Big News: ಆಸ್ಪತ್ರೆಗೆ ನುಗ್ಗಿ ವೈದ್ಯರ ಮುಖಕ್ಕೆ ಹೊಡೆದ ಮಿಜೋರಾಂ ಸಿಎಂ ಮಗಳು; ವಿಡಿಯೋಗೆ ಭಾರೀ ಆಕ್ರೋಶ
ಈ ಘಟನೆಯ ನಂತರ ಸಿಎಂ ಝೋರಂತಂಗ ಶನಿವಾರ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ವೊಂದನ್ನು ಮಾಡಿದ್ದು, ಸಾರ್ವಜನಿಕ ಕ್ಷಮೆ ಯಾಚನೆಯ ಪತ್ರವನ್ನು ಹಂಚಿಕೊಂಡಿದ್ದಾರೆ.
ಐಜ್ವಾಲ್: ಮಿಜೋರಾಂ ಮುಖ್ಯಮಂತ್ರಿ ಝೋರಂತಂಗಾ (Mizoram Chief Minister Zoramthanga) ಅವರ ಮಗಳು ಮಿಲಾರಿ ಚಾಂಗ್ಟೆ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಪಾಯಿಂಟ್‌ಮೆಂಟ್ ಇಲ್ಲದೆ ಆಸ್ಪತ್ರೆಗೆ ಹೋಗಿದ್ದ ಅವರನ್ನು ಭೇಟಿಯಾಗಲು ವೈದ್ಯರು ನಿರಾಕರಿಸಿದ ಕಾರಣ ಆಕೆ ವೈದ್ಯರ ಮುಖಕ್ಕೆ ಹೊಡೆಯುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಆಕೆ ಐಜ್ವಾಲ್‌ನ ಕ್ಲಿನಿಕ್‌ನಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಘಟನೆ ಕಳೆದ ಬುಧವಾರ ನಡೆದಿದೆ. ಚರ್ಮರೋಗದ ವೈದ್ಯರೊಂದಿಗೆ ಕನ್ಸಲ್ಟೇಷನ್ಗಾಗಿ ಮಿಲಾರಿ ಚಾಂಗ್ಟೆ ಕ್ಲಿನಿಕ್‌ಗೆ ಭೇಟಿ ನೀಡುವ ಮೊದಲು ಅಪಾಯಿಂಟ್‌ಮೆಂಟ್ ಪಡೆಯಬೇಕೆಂದು ವೈದ್ಯರು ಹೇಳಿದ್ದರು. ಆದರೆ, ಅದಕ್ಕೆ ಒಪ್ಪದ ಮಿಲಾರಿ ಚಾಂಗ್ಟೆ ಬಾಗಿಲು ತಳ್ಳಿಕೊಂಡು ಒಳಗೆ ನುಗ್ಗಿ, ವೈದ್ಯರ ಬಳಿಗೆ ಹೋಗಿ ಅವರ ಮುಖಕ್ಕೆ ಹೊಡೆಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
#viralvideo #Noidawoman #Mizoram #BJP Oh my God | What happen to #women of #India . 1- In morning #Noidawoman abusing gaurd,
2-Now Mizoram CM Zoramthanga’s Daughter ‘Hits’ Doctor, pic.twitter.com/PRncoM3C5r
— Abushahma Khan (@Abushahma007) August 21, 2022
ಇದನ್ನೂ ಓದಿ: Viral Video: ನನ್ನ ತಲೆಗೂದಲು ಕಟ್ ಮಾಡುತ್ತೀರಾ ಪ್ಲೀಸ್…. ಮುದ್ದಾದ ನಾಯಿಯ ವಿಡಿಯೋ ವೈರಲ್
ಆಗ ಒಬ್ಬ ವ್ಯಕ್ತಿ ಬಂದು ಮಿಲಾರಿ ಚಾಂಗ್ಟೆ ಅವರನ್ನು ತಡೆದು, ಆಕೆಯ ಕೈಗಳನ್ನು ಹಿಡಿದು ಮೆಟ್ಟಿಲುಗಳ ಮೂಲಕ ಕರೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ವರದಿಗಳ ಪ್ರಕಾರ, ತಪಾಸಣೆಗೆ ಬರುವ ಮುನ್ನ ವೈದ್ಯರು ಮುಖ್ಯಮಂತ್ರಿಯವರ ಮಗಳಿಗೆ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಅದಕ್ಕೆ ಒಪ್ಪದ ಆಕೆ ನೇರವಾಗಿ ಆಸ್ಪತ್ರೆಗೆ ಬಂದಿದ್ದಾರೆ.
View this post on Instagram
ಈ ಘಟನೆಯ ನಂತರ, ಸಿಎಂ ಝೋರಂತಂಗ ಶನಿವಾರ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ವೊಂದನ್ನು ಮಾಡಿದ್ದು, ಅವರು ಮತ್ತು ಅವರ ಪತ್ನಿ ಸಹಿ ಮಾಡಿರುವ ಸಾರ್ವಜನಿಕ ಕ್ಷಮೆ ಯಾಚನೆಯ ಪತ್ರವನ್ನು ಹಂಚಿಕೊಂಡಿದ್ದಾರೆ. ತಮ್ಮ ಇಡೀ ಕುಟುಂಬವು ವೈದ್ಯರೊಂದಿಗೆ ತನ್ನ ಮಗಳ ವರ್ತನೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ. ನಮಗೆ ಹೇಳಲು ಏನೂ ಇಲ್ಲ ಎಂದಿರುವ ಅವರು ವೈದ್ಯರಲ್ಲಿ ಕ್ಷಮೆ ಯಾಚಿಸಿದ್ದಾರೆ. ಮಗಳ ನಡವಳಿಕೆಯನ್ನು ತಾನು ಯಾವುದೇ ರೀತಿಯಲ್ಲಿ ಸಮರ್ಥಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.