ದಾವಣಗೆರೆ: ಜಿಲ್ಲೆಯ ವಿಶ್ವವಿದ್ಯಾಲಯದಲ್ಲಿ ಏಪ್ರಿಲ್ 8ರಂದು ಎಂಟನೇ ಘಟಿಕೋತ್ಸವ ಆಚರಿಸಿಲಾಯಿತು. ಈ ವಿಶ್ವವಿದ್ಯಾಲಯದಲ್ಲಿ ಚಿನ್ನಗಳಿಸುವ ಪಟ್ಟಿಯಲ್ಲಿ ಮಹಿಳೆಯರ ಪಾಲು ಹೆಚ್ಚಾಗಿದ್ದು, ವಿಶ್ವವಿದ್ಯಾಲಯದ ಉತ್ತಮ ಫಲಿತಾಂಶಕ್ಕೆ ಮತ್ತು ವಿಶ್ವವಿದ್ಯಾಲಯದ ಪ್ರಗತಿಗೆ ಹುಡುಗಿಯರೇ ಕಾರಣರಾಗಿದ್ದಾರೆ. ಇನ್ನು ಸಾಧನೆಗೆ ಯಾವುದೂ ಅಡ್ಡಿಪಡಿಸುವುದಿಲ್ಲ ಎನ್ನುವುದನ್ನು ಈ ವಿಶ್ವವಿದ್ಯಾಲಯದ ಯುವತಿಯೊಬ್ಬರು ನಿರೂಪಿಸಿದ್ದಾರೆ.
ಇಂಗ್ಲೀಷ್ ವಿಭಾಗದ ನಿಸರ್ಗ ಎಂಬ ಯುವತಿ ಮೆದುಳಿನಲ್ಲಿ ರಕ್ತಸ್ರಾವ ಆಗಿ ತೀವ್ರ ಅನಾರೋಗ್ಯಕ್ಕೆ ಈಡಾಗಿದ್ದರೂ ಅದರ ನಡುವೆಯೂ ಓದಿ ಚಿನ್ನದ ಪದಕ ಪಡೆದಿದ್ದಾರೆ. ಆ ಮೂಲಕ ನಿಸರ್ಗ ಇತರರಿಗೆ ಸ್ಪೂರ್ತಿ ಆಗಿದ್ದಾರೆ. ಇನ್ನು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬಾನುವಳ್ಳಿ ಗ್ರಾಮದ ಬಳೆ ಮಾರಾಟ ಮಾಡುವ ವ್ಯಕ್ತಿ ಪುತ್ರ ಹೈದರ್ ಅಲಿ ರಾಜ್ಯಶಾಸ್ತ್ರದಲ್ಲಿ ಚಿನ್ನದ ಪಡೆದು ಗಮನ ಸೆಳೆದಿದ್ದಾರೆ.
ನವದೆಹಲಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ನ್ಯಾಕ್ ಸಮಿತಿಯು ದಾವಣಗೆರೆ ವಿವಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದೆ. ಮೇಲಾಗಿ ವಿವಿಗೆ ಮೂರು ವಿಶೇಷ ಸಂಶೋಧನಾ ಯೋಜನೆಗಳನ್ನ ಕೊಟ್ಟಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಪಾಠ -ಪ್ರವಚನದಲ್ಲಿ ಒಂದಿಷ್ಟು ಸಹ ತೊಂದರೆ ಆಗದಂತೆ ಇಲ್ಲಿನ ಸಿಬ್ಬಂದಿ ಕಾರ್ಯ ನಿರ್ವಹಿಸಿದೆ. ಇದೇ ಕಾರಣಕ್ಕೆ ಸ್ನಾತಕೋತ್ತರ ವಿಭಾಗದಲ್ಲಿ ಈ ವರ್ಷ 2,014 ವಿದ್ಯಾರ್ಥಿಗಳು ಉತ್ತೀರ್ಣ ಆಗಿದ್ದಾರೆ. ಇವರಲ್ಲಿ 1,189 ವಿದ್ಯಾರ್ಥಿನಿಯರು ಹಾಗೂ 824 ವಿದ್ಯಾರ್ಥಿಗಳು ಇದ್ದಾರೆ.
