AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ: ಇಬ್ಬರು ಹೆಣ್ಣು ಮಕ್ಕಳನ್ನು ತುಂಗಾ ನದಿಗೆ ಎಸೆದ ತಾಯಿ; ಜೀವದ ಹಂಗು ತೊರೆದು ತಾಯಿ- 11 ತಿಂಗಳ ಮಗುವನ್ನು ರಕ್ಷಿಸಿದ ಯುವಕರು

ಶಿವಮೊಗ್ಗದಲ್ಲಿ ಕುಟುಂಬ ಕಲಹದಿಂದ ಮನನೊಂದ ತಾಯಿಯೊಬ್ಬಳು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ತುಂಗಾ ನದಿಗೆ ಎಸೆದು, 11 ತಿಂಗಳ ಮಗುವಿನೊಂದಿಗೆ ತಾನೂ ಹಾರಿದ್ದಾಳೆ. ಸ್ಥಳೀಯ ಯುವಕರಿಂದ ತಾಯಿ ಮತ್ತು ಗಂಡು ಮಗು ರಕ್ಷಿಸಲ್ಪಟ್ಟಿದ್ದರೆ, ಆರು ಮತ್ತು ನಾಲ್ಕು ವರ್ಷದ ಇಬ್ಬರು ಹೆಣ್ಣುಮಕ್ಕಳು ನದಿಪಾಲಾಗಿದ್ದಾರೆ. ನಾಪತ್ತೆಯಾದ ಮಕ್ಕಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಈ ಮನಕಲಕುವ ಘಟನೆ ಶಿವಮೊಗ್ಗದಲ್ಲಿ ಭಾರಿ ಆಘಾತ ಮೂಡಿಸಿದೆ.

ಶಿವಮೊಗ್ಗ: ಇಬ್ಬರು ಹೆಣ್ಣು ಮಕ್ಕಳನ್ನು ತುಂಗಾ ನದಿಗೆ ಎಸೆದ ತಾಯಿ; ಜೀವದ ಹಂಗು ತೊರೆದು ತಾಯಿ- 11 ತಿಂಗಳ ಮಗುವನ್ನು ರಕ್ಷಿಸಿದ ಯುವಕರು
ಶಿವಮೊಗ್ಗ ದುರಂತ
Basavaraj Yaraganavi
| Edited By: |

Updated on:Aug 25, 2026 | 7:35 PM

Share

ಶಿವಮೊಗ್ಗ, ಆ.25: ಕುಟುಂಬದ ಗಲಾಟೆಯಿಂದ ಮನನೊಂದ ತಾಯಿಯೊಬ್ಬಳು ತನ್ನ ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಭೋರ್ಗರೆದು ಹರಿಯುತ್ತಿರುವ ತುಂಗಾ ನದಿಗೆ ಎಸೆದು, ಬಳಿಕ 11 ತಿಂಗಳ ಮಗುವಿನೊಂದಿಗೆ ತಾನೂ ನದಿಗೆ ಹಾರಿದ ದಾರುಣ ಹಾಗೂ ಮನಕಲಕುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಸ್ಥಳೀಯ ಯುವಕರ ಸಮಯಪ್ರಜ್ಞೆ ಹಾಗೂ ಸಾಹಸದಿಂದ ತಾಯಿ ಮತ್ತು 11 ತಿಂಗಳ ಗಂಡು ಮಗು ಪ್ರಾಣಾಪಾಯದಿಂದ ಪಾರಾಗಿದ್ದರೆ, 6 ಮತ್ತು 4 ವರ್ಷದ ಇಬ್ಬರು ಹೆಣ್ಣು ಮಕ್ಕಳು ನದಿ ಪಾಲಾಗಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಚಿತ್ರದುರ್ಗ ಜಿಲ್ಲೆಯ ಹೊಸೂರು ಗ್ರಾಮದ ಭವಾನಿ ಎಂದು ಗುರುತಿಸಲಾಗಿದೆ. ಪತಿ ದುಗ್ಗಪ್ಪ ಅವರೊಂದಿಗೆ ಮನೆಯಲ್ಲಾದ ಕೌಟುಂಬಿಕ ಜಗಳದಿಂದಾಗಿ ಮನನೊಂದು, ಮಕ್ಕಳೊಂದಿಗೆ ಶಿವಮೊಗ್ಗಕ್ಕೆ ಬಂದು ನದಿಗೆ ಹಾರಿದ್ದಾಳೆ.

