AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೌರಿಂಗ್ ಕ್ಲಬ್‌ನಲ್ಲಿ ಶುಚಿತ್ವದ ಕೊರತೆ: ಆಹಾರ ಸುರಕ್ಷತೆ ತಪಾಸಣೆ ವೇಳೆ ಜಿರಳೆ ಪತ್ತೆ

ಬೆಂಗಳೂರಿನ ಪ್ರತಿಷ್ಠಿತ ಬೌರಿಂಗ್ ಕ್ಲಬ್‌ನಲ್ಲಿ ಆಹಾರ ಸುರಕ್ಷತೆ ಇಲಾಖೆ ತಪಾಸಣೆ ನಡೆಸಿದ್ದು, ಅಡುಗೆಮನೆಯಲ್ಲಿ ಜಿರಳೆಗಳು, ನೈರ್ಮಲ್ಯದ ಕೊರತೆ, ಸರಿಯಾದ ಲೇಬಲಿಂಗ್ ಇಲ್ಲದಿರುವುದು ಸೇರಿದಂತೆ ಎಂಟು ಪ್ರಮುಖ ಲೋಪಗಳು ಪತ್ತೆಯಾಗಿವೆ. ಸಿಬ್ಬಂದಿಯ ಸ್ವಚ್ಛತೆ ಕೊರತೆ, ಕಲುಷಿತ ಆಹಾರ ಸಂಗ್ರಹಣೆ, ಮತ್ತು ಪ್ಲಾಸ್ಟಿಕ್ ಕಟಿಂಗ್ ಬೋರ್ಡ್‌ಗಳ ಬಳಕೆಯು ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಬೌರಿಂಗ್ ಕ್ಲಬ್‌ನಲ್ಲಿ ಶುಚಿತ್ವದ ಕೊರತೆ: ಆಹಾರ ಸುರಕ್ಷತೆ ತಪಾಸಣೆ ವೇಳೆ ಜಿರಳೆ ಪತ್ತೆ
ಬೌರಿಂಗ್ ಕ್ಲಬ್ ಆಹಾರ ಲೋಪ
Accenture Cdp
| Edited By: |

Updated on: Aug 25, 2026 | 9:49 PM

Share

ಬೆಂಗಳೂರು, ಆ.25: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಬೌರಿಂಗ್ ಕ್ಲಬ್ (Bowring Club) ನಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ನಡೆಸಿದ ತಪಾಸಣೆ ವೇಳೆ ಭಾರಿ ಲೋಪಗಳು ಬೆಳಕಿಗೆ ಬಂದಿವೆ. ಕ್ಲಬ್‌ನ ಅಡುಗೆ ಮನೆಯಲ್ಲಿ (Kitchen) ಜಿರಳೆಗಳು ಪತ್ತೆಯಾಗಿರುವುದಲ್ಲದೆ, ನೈರ್ಮಲ್ಯ ಹಾಗೂ ಲೇಬಲಿಂಗ್ ನಿಯಮಗಳ ಉಲ್ಲಂಘನೆ ಕಂಡುಬಂದಿದೆ.

ಆಹಾರ ನಿರ್ವಹಿಸುವ ಸಿಬ್ಬಂದಿಯ ವೈಯಕ್ತಿಕ ಸ್ವಚ್ಛತೆಯಿಂದ ಹಿಡಿದು ಉತ್ಪನ್ನಗಳ ಸಂಗ್ರಹಣೆಯವರೆಗೆ ಹಲವು ಲೋಪಗಳನ್ನು ಗುರುತಿಸಿರುವ ಅಧಿಕಾರಿಗಳು, ಕಲುಷಿತ ಆಹಾರ ಸರಬರಾಜಾಗುವ ಅಪಾಯದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಪಾಸಣೆ ವೇಳೆ 8 ಲೋಪಗಳು ಬಂದಿದೆ. ಕ್ಲಬ್‌ನ ಕಿಚನ್ ಪ್ರದೇಶದಲ್ಲಿ ಜಿರಳೆಗಳು ಸಂಚರಿಸುತ್ತಿರುವುದು ಕಂಡುಬಂದಿದ್ದು, ತೀವ್ರ ಅಶುಚಿತ್ವ ವ್ಯಕ್ತವಾಗಿದೆ. ಫುಡ್ ಹ್ಯಾಂಡ್ಲರ್‌ಗಳು (ಆಹಾರ ನಿರ್ವಹಣೆ ಮಾಡುವ ಸಿಬ್ಬಂದಿ) ಅಗತ್ಯ ವೈಯಕ್ತಿಕ ಸ್ವಚ್ಛತೆ ಕಾಪಾಡದಿರುವುದು ಪತ್ತೆಯಾಗಿದೆ. ಇದರಿಂದ ಆಹಾರ ಕಲುಷಿತಗೊಳ್ಳುವ ಅಪಾಯವಿದೆ. ಆಹಾರ ತಯಾರಿಕಾ ಜಾಗದಲ್ಲಿ ನಿಯಮಬಾಹಿರವಾಗಿ ಪ್ಲಾಸ್ಟಿಕ್ ಕಟಿಂಗ್ ಬೋರ್ಡ್‌ಗಳನ್ನು ಬಳಸುತ್ತಿರುವುದು ಕಂಡುಬಂದಿದೆ.