ಸ್ನಾತಕೋತ್ತರ ವಿಭಾಗ ಒಟ್ಟಾರೆ ಶೇಕಡಾ 95.31 ರಷ್ಟು ಫಲಿತಾಂಶ ಪಡೆದಿದೆ. ಇನ್ನು ಈ ಘಟಿಕೋತ್ಸವದಲ್ಲಿ ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರ ಹಾಗೂ ಹಿರಿಯ ವೈದ್ಯ ಡಾ. ರಮೇಶ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಏಳು ಜನ ಪಿಎಚ್ಡಿ ವಿದ್ಯಾರ್ಥಿಗಳಲ್ಲಿ ಮೂರು ಜನ ಮಹಿಳಾ ಅಭ್ಯರ್ಥಿಗಳು. ಸ್ನಾತಕ ಪದವಿ ಪಡೆಯುವ 11,193 ವಿದ್ಯಾರ್ಥಿಗಳಲ್ಲಿ 6873 ವಿದ್ಯಾರ್ಥಿನಿಯರು ಹಾಗೂ ಸ್ನಾತಕೋತ್ತರ ವಿಭಾಗಗಳಲ್ಲಿ 2,014 ಮಂದಿ ಪದವಿ ಸ್ವೀಕರಿಸಿದ್ದಾರೆ. ಇವರಲ್ಲಿ 1,189 ಜನ ವಿದ್ಯಾರ್ಥಿನಿಯರು. ಒಟ್ಟು ಪದವಿ ಪಡೆಯುವ 13,207 ಜನರಲ್ಲಿ 8,099 ಜನ ವಿದ್ಯಾರ್ಥಿನಿಯರು ಇದ್ದರು. ಇನ್ನು ಚಿನ್ನದ ಪದಕದ ವಿಚಾರಕ್ಕೆ ಬಂದರೆ ವಿವಿಯಲ್ಲಿ 74 ಚಿನ್ನದ ಪದಕಗಳು ಬಂದಿದೆ.
ಈ ಘಟಿಕೋತ್ಸವಕ್ಕೆ ರಾಜ್ಯಪಾಲರು ಹಾಗೂ ಉನ್ನತ ಶಿಕ್ಷಣ ಇಲಾಖೆ ಸಚಿವರು ಗೈರು ಹಾಜರಾಗಿದ್ದರು. ಕುಲಪತಿ ಪ್ರೊ. ಶರಣಪ್ಪ ಹಲಸೆ ಪದವಿ ಪ್ರದಾನ ಮಾಡಿದರು. ಹಿರಿಯ ಚಿಂತಕ ಡಾ. ಗುರುರಾಜ ಕರಜಗಿ ಅವರು ಘಟಿಕೋತ್ಸವ ಭಾಷಣ ಮಾಡಿ, ಹಣ ಮುಖ್ಯ ಆದರೆ ಹಣವೇ ಮುಖ್ಯವಲ್ಲ ಎಂದು ತಮ್ಮ ಜೀವನದ ಅನುಭವಗಳನ್ನ ಹೇಳಿದರು.
ಇದನ್ನೂ ಓದಿ:
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ; 14 ಚಿನ್ನದ ಪದಕಗಳಿಸಿ ಸಂಭ್ರಮಿಸಿದ ವಿದ್ಯಾರ್ಥಿ
ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಹೆಚ್ಚಾಯಿತು ಅನೈತಿಕ ಚಟುವಟಿಕೆಗಳ ಆರೋಪ; ಎಲ್ಲಾ ತಿಳಿದರು ಮೌನವಾಗಿದೆ ಆಡಳಿತ ಮಂಡಳಿ
(Davanagere University Young lady won gold medal without losing persistence even though bleeding in the brain)