ಭವಾನಿ ತನ್ನ 6 ವರ್ಷದ ಮಗಳು ಸಾನ್ವಿಕಾ ಹಾಗೂ 4 ವರ್ಷದ ಮಗಳು ತನ್ವಿಕಾಳನ್ನು ರೈಲ್ವೇ ಸೇತುವೆಯಿಂದ ನದಿಗೆ ಎಸೆದು, ನಂತರ 11 ತಿಂಗಳ ಮಗುವಿನೊಂದಿಗೆ ತಾನೂ ನದಿಗೆ ಹಾರಿದ್ದಾಳೆ.ಕತ್ತಲಲ್ಲಿ ಈ ಘಟನೆಯನ್ನು ಕಂಡ ನವೀನ್, ದಾದಾಪೀರ್ ಸೇರಿದಂತೆ ಸ್ಥಳೀಯ ನಾಲ್ಕೈದು ಯುವಕರು ತಕ್ಷಣವೇ ಜೀವದ ಹಂಗು ತೊರೆದು ನದಿಗೆ ಹಾರಿ, ತಾಯಿ ಭವಾನಿ ಹಾಗೂ 11 ತಿಂಗಳ ಗಂಡು ಮಗುವನ್ನು ಬಚಾವ್ ಮಾಡಿದ್ದಾರೆ.

ಇದನ್ನೂ ಓದಿ: ಗಿಫ್ಟ್‌ಗೆ ಆಸೆ ಬಿದ್ದು ಕಮ್ಮಿ ವಯಸ್ಸಿಗೆ ಮದುವೆಗೆ ಯತ್ನ: 25 ಜೋಡಿಗಳ ಮದುವೆ ತಡೆದ ಅಧಿಕಾರಿಗಳು

ರಕ್ಷಿಸಲ್ಪಟ್ಟ ತಾಯಿ ಮತ್ತು 11 ತಿಂಗಳ ಮಗುವನ್ನು ಶಿವಮೊಗ್ಗ ಜಿಲ್ಲಾಸ್ಪತ್ರೆಯ ಐಸಿಯು (ICU) ವಿಭಾಗಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನೀರುಪಾಲಾಗಿರುವ ಇಬ್ಬರು ಕಂದಮ್ಮಗಳಿಗಾಗಿ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಸೇರಿ ಬೋಟ್‌ಗಳು ಮತ್ತು ತೆಪ್ಪಗಳ ಮೂಲಕ ಸುಮಾರು 15 ರಿಂದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಸಂಬಂಧಿಕರು ಹಾಗೂ ಗ್ರಾಮಸ್ಥರು ದೌಡಾಯಿಸಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಾಯಿ ಭವಾನಿ ಮೌನಕ್ಕೆ ಶರಣಾಗಿರುವುದರಿಂದ ಆತ್ಮಹತ್ಯೆ ಯತ್ನದ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:07 pm, Tue, 25 August 26

