ಪ್ರಿಯತಮೆಗೆ ಬಾಡಿಗೆ ಮನೆ ಮಾಡಿಟ್ಟಿದ್ದ: ಆಗಾಗ ಬಂದು ಹೋಗುತ್ತಿದ್ದವ ನಿನ್ನೆ ಕೊಂದು ಹೋದ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಚಾಕುವಿನಿಂದ ಇರಿದು ಪ್ರಿಯತಮೆಯನ್ನು ಪ್ರಿಯಕರ ಕೊಲೆಗೈದಿರುವಂತಹ ಘಟನೆ ನಡೆದಿದೆ. 4 ತಿಂಗಳ ಹಿಂದೆ ಹೊಸಕೋಟೆಯಲ್ಲಿ ವೇಣು ಬಾಡಿಗೆ ಮನೆಮಾಡಿ ಇರಿಸಿದ್ದ. ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡಿಕೊಂಡು ಒಂಟಿಯಾಗಿದ್ದಳು. ನಿನ್ನೆ ಮನೆಗೆ ಬಂದಿದ್ದ ವೇಣು ಕೊಲೆ ಮಾಡಿ ಮುಂಜಾನೆ ಪರಾರಿ ಆಗಿದ್ದಾನೆ.

ಪ್ರಿಯತಮೆಗೆ ಬಾಡಿಗೆ ಮನೆ ಮಾಡಿಟ್ಟಿದ್ದ: ಆಗಾಗ ಬಂದು ಹೋಗುತ್ತಿದ್ದವ ನಿನ್ನೆ ಕೊಂದು ಹೋದ
ಪ್ರಿಯತಮೆಗೆ ಬಾಡಿಗೆ ಮನೆ ಮಾಡಿಟ್ಟಿದ್ದ, ಆಗಾಗ ಬಂದು ಹೋಗುತ್ತಿದ್ದವ ನಿನ್ನೆ ಕೊಂದು ಹೋದ
Edited By:

Updated on: Jun 24, 2024 | 10:09 PM

ದೇವನಹಳ್ಳಿ, ಜೂನ್​ 24: ಚಾಕುವಿನಿಂದ ಇರಿದು (stabbed) ಪ್ರಿಯತಮೆಯನ್ನು (lover) ಪ್ರಿಯಕರ ಕೊಲೆಗೈದಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ದುಷ್ಕೃತ್ಯ ನಡೆದಿದೆ. ಆಂಧ್ರಪ್ರದೇಶದ ಮೂಲದ ಹೇಮಾವತಿ(35) ಮೃತ ಮಹಿಳೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮೂಲದ ವೇಣುನಿಂದ ಕೃತ್ಯವೆಸಗಲಾಗಿದೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

4 ತಿಂಗಳ ಹಿಂದೆ ಹೊಸಕೋಟೆಯಲ್ಲಿ ವೇಣು ಬಾಡಿಗೆ ಮನೆಮಾಡಿ ಇರಿಸಿದ್ದ. ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡಿಕೊಂಡು ಒಂಟಿಯಾಗಿದ್ದಳು. ಆಗಾಗ ವೇಣು ಹೇಮಾವತಿ ಮನೆಗೆ ಬಂದು ಇದ್ದು ಹೋಗುತ್ತಿದ್ದ. ನಿನ್ನೆ ಮನೆಗೆ ಬಂದಿದ್ದ ವೇಣು ಕೊಲೆ ಮಾಡಿ ಮುಂಜಾನೆ ಪರಾರಿ ಆಗಿದ್ದಾನೆ.

