AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲ್ನಡಿಗೆಯಲ್ಲಿ ಅಯೋಧ್ಯೆಗೆ ಹೊರಟ ಭಕ್ತ: ಇತ್ತ ಮತ್ತೊಮ್ಮೆ ಮೋದಿಗಾಗಿ ಅಂಜನಾದ್ರಿಗೆ ಪಾದಯಾತ್ರೆ

ಇದೇ ಜನವರಿ 22ರಂದು ರಾಮಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಕ್ತನೋರ್ವ ಕಾಲ್ನಡಿಗೆಯಲ್ಲಿ ಹುಬ್ಬಳ್ಳಿಯಿಂದ ಅಯೋಧ್ಯೆಗೆ ಹೊರಟಿದ್ದಾನೆ. ಮತ್ತೊಂದೆಡೆ ರಾಮರಾಜ್ಶಕ್ಕಾಗಿ ಮತ್ತೊಮ್ಮೆ ಮೋದಿ ಎನ್ನುವ ಘೋಷ ವಾಕ್ಯದೊಂದಿಗೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಿಂದ ಆಂಜನೇಯ ಜನ್ಮಸ್ಥಳ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಈ ಎರಡೂ ಸುದ್ದಿಯ ವಿವರ ಇಲ್ಲಿದೆ.

ಕಾಲ್ನಡಿಗೆಯಲ್ಲಿ ಅಯೋಧ್ಯೆಗೆ ಹೊರಟ ಭಕ್ತ: ಇತ್ತ ಮತ್ತೊಮ್ಮೆ ಮೋದಿಗಾಗಿ ಅಂಜನಾದ್ರಿಗೆ ಪಾದಯಾತ್ರೆ
ಮನೋಜ್, ಅಂಜನಾದ್ರಿಗೆ ಪಾದಯಾತ್ರೆ
ಶಿವಕುಮಾರ್ ಪತ್ತಾರ್
| Updated By: ಗಂಗಾಧರ​ ಬ. ಸಾಬೋಜಿ|

Updated on: Jan 12, 2024 | 6:55 PM

Share

ಹುಬ್ಬಳ್ಳಿ, ಜನವರಿ 12: ರಾಮ.. ರಾಮ.. ದೇಶಾದ್ಯಂತ ಈಗ ಶ್ರೀರಾಮನದ್ದೇ ಜಪ. ಇದೇ ಜನವರಿ 22ರಂದು ಅಯೋಧ್ಯೆ (Ayodhya) ಯಲ್ಲಿ ರಾಮಮಂದಿರ ಲೋಕಾರ್ಪಣೆ ಆಗಲಿದೆ. ಹೀಗಾಗಿ ರಾಮಭಕ್ತರೊಬ್ಬರು ಕಾಲ್ನಡಿಗೆಯಲ್ಲಿ ಹುಬ್ಬಳ್ಳಿಯಿಂದ‌ ಬರೋಬ್ಬರಿ 1799 ಕಿಮೀ ದೂರದ ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದಾರೆ. ಹುಬ್ಬಳ್ಳಿಯ ಆನಂದ ನಗರದ ಘೋಡಕೇ ಪ್ಲಾಟ್ ನಿವಾಸಿ ಮನೋಜ್​ ಪಾದಯಾತ್ರೆ ಮೂಲಕ ಅಯೋಧ್ಯೆಗೆ ಹೊರಟ ರಾಮಭಕ್ತ. ಡಿಸೆಂಬರ್ 22 ರಂದು ಹುಬ್ಬಳ್ಳಿಯಿಂದ ಕೈಯಲ್ಲಿ ಕರ್ನಾಟಕ ಧ್ವಜ ,ಕೇಸರಿ ಧ್ವಜದೊಂದಿಗೆ ಪಾದಯಾತ್ರೆ ಹೊರಟಿದ್ದಾರೆ. ಸದ್ಯ ಮಧ್ಯಪ್ರದೇಶದಲ್ಲಿದ್ದಾರೆ.

ಪಾದಯಾತ್ರೆ ವೇಳೆ ಸ್ವಲ್ಪ ಕಷ್ಟವಾಗಿದ್ದು, ಚರ್ಮ ಸುಟ್ಟ ಹಾಗಾಗಿದೆ. ಕಷ್ಟ ಇದ್ದರೂ, ರಾಮನ ಹೆಸರು ಹೇಳಿ ಪಾದಯಾತ್ರೆ ಹೊರಟಿದ್ದೇನೆ ಎಂದು ಮನೋಜ್​ ಹೇಳಿದ್ದಾರೆ. ದೇವಸ್ಥಾನ, ಪೆಟ್ರೋಲ್​ನಲ್ಲಿ ವಾಸ್ತವ್ಯ ಮಾಡಿ ಪಾದಯಾತ್ರೆ ಮಾಡುತ್ತಿದ್ದಾರೆ.

