ದಾವಣಗೆರೆಯಲ್ಲಿ ಬಡ ಜನರ ಹೊಟ್ಟೆ ತುಂಬಿಸುತ್ತಿದ್ದ ಇಂದಿರಾ ಕ್ಯಾಂಟಿನ್ ಗಳಿಗೆ ಎದುರಾಗಿದೆ ಹಣಕಾಸು ಸಮಸ್ಯೆ
2018 ರಲ್ಲಿ ಆರಂಭವಾಗಿದ್ದ ಒಟ್ಟು ಎಂಟು ಕ್ಯಾಂಟೀನ್ ಗಳನ್ನು ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸರಾಗವಾಗಿ ನಡೆದುಕೊಂಡು ಹೋಗ್ತಿದ್ದವು. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗ ಕ್ಯಾಂಟೀನ್ ಗಳ ನಿರ್ವಹಣೆಗೆ ಹಣ ಇಲ್ಲ ಎಂದು ಸಬೂಬು ಹೇಳಿದ್ದ ಬಿಜೆಪಿ ಸರ್ಕಾರವು ಕೆಲ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚಿತ್ತು..
ಇಂದಿರಾ ಕ್ಯಾಂಟಿನ್ ಎಂದರೆ ಸಾಕು ಬಡವರ ಹೊಟ್ಟೆ ತುಂಬಿಸುವ ಸ್ಥಳ ಎನ್ನುವ ಮಾತಿದೆ. ಸಿದ್ದರಾಮಯ್ಯ 2013 ರಲ್ಲಿ ಸಿಎಂ ಆಗಿದ್ದ ಸಂದರ್ಭದಲ್ಲಿ ಮಹತ್ವದ ಯೋಜನೆಗೆ ಚಾಲನೆ ನೀಡಿದ್ದರು. ಈಗ ಮತ್ತೆ ಸಿದ್ದರಾಮಯ್ಯ (siddaramaiah) ಅಧಿಕಾರಕ್ಕೆ ಬಂದಿದ್ದು, ಇಂದಿರಾ ಕ್ಯಾಂಟಿನ್ ಗಳ ದುಃಸ್ಥಿತಿಯಲ್ಲಿವೆ. ಊಟ ಸರಬರಾಜು ಮಾಡುವ ಗುತ್ತಿಗೆದಾರರಿಗೆ ನಾಲ್ಕು ತಿಂಗಳಿಂದ ಬಿಲ್ ಆಗಿಲ್ಲ. ಹಾಗಾದ್ರೆ ಹೇಗಿದೆ ಇಂದಿರಾ ಕ್ಯಾಂಟಿನ್ ಪ್ರಾಬ್ಲಂ ಅಂತೀರಾ ಈ ಸ್ಟೋರಿ ನೋಡಿ. ನಾಲ್ಕು ತಿಂಗಳ ಬಿಲ್ ಆಗದೆ ಪರದಾಡುತ್ತಿರುವ ಗುತ್ತಿಗೆ ಪಡೆದ ಕಂಪನಿಗಳು. ಇಂದಿರಾ ಕ್ಯಾಟೀನ್ ನಲ್ಲಿ ಗುಣಮಟ್ಟದ ಊಟ ನೀಡಿ ಎಂದು ಜನರು ಮನವಿ. ಮತ್ತೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಸುಧಾರಿಸುತ್ತಾ ಇಂದಿರಾ ಕ್ಯಾಂಟೀನ್ ಎಂಬ ನಿರೀಕ್ಷೆಯಲ್ಲಿ ಬಡ ಜನ. ಇಂದಿರಾ ಕ್ಯಾಂಟಿನ್ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಈ ಯೋಜನೆ ಸಾಕಷ್ಟು ಬಡವರಿಗೆ (poor) ಉಪಯೋಗ ಅಗಿದ್ದು ಸತ್ಯ. ಆದರೆ ಈಗ ಇಂದಿರಾ ಕ್ಯಾಂಟೀನ್ ಗಳ ಸ್ಥಿತಿ ಹೇಳತೀರದಂತಾಗಿದೆ.. ಗುಣಮಟ್ಟದ ಊಟ ಸಿಗುತ್ತಿಲ್ಲ. ಇತ್ತ ಗುತ್ತಿಗೆ ಪಡೆದುಕೊಂಡ ಕಂಪನಿಗಳಿಗೆ ಬಿಲ್ ಆಗದೆ ಪರದಾಡುವಂತಾಗಿದೆ.. ಅದರಲ್ಲೂ ದಾವಣಗೆರೆಯಲ್ಲಿ ( Davanagere) ಬಡವರ್ಗದ ಜನ ಹೆಚ್ಚು ವಾಸ ಮಾಡ್ತಿರುವುದ್ದರಿಂದ ನಗರದಲ್ಲಿ 8 ಇಂದಿರಾ ಕ್ಯಾಂಟೀನ್ ಗಳನ್ನು ತೆರೆಯಲಾಗಿತ್ತು. ಬಡವರ್ಗದ ಜನರು ಹೆಚ್ಚಾಗಿ ಇಂದಿರಾ ಕ್ಯಾಂಟೀನ್ ಆಹಾರಕ್ಕೆ ಹೊಂದಿಕೊಂಡಿದ್ದರು.
