ಚಿಕಿತ್ಸೆಗೆ ಬಂದು ದಾರಿ ತಪ್ಪಿದ ಅಜ್ಜಿ! ಮುಂದೇನಾಯ್ತು?

ಧಾರವಾಡ: ಜಿಲ್ಲಾಸ್ಪತ್ರೆ ಎದುರು ಕಳೆದ ಒಂದು ವಾರದಿಂದ ವಾಸವಾಗಿದ್ದ ವೃದ್ಧೆಯನ್ನು ಸೇಫ್ ಆಗಿ ಆಕೆಯ ಊರಿಗೆ ಕಳಿಸಿಕೊಡಲಾಗಿದೆ. ಹಾವೇರಿ‌ ಮೂಲದ ಮರಿಯವ್ವ ಮೂಲಿಮನಿ ಅನ್ನೋ ವೃದ್ಧೆ ಹುಬ್ಬಳ್ಳಿಗೆ ಚಿಕಿತ್ಸೆಗೆ ಅಂತಾ ಬಂದಿದ್ದಳು. ಸುಮಾರು 70 ವರ್ಷ ವಯಸ್ಸಿನ ಅಜ್ಜಿಗೆ ಅದು ಹೇಗೋ ದಾರಿ ತಪ್ಪಿ ಧಾರವಾಡಕ್ಕೆ ಬಂದು ಬಿಟ್ಟಿದ್ದಳು. ನಗರಕ್ಕೆ ಬಂದ ಬಳಿಕ ಯಾರೋ ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದು ತಂದು ಬಿಟ್ಟಿದ್ದರು. ಈ ವೇಳೆ ಮರಿಯವ್ವಗೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಆರೈಕೆ ಮಾಡಿದ್ದಾರಾದರೂ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಆಕೆಯ […]

ಚಿಕಿತ್ಸೆಗೆ ಬಂದು ದಾರಿ ತಪ್ಪಿದ ಅಜ್ಜಿ! ಮುಂದೇನಾಯ್ತು?
Follow us
ಸಾಧು ಶ್ರೀನಾಥ್​
| Updated By:

Updated on:May 24, 2020 | 12:02 PM

ಧಾರವಾಡ: ಜಿಲ್ಲಾಸ್ಪತ್ರೆ ಎದುರು ಕಳೆದ ಒಂದು ವಾರದಿಂದ ವಾಸವಾಗಿದ್ದ ವೃದ್ಧೆಯನ್ನು ಸೇಫ್ ಆಗಿ ಆಕೆಯ ಊರಿಗೆ ಕಳಿಸಿಕೊಡಲಾಗಿದೆ. ಹಾವೇರಿ‌ ಮೂಲದ ಮರಿಯವ್ವ ಮೂಲಿಮನಿ ಅನ್ನೋ ವೃದ್ಧೆ ಹುಬ್ಬಳ್ಳಿಗೆ ಚಿಕಿತ್ಸೆಗೆ ಅಂತಾ ಬಂದಿದ್ದಳು. ಸುಮಾರು 70 ವರ್ಷ ವಯಸ್ಸಿನ ಅಜ್ಜಿಗೆ ಅದು ಹೇಗೋ ದಾರಿ ತಪ್ಪಿ ಧಾರವಾಡಕ್ಕೆ ಬಂದು ಬಿಟ್ಟಿದ್ದಳು. ನಗರಕ್ಕೆ ಬಂದ ಬಳಿಕ ಯಾರೋ ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದು ತಂದು ಬಿಟ್ಟಿದ್ದರು.

ಈ ವೇಳೆ ಮರಿಯವ್ವಗೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಆರೈಕೆ ಮಾಡಿದ್ದಾರಾದರೂ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಆಕೆಯ ಟ್ರಾವೆಲ್ ಹಿಸ್ಟರಿ ಗೊತ್ತಿಲ್ಲದೇ ಆಕೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳುವಂತಿರಲಿಲ್ಲ. ಹೀಗಾಗಿ ಒಂದು ವಾರದಿಂದ ಆಸ್ಪತ್ರೆ ಆವರಣದಲ್ಲೇ ಮರಿಯವ್ವ ವಾಸ ಮಾಡುತ್ತಿದ್ದಳು. ತನ್ನ ಮಕ್ಕಳು ಹಾವೇರಿಯಲ್ಲಿರೋದಾಗಿ ಹೇಳುತ್ತಿದ್ದ ಮರಿಯವ್ವ ಮರಳಿ ಹೋಗಲು ಸಿದ್ಧಳಿದ್ದಳಾದರೂ ಕಳಿಸೋ ಬಗೆ ಗೊತ್ತಿಲಿಲ್ಲ. ಹೀಗಾಗಿ ಜಿಲ್ಲಾಸ್ಪತ್ರೆಯ ಆವರಣದಲ್ಲಿಯೇ ದಿನಗಳನ್ನು ಕಳೆಯುತ್ತಿದ್ದಳು.

