ಅಪಘಾತಕ್ಕೆ ಪರಿಹಾರ ನೀಡಿಲ್ಲ; ದಾವಣಗೆರೆಯಲ್ಲಿ ಎರಡು ಸರ್ಕಾರಿ ಬಸ್​ಗಳು ಜಪ್ತಿ

| Updated By: sandhya thejappa

Updated on: Sep 23, 2021 | 5:28 PM

2009ರ ಆಗಸ್ಟ್ 8ರಂದು ಬೆಂಗಳೂರಿನಿಂದ ದಾವಣಗೆರೆಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿತ್ತು. ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಳಗಾವಿ ಡಿಪೋದಿಂದ 41,11,200 ರೂ. ಪರಿಹಾರಕ್ಕೆ ಸೂಚನೆ ನೀಡುವಂತೆ ಸೂಚಿಸಿತ್ತು.

ಅಪಘಾತಕ್ಕೆ ಪರಿಹಾರ ನೀಡಿಲ್ಲ; ದಾವಣಗೆರೆಯಲ್ಲಿ ಎರಡು ಸರ್ಕಾರಿ ಬಸ್​ಗಳು ಜಪ್ತಿ
ವಶಕ್ಕೆ ಪಡೆದ ಎರಡು ಸರ್ಕಾರಿ ಬಸ್​ಗಳು
Follow us on

ದಾವಣಗೆರೆ: ಅಪಘಾತ ಪರಿಹಾರ ನೀಡದ ಹಿನ್ನೆಲೆ ಸರ್ಕಾರಿ ಬಸ್​ಗಳನ್ನ ಜಪ್ತಿ ಮಾಡಲಾಗಿದೆ. ದಾವಣಗೆರೆ ಬಸ್ ನಿಲ್ದಾಣದಲ್ಲಿ 2 ಕೆಎಸ್ಆರ್​ಟಿಸಿ ಬಸ್​ಗಳನ್ನ ಜಪ್ತಿ ಮಾಡಿದ್ದಾರೆ. 2009ರ ಆಗಸ್ಟ್ 8ರಂದು ಕೆಎಸ್ಆರ್​ಟಿಸಿ ಬಸ್ ಅಪಘಾತವಾಗಿತ್ತು. ಸುದೀಪ್ ಎಂಬುವವರು ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರು. ಕಾಲು ಕಳೆದುಕೊಂಡಿದ್ದ ಸುದೀಪ್​ಗೆ ಪರಿಹಾರ ನೀಡುವಂತೆ ಆದೇಶ ನೀಡಲಾಗಿತ್ತು. ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿತ್ತು. ಆದರೆ ಪರಿಹಾರ ನೀಡದ ಹಿನ್ನೆಲೆ ಬಸ್​ಗಳನ್ನ ಜಪ್ತಿ ಮಾಡಲಾಗಿದೆ.

2009ರ ಆಗಸ್ಟ್ 8ರಂದು ಬೆಂಗಳೂರಿನಿಂದ ದಾವಣಗೆರೆಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿತ್ತು. ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಳಗಾವಿ ಡಿಪೋದಿಂದ 41,11,200 ರೂ. ಪರಿಹಾರಕ್ಕೆ ಸೂಚನೆ ನೀಡುವಂತೆ ಸೂಚಿಸಿತ್ತು. ಕಾಲು ಕಳೆದುಕೊಂಡ ವ್ಯಕ್ತಿಗೆ ಪರಿಹಾರ ನೀಡದ ಹಿನ್ನೆಲೆ ಬೆಳಗಾವಿ ಡಿಪೋಗೆ ಸೇರಿದ ಎರಡು ಬಸ್​ಗಳನ್ನ ಜಪ್ತಿ ಮಾಡಿದ್ದಾರೆ. ಕೋರ್ಟ್ ಅಮೀನ್ ಸಮ್ಮುಖದಲ್ಲಿ ಕೆಎಸ್ಆರ್​​ಟಿಸಿ ಬಸ್​ಗಳನ್ನ ವಶಕ್ಕೆ ಪಡೆಯಲಾಗಿದೆ.

ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ
ನಿಂತಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡೂ ಲಾರಿಗಳು ಪಲ್ಟಿಯಾಗಿವೆ. ಡಿಕ್ಕಿ ಹೊಡೆದ ಲಾರಿ ಚಾಲಕ ಶಂಕ್ರಯ್ಯ ಪೂಜಾರ ಸಾವನ್ನಪ್ಪಿದ್ದಾರೆ. ಈ ಘಟನೆ ಬಾಗಲಕೋಟೆ ತಾಲೂಕಿನ ಶಿರೂರು ಗ್ರಾಮದ ಬಳಿ ಬೆಳಗಿನ ಜಾವ ಸಂಭವಿಸಿದೆ. ಘಟನಾ ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತ ವ್ಯಕ್ತಿ ಇಳಕಲ್ ತಾಲೂಕಿನ ಗುಡೂರು ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.

ಇದನ್ನೂ ಓದಿ

ಇದು ಐಪಿಎಲ್​…ಕ್ರಿಸ್ ಗೇಲ್​ಗೆ ಸಿಕ್ಕಿದ್ದು 8 ಕೋಟಿ ರೂ, ಕೇದರ್ ಜಾಧವ್ ಪಡೆದಿದ್ದು 25 ಕೋಟಿ ರೂ..!

ಟಾಲಿವುಡ್​ ನಾನಿ ಸಿನಿಮಾ ಸೆಟ್​ ಸೇರಿಕೊಂಡ ದೀಕ್ಷಿತ್​ ಶೆಟ್ಟಿ; ‘ದಿಯಾ’ ಹೀರೋಗೆ ಬಂಪರ್​ ಆಫರ್​

(Two KSRTC Bus seized for dint give Compensation to injury)