AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೀ 150 ರೂಪಾಯಿನಲ್ಲಿ ಬಸ್ ಪೂಜೆ ಮಾಡಕ್ಕಾಗುತ್ತಾ? ಆಯುಧ ಪೂಜೆಗೆ ಕೆಎಸ್​​ಆರ್​ ಟಿಸಿ ಕಂಜೂಸ್

ದಸರಾ ಸಂಭ್ರಮ ಮನೆ ಮಾಡಿದ್ದು, ನಾಡಿದ್ದು ಅಂದರೆ ಅಕ್ಟೋಬರ್ 1ರಂದು ಆಯುಧ ಪೂಜೆ. ಅಂದು ಎಲ್ಲರೂ ತಮ್ಮ ವಾಹನಗಳಿಗೆ ಆಯುಧ ಪೂಜೆಯಂದು ಪೂಜೆ ಸಲ್ಲಿಸುತ್ತಾರೆ. ಸಾರಿಗೆ ಇಲಾಖೆಯು ಕೆಎಸ್‌ಆರ್‌ಟಿಸಿ ಬಸ್ ಗಳ ಪೂಜೆಗೆಂದು ಕೇವಲ 150 ರೂಪಾಯಿ ಹಣವನ್ನು ನೀಡಿದೆ. ಬಸ್ ಪೂಜೆಗೆ ಹಣ ನೀಡಲಾಗದಷ್ಟು ಮಟ್ಟಿಗೆ ಸಾರಿಗೆ ಇಲಾಖೆ ಬಡವಾಗಿದೆಯೇ ಎಂದು ಪ್ರಶ್ನಿಸುತ್ತಿದ್ದಾರೆ.

ಬರೀ 150 ರೂಪಾಯಿನಲ್ಲಿ ಬಸ್ ಪೂಜೆ ಮಾಡಕ್ಕಾಗುತ್ತಾ? ಆಯುಧ ಪೂಜೆಗೆ ಕೆಎಸ್​​ಆರ್​ ಟಿಸಿ ಕಂಜೂಸ್
ಕೆಸ್​ಆರ್​​ಟಿಸಿ ಬಸ್ (ಪ್ರಾತಿನಿಧಿಕ ಚಿತ್ರ)
ಸಂಜಯ್ಯಾ ಚಿಕ್ಕಮಠ
| Updated By: ರಮೇಶ್ ಬಿ. ಜವಳಗೇರಾ|

Updated on: Sep 29, 2025 | 8:06 PM

Share

ಹುಬ್ಬಳ್ಳಿ, ಸೆಪ್ಟೆಂಬರ್ 29:  ರಾಜ್ಯದಲ್ಲಿ ಸಾರಿಗೆ ನಿಗಮಗಳು (KSRTC) ಬೇಡವಾದ ಕೆಲಸಗಳಿಗೆ ಕೋಟಿ ಕೋಟಿ ಹಣ ಖರ್ಚು ಮಾಡುತ್ತವೆ. ಆದ್ರೆ ಪ್ರತಿವರ್ಷ ಆಯುಧ ಪೂಜೆಗೆ ಹಣ ನೀಡಲು ಮಾತ್ರ ಚೌಕಾಸಿ ಮಾಡುತ್ತವೆ. ಈ ವರ್ಷ ಆಯುಧ ಪೂಜೆಗೆ ಪ್ರತಿ ಬಸ್ಗೆ ಕೇವಲ 150 ರೂಪಾಯಿ ನಿಗದಿ ಮಾಡಿವೆ. ಸಿಬ್ಬಂದಿ ದುಬಾರಿ ದುನಿಯಾದಲ್ಲಿ ಇದು ಯಾವುದಕ್ಕೂ ಸಾಲುವುದಿಲ್ಲ ಎನ್ನುತ್ತಿದ್ದಾರೆ. ಸಾರಿಗೆ ನಿಗಮಗಳು ಪ್ರತಿವರ್ಷ ನಡೆಯುವ ಆಯುಧ ಪೂಜೆಗೆ ಮಾತ್ರ ಕೇವಲ 150 ರೂ. ನಿಗದಿ ಮಾಡಿರುವುದು ಸಿಬ್ಬಂದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ದುಬಾರಿ ದುನಿಯಾದಲ್ಲಿ ಹೂ, ಹಣ್ಣು, ತೆಂಗಿನಕಾಯಿ ಬೆಲೆ ಗಗನಕ್ಕೇರಿರುವಾಗ 150 ರೂ. ಯಾವುದಕ್ಕೂ ಸಾಲದಂತಾಗಿದೆ. ಪೂಜೆಯನ್ನು ಅದ್ದೂರಿಯಾಗಿ ನಡೆಸಲು ಚಾಲಕರು, ನಿರ್ವಾಹಕರು ತಮ್ಮ ಜೇಬಿನಿಂದಲೇ ಹಣ ಹಾಕುತ್ತಿದ್ದಾರೆ. ಕನಿಷ್ಠ 500 ರೂ. ನೀಡಬೇಕು ಎಂಬುದು ಸಿಬ್ಬಂದಿಗಳ ಒತ್ತಾಯ. ಆದರೂ ನಿಗಮಗಳಿಂದ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಹೀಗಾಗಿ ಪ್ರತಿ ವರ್ಷವೂ ಸಿಬ್ಬಂದಿಯೇ ಹೆಚ್ಚುವರಿ ವೆಚ್ಚ ಹೊತ್ತು ಪೂಜೆಯನ್ನು ಮಾಡುತ್ತಿದ್ದಾರೆ.

