ದಾವಣಗೆರೆ: ಜಿಲ್ಲೆಯ ಗ್ಲಾಸ್ ಹೌಸ್ (Davanagere Glass House) ಈಗ ನಿತ್ಯ ಸದ್ದು ಮಾಡುತ್ತಿದೆ. ದಿನ ಬೆಳಗಾದ್ರೆ ಸಾಕು ಇಲ್ಲಿ ಒಂದು ರೀತಿಯಲ್ಲಿ ಗರ್ದಿಗಮ್ಮತ್ತು. ಯುವ ಪೀಳಿಗೆಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಕೆಟ್ಟ ಚಳಿಯಲ್ಲಿ ಮೈ ಚಳಿ ಬಿಡುವಂತೆ ಕಸರತ್ತು ಮಾಡಿ ಗಮನ ಸೆಳೆಯುತ್ತಿದೆ ಯುವ ಪಡೆ. ದೇಶದಲ್ಲಿ ಖ್ಯಾತಿ ಪಡೆದ ಗ್ಲಾಸ್ ಹೌಸ್ ಈಗ ಕಸರತ್ತಿನ ತಾಣವಾಗುತ್ತಿದೆ. ಬೆಳಿಗ್ಗೆ ಬೇವರಿಳುವ ಯುವ ಪಡೆ ಬಂದ್ರೆ ಸಂಜೆ ಸಂಸಾರಸ್ಥರು ಬಂದು ಸಂಭ್ರಮಿಸುವ ತಾಣ ಇದಾಗಿದೆ. ದಿನ ಬೆಳಗಾದ್ರೆ ಸಾಕು ದಾವಣಗೆರೆ ಗ್ಲಾಸ್ ಹೌಸ್ ಕಡೆ ಪ್ರತಿಯೊಬ್ಬರು ನೋಡುವಂತಾಗಿದೆ. ಕಾರಣ ಇದೊಂದು ಆಕರ್ಷಕ ತಾಣವಾಗಿದೆ. ಏಲ್ಲಿ ನೋಡಿದರಲ್ಲಿ ಯುವ ಪಡೆ. ಮನಸ್ಸಿಗೆ ಬಂದ ಹಾಡುಗಳನ್ನ ಹಾಕಿಕೊಂಡು ಆಧುನಿಕ ರೀತಿಯಲ್ಲಿ ದೇಹ ದಂಡಿಸುವ ಕೆಲಸ ಇಲ್ಲಿ ನಡೆಯುತ್ತಿದೆ. ವಾಣಿಜ್ಯ ನಗರ ಸ್ಮಾರ್ಟ ಸಿಟಿ ದಾವಣಗೆರೆ ಈಗ ಎಲ್ಲೆಂದರಲ್ಲಿ ಚರ್ಚೆಯಲ್ಲಿದೆ.
ಕೇಂದ್ರ ಸರ್ಕಾರದ ಸ್ಮಾರ್ಟ ಸಿಟಿಗೆ ಆಯ್ಕೆಯಾದ ಮೊಟ್ಟ ಮೊದಲ ನಗರ ದಾವಣಗೆರೆ. ಆದ್ರೆ ಇಲ್ಲಿ ನಡೆದ ಬಹುತೇಕ ಕಾಮಗಾರಿಗಳಿಗೆ ಸ್ಮಾರ್ಟ ಸಿಟಿಯ ಒಂದು ರೂಪಾಯಿ ಸಹ ಬಳಸಿಲ್ಲ. ಎಲ್ಲ ರಾಜ್ಯ ಸರ್ಕಾರದ ಅನುದಾನವೇ. ಅದು ಸಿದ್ದರಾಮಯ್ಯ ಅವರು ಸಿಎಂ ಆದ ಕಾಲದಲ್ಲಿ. ಪ್ರತಿಯೊಂದು ಹೈಟೆಕ್ ಸೌಲಭ್ಯ. ಕುಂದವಾಡ ಕೆರೆ ಹತ್ತಿರ ರಾಷ್ಟ್ರೀಯ ಹೆದ್ದಾರಿ ಪಕ್ಕ ಕಂಡು ಬರುವಂತೆ ವಿಶೇಷ ಗಾಜಿನ ಅರಮನೆ ಈಗ ಆಕರ್ಷಕ ಕೇಂದ್ರ. ಸುಮಾರ 30 ಕೋಟಿ ವೆಚ್ಚದಲ್ಲಿ ಈ ಮನೆ ನಿರ್ಮಾಣವಾಗಿದೆ.
ಬೆಂಗಳೂರಿನ ಲಾಲ್ ಬಾಗ್ನಲ್ಲಿ ಇರುವ ಗಾಜಿನ ಮನೆಗಿಂತ ಐದು ಪಟ್ಟು ದೊಡ್ಡದಾಗಿದೆ. ಸುಮಾರು 13 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಗಾಜಿನ ಮನೆ ಸ್ಮಾರ್ಟ ಸಿಟಿಗೆ ಹೆಮ್ಮೆಗೆ ಮತ್ತೊಂದು ಗರಿಯಾಗಲಿದೆ. ದಾವಣಗೆರೆ ಜನಕ್ಕೆ ಇದೊಂದು ಇಷ್ಟು ದಿನ ಪ್ರವಾಸಿ ಕೇಂದ್ರವಾಗಿತ್ತು. ಈಗ ಸಾಹಸಿ ಕೇಂದ್ರ ಕೂಡ ಆಗಿದೆ. ಇದಕ್ಕೆ ಇಲ್ಲಿ ನಡೆಯುತ್ತಿರುವ ಕಸರತ್ತುಗಳೇ ಇದಕ್ಕೆ ನಿದರ್ಶನ.
