ನ್ಯಾಕ್ ಗ್ರೇಡ್ ಕೊಡಲು ಲಂಚಕ್ಕೆ ಬೇಡಿಕೆ ಆರೋಪ: ದಾವಣಗೆರೆ ವಿವಿ ಪ್ರಾಧ್ಯಾಪಕಿ ಬಂಧನ
ದಾವಣಗೆರೆ ವಿಶ್ವವಿದ್ಯಾಲಯದ ಪ್ರೊ ಗಾಯತ್ರಿ ದೇವರಾಜ್ 37 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಕೆಎಲ್ಇಎಫ್ ವಿಶ್ವವಿದ್ಯಾಲಯಕ್ಕೆ ನ್ಯಾಕ್ ಗ್ರೇಡ್ ನೀಡಲು ಲಂಚ ಪಡೆಯುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಭ್ರಷ್ಟಾಚಾರ ಮತ್ತು ಲಂಚ ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

ದಾವಣಗೆರೆ, ಫೆಬ್ರವರಿ 02: ಲಂಚ ಪಡೆದ ಹಿನ್ನಲೆ ದಾವಣಗೆರೆ ವಿಶ್ವವಿದ್ಯಾಲಯದ (Davangere University) ಪ್ರೊ.ಗಾಯತ್ರಿ ದೇವರಾಜ್ರನ್ನು ಹೈದರಾಬಾದ್ನಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ನ್ಯಾಕ್ ಗ್ರೇಡ್ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಕೇಳಿಬಂದಿದೆ. ದಾಳಿ ವೇಳೆ 37 ಲಕ್ಷ ರೂ. ನಗದು, 6 ಲ್ಯಾಪ್ಟಾಪ್, ಐಫೋನ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಭ್ರಷ್ಟಾಚಾರ, ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಿದೆ.
ದಾವಣಗೆರೆ ವಿವಿಯ ಮೈಕ್ರೋ ಬಯಾಲಜಿ ಪ್ರಾಧ್ಯಾಪಕಿಯಾಗಿರುವ ಗಾಯತ್ರಿ, ನ್ಯಾಕ್ ಸಮಿತಿಯ ಸದಸ್ಯೆ ಕೂಡ ಆಗಿದ್ದಾರೆ. ಆಂಧ್ರದ ಗುಂಟೂರಿನ ಕೆಎಲ್ಇಎಫ್ ವಿಶ್ವ ವಿದ್ಯಾಲಯದ ನ್ಯಾಕ್ ಕಮಿಟಿ ಪರಿಶೀಲನೆ ವೇಳೆ ಲಂಚ ಪಡೆಯುವಾಗ ಬಂಧಿಸಲಾಗಿದೆ.
ಲೋಕಾಯುಕ್ತ ಡಿವೈಎಸ್ಪಿ ಎಂದು ಹೇಳಿಕೊಂಡು ವಂಚನೆಗೆ ಯತ್ನಿಸಿದ್ದ ಆಸಾಮಿ ಅಂದರ್
ಲೋಕಾಯುಕ್ತ ಡಿವೈಎಸ್ಪಿ ಎಂದು ಹೇಳಿಕೊಂಡು ವಂಚನೆಗೆ ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವಂತಹ ಘಟನೆ ವಿಜಯಪುರದಲ್ಲಿ ನಡೆದಿದೆ. ಆರೋಪಿ ಮುರಿಗೆಪ್ಪ ಕುಂಬಾರ ಬಂಧಿತ ಆರೋಪಿ. ಕೆಬಿಜೆಎನ್ಎಲ್ ಎಇಇ ಅಶೋಕ್ ಬಿರಾದಾರ್ಗೆ ಕರೆ ಮಾಡಿದ್ದ ಆರೋಪಿ, ನಿಮ್ಮ ಮೇಲೆ ಲೋಕಾಯುಕ್ತ ಕೇಸ್ ಇದೆ ಎಂದು 70 ಸಾವಿರ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದ ಮುರಿಗೆಪ್ಪ, ಮಹಾರಾಷ್ಟ್ರದ ಶಿರೋಳನಲ್ಲಿ ಆರೋಪಿ ಮುರಿಗೆಪ್ಪ ಬಂಧಿಸಿ ವಿಚಾರಣೆ ಮಾಡಲಾಗಿದೆ. ರಾಜ್ಯದ ವಿವಿಧ ಠಾಣೆಗಳಲ್ಲಿ ಮುರಿಗೆಪ್ಪ ಕುಂಬಾರ ವಿರುದ್ಧ 57 ಕೇಸ್ಗಳಿವೆ.
ಇದನ್ನೂ ಓದಿ: ಉಲ್ಟಾ ಹೊಡೆದ ಪತಿ: ಫೈನಾನ್ಸ್ ಕಿರುಕುಳದಿಂದ ಶಿಕ್ಷಕಿ ಆತ್ಮಹತ್ಯೆ ಕೇಸಿಗೆ ಬಿಗ್ ಟ್ವಿಸ್ಟ್
ಅರೆಸ್ಟ್ ವಾರೆಂಟ್ ಇದ್ದರೂ ಮುರಿಗೆಪ್ಪ ತಲೆಮರೆಸಿಕೊಂಡು ಓಡಾಡುತ್ತಿದ್ದ. ಮುದ್ದೇಬಿಹಾಳ ಠಾಣೆಗೆ ದೂರು ನೀಡಿದ್ದ KBJNL ಎಇಇ ಅಶೋಕ್, ಸದ್ಯ ನಕಲಿ ಲೋಕಾಯುಕ್ತ ಡಿವೈಎಸ್ಪಿ ಮುರಿಗೆಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಲೋಕಾಯುಕ್ತ ಬಲೆಗೆ ಪ್ರಭಾರ ಪಿಡಿಓ
ಮತ್ತೊಂದು ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಪ್ರಭಾರ ಪಿಡಿಓ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆ ಶೆಟ್ಟಹಳ್ಳಿ ನಡೆದಿದೆ. ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಓ ದಯಾನಂದ ಲೋಕಾ ಬಲೆಗೆ ಬಿದ್ದ ಪಿಡಿಓ ಇ-ಖಾತೆ ಮಾಡಿಕೊಡಲು 25 ಸಾವಿರ ರೂ ಲಂಚಕ್ಕೆ ಅಶ್ವಥ್ ಎಂಬುವವರಿಗೆ ಬೇಡಿಕೆ ಇಟ್ಟಿದ್ದರು. 13 ಸಾವಿರ ರೂ. ಲಂಚ ಪಡೆಯುವಾಗ ಬಲೆಗೆ ಬಿದ್ದಿದ್ದಾರೆ. ಮಂಡ್ಯ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.