ದತ್ತೂರ ಹಣ್ಣು ತಿಂದು ಆಸ್ಪತ್ರೆ ಸೇರಿದ ಮಹಿಳೆ: ಆನ್‌ಲೈನ್‌ನಲ್ಲಿ ದತ್ತೂರ ಮಾರಾಟ ಬ್ಯಾನ್

E-Commerce ನಲ್ಲಿ ಉಚಿತವಾಗಿ ಬಂದ ದತ್ತೂರಿ ಹಣ್ಣು ಸೇವಿಸಿ ಮಹಿಳೆಯೋರ್ವರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಆನ್ ಲೈ‌ನ್‌ನಲ್ಲಿ ವಿಷದ ಬೀಜ ಮಾರಾಟ ಮಾಡುವ ಆ್ಯಪ್ ಗಳಿಗೆ ಆಹಾರ ಸುರಕ್ಷತಾ ಗುಣಮಟ್ಟದ ಇಲಾಖೆ ಶಾಕ್ ನೀಡಿದೆ. ದತ್ತೂರಿ ಹಣ್ಣನ್ನ ಮಾರಾಟ ಮಾಡದಂತೆ ಅಧಿಕಾರಿಗಳು, ಸೂಚನೆ ನೀಡಿದ್ದಾರೆ.. ಹಾಗಾದ್ರೆ ಇ ಕಾಮರ್ಸ್‌ಗೆ ಶಾಕ್ ಕೊಟ್ಟಿದ್ಯಾಕೆ? ಅಂತೀರಾ ಈ ಸ್ಟೋರಿ ನೋಡಿ.

ದತ್ತೂರ ಹಣ್ಣು ತಿಂದು ಆಸ್ಪತ್ರೆ ಸೇರಿದ ಮಹಿಳೆ: ಆನ್‌ಲೈನ್‌ನಲ್ಲಿ ದತ್ತೂರ ಮಾರಾಟ ಬ್ಯಾನ್
Datura Seeds And fruit
Edited By:

Updated on: Aug 25, 2026 | 9:14 PM

ಬೆಂಗಳೂರು, (ಆಗಸ್ಟ್​ 25): ಆನ್‌ಲೈನ್ ವೇದಿಕೆಗಳು ಹಾಗೂ FSSAI ಪರವಾನಗಿ ಹೊಂದಿರುವ ಮಾರಾಟಗಾರರಿಗೆ ಎಚ್ಚರಿಕೆಯನ್ನ ನೀಡಿದೆ.‌ಯಾಕೆಂದ್ರೆ, ಆನ್ ಲೈನ್ ನಲ್ಲಿ ವಿಷದ ಅಂಶ ಹೊಂದಿರೋ ದತ್ತೂರ ಸಸ್ಯದ ಹಣ್ಣುಗಳು  ಅಥವಾ ಬೀಜಗಳನ್ನು (Datura fruit And Seeds) ಕೆಲವರು ಆಹಾರ ಉತ್ಪನ್ನಗಳೆಂದು ತಪ್ಪಾಗಿ ಸೇವನೆಯಿಂದ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರಿದೆ. ಈ ಹಿನ್ನೆಲೆ ಆನ್‌ಲೈನ್ ವೇದಿಕೆಗಳಲ್ಲಿ ದತ್ತೂರ ಬೀಜಗಳ ಮಾರಾಟ ತಡೆಯಲು ಕ್ರಮಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ. ಮುಂದಾಗಿದೆ. ಹೌದು.. ಆಗಸ್ಟ್ 11 ರಂದು ಬೆಂಗಳೂರಿನ ಜೆಸಿ ನಗರದ ನಿವಾಸಿ ವಿನಯಾ ರೆಡ್ಡಿ ಎಂಬುವರ ಮಗಳು, ಇನ್ಸ್ಟಾ ಮಾರ್ಟ್‌ನಲ್ಲಿ ಕೆಲ ಅಹಾರವನ್ನ ತರಿಸಿದ್ರು. ಈ ವೇಳೆ ಕಾಂಪ್ಲಿಮೆಂಟರಿ ಎಂಬಂತೆ ಈ ವಿಷದ ಅಂಶ ಹೊಂದಿರೋ, ದತ್ತೂರಿ ಹಣ್ಣನ್ನ ನೀಡಿದ್ದಾರೆ. ಇದನ್ನ ಸೇವಿಸಿದ ವಿನಯಾರವರ ಆರೋಗ್ಯದಲ್ಲಿ ಏರುಪೇರು ಆಗಿದೆ. ಹೀಗಾಗಿ ಆರೋಗ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.