ಮಳೆಗಾಲ, ಬೇಸಿಗೆ ಅನ್ವಯ ಆಗುವಂತೆ ಅಂತರಾಷ್ಟ್ರೀಯ ಗುಣ ಮಟ್ಟದ ಗ್ಲಾಸ್ಗಳನ್ನ ಇಡಿ ಅರಮನೆಗೆ ಅಳವಡಿಸಲಾಗಿದೆ. ಬೆಂಗಳೂರಿನಲ್ಲಿ ನಡೆಯುವ ಪ್ಲಾವರ್ ಶೋ ತರ ಜನವರಿ 26 ಹಾಗೂ ಆಗಷ್ಟ 15ರಂದು ಇಲ್ಲಿ ಕೂಡ ಪ್ಲಾವರ್ ಶೋ ನಡೆಯುತ್ತದೆ. ಇದು ಇಡಿ ಭಾರತದಲ್ಲಿಯೇ ಅಲ್ಲ, ಪ್ರಪಂಚದ ಬಹುತೇಕ ಕಡೆ ಪರಿಶೀಲನೆ ನಡೆಸಿದರು ಇಷ್ಟು ದೊಡ್ಡದಾಗ ಗಾಜಿನ ಮನೆ ಇಲ್ಲ. ಇದು ತೋಟಗಾರಿಕಾ ಇಲಾಖೆಯ ಅಡಿಯಲ್ಲಿ ಈ ಗಾಜಿನ ಮನೆ ಬರುತ್ತದೆ. ಸಂಜೆ ಆಗುತ್ತಿದ್ದಂತೆ ವಿಶೇಷ ವಿದ್ಯುತ್ ದೀಪದ ಅಲಂಕಾರ ಮಾಡಲಾಗುತ್ತದೆ. ಇಂತಹ ವಿಶಿಷ್ಟ ಲೈಟಿಂಗ್ ನಲ್ಲಿ ಹೊಸದೊಂದು ಲೋಕ ಇಲ್ಲಿ ತೆರೆದುಕೊಳ್ಳುತ್ತದೆ. ಹೊಸಪೇಟೆಯ ತುಂಗಭದ್ರ ಡ್ಯಾಂ ಅಂಗಳದಲ್ಲಿ ಮಾಡಲಾದ ಜಗಮಗಿಸುವ ಲೈಟಿಂಗ್ನಿಂದ ಗ್ಲಾಸ್ ಹೌಸ್ ಗಮನ ಸೆಳೆದಿದೆ. ಮೇಲಾಗಿ ಇಂತಹ ಸ್ಥಳದಲ್ಲಿ ಧ್ಯಾನ, ಯೋಗ, ನೃತ್ಯ ಅದು ಬೆಳಿಗ್ಗೆ ಮಾಡಿದ್ರೆ ಮನಸ್ಸಿಗೆ ನೆಮ್ಮದಿ ಎನ್ನುತ್ತಾರೆ ಜನ.
ಗಾಜಿನ ಮನೆ ಸುತ್ತಲು ಮರಗಳನ್ನು ನೆಡಲಾಗಿದೆ. ಪಕ್ಕದಲ್ಲಿಯೇ ಕುಂದವಾಡ ಕೆರೆ ಸಹ ಇದೆ. ಇಲ್ಲಿಗೆ ಮರಗಳನ್ನ ಹೈದ್ರಾಬಾದ್ ನಿಂದ ತಂದಾಗ ಸುಮಾರು ಹತ್ತರಿಂದ 15 ವರ್ಷಗಳ ಕಾಲ ಬೆಳೆಸಿದ ಮರಗಳು ಇಲ್ಲಿಗೆ ಬಂದಿದ್ದು. ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಸಹ ಗಾಜಿನ ಮನೆ ಅಂಗಳಲ್ಲಿಯೇ ನಿರ್ಮಿಸಲಾಗುತ್ತಿದೆ. ಹೀಗಾಗಿ ಪ್ರವಾಸಿಗರನ್ನ ತನ್ನತ್ತ ಸೆಳೆಯಲು ನಿರಂತರವಾಗಿ ಜಿಲ್ಲಾಡಳಿತಮಾಡಿದ ಪ್ರಯತ್ನಕ್ಕೆ ಫಲ ಸಿಕ್ಕಿದೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಕೆಲ ಚಲನಚಿತ್ರ ಹಾಗೂ ಧಾರಾವಾಹಿಗಳ ಚಿತ್ರೀಕರಣ ಸಹ ಇಲ್ಲಿ ಆಗುತ್ತವೆ. ಹಾಗಾಗಿ ದಾವಣಗೆರೆ ಗ್ಲಾಸ್ ಹೌಸ್ ಇತ್ತೀಚಿಗೆ ಸಾಹಸಿಗಳ ತಾಣ ಆಗುತ್ತಿದೆ.
ವರದಿ: ಬಸವರಾಜ್ ದೊಡ್ಮನಿ, ಟಿವಿ9, ದಾವಣಗೆರೆ