ತಾವು ವ್ಯಾಸಂಗ ಮಾಡಿದ ಬಡ ಶಾಲೆಯನ್ನು ಫಳ ಫಳ ಹೊಳೆಯುವಂತೆ ಮಾಡಿರುವ ಹೃದಯ ಶ್ರೀಮಂತ ಹಳೆಯ ವಿದ್ಯಾರ್ಥಿಗಳು
ಹೀಗೆ ಹಲವಾರು ಕಾರ್ಯಗಳನ್ನ ಮಾಡುತ್ತಿರುವ ಶಾಮನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಈ ಹಳೇ ವಿದ್ಯಾರ್ಥಿಗಳ ಪೈಕಿ ಬಹುತೇಕರು ಈಗ ದೇಶವಿದೇಶಗಳಲ್ಲಿ ಇದ್ದಾರೆ. ಸ್ಥಳೀಯವಾಗಿ ಇರುವ ಸೇಹಿತರಿಗೆ ಇಲ್ಲಿನ ಕಾಮಗಾರಿ ಹಾಗೂ ಕಾರ್ಯಕ್ರಮಗಳ ಉಸ್ತುವಾರಿ ನೀಡಲಾಗಿದೆ. ಈ ಶಾಲೆಯಲ್ಲಿ ಕಡುಬಡವರ ಮಕ್ಕಳು ಇದ್ದಾರೆ.
ತಾವು ಕಲಿತ ಶಾಲೆಗಳನ್ನ ದತ್ತು ಪಡೆದು ಸುಧಾರಣೆ ಮಾಡುತ್ತಿರುವ ಹತ್ತಾರು ಪ್ರಕರಣಗಳನ್ನ ಇತ್ತೀಚಿಗೆ ಹೆಚ್ಚು ಹೆಚ್ಚು ನೋಡಿದ್ದೀರಿ. ಆದ್ರೆ ಇಲ್ಲೊಂದಿಷ್ಟು ಮಂದಿ, ಒಂದಷ್ಟು ದಿನ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು (Alumni), ಅವರೆಲ್ಲಾ ಒಂದಿಲ್ಲೊಂದು ಪ್ರತಿಷ್ಠಿತ ಹುದ್ದೆಯಲ್ಲಿದ್ದಾರೆ. ಈಗ ಅವರೆಲ್ಲಾ ಸೇರಿ ಸರ್ಕಾರಿ ಶಾಲೆ ಉದ್ಧಾರ ಮಾಡಲು ಮುಂದಾಗಿದ್ದಾರೆ. ಅದೇ ಇಲ್ಲಿನ ಶಾಮನೂರು ಶಾಲೆ, ಅದೀಗ ಫಳ ಫಳ ಹೊಳೆಯುತ್ತಿರುವ ಕುರಿತಾದ ಸ್ಟೋರಿ ಇಲ್ಲಿದೆ. ಜೊತೆಗೆ ಅದು ಸ್ಮಾರ್ಟ್ ಸಿಟಿ ದಾವಣಗೆರೆಯಲ್ಲಿ (Davanagere) ಇರುವ ಶಾಮನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (Government Higher Primary School, Shamanur). ಇಂತಹ ಶಾಲೆ ಎಲ್ಲಿ ನೋಡಿದರಲ್ಲಿ ಫಳ ಫಳ ಎನ್ನುತಿದೆ ಈಗ. ಶಾಲೆಯ ಗೋಡೆಗಳು ಹತ್ತಾರು ಚಿತ್ತಾರಗಳಿಂದ ಮಕ್ಕಳನ್ನ ಆಕರ್ಷಿಸುತ್ತಿದೆ. ಜೊತೆಗೆ ಅಲ್ಲಿ ಇಲ್ಲಿ ಗೋಡೆ ಬಿರುಕು ಬಿಟ್ಟ ಕಾರಣ ಭಯ ಪಡುತ್ತಿದ್ದ ಮಕ್ಕಳು (Students) ಈಗ ನೆಮ್ಮದಿಯಾಗಿದ್ದಾರೆ.
ಕಾರಣ ಆ ಗೋಡೆಗಳನ್ನ ದುರಸ್ಥಿ ಮಾಡಲಾಗಿದೆ. ಶಾಲೆಗೆ ಬೇಕಾದ ಪರಿಕರಗಳನ್ನ ಕೊಡಿಸಲಾಗಿದೆ. ದಾವಣಗೆರೆ ಬಾಪೂಜಿ ಸಿಬಿಎಸ್ಸಿ ಶಾಲೆಯ ಹಳೇ ವಿದ್ಯಾರ್ಥಿಗಳು ಅಂದರೆ 1988ರಿಂದ 2022ರವರೆಗೆ ಬಾಪೂಜಿ ಶಾಲೆಯಲ್ಲಿ ಓದಿದ ಬಹುತೇಕರು ಸೇರಿ ಈ ಸರ್ಕಾರ ಶಾಲೆಯನ್ನು ದತ್ತು ಪಡೆದು ನಿತ್ಯ ಒಂದಿಲ್ಲೊಂದು ಕಾಮಗಾರಿ ಕೆಲಸ ಮಾಡಿಸುತ್ತಿದ್ದಾರೆ.
ಹೀಗೆ ಹಲವಾರು ಕಾರ್ಯಗಳನ್ನ ಮಾಡುತ್ತಿರುವ ಈ ಹಳೇ ವಿದ್ಯಾರ್ಥಿಗಳ ಪೈಕಿ ಬಹುತೇಕರು ಈಗ ದೇಶವಿದೇಶಗಳಲ್ಲಿ ಇದ್ದಾರೆ. ಸ್ಥಳೀಯವಾಗಿ ಇರುವ ಸೇಹಿತರಿಗೆ ಇಲ್ಲಿನ ಕಾಮಗಾರಿ ಹಾಗೂ ಕಾರ್ಯಕ್ರಮಗಳ ಉಸ್ತುವಾರಿ ನೀಡಲಾಗಿದೆ. ಈ ಶಾಲೆಯಲ್ಲಿ ಕಡುಬಡವರ ಮಕ್ಕಳು ಇದ್ದಾರೆ.
Good News: ಪೋಷಕರ ಕಾನ್ವೆಂಟ್ ಮೋಹದಿಂದ ಮುಚ್ಚಿಹೋಗಿದ್ದ 84 ವರ್ಷಗಳ ಇತಿಹಾಸವಿರೋ ಶಾಲೆಗೆ ಮರುಜೀವ
ಇವರಿಗೆ ಆರ್ಥಿಕ ಸಂಕಷ್ಟ ಇರುತ್ತದೆ. ಇಂತಹ ಮಕ್ಕಳಿಗೆ ಆರ್ಥಿಕ ಸಹಾಯ ಸಹ ನೀಡಲಾಗುತ್ತಿದೆ. ಕೆಲ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕೋಚಿಂಗ್ ಸಹ ಕೊಡಿಸಲಾಗುತ್ತಿದೆ. ಜೊತೆಗೆ ಅಧ್ಯಯನದಲ್ಲಿ ಹಿಂದೆ ಉಳಿದ ಮಕ್ಕಳಿಗೆ ಹೆಚ್ಚುವರಿ ತರಗತಿ ತೆಗೆದುಕೊಂಡು ಕಲಿಕಾ ಆಸಕ್ತಿ ಹೆಚ್ಚಿಸುವುದು ಇವರ ಉದ್ದೇಶವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.