ಅಜ್ಜಿಯ ಸಂಕಟದ ಬಗ್ಗೆ ಟಿವಿ9 ವರದಿ: ಅಜ್ಜಿಯ ಸಂಕಟದ ಬಗ್ಗೆ ಟಿವಿ9 ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ನಗರದ ಸಾಮಾಜಿಕ ಕಾರ್ಯಕರ್ತ ದೇವರಾಜ ಶಹಾಪುರ ವೃದ್ಧೆಯನ್ನು ಹಾವೇರಿಗೆ ಕಳಿಸೋ ವ್ಯವಸ್ಥೆ ಮಾಡಿದರು. ಅಜ್ಜಿಯ ಬಳಿ ಇದ್ದ ಪುಸ್ತಕದಲ್ಲಿ ಹಲವರ ಫೋನ್ ನಂಬರ್​ಗಳಿದ್ದವು. ಅವುಗಳಿಗೆ ಫೋನ್ ಮಾಡಿದರೆ ಕೆಲವರು ತಮಗೆ ಅಜ್ಜಿಯ ಬಗ್ಗೆ ಗೊತ್ತಿಲ್ಲ ಅಂತಾ ಹೇಳಿದರೆ ಮತ್ತೆ ಕೆಲವರು ಮಾಹಿತಿ ನೀಡಿದರು. ಅದರಲ್ಲೂ ಅಜ್ಜಿಯ ಸಹೋದರ ಅಜ್ಜಿಯ ಬಗ್ಗೆ ಮಾಹಿತಿ ನೀಡಿದರು.

ಅಜ್ಜಿಗೆ ಮೂವರು ಹೆಣ್ಣು ಮಕ್ಕಳು, ಓರ್ವ ಮಗನಿದ್ದಾನೆ. ಮಗ ಬೆಂಗಳೂರಿನಲ್ಲಿದ್ದಾನೆ. ಇನ್ನು ಅಜ್ಜಿ ಹೆಣ್ಣು ಮಕ್ಕಳ ಬಳಿ ಹಾವೇರಿಯಲ್ಲಿಯೇ ವಾಸವಾಗಿದ್ದಳು. ಆಕೆ ಬಯಸಿದರೆ ಹಾವೇರಿಗೆ ಕಳಿಸುವಂತೆ ಆಕೆಯ ಸಹೋದರ ಹೇಳಿದರು. ಕೂಡಲೇ ಆಕೆಯನ್ನು ಹಾವೇರಿಗೆ ಕಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ಧಾರವಾಡ ಜಿಲ್ಲಾ ನಿರಾಶ್ರಿತ ಕೇಂದ್ರದ ಸಿಬ್ಬಂದಿಯೂ ಸ್ಥಳಕ್ಕೆ ಬಂದರು.

ತಾವು ಆಕೆಯನ್ನು ಕರೆದೊಯ್ಯೋದಾಗಿ ಹೇಳಿದರು. ಆದರೆ ಅದಾಗಲೇ ಆಕೆ ಹಾವೇರಿಗೆ ಹೋಗೋದಾಗಿ ಹೇಳಿದ್ದಕ್ಕೆ ಸಿಬ್ಬಂದಿ ವಾಹನದ ವ್ಯವಸ್ಥೆ ಮಾಡಿ, ದೇವರಾಜ್ ಅವರೊಂದಿಗೆ ಮೊದಲಿಗೆ ಹುಬ್ಬಳ್ಳಿಯ ಕಿಮ್ಸ್​ಗೆ ಕರೆದೊಯ್ಯಲಾಯಿತು. ಅಲ್ಲಿ ಅಜ್ಜಿಗೆ ಚಿಕಿತ್ಸೆ ಕೊಡಿಸಿದ ಬಳಿಕ ಆಕೆಯನ್ನು ಹಾವೇರಿಯ ಮಗಳ ಮನೆಗೆ ಕರೆದೊಯ್ದು, ಮಗಳ ಸುಪರ್ದಿಗೆ ಆಕೆಯನ್ನು ಒಪ್ಪಿಸಲಾಗಿದೆ.

Published On - 11:56 am, Sun, 24 May 20

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