ಸಾಹಿತಿಗಳಿಗೆ ಕೊಲೆ ಬೆದರಿಕೆ ಪತ್ರ: ನೂರಕ್ಕೂ ಹೆಚ್ಚು ಜನರಿಗೆ ಪತ್ರ ಬರೆದ ಆರೋಪಿಯ ಸುಳಿವು ಸಿಕ್ಕಿದ್ದು ಎಲ್ಲಿ ಗೊತ್ತಾ?
ಶಿವಾಜಿರಾವ್ ಜಾಧವ್ ದಾವಣಗೆರೆ ಜಿಲ್ಲಾ ಹಿಂದು ಜಾಗರಣ ವೇದಿಕೆಯ ಸಹ ಸಂಚಾಲಕನಾಗಿದ್ದಾನೆ. ಶಿವಾಜಿರಾವ್ ಜಾಧವ್ ಓದಿದ್ದು ಎಂಟನೇ ತರಗತಿ ಮಾತ್ರ. ಆರೋಪಿ ಶಿವಾಜಿರಾವ್ ಜಾಧವ ಈಗಾಗಲೇ ನೂರಕ್ಕೂ ಹೆಚ್ಚು ಬೆದರಿಕೆ ಪತ್ರ ಬರೆದು ಪೋಸ್ಟ್ ಮಾಡಿರುವುದಾಗಿ ಸಿಸಿಬಿ ಪೊಲೀಸರ ಎದರು ಬಾಯಿಬಿಟ್ಟಿದ್ದಾನೆ.
![ಸಾಹಿತಿಗಳಿಗೆ ಕೊಲೆ ಬೆದರಿಕೆ ಪತ್ರ: ನೂರಕ್ಕೂ ಹೆಚ್ಚು ಜನರಿಗೆ ಪತ್ರ ಬರೆದ ಆರೋಪಿಯ ಸುಳಿವು ಸಿಕ್ಕಿದ್ದು ಎಲ್ಲಿ ಗೊತ್ತಾ?](https://images.tv9kannada.com/wp-content/uploads/2023/10/shivajiraw-accused.jpg?w=1280)
ದಾವಣಗೆರೆ ಅ.01: ಸಾಹಿತಿಗಳಿಗೆ (Literature) ಕೊಲೆ ಬೆದರಿಕೆ ಪತ್ರ ಬರೆದಿದ್ದ ಆರೋಪಿ ಶಿವಾಜಿರಾವ್ ಜಾಧವ ಅನ್ನು ಸಿಸಿಬಿ (CCB) ಪೊಲೀಸರು ಬಂದಿದ್ದು, ಈತ ದಾವಣಗೆರೆ ನಗರದ ಜಾಲಿನಗರ ಇಡ್ಲೂಎಸ್ ಕಾಲೋನಿ ನಿವಾಸಿಯಾಗಿದ್ದಾನೆ. ಶಿವಾಜಿರಾವ್ ಜಾಧವ್ ದಾವಣಗೆರೆ ಜಿಲ್ಲಾ ಹಿಂದು ಜಾಗರಣ ವೇದಿಕೆಯ (Hindu Jagarana Vedike) ಸಹ ಸಂಚಾಲಕನಾಗಿದ್ದಾನೆ. ಶಿವಾಜಿರಾವ್ ಜಾಧವ್ ಓದಿದ್ದು ಎಂಟನೇ ತರಗತಿ ಮಾತ್ರ. ಆರೋಪಿ ಶಿವಾಜಿರಾವ್ ಜಾಧವ ಈಗಾಗಲೇ ನೂರಕ್ಕೂ ಹೆಚ್ಚು ಬೆದರಿಕೆ ಪತ್ರ ಬರೆದು ಪೋಸ್ಟ್ ಮಾಡಿರುವುದಾಗಿ ಸಿಸಿಬಿ ಪೊಲೀಸರ ಎದರು ಬಾಯಿಬಿಟ್ಟಿದ್ದಾನೆ.
ಅಲ್ಲದೆ ಈತನಿಗೆ ಹಲವರು ಸಾಥ್ ನೀಡಿರುವ ಸಾಧ್ಯತೆ ಇದೆ ಎಂದು ಸಿಸಿಬಿ ಪೊಲೀಸರು ಶಂಕಿಸಿದ್ದಾರೆ. ಈತ ಪತ್ರ ಬರೆದು ಶಿವಮೊಗ್ಗ, ಚಿತ್ರದುರ್ಗ, ಹಾವೇರಿ ಸೇರಿದಂತೆ ಹತ್ತಾರು ಜಿಲ್ಲೆಗಳಿಗೆ ತೆರಳಿ ಬೇರೆ ಬೇರೆ ಅಂಚೆ ಕಚೇರಿ ಮೂಲಕ ಪೋಸ್ಟ್ ಮಾಡುತ್ತಿದ್ದನು. ಆದರೆ ಈತನ ಸುಳಿವು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಅಂಚೆ ಕಚೇರಿಯ ಬಳಿ ಸಿಕ್ಕಿದೆ.
ಇದನ್ನೂ ಓದಿ: ಸಾಹಿತಿಗಳಿಗೆ ಬೆದರಿಕೆ ಪತ್ರ ಪ್ರಕರಣ: ಆರೋಪಿ ಸಿಸಿಬಿ ಬಲೆಗೆ ಬಿದ್ದಿದ್ದು ಹೇಗೆ? ಇಲ್ಲಿದೆ ಮಾಹಿತಿ
ಆರೋಪಿ ಶಿವಾಜಿರಾವ್ ವಿರುದ್ಧ ಬೆಂಗಳೂರಿನ ಸಂಜಯನಗರ, ಬಸವೇಶ್ವರನಗರ, ಹಾರೋಹಳ್ಳಿ, ಚಿತ್ರದುರ್ಗ ಹಾಗೂ ಕೊಟ್ಟೂರಿನಲ್ಲಿ ಬೆದರಿಕೆ ದೂರು ದಾಖಲಾಗಿವೆ. ಇತ್ತೀಚಿಗೆ ಸಾಹಿತಿಗಳು ಸಾಹಿತಿಗಳಾದ ಕುಂ ವೀರಭದ್ರಪ್ಪ, ಬಿ.ಎಲ್. ವೇಣು, ಬಂಜೆಗೆರೆ ಜಯಪ್ರಕಾಶ, ಬಿಟಿ ಲಲಿತಾ ನಾಯ್ಕ, ವಸುಂಧರಾ ಭೂಪತಿ ಸೇರಿದಂತೆ ಹಲವರು ತಮಗೆ ಬಂದ ಬೆದರಿಕೆ ಪತ್ರದ ವಿಚಾರವಾಗಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಆರೋಪಿಗಳ ಪತ್ತೆಗೆ ಮನವಿ ಮಾಡಿದ್ದರು. ಸಿಸಿ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹತ್ತು ದಿನ ಕಸ್ಟಡಿಗೆ ಪಡೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