ಇದನ್ನೂ ಓದಿ: ಬಾಡಿಗೆ ಆಸೆಗೆ ಬಿದ್ದು ಕೋಟ್ಯಾಂತರ ರೂ ವೆಚ್ಚದ ಮನೆ, ಫ್ಲಾಟ್​ ಕಳೆದುಕೊಂಡ ಮಾಲೀಕರು: ವಂಚಿಸಿ ಪರಾರಿಯಾದ ಬ್ರೋಕರ್​

ಕೊಲೆ ಮಾಡಿ ಚಿಂತಾಮಣಿಗೆ ಹೋಗಿ ಮನೆಯಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಸ್ವಸ್ಥ ವೇಣುನನ್ನು ಚಿಕ್ಕಬಳ್ಳಾಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕೊಟ್ಟ ಸಾಲ ವಾಪಸ್ ಕೊಡದಿದ್ದಕ್ಕೆ ಸ್ನೇಹಿತನ ಬರ್ಬರ ಹತ್ಯೆ

ಬೀದರ್​: ಕೊಟ್ಟ ಸಾಲ ವಾಪಸ್ ಕೊಡದಿದ್ದಕ್ಕೆ ಸ್ನೇಹಿತನ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಬೀದರ್ ತಾಲೂಕಿನ ಯಾಕತನಪುರ ಗ್ರಾಮದ ಬಳಿ ದುಷ್ಕೃತ್ಯ ನಡೆದಿದೆ. ಮೊಹಮ್ಮದ್ ಸಿರಾಜ್ ತಲೆಗೆ ಸುತ್ತಿಗೆಯಿಂದ ಹೊಡೆದು ಬಾಲ್ಯಸ್ನೇಹಿತ ಯಾಸೀನ್​ ಕೊಲೆ ಮಾಡಿದ್ದಾನೆ. ಆರೋಪಿ ಯಾಸೀನ್​ನ್ನು ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ ಮಾಡಲಾಗುತ್ತಿದೆ. ಮನ್ನಾಖೇಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಖಾಸಗಿ ಬಸ್​ಗಳ ಮಧ್ಯೆ ಟೈಮಿಂಗ್ಸ್ ಫೈಟ್: ಓವರ್ ಟೇಕ್ ಮಾಡುವ ಭರದಲ್ಲಿ ಅಪಘಾತ

ಮಂಗಳೂರು: ಖಾಸಗಿ ಬಸ್​ಗಳ ಮಧ್ಯೆ ಟೈಮಿಂಗ್ಸ್ ಫೈಟ್ ಹಿನ್ನೆಲೆ ಓವರ್ ಟೇಕ್ ಮಾಡುವ ಭರದಲ್ಲಿ ಅಪಘಾತ ಸಂಭವಿಸಿರುವಂತಹ ಘಟನೆ ಮಂಗಳೂರು ನಗರದ ಜ್ಯೋತಿ ಎಂಬಲ್ಲಿ ನಡೆದಿದೆ. ಮಂಗಳೂರಿನಿಂದ ಉಡುಪಿ ಕಡೆಗೆ ಎರಡು ಖಾಸಗಿ ಬಸ್​ಗಳು ಸಂಚರಿಸುತ್ತಿದ್ದವು.

ಇದನ್ನೂ ಓದಿ: ತುಮಕೂರು: ಹಲ್ಲೆಗೆ ಯತ್ನ, ಕಳ್ಳತನದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

ಪ್ರಯಾಣಿಕರನ್ನು ಪಿಕಪ್ ಮಾಡಲು ಬಸ್​ಗಳ ಮಧ್ಯೆ ಪೈಪೋಟಿಗೆ ಇಳಿದಿದ್ದು, ಓವರ್ ಟೇಕ್ ಮಾಡುವಾಗ ಎರಡು ಬಸ್​ಗಳ ನಡುವೆ ಅಪಘಾತ ನಡೆದಿದೆ. ಅಪಘಾತ ಬಳಿಕ ನಡುರಸ್ತೆಯಲ್ಲೇ ಬಸ್ ನಿಲ್ಲಿಸಿ ಬಸ್ ಸಿಬ್ಬಂದಿಗಳ ಮಾತಿನ ಚಕಮಕಿ ಉಂಟಾಗಿದೆ.

ಖಾಸಗಿ ಬಸ್ ಸಿಬ್ಬಂದಿಗಳ ಟೈಮಿಂಗ್ಸ್ ಫೈಟ್​ಗೆ ಸಾರ್ವಜನಿಕರು ಕಿಡಿ ಕಾರಿದ್ದು ನಿಯಮ ಉಲ್ಲಂಘಿಸುವ ಚಾಲಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Naveen Kumar

ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.

Read More
Follow Us