ತುಮಕೂರು: ಹಲ್ಲೆಗೆ ಯತ್ನ, ಕಳ್ಳತನದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಈಜಿಹಳ್ಳಿ ಗ್ರಾಮದಲ್ಲಿ ಪೊಲೀಸರ ಮೇಲೆಯೆ ಹಲ್ಲೆಗೆ ಯತ್ನ ಹಿನ್ನೆಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್ ಮಾಡಿರುವಂತಹ ಘಟನೆ ನಡೆದಿದೆ. ಬಂಧಿಸಲು ತೆರಳಿದ್ದಾಗ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಮಧುಗಿರಿ ಸಿಪಿಐ ಹನುಮಂತರಾಯಪ್ಪ ಫೈರಿಂಗ್ ಮಾಡಿದ್ದಾರೆ. ಸದ್ಯ ಆರೋಪಿಗೆ ಚಿಕಿತ್ಸೆ ನೀಡಲಾಗಿದೆ.

ತುಮಕೂರು: ಹಲ್ಲೆಗೆ ಯತ್ನ, ಕಳ್ಳತನದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
ತುಮಕೂರು: ಹಲ್ಲೆಗೆ ಯತ್ನ, ಕಳ್ಳತನದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
Follow us
ಮಹೇಶ್ ಇ, ಭೂಮನಹಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on:Jun 24, 2024 | 4:25 PM

ತುಮಕೂರು, ಜೂನ್​ 24: ಪೊಲೀಸರ ಮೇಲೆಯೆ ಹಲ್ಲೆಗೆ ಯತ್ನ ಹಿನ್ನೆಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್ (firing) ಮಾಡಿರುವಂತಹ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಈಜಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಳ್ಳತನದ ಆರೋಪಿ ಆಂಧ್ರದ ಹಿಂದೂಪುರ ಮೂಲದ ರಿಜ್ವಾನ್ ಮೇಲೆ ಪೊಲೀಸರಿಂದ (police) ಗುಂಡಿನ ದಾಳಿ ಮಾಡಲಾಗಿದೆ. ಹಲವು ಕಳ್ಳತನ ಕೇಸ್​ಗಳಲ್ಲಿ ಆರೋಪಿ ರಿಜ್ವಾನ್ ಪೊಲೀಸರಿಗೆ ಬೇಕಾಗಿದ್ದ. ಹೀಗಾಗಿ ಈಜಿಹಳ್ಳಿ ಬಳಿ ಬಂಧಿಸಲು ತೆರಳಿದ್ದಾಗ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಮಧುಗಿರಿ ಸಿಪಿಐ ಹನುಮಂತರಾಯಪ್ಪ ಫೈರಿಂಗ್ ಮಾಡಿದ್ದಾರೆ.

ಕಾನ್ಸ್‌ಟೇಬಲ್‌ ರಮೇಶ್ ಮೇಲೆ ಬಿಯರ್ ಬಾಟಲ್‌ನಿಂದ ಆರೋಪಿ ರಿಜ್ವಾನ್ ಹಲ್ಲೆಗೆ ಯತ್ನಿಸಿದ್ದ. ಸದ್ಯ ರಮೇಶ್‌ ಎಡಗೈಗೆ ಗಾಯವಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆರೋಪಿ ರಿಜ್ವಾನ್‌ಗೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ ಕ್ರೈಂ ಡೈರಿ: ಆಕಾಶ್ ಮಠಪತಿ ಕೊಲೆ ಬೆನ್ನಲ್ಲೇ ಮತ್ತೊಂದು ಶವ ಪತ್ತೆ

ಫೈರಿಂಗ್ ಸ್ಥಳಕ್ಕೆ ಎಸ್‌ಪಿ ಅಶೋಕ್‌ ಕೆ ವೆಂಕಟ್‌ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ತಾಲೂಕು ಆಸ್ಪತ್ರೆಗೂ ಎಸ್‌ಪಿ ಭೇಟಿ ನೀಡಿ ಕಾನ್ಸ್‌ಟೇಬಲ್‌ ಆರೋಗ್ಯ ವಿಚಾರಣೆ ಮಾಡಿದ್ದಾರೆ. ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಚಾಕುವಿನಿಂದ ಇರಿದು ಪ್ರಿಯತಮೆಯ ಕೊಲೆ ಮಾಡಿದ ಪ್ರಿಯಕರ 

ದೇವನಹಳ್ಳಿ: ಚಾಕುವಿನಿಂದ ಇರಿದು ಪ್ರಿಯತಮೆಯನ್ನು ಪ್ರಿಯಕರ ಕೊಲೆ ಮಾಡಿರುವಂತಹ ಘಟನೆ ಹೊಸಕೋಟೆ ನಗರದ ಕಾಲೇಜು ರಸ್ತೆಯಲ್ಲಿ ನಡೆದಿದೆ. ಆಂಧ್ರ ಮೂಲದ ಹೇಮಾವತಿ (35) ಮೃತ ಮಹಿಳೆ. ಚಿಂತಾಮಣಿ ಮೂಲದ ವೇಣು ಎಂಬುವನಿಂದ ಕೊಲೆ ಮಾಡಿರುವುದಾಗಿ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: Online Job Fraud: ಆನ್​​ಲೈನ್ ಜಾಬ್ ವಂಚನೆಯಲ್ಲಿಯೂ ಬೆಂಗಳೂರೇ ಕರ್ನಾಟಕ ರಾಜಧಾನಿ!

ಕಳೆದ ನಾಲ್ಕು ತಿಂಗಳಿಂದ ಹೊಸಕೋಟೆಯಲ್ಲಿ ಬಾಡಿಗೆ ಮನೆ ಮಾಡಿ ಮೃತ ಮಹಿಳೆಯನ್ನಿಟ್ಟಿದ್ದ ಆರೋಪಿ‌. ಮೃತ ಮಹಿಳೆ ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡಿಕೊಂಡು ಒಂಟಿಯಾಗಿದ್ದ. ಆಗಾಗ ಮನೆಗೆ ಬರುತ್ತಿದ್ದ ವೇಣು ಕೆಲ ದಿನ ಇದ್ದು ಹೋಗುತ್ತಿದ್ದ. ನಿನ್ನೆ ಕೂಡ ಮನೆಗೆ ಬಂದಿದ್ದ ವೇಣುನಿಂದ ಮುಂಜಾನೆ ಕೊಲೆ ಮಾಡಿ ಪರಾರಿ ಆಗಿದ್ದಾನೆ.

ಕೊಲೆ ಮಾಡಿ ಚಿಂತಾಮಣಿಗೆ ಹೋಗಿದ್ದ. ಈ ವೇಳೆ ಮನೆಯಲ್ಲಿ ತಾನು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದ್ದವನನ್ನ ಚಿಕ್ಕಬಳ್ಳಾಪುರ ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:09 pm, Mon, 24 June 24