2018 ರಲ್ಲಿ ಆರಂಭವಾಗಿದ್ದ ಒಟ್ಟು ಎಂಟು ಕ್ಯಾಂಟೀನ್ ಗಳನ್ನು ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸರಾಗವಾಗಿ ನಡೆದುಕೊಂಡು ಹೋಗ್ತಿದ್ದವು. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗ ಕ್ಯಾಂಟೀನ್ ಗಳ ನಿರ್ವಹಣೆಗೆ ಹಣ ಇಲ್ಲ ಎಂದು ಸಬೂಬು ಹೇಳಿದ್ದ ಬಿಜೆಪಿ ಸರ್ಕಾರವು ಕೆಲ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚಿತ್ತು.. ಈಗ ಮತ್ತೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೂ ಇಂದಿರಾ ಕ್ಯಾಂಟಿನ್ ಗಳ ಸ್ಥಿತಿ ಹಾಗೆಯೇ ಇದೆ. ಗುತ್ತಿಗೆ ಪಡೆದ ಕಂಪನಿಗಳಿಗೆ ಬಿಲ್ ಆಗದೆ ಪರದಾಡುತ್ತಿದ್ದು, ಊಟ ನೀಡುವುದು ಕಡಿಮೆ ಮಾಡಿದ್ದಾರೆ. ಅದ್ದರಿಂದ ಜನರಿಗೆ ಗುಣಮಟ್ಟದ ಅಹಾರ ನೀಡಿ ಎಂದು ಸರ್ಕಾರಕ್ಕೆ ಜನರು ಮನವಿ ಮಾಡಿಕೊಂಡಿದ್ದಾರೆ.
ಇತ್ತ ಪಾಲಿಕೆ ಈ ಇಂದಿರಾ ಕ್ಯಾಂಟಿನ್ ಗಳನ್ನು ನಿರ್ವಹಣೆ ಮಾಡುತ್ತಿದ್ದು, ಪಾಲಿಕೆಯಲ್ಲಿ ಅನುದಾನದ ಸಂಬಂಧ ಕೆಲ ಕೊರತೆಯಿತ್ತು. ಚುನಾವಣೆ ಇರುವ ಹಿನ್ನೆಲೆ 4 ತಿಂಗಳುಗಳಿಂದ ಬಿಲ್ ಆಗಿಲ್ಲ. ಶೇ 70 ರಷ್ಟು ಅನುದಾನ ಪಾಲಿಕೆಯಿಂದ ಉಳಿದ 30 % ರಷ್ಟು ಅನುದಾನ ಕಾರ್ಮಿಕ ಇಲಾಖೆಯಿಂದ ಸಂದಾಯ ಮಾಡ್ಬೇಕಾಗುತ್ತದೆ. ದಿನದ ಮೂರು ಹೊತ್ತಿಗೆ 15೦ ಊಟ ಎಂಬಂತೆ ನಿಗದಿ ಮಾಡಲಾಗಿತ್ತು. ಈಗ ಸರ್ಕಾರಕ್ಕೆ ಮನವಿ ಮಾಡಿದ್ದು ಕೆಲವೇ ದಿನಗಳಲ್ಲಿ ಸರಿಯಾಗುತ್ತದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಹಸಿದವರ ಹೊಟ್ಟೆ ತುಂಬಿಸುತ್ತಿದ್ದ ಇಂದಿರಾ ಕ್ಯಾಂಟಿನ್ ಅನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ ಗುಣಮಟ್ಟದ ಊಟ ಜನರಿಗೆ ನೀಡಬೇಕು ಎನ್ನುವುದು ಬಡ ಜನರ ಮೊರೆಯಾಗಿದೆ.
ವರದಿ: ಬಸವರಾಜ್ ದೊಡ್ಮನಿ, ಟಿವಿ 9, ದಾವಣಗೆರೆ
ದಾವಣಗೆರೆ ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