ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಲ್ಲಿ ನಡೀತಾ ಇದ್ಯಾ ಲಾಡ್ಜ್ ಲಾಭಿ..! ದೇವಸ್ಥಾನದ ರಾಜಾಂಗಣದಲ್ಲಿ ಮಲಗಿದ ಭಕ್ತರು

ಈಗಾಗಲೇ ಆಡಳಿತ ಮಂಡಳಿಯಲ್ಲಿ ಅವ್ಯವಹಾರ ಕಂಡು ಬಂದಿದ್ದು, ಬಗೆದಷ್ಟೂ ಅಕ್ರಮ‌ ಹೊರಬರುತ್ತಿದೆ. ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿ ಅನುಧಾನಿತ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಉಪನ್ಯಾಸಕಿಯೊಬ್ಬರ ನಿಯೋಜನೆಯಲ್ಲಿ ಅಕ್ರಮ ಕೇಳಿ ಬಂದಿದೆ.

ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಲ್ಲಿ ನಡೀತಾ ಇದ್ಯಾ ಲಾಡ್ಜ್ ಲಾಭಿ..! ದೇವಸ್ಥಾನದ ರಾಜಾಂಗಣದಲ್ಲಿ ಮಲಗಿದ ಭಕ್ತರು
ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನImage Credit source: hosakannada.com
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: May 12, 2022 | 11:09 AM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರೋ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಲಾಡ್ಜ್ ಲಾಭಿ ನಡೀತಾ ಇದ್ಯಾ ಎನ್ನುವ ಪ್ರಶ್ನೆ ಉಂಟಾಗಿದ್ದು, ವಿಶೇಷ ದಿನಗಳಲ್ಲಿ ಲಾಡ್ಜ್​ ಸಿಗದೇ ಭಕ್ತರು ಪರದಾಡುವಂತ್ತಾಗಿದೆ. ಭಕ್ತರ ಸಂಖ್ಯೆ ಸಾವಿರ ಮೀರಿದ್ರೆ ದೇವಸ್ಥಾನದ ವಸತಿ ಗೃಹ ಸಿಗಲ್ಲ. ಎರಡು ಅತೀ ದೊಡ್ಡ ವಸತಿ ಗೃಹ ನಿರ್ಮಾಣ ಆಗಿದ್ರು ಉದ್ಘಾಟನೆ ಆಗಿಲ್ಲ. ಮಾಸ್ಟರ್ ಪ್ಲಾನ್ ಹೆಸರಿನಲ್ಲಿ ಇದ್ದ ಛತ್ರಗಳನ್ನು ಬೇರೆ ಕಡೆ ವಸತಿ ಗೃಹ ನಿರ್ಮಾಣ ಮಾಡುವುದಾಗಿ ಹೇಳಿ ಆಡಳಿತ ಮಂಡಳಿ ಕೆಡವಿದ್ದರು. ಆಡಳಿತ ಮಂಡಳಿಯಿಂದ ನಿರ್ಲಕ್ಷ್ಯದಿಂದಾಗಿ ದೇವಸ್ಥಾನದ ರಾಜಾಂಗಣದಲ್ಲಿ ಭಕ್ತರು ಮಲಗುವಂತ್ತಾಗಿದ್ದು, ಮಳೆ ಬಂದು ರಾತ್ರಿ ಇಡೀ ನೆನೆಯುವ ಪರಿಸ್ಥಿತಿ ಎದುರಾಗಿದೆ. ಖಾಸಗಿ ಲಾಡ್ಜ್​​ನಲ್ಲಿ ದುಪ್ಪಟ್ಟು ಹಣವಿದ್ದು, ಇದನ್ನು ಪಾವತಿಸಲಾಗದೇ ಭಕ್ತರು ಅತಂತ್ರರಾಗಿದ್ದಾರೆ. ಖಾಸಗಿ ಲಾಡ್ಜ್​ನವರ ಲಾಭಿಗೆ ಆಡಳಿತ ಮಂಡಳಿ ಮಣಿದಿದೆ. ಅದರಿಂದ ವಸತಿಗೃಹ ಅಭಾವ ಸೃಷ್ಟಿ ಅಂತಾ ಸ್ಥಳೀಯರು ಟಿವಿ9 ಗೆ ಆರೋಪಿಸಿದ್ದಾರೆ.

ಈಗಾಗಲೇ ಆಡಳಿತ ಮಂಡಳಿಯಲ್ಲಿ ಅವ್ಯವಹಾರ ಕಂಡು ಬಂದಿದ್ದು, ಬಗೆದಷ್ಟೂ ಅಕ್ರಮ‌ ಹೊರಬರುತ್ತಿದೆ. ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿ ಅನುಧಾನಿತ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಉಪನ್ಯಾಸಕಿಯೊಬ್ಬರ ನಿಯೋಜನೆಯಲ್ಲಿ ಅಕ್ರಮ ಕೇಳಿ ಬಂದಿದೆ. ಕರ್ನಾಟಕದ ನಂಬರ್ 1 ದೇವಸ್ಥಾನ, ಪ್ರಸಿದ್ಧ ನಾಗಕ್ಷೇತ್ರ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ಇಲ್ಲಿನ ಆಡಳಿತ ಮಂಡಳಿಯ ಅಕ್ರಮಗಳು ಒಂದಾದ ನಂತರ ಒಂದು ಹೊರ ಬರುತ್ತಲೇ ಇದೆ. ಸದ್ಯ ಇಲ್ಲಿನ ಆಡಳಿತ ಮಂಡಳಿ ನಡೆಸಲ್ಪಡುವ ಕಾಲೇಜಿನಲ್ಲಿ ಅಕ್ರಮ ನೇಮಕಾತಿ ಮತ್ತು ತಾರತಮ್ಯ ವೇತನ ಹಗರಣ ಬಯಲಾಗಿದೆ.

