AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಸೂಳೆಕೆರೆ ನೀರು ಕುಡಿಯಲು ಯೋಗ್ಯವಲ್ಲ; ಗ್ರಾಮಸ್ಥರಲ್ಲಿ ಪುರಸಭೆ ಮುಖ್ಯಾಧಿಕಾರಿ ಮನವಿ

ಅಗಸ್ಟ್​​ನಲ್ಲಿ ಕೋಟೆನಾಡು ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಕಲುಷಿತ ನೀರು ಸೇವಿಸಿ ಆರು ಜನ ಸಾವಿಗೀಡಾಗಿದ್ದು, 200 ಹೆಚ್ಚು ಜನರು ಅಸ್ವಸ್ಥರಾಗಿದ್ದರು. ಈ ದುರಂತ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಅವಘಡಕ್ಕೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಬಳಿ ಇರುವ ಏಷ್ಯಾದ ಎರಡನೇ ಅತಿ ದೊಡ್ಡ ಸೂಳೆಕೆರೆ ನೀರು ಕಾರಣ ಎಂಬ ಅನುಮಾನ ವ್ಯಕ್ತವಾಗಿತ್ತು.

ದಾವಣಗೆರೆ: ಸೂಳೆಕೆರೆ ನೀರು ಕುಡಿಯಲು ಯೋಗ್ಯವಲ್ಲ; ಗ್ರಾಮಸ್ಥರಲ್ಲಿ ಪುರಸಭೆ ಮುಖ್ಯಾಧಿಕಾರಿ ಮನವಿ
ಸೂಳೆಕೆರೆ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Oct 23, 2023 | 8:46 AM

Share

ದಾವಣಗೆರೆ ಅ.23: ಚನ್ನಗಿರಿ (Channagiri) ತಾಲೂಕಿನ ಕೆರೆಬಿಳಚಿ ಬಳಿ ಇರುವ ಏಷ್ಯಾದ ಎರಡನೇ ಅತಿ ದೊಡ್ಡ ಸೂಳೆಕೆರೆ (Sulekere) ನೀರು ಕುಡಿಯಲು (Drinking Water) ಯೋಗ್ಯವಲ್ಲ, ಗೃಹಬಳಕೆಗೆ ಮಾತ್ರ ಬಳಸಿ ಎಂದು ಸ್ಥಳೀಯರಿಗೆ ಚನ್ನಗಿರಿ ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಕಟ್ಟಿಮನಿ ಮನವಿ ಮಾಡಿದ್ದಾರೆ. ಗೃಹ ಬಳಕೆ ಮತ್ತು ಕುಡಿಯಲು ಸೂಳೆಕೆರೆ ನೀರನ್ನೇ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಮೂರು ತಿಂಗಳ ಹಿಂದೆ ನೀರು ಕುಡಿಯಲು ಯೋಗ್ಯವಲ್ಲವೆಂದು ವರದಿ ಬಂದ ಹಿನ್ನೆಲೆಯಲ್ಲಿ ಪೂರೈಕೆ ಸ್ಥಗಿತಗೊಳಿಸಲಾಗಿತ್ತು.

ಆದರೆ ಇದೀಗ ಪುರಸಭೆ ಸೂಳೆಕೆರೆ ನೀರ ಪೂರೈಕೆ ಮಾಡಲು ಆರಂಭಿಸಿದ್ದು, ನೀರು ಗೃಹ ಬಳಕೆಗೆ ಮಾತ್ರ ಬಳಸಿ ಕುಡಿಯಲು ಅಲ್ಲ. ಕುಡಿಯಲು ಯೋಗ್ಯವೆಂದು ವರದಿ ಬಂದ ಬಳಿಕ ಮಾಹಿತಿ ನೀಡುತ್ತೇವೆ ಎಂದು ಚನ್ನಗಿರಿ ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಕಟ್ಟಿಮನಿ ಜನರಲ್ಲಿ ಮನವಿ ಮಾಡಿದ್ದಾರೆ. ಸೂಳೆಕೆರೆಯಿಂದ ಚಿತ್ರದುರ್ಗ ನಗರ, ಚನ್ನಗಿರಿ, ಜಗಳೂರು ಪಟ್ಟಣ ಸೇರಿ ಹಲವಾರು ಗ್ರಾಮಗಳಿಗೆ ಸೂಳೆಕೆರೆ ನೀರು ಪೂರೈಕೆ ಮಾಡಲಾಗುತ್ತಿದೆ.

ಕಲುಷಿತ ನೀರು ಸೇವಿಸಿ ಸಾವು

ಅಗಸ್ಟ್​​ನಲ್ಲಿ ಕೋಟೆನಾಡು ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಕಲುಷಿತ ನೀರು ಸೇವಿಸಿ ಆರು ಜನ ಸಾವಿಗೀಡಾಗಿದ್ದು, 200 ಹೆಚ್ಚು ಜನರು ಅಸ್ವಸ್ಥರಾಗಿದ್ದರು. ಈ ದುರಂತ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಅವಘಡಕ್ಕೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಬಳಿ ಇರುವ ಏಷ್ಯಾದ ಎರಡನೇ ಅತಿ ದೊಡ್ಡ ಸೂಳೆಕೆರೆ ನೀರು ಕಾರಣವಾಯಿತಾ ಎಂಬ ಅನುಮಾನ ವ್ಯಕ್ತವಾಗಿತ್ತು.

ಇದನ್ನೂ ಓದಿ: ದುರ್ಗದ ಕಾವಾಡಿಗರ ಹಟ್ಟಿಯಲ್ಲಿ ಸರಣಿ ಸಾವಿಗೆ ದಾವಣಗೆರೆಯ ಸೂಳೆಕೆರೆ ನೀರು ಕಾರಣವಾ? ಲ್ಯಾಬ್ ವರದಿ ಫಲಿತಾಂಶ ಇಲ್ಲಿದೆ

ಹೀಗಾಗಿ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ವೈದ್ಯರು ನೀರನ್ನು ಪರೀಕ್ಷಿಸಿ ಸೂಳೆಕೆರೆ ನೀರು ಕುಡಿಯಲು ಯೋಗ್ಯವಲ್ಲವೆಂದು ವರದಿ ನೀಡಿದ್ದು. ಈ ಹಿನ್ನೆಲೆಯಲ್ಲಿ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಬರಗಾಲ ಆವರಿಸಿದ್ದರಿಂದ ನೀರಿಗೆ ಹಾಹಾಕಾರ ಶರುವಾಗಿದೆ. ಈ ಸಂಬಂಧ ಪುರಸಭೆ ಮತ್ತೆ ನೀರು ಪೂರೈಕೆ ಮಾಡುತ್ತಿದೆ. ಆದರೆ ಸೂಳೆಕೆರೆ ನೀರು ಕುಡಿಯಲು ಯೋಗ್ಯ ಎಂದು ಇನ್ನೂ ವರದಿ ಬಂದಿಲ್ಲ

ಮೃತ ಕುಟುಂಬಗಳಿಗೆ ಉದ್ಯೋಗ ಸಿಎಂ ಭರವಸೆ

ಮೃತಪಟ್ಟವರ ಕುಟುಂಬದವರಿಗೆ ಉದ್ಯೋಗ ನೀಡಲಾಗುವುದು. ಮತ್ತು ಕುಟುಂಬದ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