ಬಾಡಿಗೆ ಆಸೆಗೆ ಬಿದ್ದು ಕೋಟ್ಯಾಂತರ ರೂ ವೆಚ್ಚದ ಮನೆ, ಫ್ಲಾಟ್ ಕಳೆದುಕೊಂಡ ಮಾಲೀಕರು: ವಂಚಿಸಿ ಪರಾರಿಯಾದ ಬ್ರೋಕರ್
ಬೆಂಗಳೂರಿನ ಹೆಣ್ಣೂರು ಸುತ್ತಮುತ್ತದ ನೂರಾರು ಜನರು ಬಾಡಿಗೆ ಆಸೆಗೆ ಬಿದ್ದು ತಮ್ಮ ಮನೆ ಮತ್ತು ಫ್ಲಾಟ್ಗಳನ್ನು ಕಳೆದುಕೊಂಡು ಮೋಸ ಹೋಗಿದ್ದಾರೆ. ಬಾಡಿಗೆಗೆ ಕೊಡಿಸುತ್ತೇನೆ ಎಂದು ಮಧ್ಯಸ್ಥಿಕೆ ವಹಿಸಿದ್ದ ಜಿಯೂ ಹೋಮ್ಸ್ ಎಂಬ ಕಂಪನಿಯ ಅಹಮದ್ ಆಲಿ ಬೇಗ್ ಎಂಬಾತ ಕೋಟಿ ಕೋಟಿ ರೂ. ವಂಚನೆ ಮಾಡಿ ಸದ್ಯ ಪರಾರಿ ಆಗಿದ್ದಾನೆ.
ಬೆಂಗಳೂರು, ಜೂನ್ 24: ಬಾಡಿಗೆ ಆಸೆಗೆ ಬಿದ್ಧ ಮನೆ ಮಾಲೀಕರಿಗೆ ಬ್ರೋಕರ್ (broker) ಕಂಪನಿ ಹೆಸರಲ್ಲಿ ಕೋಟಿ ಕೋಟಿ ರೂ. ಪಂಗನಾಮ (cheated) ಹಾಕಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಜಿಯೂ ಹೋಮ್ಸ್ ಎಂಬ ಕಂಪನಿ ಹೆಸರಲ್ಲಿ ಮನೆಗಳು, ಫ್ಲಾಟ್ಗಳನ್ನು ಡೀಲ್ ಮಾಡಲಾಗಿದೆ. ಬಾಡಿಗೆಗೆ ಕೊಡಿಸುತ್ತೇನೆ ಎಂದು ಮಧ್ಯಸ್ಥಿಕೆ ವಹಿಸಿದ್ದ ಆಸಾಮಿ ಅಹಮದ್ ಆಲಿ ಬೇಗ್, ಮಾಲೀಕರಿಂದ ಮನೆ ಪಡೆದು ನನ್ನದೇ ಅಂತ ನಂಬಿಸಿ ಲಕ್ಷ ಲಕ್ಷ ರೂ. ಹಣ ಪಡೆದು ಲೀಸ್ಗೆ ಕೊಟ್ಟಿದ್ದಾರೆ.
ಇದೀಗ ಬರೋಬ್ಬರಿ 300 ರಿಂದ 400 ಜನರಿಗೆ ಇದೇ ರೀತಿ ಮೋಸ ಮಾಡಿ ಎಲ್ಲರ ಹಣ ಲಪಲಾಟಿಯಿಸಿ ಪರಾರಿ ಆಗಿದ್ದಾರೆ. ಹೆಣ್ಣೂರು ಸುತ್ತಮುತ್ತ ನೂರಾರು ಜನರಿಗೆ ವಂಚನೆ ಆಗಿದೆ. ಸದ್ಯ ವಂಚನೆಗೊಳಗಾದವರಿಂದ ನ್ಯಾಯಕ್ಕಾಗಿ ಎಂ.ಜಿ.ರಸ್ತೆಯ ಗಾಂಧಿ ಉದ್ಯಾನವನದ ಬಳಿ ಮೌನ ಪ್ರತಿಭಟನೆ ಮಾಡಲಾಗಿದೆ.
ಇದನ್ನೂ ಓದಿ: Online Job Fraud: ಆನ್ಲೈನ್ ಜಾಬ್ ವಂಚನೆಯಲ್ಲಿಯೂ ಬೆಂಗಳೂರೇ ಕರ್ನಾಟಕ ರಾಜಧಾನಿ!
ನಮಗೆ ನಮ್ಮ ಮನೆಗಳು ವಾಪಸ್ ಬೇಕು ಎನ್ನುತ್ತಿರುವ ಮಾಲೀಕರು ಒಂದು ಕಡೆಯಾದರೆ, ನಮ್ಮ ಹಣ ವಾಪಸ್ ಬೇಕು ಅಂತಿರುವ ಬಾಡಿಗೆದಾರರು. ದೂರು ಕೊಡಲು ಹೋದರೆ ಪೊಲೀಸರು ಎಫ್ಐಆರ್ ದಾಖಲಿಸುತ್ತಿಲ್ಲ. ಸಿಸಿಬಿಗೆ ವರ್ಗಾಯಿಸಿದ್ದೇವೆ ಅಂತಾ ಸಬೂಬು ಹೇಳುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಕೋಟಿ ಕೋಟಿ ವೆಚ್ಚದ ಮನೆ, ಫ್ಲಾಟ್ ಕಳೆದುಕೊಂಡು ಮಾಲೀಕರು ಕಂಗಾಲಾಗಿದ್ದಾರೆ.
ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಕಾರಿಗೆ ದಿಢೀರ್ ಬೆಂಕಿ: ತಪ್ಪಿದ ಅನಾಹುತ
ಮಂಗಳೂರು: ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಕಾರಿಗೆ ದಿಢೀರ್ ಬೆಂಕಿ ಹೊತ್ತಿಕೊಂಡಿರುವಂತಹ ಘಟನೆ ಮಂಗಳೂರು ಹೊರವಲಯದ ಬೋಂದೆಲ್ನಲ್ಲಿ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾರ್ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ವಿಟಾರಾ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಸುತ್ತಮುತ್ತಲಿನ ಪ್ರದೇಶಕ್ಕೂ ಹಾನಿ ಆಗಿದೆ.
ಇದನ್ನೂ ಓದಿ: ತುಮಕೂರು: ಹಲ್ಲೆಗೆ ಯತ್ನ, ಕಳ್ಳತನದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
ಭಾನುವಾರ ರಾತ್ರಿ 11.30 ರ ಸುಮಾರಿಗೆ ಘಟನೆ ಸಂಭವಿಸಿದೆ. ಸ್ಥಳೀಯರು ವಾಹನಕ್ಕೆ ಬೆಂಕಿ ಹೊತ್ತಿಕೊಂಡಿರುವುದನ್ನು ಕಂಡು ತಕ್ಷಣ ಬೆಂಕಿ ನಂದಿಸಿದ್ದಾರೆ. ಬೆಂಕಿ ಹಬ್ಬುತ್ತಿದ್ದ ಹಿನ್ನೆಲೆ ಅಗ್ನಿಶಾಮದ ದಳದಿಂದಲೂ ಕಾರ್ಯಾಚರಣೆ ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.