ಎಂಇಎಸ್ ಬ್ಯಾನ್​ಗೆ ಆಗ್ರಹ​: ಬಂದ್​ ಕೈಬಿಟ್ಟು, ಪ್ರತಿಭಟನೆ ನಡೆಸುತ್ತಿದ್ದ ವಾಟಾಳ್ ನಾಗರಾಜ್‌ ಬೆಂಗಳೂರು ಪೊಲೀಸರ ವಶಕ್ಕೆ

ವಾಟಾಳ್ ಸೇರಿದಂತೆ ಕನ್ನಡ ಪರ ಸಂಘಟನೆಗಳ ಇತರೆ ಕಾರ್ಯಕರ್ತರನ್ನೂ ವಶಕ್ಕೆ ಪಡೆಯಲಾಗಿದೆ. ಎಂಇಎಸ್ ಬ್ಯಾನ್ ಮಾಡುವಂತೆ ಒತ್ತಾಯಿಸಿ ಟೌನ್‌ಹಾಲ್‌ನಿಂದ ಫ್ರೀಡಂಪಾರ್ಕ್‌ವರೆಗೆ ಪ್ರತಿಭಟನಾಕಾರರು ತೆರಳುತ್ತಿದ್ದರು.

ಎಂಇಎಸ್ ಬ್ಯಾನ್​ಗೆ ಆಗ್ರಹ​: ಬಂದ್​ ಕೈಬಿಟ್ಟು, ಪ್ರತಿಭಟನೆ ನಡೆಸುತ್ತಿದ್ದ ವಾಟಾಳ್ ನಾಗರಾಜ್‌ ಬೆಂಗಳೂರು ಪೊಲೀಸರ ವಶಕ್ಕೆ
ವಾಟಾಳ್ ನಾಗರಾಜ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 31, 2021 | 1:30 PM

ಬೆಂಗಳೂರು: ಬೆಂಗಳೂರಿನ ಕಾರ್ಪೊರೇಷನ್ ಸರ್ಕಲ್ ಬಳಿಯೇ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಾಟಾಳ್ ಸೇರಿದಂತೆ ಕನ್ನಡ ಪರ ಸಂಘಟನೆಗಳ ಇತರೆ ಕಾರ್ಯಕರ್ತರನ್ನೂ ವಶಕ್ಕೆ ಪಡೆಯಲಾಗಿದೆ. ಎಂಇಎಸ್ ಬ್ಯಾನ್ ಮಾಡುವಂತೆ ಒತ್ತಾಯಿಸಿ ಟೌನ್‌ಹಾಲ್‌ನಿಂದ ಫ್ರೀಡಂಪಾರ್ಕ್‌ವರೆಗೆ ಪ್ರತಿಭಟನಾಕಾರರು ತೆರಳುತ್ತಿದ್ದರು. ಪ್ರತಿಭಟನಾನಿರತ  ವಾಟಾಳ್ ನಾಗರಾಜ್‌ ಮತ್ತಿತರರನ್ನು ಬಿಎಂಟಿಸಿ ಬಸ್ ನಲ್ಲಿ ಪೊಲೀಸರು ಕರೆದೊಯ್ದಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಹಾಜರಿದ್ದರು.

MES ನಿಷೇಧ ಮಾಡದಿದ್ದರೆ ಮತ್ತೆ ಹೋರಾಟ, ಆಗ ಸಿಎಂ ಬೊಮ್ಮಾಯಿ ಕರೆದರೂ ಹೋಗುವುದಿಲ್ಲ -ವಾಟಾಳ್​ ಅದಕ್ಕೂ ಮುನ್ನ ಟೌನ್​ಹಾಲ್​ ಬಳಿ ಮಾತನಾಡಿದ ವಾಟಾಳ್​ ನಾಗರಾಜ್​ ರಾಜ್ಯದಲ್ಲಿ ಎಂಇಎಸ್ ಬ್ಯಾನ್ ಮಾಡಲೇಬೇಕು ಎಂದು ಸಿಎಂ ಬೊಮ್ಮಾಯಿಗೆ ಒತ್ತಾಯ ಮಾಡುತ್ತೇವೆ. ಸಿಎಂ ಮಾತಿಗೆ ಬೆಲೆ ಕೊಟ್ಟು ಬಂದ್ ಮುಂದೂಡಿದ್ದೇವೆ. ಸಿಎಂ ಬೊಮ್ಮಾಯಿ ಮೇಲೆ ನಮಗೆ ಭರವಸೆ ಇದೆ. MES ನಿಷೇಧ ಮಾಡದಿದ್ದರೆ ಮತ್ತೆ ಹೋರಾಟ ಮಾಡುತ್ತೇವೆ. ಆಗ ಸಿಎಂ ಬೊಮ್ಮಾಯಿ ಕರೆದರೂ ನಾವು ಹೋಗುವುದಿಲ್ಲ. ಜನವರಿ 22ರವರೆಗೆ ರಾಜ್ಯ ಸರ್ಕಾರಕ್ಕೆ ಡೆಡ್‌ಲೈನ್. ಅಷ್ಟರೊಳಗೆ ಎಂಇಎಸ್ ಬ್ಯಾನ್ ಮಾಡಲೇಬೇಕು ಎಂದು ಹೇಳಿದರು.

