ಕಟ್ಟಡ ಕಾರ್ಮಿಕನ ಮಗಳು ಮಾತೃ ಭಾಷೆ ಉರ್ದುವಿನಲ್ಲಿ ಒಂದು ಅಂಕ ಕಡಿಮೆ ಉಳಿದರೆಲ್ಲದರಲ್ಲೂ ನೂರಕ್ಕೆ ನೂರು; ಹಿಜಾಬ್ ದಂಗಲ್ ನಡುವೆ ಸಾಧನೆ ಮಾಡಿದ ಅಲಿಯಾ

| Updated By: ಆಯೇಷಾ ಬಾನು

Updated on: May 19, 2022 | 5:30 PM

ಅಲಿಯಾ ಫಿರ್ದೋಷಿ, ಗ್ರಾಮದ ಕಟ್ಟಡ ಕಾರ್ಮಿಕ ಮಹಮದ್ ರಹಮತ್ ವುಲ್ಲಾ ಹಾಗೂ ಫಹರಾತ್ ಭಾನು ಪುತ್ರಿ. ತಂದೆ ದುಡಿದರೇ‌ ಮನೆ ನಡೆಯಬೇಕು. ಸದ್ಯ ಪ್ರತಿಭಾನ್ವಿತೆ ಅಲಿಯಾ ಎಲ್ಲ ವಿಷಯದಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ. ಉರ್ದು ಭಾಷೆಯಲ್ಲಿ 124 ಅಂಕ ಗಳಿಸಿದ್ದು ಉಳಿದ ಎಲ್ಲಾ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ.

ಕಟ್ಟಡ ಕಾರ್ಮಿಕನ ಮಗಳು ಮಾತೃ ಭಾಷೆ ಉರ್ದುವಿನಲ್ಲಿ ಒಂದು ಅಂಕ ಕಡಿಮೆ ಉಳಿದರೆಲ್ಲದರಲ್ಲೂ ನೂರಕ್ಕೆ ನೂರು; ಹಿಜಾಬ್ ದಂಗಲ್ ನಡುವೆ ಸಾಧನೆ ಮಾಡಿದ ಅಲಿಯಾ
ಅಲಿಯಾ ಫಿರ್ದೋಷ್
Follow us on

ದಾವಣಗೆರೆ: ರಾಜ್ಯದಲ್ಲಿ ತಲೆಗೆ ವಸ್ತ್ರ ಧರಿಸುವ ಹಿಜಾಬ್ ದಂಗಲ್ ನಡೆಯುತ್ತಿದ್ದಾಗ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಪಟ್ಟಾಗಿ ಕುಳಿತು ಓದಿ 625 ಕ್ಕೆ 624 ಅಂಕ ಪಡೆದ ಉರ್ದು ಶಾಲೆಯ ವಿದ್ಯಾರ್ಥಿನಿ ಅಲಿಯಾ ಫಿರ್ದೋಷ್ ವಿಭಿನ್ನವಾಗಿ, ವಿಶೇಷವಾಗಿ ರಾಜ್ಯದ ಗಮನ ಸೆಳೆದಿದ್ದಾರೆ. ಕಟ್ಟಡ ಕಾರ್ಮಿಕನ ಮಗಳಾದ ಅಲಿಯಾ ಮಾತೃ ಭಾಷೆ‌ ಉರ್ದುವಿನಲ್ಲಿ ಮಾತ್ರ ಒಂದು ಅಂಕ ಕಡಿಮೆ ಪಡೆದಿದ್ದು ಉಳಿದ ಎಲ್ಲ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದಿರುವುದು ಗಮನ ಸೆಳೆಯುತ್ತಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆ ಬಿಳಚಿ ಅಂದ್ರೆ ಒಂದು ರೀತಿಯ ಗ್ರಾಮ. ಈ ಗ್ರಾಮದ ಹೆಸರು ದೇಶ ವಿದೇಶಗಳಲ್ಲಿ ಪ್ರಸಿದ್ದಿ ಪಡೆದಿದೆ. ಮಾವು ಅಡಿಕೆ ಇಲ್ಲಿನ ಪ್ರಸಿದ್ಧ ಬೆಳೆ. ಮೇಲಾಗಿ ಈ ಗ್ರಾಮದಲ್ಲಿ ಅಲ್ಪಸಂಖ್ಯಾತರೇ ಬಹುಸಂಖ್ಯಾತರು. ಪ್ರತಿಯೊಂದು ಮನೆಯಿಂದ ಮನೆಗೊಬ್ಬ ಎನ್ನುವಂತೆ ಇಲ್ಲಿನ ಯುವಕರು ವಿದೇಶದಲ್ಲಿ ವಿವಿಧ ಹುದ್ದೆಯಲ್ಲಿ ಇದ್ದಾರೆ. ಐತಿಹಾಸಿಕ ಏಷ್ಯಾದ ಅತಿ ದೊಡ್ಡ ಎರಡನೇ ಕೆರೆಯಾದ ಸೂಳೆಕೆರೆ ಅಂಗಳದಲ್ಲಿ ಈ ಗ್ರಾಮ ಬರುತ್ತದೆ. ಇಂತಹ ಗ್ರಾಮದ ಸರ್ಕಾರಿ ಉರ್ದು ಹೈಸ್ಕೂಲ್ನ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ರಾಜ್ಯದ ಗಮನ ಸೆಳೆದಿದ್ದಾಳೆ‌. ಇದನ್ನೂ ಓದಿ: ಶಾಲೆಯಲ್ಲಿ ಮಕ್ಕಳಿಗೆ ತ್ರಿಶೂಲ‌ ದೀಕ್ಷೆ: ಶಾಲೆ ತ್ಯಜಿಸಲು ಮುಂದಾದ ಮುಸ್ಲಿಂ ವಿದ್ಯಾರ್ಥಿಗಳು