ಮತ್ತೊಮ್ಮೆ ಮೋದಿಗಾಗಿ ಅಂಜನಾದ್ರಿಗೆ ಪಾದಯಾತ್ರೆ

ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಿಂದ ಆಂಜನೇಯ ಜನ್ಮಸ್ಥಳ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದವರಗೆ ರಾಮರಾಜ್ಯಕ್ಕಾಗಿ ಮತ್ತೊಮ್ಮೆ ಮೋದಿ ಎಂಬ ಘೋಷ ವಾಕ್ಯದೊಂದಿಗೆ ಪಾದಯಾತ್ರೆ ಮಾಡಲಾಗಿದೆ. ಸ್ವಾಮಿ ವಿವೇಕಾನಂದರ ಜಯಂತಿ ದಿನದಂದು ಮುಂಡರಗಿ ನಗರದ ಕೋಟೆ ಭಾಗದ ಆಂಜನೇಯನ ದೇವಸ್ಥಾನದಿಂದ ಪಾದಯಾತ್ರೆ ಆರಂಭಗೊಳ್ಳಲಿದೆ.

ಇದನ್ನೂ ಓದಿ: Mangalore to Ayodhya train: ರೈಲು ಮೂಲಕ ಕೃಷ್ಣನೂರು ರಾಮನೂರಿನ ಜತೆ ಬೆಸೆಯಬೇಕು – ಏನಿದು ಕರಾವಳಿ ಜನರ ಭಾವನಾತ್ಮಕ ಬೇಡಿಕೆ?

ಸಂಘದ ಪ್ರಮುಖ ಎಸ್.ಆರ್. ರಿತ್ತಿ ಮತ್ತು ಮಂಜುನಾಥ ಇಟಗಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ನಾಳೆ ರಾತ್ರಿ 8 ಘಂಟೆಗೆ ಪಾದಯಾತ್ರೆ ಅಂಜನಾದ್ರಿ ತಲುಪಲಿದೆ. ಪ್ರಧಾನಿ ನರೇಂದ್ರ ಮೋದಿಗಾಗಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಅಯೋಧ್ಯೆವರೆಗೆ ಸೈಕಲ್ ಯಾತ್ರೆ

ಅಯೋಧ್ಯೆಯಲ್ಲಿ ಲೋಕಾರ್ಪಣೆಗೊಳ್ಳಿರುವ ರಾಮ ಮಂದಿರವನ್ನು ಕಣ್ತುಂಬಿಕೊಳ್ಳಲು ಯುವಕನೊಬ್ಬ ಸೈಕಲ್​​​ ಯಾತ್ರೆ ಆರಂಭಿಸಿದ್ದಾನೆ. ವಿಜಯಪುರ ಜಿಲ್ಲೆಯ ಬಾಗೇವಾಡಿಯ ತಾಳೇವಾಡ ಗ್ರಾಮದ ಸುರೇಶ್ ಸೈಕಲ್ ಮೂಲಕ ಅಯೋಧ್ಯೆಯತ್ತ ಹೊರಟಿದ್ದಾನೆ. ಹನುಮ ಜನ್ಮಭೂಮಿ ಅಂಜನಾದ್ರಿಯಿಂದ ರಾಮನ ಜನ್ಮ ಭೂಮಿ ಅಯೋಧ್ಯೆವರೆಗೆ ಸೈಕಲ್ ಯಾತ್ರೆ ಆರಂಭವಾಗಿದೆ.

ಇದನ್ನೂ ಓದಿ: ಚಿಂತಾಮಣಿ: ಕೈವಾರದ ಬೆಟ್ಟದ ಮೇಲೆ ಶ್ರೀರಾಮನ ಹೆಜ್ಜೆ ಗುರುತು, ವಿಸ್ಮಯಕ್ಕೆ ಕಾರಣವಾಗಿದೆ ಲಕ್ಷ್ಮಣ ತೀರ್ಥ!

ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದ ಅಂಜನೇಯನ ದರ್ಶನ ಪಡೆದು ನಿನ್ನೆ ಸೈಕಲ್ ಯಾತ್ರೆ ಆರಂಭಿಸಿದ್ದಾನೆ. ಮಾರ್ಗ ಮಧ್ಯೆ ಬರುವ ಹಳ್ಳಿಗಳಲ್ಲಿ ಶ್ರೀರಾಮನ ಬಿತ್ತಿ ಚಿತ್ರಗಳನ್ನ ಬಿಡಿಸುತ್ತ ಪ್ರಯಾಣ ನಡೆಸಲಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.