ದತ್ತೂರ ಬೀಜ ಮಾರಾಟ ಮಾಡದಂತೆ ಆದೇಶ

ಮಾರಾಟಗಾರರು ದತ್ತೂರ ಬೀಜ/ಬೀಜಕಾಯಿಗಳನ್ನು ಆಹಾರ ಉತ್ಪನ್ನವಾಗಿ ಮಾರಾಟ ಮಾಡದಂತೆ ಸೂಚನೆ ನೀಡಿದೆ. Amazon, Swiggy, BigBasket‌ಗೆ ಬಿಗ್ ಶಾಕ್ ನೀಡಿದೆ. Amazon, Swiggy, BigBasket‌ ಹಾಗೂ instamart ಆಹಾರ ಪರವಾನಗಿ ಅಮಾನತಿಗೆ ಆದೇಶಿಸಲಾಗಿದೆ. ದತ್ತೂರ್ ಮಾರಾಟಕ್ಕೆ ಸರ್ಕಾರದ ಕಠಿಣ ಕ್ರಮಕೈಗೊಂಡಿದ್ದು, ಧತ್ತೂರಾ ಹಣ್ಣು, ಬೀಜಗಳು ವಿಷಕಾರಿ ಎಂದು ಆಹಾರ ಸುರಕ್ಷತಾ ಇಲಾಖೆ ಸ್ಪಷ್ಟನೆ ಕೇಳಿದೆ. ಆಹಾರ ಅಥವಾ ಮಾನವ ಸೇವನೆಗಾಗಿ ಧತ್ತೂರಾ ಮಾರಾಟ, ವಿತರಣೆ, ಪ್ರಚಾರ ಕಾನೂನುಬಾಹಿರ. ಆನ್‌ಲೈನ್‌ನಲ್ಲಿ ಧತ್ತೂರಾ ಮಾರಾಟ ಮಾಡುತ್ತಿದ್ದ ಲಿಸ್ಟಿಂಗ್/ಜಾಹೀರಾತುಗಳನ್ನು ತಕ್ಷಣ ತೆಗೆದುಹಾಕಬೇಕು. ಧತ್ತೂರಾ ಉತ್ಪನ್ನಗಳನ್ನು ಆಹಾರ/ಮಾನವ ಸೇವನೆಗಾಗಿ ಮಾರಾಟಕ್ಕೆ ಪ್ರದರ್ಶಿಸುವಂತಿಲ್ಲ.