ಜನವರಿ 5 ರಂದು ಕನ್ನಡ ಸಂಘಟನೆಗಳ ಸಭೆ: ಬೆಳಗಾವಿಯಲ್ಲಿ ಬೃಹತ್ ಮೇಳವನ್ನು ಆಯೋಜಿಸುತ್ತೇವೆ. ಮೇಳದ ಬಗ್ಗೆ ಸದ್ಯದಲ್ಲಿಯೇ ಮಾಹಿತಿ ನೀಡುತ್ತೇವೆ. ಕೇಂದ್ರದ ಮೇಲೆ ಬಿಜೆಪಿ ಸಂಸದರು ಒತ್ತಡ ಹಾಕಬೇಕು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂಇಎಸ್ ಏಜೆಂಟರು ಎಂದು ರಾಜಕೀಯ ಪಕ್ಷಗಳ ವಿರುದ್ಧ ವಾಟಾಳ್ ನಾಗರಾಜ್ ಕಿಡಿ ಕಾರಿದರು. ಜನವರಿ 5 ರಂದು ಕನ್ನಡ ಸಂಘಟನೆಗಳ ಸಭೆ ಇದೆ. ಸಭೆ ಬಳಿಕ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.

ಯಾರ ಒತ್ತಡಕ್ಕೂ ಮಣಿದು ಬಂದ್ ವಾಪಸ್ ಪಡೆದಿಲ್ಲ.ನಾವು ರಾಜ್ಯ ಬಂದ್‌ ಕೈಬಿಟ್ಟಿಲ್ಲ, ಬಂದ್‌ ಮುಂದೂಡಿದ್ದೇವೆ. ನನಗೆ ಸಾಕಷ್ಟು ಒತ್ತಡಗಳು ಬಂದಿತ್ತು, ಯಾವುದಕ್ಕೂ ಬಗ್ಗಿಲ್ಲ. ನನ್ನ ಜೀವನದಲ್ಲಿ ಯಾವತ್ತೂ ಇಷ್ಟು ಒತ್ತಡ ಬಂದಿರಲಿಲ್ಲ. ಕೊರೊನಾಗೂ ಬಂದ್ ಗೂ ಯಾವುದೇ ಸಂಬಂಧವಿಲ್ಲ. ಬಂದ್ ಮಾಡಿದ್ರೆ ಇನ್ನೂ ಒಳ್ಳೆಯದು ‌ಅಲ್ವಾ!? ಜನರು ಮನೆಯಲ್ಲಿ ಇರ್ತಾರೆ ಸುರಕ್ಷಿತವಾಗಿ. ಎಂಇಎಸ್ ನಿಷೇಧ ಮಾಡಲೇಬೇಕು, ಇದರಲ್ಲಿ ರಾಜಿ ಇಲ್ಲ. ಸಿಎಂ ಬೊಮ್ಮಾಯಿ ಮಾತು ಉಳಿಸಿಕೊಳ್ತಾರೆಂಬ ವಿಶ್ವಾಸವಿದೆ. ಮಾತು ಉಳಿಸಿಕೊಳ್ಳದಿದ್ದರೆ ರಸ್ತೆಗಿಳಿದು ಬಂದ್ ಘೋಷಿಸ್ತೇವೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್‌ ಎಚ್ಚರಿಸಿದರು.

ಇದನ್ನೂ ಓದಿ: ಅಂತೂ ಇಂತೂ ಇಂದಿನ ಬಂದ್​ ಕ್ಯಾನ್ಸಲ್, ಮುಂದಿನ ಬಂದ್ ಯಾವಾಗ ಎಂದು ಘೋಷಿಸಿದ ವಾಟಾಳ್​ ನಾಗರಾಜ್!

ರಾಜ್ಯದಲ್ಲಿ MES ನಿಷೇಧಕ್ಕೆ ಒತ್ತಾಯಿಸಿ ವಾಟಾಳ್​ ನಾಗರಾಜ್​ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ Rally | TV9Kannada

Published On - 1:10 pm, Fri, 31 December 21

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?