವಿದ್ಯಾರ್ಥಿನಿಯರು ಕಾಲೇಜು ಬಿಟ್ಟಿದ್ದಾರೆ. ರಾಜ್ಯಕ್ಕೆ ಇದು ಜಲ್ವಂತ ಸಮಸ್ಯೆಯಾಗಲಿದೆ ಎಂದು ಕಾಲೇಜಿನಿಂದ ಟಿಸಿ ಪಡೆದ ವಿದ್ಯಾರ್ಥಿನಿ ಗೌಸಿಯಾ ಹೇಳಿಕೆ ನೀಡಿದ್ದಾಳೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 11:47 am, Mon, 22 August 22