Online Job Fraud: ಆನ್​​ಲೈನ್ ಜಾಬ್ ವಂಚನೆಯಲ್ಲಿಯೂ ಬೆಂಗಳೂರೇ ಕರ್ನಾಟಕ ರಾಜಧಾನಿ!

ಐಟಿ ಹಬ್ ಎಂದೇ ಖ್ಯಾತಿವೆತ್ತ ಬೆಂಗಳೂರಿಗೆ ಇದೀಗ ಆನ್​ಲೈನ್ ಜಾಬ್ ವಂಚನೆ ಪ್ರಕರಣಗಳ ರಾಜಧಾನಿ ಎಂಬ ಹಣೆಪಟ್ಟಿಯೂ ತಗಲಿದೆ. ಇದಕ್ಕೆ ಕಾರಣ ನಗರದಲ್ಲಿ ಹೆಚ್ಚುತ್ತಿರುವ ಆನ್​ಲೈನ್ ವಂಚನೆ ಪ್ರಕರಣಗಳು. ರಾಜ್ಯ ಅಪರಾಧ ದಾಖಲೆಗಳ ಬ್ಯೂರೋದ ಅಂಕಿಅಂಶಗಳಿಂದ ಬೆಂಗಳೂರಿನ ಆನ್​ಲೈನ್ ವಂಚನೆ ಪ್ರಕರಣಗಳ ಬಗ್ಗೆ ತಿಳಿದುಬಂದ ಮಾಹಿತಿ ಇಲ್ಲಿದೆ.

Online Job Fraud: ಆನ್​​ಲೈನ್ ಜಾಬ್ ವಂಚನೆಯಲ್ಲಿಯೂ ಬೆಂಗಳೂರೇ ಕರ್ನಾಟಕ ರಾಜಧಾನಿ!
ಆನ್​​ಲೈನ್ ಜಾಬ್ ವಂಚನೆಯಲ್ಲಿಯೂ ಬೆಂಗಳೂರೇ ಕರ್ನಾಟಕ ರಾಜಧಾನಿ! (ಸಾಂದರ್ಭಿಕ ಚಿತ್ರ)
Follow us
Ganapathi Sharma
|

Updated on:Jun 24, 2024 | 9:24 AM

ಬೆಂಗಳೂರು, ಜೂನ್ 24: ಕರ್ನಾಟಕದಲ್ಲಿ (Karnataka) 2020 ರಿಂದ ವರದಿಯಾದ ಆನ್‌ಲೈನ್ ಉದ್ಯೋಗ ವಂಚನೆಗಳಲ್ಲಿ (Online Job Fraud) ಸುಮಾರು ಶೇ 73 ರಷ್ಟು ಬೆಂಗಳೂರಿನಲ್ಲೇ ನಡೆದಿವೆ. ಇಂಥ ಆನ್​ಲೈನ್​ ಉದ್ಯೋಗ ವಂಚನೆಗೆ ಒಳಗಾದವರಲ್ಲಿ ಟೆಕ್ಕಿಗಳು ಮತ್ತು ವಿದ್ಯಾರ್ಥಿಗಳು ಶೇ 20-30 ರಷ್ಟಿದ್ದರೆ ಉಳಿದವರು ನಿರುದ್ಯೋಗಿಗಳು ಮತ್ತು ಪವೀಧರರು ಎಂಬುದು ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ (SCRB) ದತ್ತಾಂಶಗಳಿಂದ ತಿಳಿದುಬಂದಿದೆ.

ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಆನ್‌ಲೈನ್ ಉದ್ಯೋಗ ವಂಚನೆಗಳು ನಿರಂತರವಾಗಿ ಹೆಚ್ಚಿವೆ. 2020 ರ ಜನವರಿ 1 ಮತ್ತು 2024 ರ ಮೇ 25 ರ ನಡುವೆ ಒಟ್ಟು 9,479 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 6,905 ಪ್ರಕರಣಗಳು ಬೆಂಗಳೂರು ನಗರದಲ್ಲೇ ವರದಿಯಾಗಿವೆ ಎಂಬುದು ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ ಅಂಕಿಅಂಶಗಳಿಂದ ಗೊತ್ತಾಗಿದೆ.

ಕಳೆದ ವರ್ಷ 4,098 ಪ್ರಕರಣಗಳು ವರದಿಯಾಗಿದ್ದು, ಈ ವರ್ಷ (ಮೇ 25 ರವರೆಗೆ) ಸಂಖ್ಯೆ ಈಗಾಗಲೇ ಕಳೆದ ವರ್ಷದ ಅರ್ಧಕ್ಕಿಂತಲೂ ಹೆಚ್ಚು (2,185) ವರದಿಯಾಗಿವೆ ಎಂದು ಎಸ್​​​ಸಿಆರ್​ಬಿ ದತ್ತಾಂಶ ಉಲ್ಲೇಖಿಸಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಈ ವರ್ಷ ಒಟ್ಟು ಪ್ರಕರಣಗಳು 5,000 ದಾಟಬಹುದು ಎಂದು ತನಿಖಾಧಿಕಾರಿಗಳು ಅಂದಾಜಿಸಿದ್ದಾರೆ. ಆದರೆ ಹೆಚ್ಚಿದ ಜಾಗೃತಿಯಿಂದಾಗಿ ಆನ್​ಲೈನ್ ಉದ್ಯೋಗ ವಂಚನೆ ಘಟನೆಗಳಿಗೆ ಕಡಿವಾಣ ಬೀಳುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರುವುದಾಗಿ ವರದಿ ಉಲ್ಲೇಖಿಸಿದೆ.