ಸಿಬ್ಬಂದಿ ಅಸಮಾಧಾನ

ಆಯುಧ ಪೂಜೆಗೆ ಇನ್ನೆರಡು ದಿನ ಮಾತ್ರ ಬಾಕಿಯಿದೆ. ನಾಡಿನೆಲ್ಲಡೆ ಈಗಾಗಲೇ ದಸರಾ ಹಬ್ಬದ ಸಂಭ್ರಮ ಜೋರಾಗಿದ್ದು, ಆಯುಧ ಪೂಜೆಗೆ ಸಿದ್ದತೆಗಳು ಆರಂಭವಾಗಿವೆ. ರಾಜ್ಯದ ಎಲ್ಲಾ ಸರ್ಕಾರಿ ಬಸ್​ಗಳಿಗೂ ಅಂದು ಪೂಜೆ ನಡೆಯುತ್ತದೆ. ಡಿಪೋದಲ್ಲಿರುವ ಬಸ್​ಗಳಿಗೆ  ಡಿಪೋ ಸಿಬ್ಬಂದಿ ಪೂಜೆ ಸಲ್ಲಿಸಿದರೆ, ಸಂಚಾರದಲ್ಲಿರುವ ಬಸ್​ಗಳಿಗೆ ಚಾಲಕರು ಮತ್ತು ನಿರ್ವಾಹಕರು ಪೂಜೆ ಸಲ್ಲಿಸುತ್ತಾರೆ. ಇನ್ನು ಪ್ರತಿ ಬಸ್​ನ ಚಾಲಕರು ಮತ್ತು ನಿರ್ವಾಹಾಕರು,ತಾವು ಕೆಲಸ ಮಾಡುತ್ತಿರುವ ಬಸ್​ಗಳಿಗೆ ಅಂದು ಅದ್ಧೂರಿ ಪೂಜೆ ಮಾಡುತ್ತಾರೆ. ತಮ್ಮ ಮನೆಯ ವಾಹನಗಳಂತೆ ಅವುಗಳಿಗೆ ಅಲಂಕಾರ ಮಾಡಿ, ಪೂಜೆ ಸಲ್ಲಿಸುತ್ತಾರೆ.