ಶ್ರೀ ಕ್ಷೇತ್ರ ಕುಕ್ಕೆ ಕಾಲೇಜಿನಲ್ಲಿ ಅಕ್ರಮ ಮತ್ತು ತಾರತಮ್ಯ ಆರೋಪ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ಪ್ರಸಿದ್ಧ ಮತ್ತು ಪವರ್ ಫುಲ್ ನಾಗಕ್ಷೇತ್ರ. ಅಲ್ಲದೇ ಆದಾಯದಲ್ಲಿ ಮುಂಚೂಣಿಯಲ್ಲಿರೋ ರಾಜ್ಯದ ದೇವಸ್ಥಾನ. ಇಲ್ಲಿನ ಆಡಳಿತ ಮಂಡಳಿಯಿಂದ ಅಧಿಕಾರ ದುರುಪಯೋಗ ಮತ್ತು ಅಕ್ರಮಗಳ ಆರೋಪ ಇತ್ತೀಚೆಗೆ ಹೆಚ್ಚಾಗಿ ಕೇಳಿ ಬರುತ್ತಿದೆ. ಹೌದು ಆಡಳಿತ ಮಂಡಳಿಯು ದೇವಸ್ಥಾನ ಆದಾಯದ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುತ್ತಿದೆ ಅನ್ನೊ ಆರೋಪಗಳು ಸಾಕಷ್ಟು ಕೇಳಿ ಬರುತ್ತಿದೆ. ಈ ಅಕ್ರಮಗಳನ್ನು ಪ್ರಶ್ನಿಸಿದ ಕಾರ್ಯನಿರ್ವಾಹಣಾಧಿಕಾರಿ ಡಾ.ನಿಂಗಯ್ಯ ಅವರ ವರ್ಗಾವಣೆಗೂ ಮಾಡಿಸುವ ಪ್ರಯತ್ನಗಳು ನಡೆದಿದ್ದವು. ಯಾವಾಗ ಈಓ ನಿಂಗಯ್ಯ ವರ್ಗಾವಣೆಗೆ ಕೈ ಹಾಕಿದ್ರೋ ಅವಾಗಿಂದ ಇವರ ಒಂದೇಂದ ಹಗರಣಗಳನ್ನು ಹೊರಬರುತ್ತಿದೆ. ಹೌದು ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಆಡಳಿತ ಮಂಡಳಿಯಿಂದ ನಡೆಸಲ್ಪಡುವ ಕಾಲೇಜು ಕುಕ್ಕೆಶ್ರೀ ಸುಬ್ರಹ್ಮಣ್ಯ ಮಹಾವಿದ್ಯಾಲಯ. ಈ ಕಾಲೇಜಿನಲ್ಲಿ ಹದಿನೈದಕ್ಕೂ ಹೆಚ್ಚು ಜನ ಉಪನ್ಯಾಸಕ ಮತ್ತು ಬೋದಕೇತರ ಸಿಬ್ಬಂಧಿ ಇದ್ದಾರೆ. ಇದರಲ್ಲಿ ಅತಿಥಿ ಉಪನ್ಯಾಸಕರಿಗೆ ಕುಕ್ಕೆ ಆಡಳಿತ ಮಂಡಳಿ ಸಂಬಂಳವನ್ನು ನೀಡುತ್ತದೆ. ಆದ್ರೆ 2021 ರ ಆಗಸ್ಟ್ ನಲ್ಲಿ ಡಾ.ನೀತು ಸೂರಜ್ ಎಂಬ ಉಪನ್ಯಾಸಕಿಯನ್ನು ನೇಮಿಸಿಕೊಂಡಿದ್ದಾರೆ. ನಿಯಾಮಾವಳಿಗಳ ಪ್ರಕಾರ ನೇಮಕ ಮಾಡುವಾಗ ಕಾರ್ಯನಿರ್ವಹಣಾಧಿಕಾರಿಯ ಒಪ್ಪಿಗೆ ಮತ್ತು ಸಹಿ ಬೇಕು. ಆದ್ರೆ ಅದನ್ನು ಮಾಡದೇ ಸ್ವತಹ ತಾವೇ ನೇಮಕ ಮಾಡಿಕೊಂಡಿದ್ದಾರೆ.

ಆಡಳಿತ ಮಂಡಳಿ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಸ್ಥಳೀಯರು ಇನ್ನು ಈ ಬಗ್ಗೆ ಧಾರ್ಮಕ ದತ್ತಿ ಇಲಾಖೆಗೂ ಕೂಡ ದೂರು ನೀಡಲಾಗಿದೆ. ಮುಜರಾಯಿ ಸಚಿವ ಶಶಿಕಲಾ ಜೊಲ್ಲೆ ಗಮನಕ್ಕೂ ಕೂಡ ತರಲಾಗಿದೆ. ಆದ್ರೆ ಯಾವುದೇ ಪ್ರಯೋಜನಕ್ಕೆ ಬಂದಿಲ್ಲ. ಇಲ್ಲಿ ನ್ಯಾಯ ಸಿಗದೇ ಹೋದ್ರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಕುಕ್ಕೆ ಸುಬ್ರಹ್ಮಣ್ಯ ಭಕ್ತರ ಹಿತರಕ್ಷಣಾ ಸಮಿತಿ ಮುಂದಾಗಿದೆ. ಅದೇನೆ ಇರಲಿ ದೇವರ ಹಣದಲ್ಲೂ ಅಕ್ರಮ ಮಾಡುವವರಿಗೆ ಇನ್ನಾದ್ರು ಮನವರಿಕೆಯಾಗಬೇಕಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್