ಆನ್‌ಲೈನ್ ಉದ್ಯೋಗ ವಂಚನೆಗಳು ಸಾಂಪ್ರದಾಯಿಕ ಉದ್ಯೋಗ ವಂಚನೆ ಕೃತ್ಯಗಳ ವಿಸ್ತೃತ ರೂಪವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಜಾಹೀರಾತುಗಳನ್ನು ಅಂಟಿಸುವ ಮೂಲಕ ಹಣವನ್ನು ಕಸಿದುಕೊಳ್ಳಲಾಗತ್ತಿದೆ ಎಂದು ಸಿಐಡಿ ಪೊಲೀಸ್ ಮಹಾನಿರ್ದೇಶಕ ಎಂಎ ಸಲೀಂ ತಿಳಿಸಿದ್ದಾರೆ.

ಉದ್ಯೋಗಗಳನ್ನು ಹುಡುಕುತ್ತಿರುವ ನಿರುದ್ಯೋಗಿಗಳು ಮತ್ತು ಹೊಸ ಪದವೀಧರರನ್ನೇ ವಂಚಕರು ಗುರಿಯಾಗಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಪ್ರತಿದಿನ 10 ರಿಂದ 20 ಆನ್‌ಲೈನ್ ವಂಚನೆ ಪ್ರಕರಣಗಳು ವರದಿಯಾಗುತ್ತಿದ್ದು, ಇದರಲ್ಲಿ 5-7 ಉದ್ಯೋಗ ವಂಚನೆಗಳಾಗಿವೆ ಎಂದು ವೈಟ್‌ಫೀಲ್ಡ್‌ನ ಟೆಕ್ ಹಬ್‌ನ ಉಸ್ತುವಾರಿ ವಹಿಸಿರುವ ಉಪ ಪೊಲೀಸ್ ಆಯುಕ್ತ ಶಿವಕುಮಾರ ಗುಣಾರೆ ಮಾಹಿತಿ ನೀಡಿದ್ದಾರೆ. ಕಡಿಮೆ-ವೇತನ ಪಡೆಯುವವರು, ಮನೆಯಿಂದ ಕೆಲಸ ಮಾಡುವ ಟೆಕ್ಕಿಗಳು ಅಥವಾ ಉದ್ಯೋಗದಿಂದ ವಜಾಗೊಂಡವರು ಸಹ ಆನ್‌ಲೈನ್ ಜಾಬ್ ವಂಚನೆಗಳಿಗೆ ಬಲಿಯಾಗುತ್ತಾರೆ. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಹಿನ್ನೆಲೆಯ ಟೆಕ್ಕಿಗಳು ಹೆಚ್ಚು ಗಳಿಸಬೇಕೆಂಬ ಹಂಬಲದಲ್ಲಿ ವಂಚನೆಗೆ ಒಳಗಾಗುತ್ತಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.

ವಂಚಕರು ವೈಯಕ್ತಿಕ ಮಾಹಿತಿ ಕಲೆ ಹಾಕುವುದು ಹೇಗೆ?

ಬ್ಯಾಂಕ್‌ಗಳು, ಅಂಚೆ ಕಚೇರಿಗಳು ಇತ್ಯಾದಿಗಳಿಂದ ವೈಯಕ್ತಿಕ ಮಾಹಿತಿ ಸಂಗ್ರಹಿಸುವ ಮೂಲಕ ಸಂಭಾವ್ಯ ಸಂತ್ರಸ್ತರನ್ನು ಗುರುತಿಸಲು ವಂಚಕರು ಕೆಲವು ಜನರನ್ನು ನೇಮಿಸಿಕೊಳ್ಳುತ್ತಾರೆ ಎಂಬುದು ಬೆಂಗಳೂರು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ: ಕೆಎಸ್​ಆರ್​ಟಿಸಿಗೆ ಚಾಲಕರ ಕೊರತೆ, 7 ವರ್ಷಗಳಿಂದ ಆಗಿಲ್ಲ ನೇಮಕಾತಿ: ಶಕ್ತಿ ಯೋಜನೆ ಜಾರಿಗೊಳಿಸುವ ಸಂಸ್ಥೆಗೇ ಇಲ್ಲ ಶಕ್ತಿ!

ಅನೇಕ ಸಂದರ್ಭಗಳಲ್ಲಿ, ವಂಚಕರು ನೇಮಕ ಮಾಡಿದ ವ್ಯಕ್ತಿಗಳು ಬ್ಯಾಂಕ್‌ಗಳಿಂದ ಸಾಧ್ಯವಾದಷ್ಟು ಮಾಹಿತಿಯನ್ನು ಕಲೆಹಾಕಲು ಮತ್ತು ಕಾಲ್ ಸೆಂಟರ್‌ಗಳಿಗೆ ರವಾನಿಸಲು ತಿಂಗಳುಗಟ್ಟಲೆ ಕೆಲಸ ಮಾಡುತ್ತಾರೆ. ಇಂಥ ತಂಡದ ಕೆಲವು ಸದಸ್ಯರು ಕ್ಯಾಬಿಗಳಾಗಿ ಕೆಲಸ ಮಾಡುತ್ತಾರೆ ಮತ್ತು ತಮ್ಮ ಪ್ರಯಾಣಿಕರ ಫೋನ್ ಸಂಖ್ಯೆಗಳನ್ನು ವಂಚಕರಿಗೆ ಒದಗಿಸುತ್ತಾರೆ ಎಂಬುದು ತಿಳಿದುಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:01 am, Mon, 24 June 24

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