ಇದನ್ನೂ ಓದಿ: ಮನೆಗೆಲಸ ಮಾಡು, ವೃದ್ಧ ಪೋಷಕರನ್ನು ನೋಡಿಕೋ ಎಂದು ಪತ್ನಿಗೆ ಆರ್ಡರ್ ಮಾಡುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಮುಂದಿನ ಆದೇಶದವರೆಗೆ Food Licence Suspension ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಪಾಲನೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. ಆದೇಶ ಪಾಲನೆಯ ಬಳಿಕವಷ್ಟೇ ಅಮಾನತು ತೆರವುಗೊಳಿಸುವ ಬಗ್ಗೆ ಪ್ರತ್ಯೇಕ ವಿಚಾರಣೆಮಾಡಲು ಮುಂದಾಗಿದೆ. Amazon ಯಾವುದೇ ಉತ್ತರ ಸಲ್ಲಿಸಿಲ್ಲ. ಇದರ ಜೊತೆಗೆ Swiggy Instamart ಕ್ರಮ ಕೈಗೊಂಡಿರುವ ಬಗ್ಗೆ ದಾಖಲೆ ನೀಡದೆ, ದಾಖಲೆ ಸಲ್ಲಿಸಲು ಸಮಯ ಕೇಳಿದೆ. BigBasket ಧತ್ತೂರಾ ಹಣ್ಣು ಮಾರಾಟವಾಗುತ್ತಿದ್ದುದನ್ನು ಒಪ್ಪಿಕೊಂಡು, ಮಾರಾಟ ತಡೆದಿರುವುದಾಗಿ ತಿಳಿಸಿದೆ. ಇನ್ನು BigBasket ಪರವಾಗಿ “NOT FOR HUMAN CONSUMPTION” ಎಂದು ಲೇಬಲಿಂಗ್ ಸರಿಪಡಿಸುವುದಾಗಿ ಹೇಳಿದೆ. ಆದರೆ ಈ ಸಮಜಾಯಿಷಿ ಸಮಂಜಸವಾಗಿಲ್ಲ ಎಂದು ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಅನುಭವ ಬಿಚ್ಚಿಟ್ಟ ವಿನಯಾ

ಈ ಬಗ್ಗೆ ವಿನಯಾ ರೆಡ್ಡಿ ಟಿರ್ವಿ ಜೊತೆ ಮಾತನಾಡಿದ್ದು, ನನ್ನ ಮಗಳು ಚೈತ್ರಾ ಸ್ವೀಗಿ ಆ್ಯಪ್ ನಲ್ಲಿ ಪುಡ್ ಆರ್ಡರ್ ಮಾಡಿದ್ರು.ಈ ವೇಳೆ ಆನ್‌ಲೈನ್ ಆರ್ಡರ್ ಜತೆಗೆ ಫ್ರೀಯಾಗಿ ದತ್ತೂರಿ ಹಣ್ಣು ಸಿಕ್ತು, ಆಹಾರ ಪದಾರ್ಥದ ಜೊತೆ ದತ್ತೂರಿ ಕಾಯಿ ಪ್ಯಾಕೆಟ್ ಉಚಿತ ನೀಡಿದ್ರು, ಪ್ಯಾಕೆಟ್ ಮೇಲೆ ದತ್ತೂರಿ ಕಾಯಿ ಎಂದು ನಮೂದಿಸಲಾಗಿತ್ತು. ಪ್ಯಾಕೆಟ್‌ನಲ್ಲಿ ಹಸಿರು ಬಣ್ಣದ ಚುಕ್ಕಿ ಗುರುತು ಇದ್ದರೂ ವಿಷಪೂರಿತ ಎಂಬ ಎಚ್ಚರಿಕೆ ಇರಲಿಲ್ಲ. ಸೇವಿಸಬಾರದು, ವಿಷಕಾರಿ ಎಂಬ ಯಾವುದೇ ಎಚ್ಚರಿಕೆಯ ಸೂಚನೆಯೂ ಇರಲಿಲ್ಲ. ಸಾಮಾನ್ಯವಾಗಿ ಸೇವಿಸಬಹುದಾದ ಹಣ್ಣು ಎಂದು ಭಾವಿಸಿ ಸೇವನೆ ಮಾಡಿದೆ. ಜಸ್ಟ್ ಎರಡು ಸೀಡ್ಸ್ ನಷ್ಟು ಹಣ್ಣು ತಿಂದೆ, ಕಹಿ ಅನಿಸಿತ್ತು ಸಡನ್ ಆರೋಗ್ಯದ ಏರುಪೇರು ಕಂಡು ಬಂತು. ನಂತರ ಈ ಹಣ್ಣು ಏನು ಅಂತ ಗೂಗಲ್ ಮಾಡಿ ನೋಡಿದೆ ಆಗ ಗೊತ್ತಾಯ್ತು ಇದು ಟಾಕ್ಸಿಕ್ ಎಂದು, ಸುಸ್ತು, ಎದೆ ನೋವು, ಕೈ ನೋವು ಕಾಣಿಸಿಕೊಂಡಿತ್ತು. ದತ್ತೂರಿ ಕಾಯಿ ಪ್ಯಾಕೆಟ್‌ನಲ್ಲಿ ಸುರಕ್ಷತಾ ಎಚ್ಚರಿಕೆ ಇಲ್ಲ.ವೈದ್ಯರು ಪೂರ್ತಿ ಹಣ್ಣು ತಿಂದ್ರೆ ತುಂಬಾ ಅಪಾಯ ಆಗಿರುವುದು ಅಂತ ಹೇಳಿದ್ರು ಎಂದು ವಿವರಿಸಿದ್ದಾರೆ.