Follow Us
ಬಿಗ್​​ಬಾಸ್ ಕೊಟ್ಟ ಶಿಕ್ಷೆಗೆ ಗಳ-ಗಳನೆ ಅತ್ತ ಕಿರಣ್ ಶಾಸ್ತ್ರಿ: ವಿಡಿಯೋ
ಬಿಗ್​​ಬಾಸ್ ಕೊಟ್ಟ ಶಿಕ್ಷೆಗೆ ಗಳ-ಗಳನೆ ಅತ್ತ ಕಿರಣ್ ಶಾಸ್ತ್ರಿ: ವಿಡಿಯೋ
ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಅನಂತ್‌ನಾಗ್‌ ಫಸ್ಟ್ ರಿಯಾಕ್ಷನ್
ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಅನಂತ್‌ನಾಗ್‌ ಫಸ್ಟ್ ರಿಯಾಕ್ಷನ್
ಬಿಕೆ ಹರಿಪ್ರಸಾದ್ ಕೈಗೆ ಬಲ ತುಂಬಿದ ಸುರ್ಜೆವಾಲಾ, ವೇಣುಗೋಪಾಲ್
ಬಿಕೆ ಹರಿಪ್ರಸಾದ್ ಕೈಗೆ ಬಲ ತುಂಬಿದ ಸುರ್ಜೆವಾಲಾ, ವೇಣುಗೋಪಾಲ್
ಯುಪಿಐ ವಹಿವಾಟುಗಳಿಗೆ ಹೊಸ ಶುಲ್ಕ: ಯಾರು ಶುಲ್ಕ ಕಟ್ಟಬೇಕು? ಇಲ್ಲಿದೆ ಉತ್ತರ
ಯುಪಿಐ ವಹಿವಾಟುಗಳಿಗೆ ಹೊಸ ಶುಲ್ಕ: ಯಾರು ಶುಲ್ಕ ಕಟ್ಟಬೇಕು? ಇಲ್ಲಿದೆ ಉತ್ತರ
ಬೀದರ್​ನ ಪ್ರವಾಸಿ ತಾಣಗಳಲ್ಲಿ ಇರುವ ಕುಂದು ಕೊರತೆಗಳು ಒಂದಾ, ಎರಡಾ? ವಿಡಿಯೋ
ಬೀದರ್​ನ ಪ್ರವಾಸಿ ತಾಣಗಳಲ್ಲಿ ಇರುವ ಕುಂದು ಕೊರತೆಗಳು ಒಂದಾ, ಎರಡಾ? ವಿಡಿಯೋ
ಮೈಸೂರು ಹೊಸ ಮನೆ ಹಿಂದಿನ ರಹಸ್ಯ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ
ಮೈಸೂರು ಹೊಸ ಮನೆ ಹಿಂದಿನ ರಹಸ್ಯ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ
ಪಿಎಂ ಕಿಸಾನ್ ಸಮ್ಮಾನ್ ನಿಧಿ: ಇ-ಕೆವೈಸಿ ಮಾಡಿಸೋದೇಗೆ?; ಇಲ್ಲಿದೆ ಮಾಹಿತಿ
ಪಿಎಂ ಕಿಸಾನ್ ಸಮ್ಮಾನ್ ನಿಧಿ: ಇ-ಕೆವೈಸಿ ಮಾಡಿಸೋದೇಗೆ?; ಇಲ್ಲಿದೆ ಮಾಹಿತಿ
ಗಣೇಶ ಹಬ್ಬಕ್ಕೆ ಡಿಪೋ, ಬಸ್ ನಿಲ್ದಾಣದಲ್ಲಿ ಪ್ರಸಾದ ಸಿದ್ದಗೊಳಿಸದಂತೆ ಆದೇಶ
ಗಣೇಶ ಹಬ್ಬಕ್ಕೆ ಡಿಪೋ, ಬಸ್ ನಿಲ್ದಾಣದಲ್ಲಿ ಪ್ರಸಾದ ಸಿದ್ದಗೊಳಿಸದಂತೆ ಆದೇಶ
ತಾವರೆಕೆರೆ ಮೆಟ್ರೋ ಸ್ಟೇಷನ್ ಹೆಸರು ಬದಲಿಸದಂತೆ ಸ್ಥಳೀಯರು ಬಿಗಿಪಟ್ಟು
ತಾವರೆಕೆರೆ ಮೆಟ್ರೋ ಸ್ಟೇಷನ್ ಹೆಸರು ಬದಲಿಸದಂತೆ ಸ್ಥಳೀಯರು ಬಿಗಿಪಟ್ಟು
ಚಿತ್ರದುರ್ಗದಲ್ಲಿ ಪ್ರಯಾಣಿಕರೊಂದಿಗೆ ಸರ್ಕಾರಿ ಬಸ್ ಚಾಲಕನ ಕಿರಿಕ್
ಚಿತ್ರದುರ್ಗದಲ್ಲಿ ಪ್ರಯಾಣಿಕರೊಂದಿಗೆ ಸರ್ಕಾರಿ ಬಸ್ ಚಾಲಕನ ಕಿರಿಕ್