ಅಲಿಯಾ ಫಿರ್ದೋಷ್, ಗ್ರಾಮದ ಕಟ್ಟಡ ಕಾರ್ಮಿಕ ಮಹಮದ್ ರಹಮತ್ ವುಲ್ಲಾ ಹಾಗೂ ಫಹರಾತ್ ಭಾನು ಪುತ್ರಿ. ತಂದೆ ದುಡಿದರೇ‌ ಮನೆ ನಡೆಯಬೇಕು. ಸದ್ಯ ಪ್ರತಿಭಾನ್ವಿತೆ ಅಲಿಯಾ ಎಲ್ಲ ವಿಷಯದಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ. ಉರ್ದು ಭಾಷೆಯಲ್ಲಿ 124 ಅಂಕ ಗಳಿಸಿದ್ದು ಉಳಿದ ಎಲ್ಲಾ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ಹೀಗೆ 625ಕ್ಕೆ 624 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಚನ್ನಾಗಿ ಓದಿ ವೈದ್ಯೆ ಆಗಿ ಬಡವರ ಸೇವೆ ಮಾಡುವ ಆಸೆ
ಮುಂಬರುವ ದಿನಗಳಲ್ಲಿ ಚನ್ನಾಗಿ‌ ಓದಿ ವೈದ್ಯೆಯಾಗಿ ಬಡವರ ಸೇವೆ ಮಾಡುವ ಆಸೆ ಅಲಿಯಾಳಿಗೆ ಇದೆಯಂತೆ. ಉತ್ತಮ ಸಾಧನೆ ಮಾಡಿದ ಕೆರೆ ಬಿಳಚಿ ಉರ್ದು ಹೈಸ್ಕೂಲ್ ರಾಜ್ಯದ ಗಮನ ಸೆಳೆದಿದೆ. ಇಲ್ಲಿ 83 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಓದುತ್ತಿದ್ದರು. ಈ ಪೈಕಿಒಂಬತ್ತು ಜನ 600ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ಜೊತೆಗೆ ಬಹುತೇಕರು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. 100ಕ್ಕೆ 100 ಫಲಿತಾಂಶ ಬಂದಿದೆ. ಇದನ್ನೂ ಓದಿ: SSLC Toppers: ರಾಯಚೂರು ಶಾಸಕ ಶಿವರಾಜ್ ಪಾಟೀಲ್ ಪುತ್ರಿ ರಾಜ್ಯಕ್ಕೆ ಪ್ರಥಮ ಸ್ಥಾನ; ಇನ್ನೂ ಯಾರೆಲ್ಲ ಈ ಸಾಧನೆ ಮಾಡಿದ್ದಾರೆ?

Published On - 5:30 pm, Thu, 19 May 22