ವೇರ್‌ಹೌಸ್‌ಗಳ ಮೇಲೆ ದಾಳಿ

ಇನ್ನು Amazon, Swiggy, BigBasket ವೇರ್‌ಹೌಸ್‌ಗಳ ಮೇಲೆ ದಾಳಿ ಎಫ್ ಡಿಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹೊಸಕೋಟೆ ಸೇರಿದ್ದಂತೆ ಕೆಲವಡೆ ತಪಾಸಣೆ ಮಾಡಿದ್ದು ಈ ವೇಳೆ ವಿಷಕಾರಿ ದತ್ತೂರಾ ಪತ್ತೆಯಾಗಿದೆ. ಆನ್‌ಲೈನ್ ಮೂಲಕ ವಿಷಕಾರಿ ದತ್ತೂರಾ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದ್ದು, ಕೇಂದ್ರದ ಅಂಕಿತ ಅಧಿಕಾರಿ ಹಾಗೂ ಕೇಂದ್ರ ಆಹಾರ ಸುರಕ್ಷತಾ ಅಧಿಕಾರಿಗೆ ಆಹಾರ ಸುರಕ್ಷತಾ ಹಾಗೂ ಗುಣಮಟ್ಟದ ಇಲಾಖೆ ಆಯುಕ್ತ ಶ್ರೀನಿವಾಸ್ ಪತ್ರ ಬರೆದಿದ್ದಾರೆ. ಈ ಸಂಬಂಧಿಸಿದ ಸಂಸ್ಥೆಗಳ ಪರವಾನಗಿ ರದ್ದುಪಡಿಸುವಂತೆ FDA ಆದೇಶಿಸಿದ್ದಾರೆ.
E-Commerce ನಲ್ಲಿ ಉಚಿತವಾಗಿ ಬಂದ Datura Fruit ಸೇವಿಸಿ ಆಸ್ಪತ್ರೆ ಸೇರಿದ ಮಹಿಳೆ | #TV9D
ಒಟ್ನಲ್ಲಿ ವಿಷದ ಹಣ್ಣನ್ನ ಆನ್‌ಲೈನ್ ನಲ್ಲಿ ಮಾರಾಟ ಮಾಡ್ತಿದ್ದ ಕಂಪನಿಗಳಿಗೆ ಎಫ್ ಡಿಎ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದು, ಲೈಸನ್ಸ್ ರದ್ದತಿಗೆ ಆದೇಶಿಸಲಾಗಿದೆ. ಜನರು ಕೂಡಾ ಆನ್‌ಲೈನ್‌ನಲ್ಲಿ ಕಾಂಪ್ಲಿಮೆಂಟರಿ ಅಂತ ಕೊಡುವ ಆಹಾರ ಪದಾರ್ಥಗಳನ್ನ ಪರಿಶೀಲಿಸಿ ಸೇವಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us