ಕ್ಲಬ್‌ನ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ನಿರ್ವಹಣೆಯಾಗದೆ ಬ್ಲಾಕ್ ಆಗಿದ್ದು, ಕೊಳಚೆ ನೀರು ನಿಂತು ದುರ್ವಾಸನೆ ಹಾಗೂ ಕೀಟಗಳ ಕಾಟ ಹೆಚ್ಚಾಗುವ ಸಾಧ್ಯತೆಯಿದೆ. ಸಂಗ್ರಹಿಸಿಟ್ಟಿದ್ದ ‘K-Shakti’ ತೂರ್ ದಾಲ್ ಪ್ಯಾಕೆಟ್‌ಗಳಲ್ಲಿ ಕಡ್ಡಾಯ ವಿವರಗಳಾದ ಪ್ಯಾಕಿಂಗ್ ದಿನಾಂಕ, ಬ್ಯಾಚ್ ನಂಬರ್ ಹಾಗೂ ಗರಿಷ್ಠ ಮಾರಾಟ ಬೆಲೆ ನಮೂದಿಸಿರಲಿಲ್ಲ.

ಇದನ್ನೂ ಓದಿ; ಆಹಾರ ಉದ್ಯಮಗಳಿಗೆ FSSAI ಬಿಗ್ ಅಲರ್ಟ್: ಈ 15 ನಿಯಮ ಹಾಗೂ ಮಾರ್ಗಸೂಚಿಗಳು ಪಾಲಿಸಲೇಬೇಕು

ಇನ್ನು ಆಹಾರ ಪದಾರ್ಥಗಳನ್ನು ಶೀತಲೀಕರಿಸಿ ಸಂಗ್ರಹಿಸುವ ಪ್ರದೇಶವನ್ನು ಶುಚಿಯಾಗಿಡದೆ ನಿರ್ಲಕ್ಷಿಸಲಾಗಿತ್ತು. ಸಸ್ಯಾಹಾರಿ ಹಾಗೂ ಮಾಂಸಾಹಾರಿ ಆಹಾರ ಪದಾರ್ಥಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸದೇ ಒಂದೇ ಕಡೆ ಇಡಲಾಗಿತ್ತು. ಇದರಿಂದ ಕ್ರಾಸ್-ಕಂಟ್ಯಾಮಿನೇಷನ್ ಆಗುವ ಅಪಾಯವಿದೆ. ಸಂಗ್ರಹಿಸಿಟ್ಟಿದ್ದ ‘Tilapia’ ಮೀನಿನ ಮೇಲೆ ಯಾವುದೇ ಲೇಬಲ್ ವಿವರಗಳಿರಲಿಲ್ಲ ಹಾಗೂ ಪಾತ್ರೆ ತೊಳೆಯುವ ಸ್ಥಳದಲ್ಲಿ ಬಿಸಿ ನೀರಿನ ವ್ಯವಸ್ಥೆಯಿರಲಿಲ್ಲ.

ವರದಿ: ವಿನಯ್ ಕುಮಾರ್​​​​ ಮೆಟ್ರೋ 

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
‘ಟಾಕ್ಸಿಕ್’ ಸಿನಿಮಾದ ಸ್ವಾಗತಕ್ಕೆ ಸಿಂಗಾರಗೊಂಡ ಗಾಂಧಿನಗರ; ವಿಡಿಯೋ ನೋಡಿ..
‘ಟಾಕ್ಸಿಕ್’ ಸಿನಿಮಾದ ಸ್ವಾಗತಕ್ಕೆ ಸಿಂಗಾರಗೊಂಡ ಗಾಂಧಿನಗರ; ವಿಡಿಯೋ ನೋಡಿ..
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗೆ ಬೀಗ?
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗೆ ಬೀಗ?
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