Dog bite: ಆರೇಳು ಬೀದಿ ನಾಯಿಗಳಿಂದ ಬಾಲಕನ ಮೇಲೆ ದಾಳಿ -ತೀವ್ರ ಗಾಯಗೊಂಡ ಬಾಲಕ ಆಸ್ಪತ್ರೆ ಗೆ ದಾಖಲು
ತೀವ್ರವಾಗಿ ಗಾಯಗೊಂಡಿರುವ ಬಾಲಕನನ್ನು ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ‘ಈ ಘಟನೆಯಿಂದಾಗಿ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ: ನಗರದ ಬಾಷಾ ನಗರದಲ್ಲಿ ಆರೇಳು ಬೀದಿ ನಾಯಿಗಳು ಒಟ್ಟಿಗೇ ದಂಡೆತ್ತಿ ಬಂದು ಬಾಲಕನ ಮೇಲೆ ಎರಗಿ, ಆತನನ್ನು ಕಚ್ಚಿ ಗಾಯಗೊಳಿಸಿವೆ. ಮಹಮದ್ ಇರ್ಫಾನ್ ಅವರ ಪುತ್ರ ಜಾಫರ್ ಸಾದಿಕ್ (7) ಗಾಯಗೊಂಡ ಬಾಲಕ. ಬಾಲಕ ಬೀದಿಯಲ್ಲಿ ಆಟವಾಡುತ್ತಿದ್ದ ವೇಳೆ ನಾಯಿಗಳು ಏಕಾಏಕಿ ದಾಳಿ ನಡೆಸಿ ಮೂಗಿನ ನರ ಹಾಗೂ ಕಣ್ಣಿನ ರೆಪ್ಪೆಯನ್ನು ಕಚ್ಚಿ ಗಾಯಗೊಳಿಸಿವೆ.
ತೀವ್ರವಾಗಿ ಗಾಯಗೊಂಡಿರುವ ಬಾಲಕನನ್ನು ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ‘ಈ ಘಟನೆಯಿಂದಾಗಿ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದಿ ನಾಯಿಗಳ ಸ್ಥಳಾಂತರಕ್ಕೆ ಆಗ್ರಹಿಸಿ ನವೆಂಬರ್ 29ರಂದು ಪಾಲಿಕೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ರಾಮೇಗೌಡ ಎಚ್ಚರಿಸಿದ್ದಾರೆ.
Also Read:
4 ನಾಯಿ ಮರಿಗಳ ಕತ್ತು ಕೊಯ್ದು ಹತ್ಯೆ: ನಟಿ ಅಮೂಲ್ಯ ಪತಿ ಜಗದೀಶ್ ಆಕ್ರೋಶ, ಪಶುಸಂಗೋಪನೆ ಇಲಾಖೆ ಸ್ಪಂದನೆ
Published On - 9:57 am, Sat, 27 November 21