ಇದನ್ನೂ ಓದಿ: ಮೈಸೂರು ದಸರಾ ನೋಡಲು ಹೊರಟವರಿಗೆ ದರ ಏರಿಕೆಯ ಶಾಕ್

ಇನ್ನು ಪ್ರತಿಯೊಂದು ಸರ್ಕಾರಿ ಬಸ್​ಗೂ ಪೂಜೆಗೆ ಪ್ರತಿವರ್ಷ ಹಣ ನೀಡಲಾಗುತ್ತದೆ. ಈ ವರ್ಷ ಪ್ರತಿ ಬಸ್  ಪೂಜೆಗಾಗಿ  ಕೇವಲ 150 ರೂಪಾಯಿ ನೀಡಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ಉಳಿದೆಲ್ಲಾ ಸಾರಿಗೆ ಸಂಸ್ಥೆಯಲ್ಲಿ ಪ್ರತಿ ಬಸ್ ಪೂಜೆಗೆ 150 ರೂಪಾಯಿ ನಿಗದಿ ಮಾಡಲಾಗಿದೆ. ಇನ್ನು ಪ್ರಾದೇಶಿಕ ಬಸ್ ಡಿಪೋ ಒಂದಕ್ಕೆ ನಾಲ್ಕು ಸಾವಿರ ನಿಗದಿ ಮಾಡಿದ್ದರೆ, ವಿಭಾಗೀಯ ಡಿಪೋಕ್ಕೆ ಎರಡು ಸಾವಿರ ಹಣವನ್ನು ಪೂಜೆಗಾಗಿ ನಿಗದಿ ಮಾಡಲಾಗಿದೆ. ಆದರೆ ಸಾರಿಗೆ ನಿಗಮಗಳು ನೀಡುತ್ತಿರುವ ಪೂಜೆ ಹಣ ಯಾವುದಕ್ಕೂ  ಸಾಲದಂತಾಗಿದೆ.

ಹೆಚ್ಚಿನ ಹಣ ನೀಡಬೇಕಾಗಿ ಸಿಬ್ಬಂದಿ ಬೆಡಿಕೆ

ಹಬ್ಬದ ಸಮಯದಲ್ಲಿ ಹೂ, ಹಣ್ಣಿನ ಬೆಲೆ ಗಗನಕ್ಕೆ ಮುಟ್ಟಿರುತ್ತದೆ. ಒಂದು ತೆಂಗಿನಕಾಯಿ ಬೆಲೆ  ಐವತ್ತರಿಂದ ಆರವತ್ತು ರೂಪಾಯಿಯಿದೆ. ಒಂದು ಮಾರು ಸೇವಂತಿ ಹೂವಿನ ಬೆಲೆ ಕೂಡಾ ಎಂಬತ್ತರಿಂದ ನೂರು ರೂಪಾಯಿ ದಾಟಿದೆ. ಇಂತಹ ಸಮಯದಲ್ಲಿ ನಿಗಮಗಳು  ಪೂಜೆಗೆ ಹಣ ನೀಡಲು ಚೌಕಾಸಿ ಮಾಡುತ್ತಿರುವುದು ಚಾಲಕರು ಮತ್ತು ನಿರ್ವಾಹಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಕೇವಲ ಐವತ್ತು ರೂಪಾಯಿ ನೀಡಲಾಗುತ್ತಿತ್ತು. ಇದಕ್ಕೆ ತೀರ್ವ ಆಕ್ರೋಶ ವ್ಯಕ್ತವಾಗಿದ್ದರಿಂದ ಕಳೆದ ವರ್ಷದಿಂದ ನೂರಾ ಐವತ್ತು ರೂಪಾಯಿ ನೀಡಲಾಗುತ್ತಿದೆ. ಆದರೆ ಇದು ಕೂಡಾ ಸಾಲದು. ಕನಿಷ್ಟ 500 ರೂ.ಗಳಾದರೂ ನೀಡಬೇಕು ಎನ್ನುವುದು ಚಾಲಕರು ಮತ್ತು ನಿರ್ವಾಹಕರ ಬೇಡಿಕೆಯಾಗಿದೆ.

ಇನ್ನು ಬಹುತೇಕ ಚಾಲಕರು ಮತ್ತು ನಿರ್ವಾಹಕರು ನಿಗಮಗಳು ನೀಡುವ  ಹಣ ಸಾಲದೇ ಇರುವುದರಿಂದ, ತಾವೇ ಹೆಚ್ಚಿನ ಹಣ ಹಾಕಿ ಪೂಜೆ ಮಾಡುತ್ತಾ ಬಂದಿದ್ದಾರೆ. ಈ ವರ್ಷ ಕೂಡಾ ಹಾಗೇ ಮಾಡುತ್ತೇವೆ ಅಂತಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೇ ನೀಡಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಂ ಡಿ ಪ್ರಿಯಾಂಗಾ ಅವರು, ಸದ್ಯ ಹಣ ಹೆಚ್ಚು ಮಾಡುವ ಬಗ್ಗೆ ನಮಗೆ ಯಾವುದೇ ಬೇಡಿಕೆ ಬಂದಿಲ್ಲಾ. ಹಾಗೆ ಬಂದ್ರೆ ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ.

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